Navaratri Special: ಮಹಾಗೌರಿ ಪೂಜೆಯಿಂದ ಬದುಕಿನ ಕಷ್ಟಗಳನ್ನು ನಿವಾರಿಸಿ- ದೇವಿಯ ಪೂಜಾ ವಿಧಿ-ವಿಧಾನ ಇಲ್ಲಿದೆ

Maha Gowri Pooja: ಮಹಾಗೌರಿಯು ರಾಹುವಿನ ಅಧಿಪತಿಯಾಗಿರುವುದರಿಂದ ರಾಹುವಿನಿಂದ ಆಗುವ ಅಹಿತಕರ ಘಟನೆಗಳು, ಕಾಟಗಳನ್ನು ತಪ್ಪಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭಗಳೂ ದೊರೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವರಾತ್ರಿಯ (Navaratri)ಎಂಟನೇ ದಿನದಂದು ಮಹಾಗೌರಿಗೆ(Maha Gowri) ವಿಶೇಷ ಪೂಜೆ ಮಾಡಲಾಗುತ್ತದೆ.  ತಾಯಿ ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ.  

ಪುರಾಣ ಕಥೆ:
ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು ಎಂಬ ನಂಬಿಕೆ ಇದೆ. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ ತಪಸ್ಸನ್ನು ಮಾಡಿದ ತಾಯಿ,  ಅನ್ನಾಹಾರ, ನೀರು ತ್ಯಜಿಸಿದಳು. ಪಾರ್ವತಿಯ ಭಕ್ತಿಗೆ ಮೆಚ್ಚು ಪ್ರತ್ಯಕ್ಷನಾದ ಶಿವನು, ತಾಯಿಯನ್ನು ವರಿಸಿದನು ಎಂದು ಪುರಾಣದ ಕತೆ ಹೇಳುತ್ತದೆ.

ತಾಯಿ ಗೌರಿ ಆರಾಧಿಸುವ ಮಂತ್ರಗಳು:
ಓಂ ದೇವಿ ಮಹಾಗೌರಿಯೇ ನಮಃ
ಓ ದೇವಿ ಮಹಾಗೌರಿಯೇ ನಮಃ
ಶ್ವೇತ ವೃಷೆಸಮೃದ್ಧ ಶ್ವೇವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ

ಶ್ವೇತ ವೃಷೆಸಮೃದ್ಧ ರ್ಶವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ

ಇದನ್ನೂ ಓದಿ: ವೃಷಭ ರಾಶಿಯ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗೋದು ಪಕ್ಕಾ ಅಂತೆ- ನಿಮ್ಮ ರಾಶಿ ಪ್ರಕಾರ ಮದುವೆ ಬಗ್ಗೆ ತಿಳಿದುಕೊಳ್ಳಿ

ನವರಾತ್ರಿ 8ನೇ ದಿನ ಮಹಾ ಗೌರಿ ಸ್ತುತಿ:
ಯಾ ದೇವಿ ಸರ್ವಭೂತೇಶು ಮಾ ಮಹಾಗೌರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ನವರಾತ್ರಿಯಲ್ಲಿ ಮಹಾ ಗೌರಿ ಧ್ಯಾನ:
ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ
ಸಿಂಹರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್
ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಂ ಮಹಾಗೌರಿ ತ್ರಿನೇತಂ
ವರಭೀತಿಕಾರಾಮ್ ತ್ರಿಶೂಲಾ ಢಮಾರುಧರಂ ಮಹಾಗೌರಿ ಭಜೆಮ್
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ
ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್
ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ
ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ

ಸರ್ವಾಸಂಕಟ ಹಂತ್ರಿ ತುವಂಹಿ ಧನ ಐಶ್ವರ್ಯ ಪ್ರದಾಯನಮ್
ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ
ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್
ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಣಮಾಮ್ಯಹಂ
ತ್ರಿಲೋಕ್ಯಮಂಗಲ ತ್ವಂಹೀ ತಾಪತ್ರಯ ಹರಿಣಿಂ
ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಣಮಾಮ್ಯಹಂ

ಪೂಜೆಯ ವಿಧಿ-ವಿಧಾನ

ಹಬ್ಬದ ದಿನ ಸ್ವಚ್ಛವಾಗಿ, ದೇವರ ಮನೆಯಲ್ಲಿ ಗೌರಿಯನ್ನು ಅಥವ ಕಲಶವನ್ನು ಸ್ಥಾಪನೆ ಮಾಡಿ. ತಾಯಿ ಗೌರಿಯನ್ನು ಪೂಜಿಸಲು ರಾತ್ರಿ ಅರಳಿದ ಮಲ್ಲಿಗೆಯನ್ನು ಬಳಸುವುದು ಶ್ರೇಷ್ಠ ಎನ್ನಲಾಗುತ್ತದೆ. ತಾಯಿಯನ್ನು ಶುದ್ಧ ಮನಸ್ಸು, ಭಕ್ತಿಯಿಂದ ಪೂಜಿಸಿ. ಗಣಪತಿ ಪ್ರಾರ್ಥನೆ ಮೂಲಕ ಪೂಜೆಯನ್ನು ಶುರು ಮಾಡಿ. ತಾಯಿ ಗೌರಿಗೆ ಆರತಿ ಮಾಡಿ.  ತಾಯಿಯನ್ನು ಆರಾಧಿಸುವುದರಿಂದ ಭಕ್ತರ ಬದುಕಿನಲ್ಲಿ ಇರುವ ಸಂಕಷ್ಟಗಳನ್ನು ತಾಯಿ ಗೌರಿ ಪರಿಹರಿಸಿ  ದುಃಖಗಳನ್ನು ದೂರ ಮಾಡುತ್ತಾಳೆ. ಬದುಕಿನಲ್ಲಿ ನಾವು ಕಂಡಿರುವ ಆಸೆಗಳು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ನವರಾತ್ರಿ ವೈಭವ, ವಿಭಿನ್ನ ಪೆಂಡಾಲ್- ಅದ್ಧೂರಿ ಆಚರಣೆ

ಮಹಾಗೌರಿಯು ರಾಹುವಿನ ಅಧಿಪತಿಯಾಗಿರುವುದರಿಂದ ರಾಹುವಿನಿಂದ ಆಗುವ ಅಹಿತಕರ ಘಟನೆಗಳು, ಕಾಟಗಳನ್ನು ತಪ್ಪಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭಗಳೂ ದೊರೆಯುತ್ತದೆ. ನಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ತಾಯಿ ಗೌರಿ ನಿವಾರಿಸಿ ಆತ್ಮವಿಶ್ವಾಸ ತುಂಬಿ ಯಶಸ್ಸಿನ ಕಡೆಗೆ ದಾರಿ ತೋರುತ್ತಾಳೆ.
Published by:Sandhya M
First published: