ಭಾರತದಲ್ಲಿ ದೇವಾಲಯಗಳ (Temple) ವಿಶೇಷತೆ ಹಾಗೂ ಮಹಿಮೆಯ ಬಗ್ಗೆ ಜನರಿಗೆ ಹೆಚ್ಚಾಗಿ ಹೇಳಬೇಕಿಲ್ಲ. ದೇವರ ನಂಬಿ ವಿವಿಧ ಹರಕೆಗಳನ್ನು ಕಟ್ಟಿಕೊಳ್ಳುವ ಜನರು (people) ಸಹ ಬಹಳಷ್ಟಿದ್ದಾರೆ. ಸಾಮಾನ್ಯವಾಗಿ ನಾವು ದೇವರಿಗೆ ಸಿಹಿ ಪದಾರ್ಥ, ಹೂವು, ಬಿಲ್ವ, ಹಣ್ಣು ಈ ರೀತಿ ಪದಾರ್ಥಗಳನ್ನು ನೈವೇದ್ಯ ಮಾಡುತ್ತೇವೆ. ಹಾಗೆಯೇ, ಕಾಯಿ, ಹಣ (Money) ಅಥವಾ ಆ ಸ್ಥಳಕ್ಕೆ ಸಂಬಂಧಿಸಿದಂತೆ ಹರಕೆ ಹೊರುತ್ತೇವೆ. ಕೆಲವೊಂದು ದೇವಸ್ಥಾನದಲ್ಲಿ ನಿರ್ಧಿಷ್ಟ ಹರಕೆ ಸಹ ಇರುತ್ತದೆ. ಆದರೆ ಮಂಚ್ ಚಾಕೊಲೇಟ್ ಹರಕೆ ಬಗ್ಗೆ ನಿಮಗೆ ಗೊತ್ತಾ? ಹೌದು, ಇಲ್ಲೊಂದು ದೇವಸ್ಥಾನದಲ್ಲಿ ಮಂಚ್ ಚಾಕೊಲೇಟ್ (Munch Chocolate) ನೈವೇದ್ಯ ಮಾಡಬೇಕು ಹಾಗೂ ಹರಕೆಯಾಗಿ ಸಹ ಕೊಡಬೇಕು. ಯಾವುದು ಈ ದೇವಸ್ಥಾನ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೇರಳದ ದೇವಾಲಯ ಇದು
ಕೇರಳದ ಒಂದು ಸಣ್ಣ ಮೂಲೆಯಲ್ಲಿರುವ ಈ ದೇವಸ್ಥಾನ ಆಧುನಿಕತೆಯ ಮತ್ತೊಂದು ರೂಪ ಎನ್ನಬಹುದು. ಸಾಮಾನ್ಯವಾಗಿ ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡು ಹೀಗೆ ಅರ್ಪಣೆ ಮಾಡುತ್ತೇವೆ. ಆದರೆ ಅಲಪ್ಪುಳದ ಬಾಲಮುರುಗನ್ ಆರು ವರ್ಷಗಳ ಹಿಂದೆ ಚಾಕೊಲೇಟ್ ಅದರಲ್ಲೂ ನಿರ್ದಿಷ್ಟವಾಗಿ ಮಂಚ್ ಅನ್ನು ಇಷ್ಟಪಡುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದೇವರನ್ನು ಮಂಚ್ ಮುರುಗನ್ ಎಂದೂ ಕರೆಯುತ್ತಾರೆ.
ಚೆಮ್ಮೋತ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಾಲ ಮುರುಗನ್ಗೆ ಈ ಮಂಚ್ ಚಾಕೊಲೇಟ್ ಇಷ್ಟ ಎಂದು ಹೇಳಲಾಗುತ್ತದೆ. ಕೆಲ ಮಾಹಿತಿ ಪ್ರಕಾರ ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗವೊಬ್ಬ ಈ ಮಂಚ್ ಚಾಕೊಲೇಟ್ ಅನ್ನು ಮುರುಗನ್ಗೆ ಅರ್ಪಿಸಿದ ನಂತರ ಅಂದಿನಿಂದ ದೇವರಿಗೆ ಚಾಕೊಲೇಟ್ ಇಷ್ಟವಾಯಿತು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ
ಏನಿದು ಕಥೆ?
ಸುಮಾರು 6 ವರ್ಷಗಳ ಹಿಂದೆ ಆಟವಾಡುತ್ತಿದ್ದ ಒಬ್ಬ ಪುಟ್ಟ ಮುಸ್ಲಿಂ ಬಾಲಕ ಈ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ್ದ ಎಂಬ ಕಾರಣಕ್ಕೆ ಪೋಷಕರು ಆತನಿಗೆ ಗದರಿಸಿದ್ದರಂತೆ. ಆದರೆ ಆ ರಾತ್ರಿಯೇ ಬಾಲಕನ ಆರೋಗ್ಯ ಹದಗೆಡುತ್ತದೆ. ಕನಸಿನಲ್ಲಿ ಸಹ ಆ ಬಾಲಕ ಮುರುಗನ್ ಹೆಸರು ಕನವರಿಸುತ್ತಿದ್ದ. ಹಾಗಾಗಿ ಪೋಷಕರು ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ಆಗ ಅಲ್ಲಿನ ಅರ್ಚಕರು ಇವರ ಕಥೆ ಕೇಳಿ ದೇವರಿಗೆ ಏನಾದರೂ ನೈವೇದ್ಯ ಮಾಡಿ ಎನ್ನುತ್ತಾರೆ.
ಆ ಬಾಲಕ ತನ್ನ ಕೈನಲ್ಲಿದ್ದ ಮಂಚ್ ಚಾಕೊಲೇಟ್ ಅರ್ಪಣೆ ಮಾಡುವುದಾಗಿ ಹಠ ಮಾಡುತ್ತಾರೆ. ಅವನ ಆಸೆಯಂತೆ ಮಂಚ್ ಅರ್ಪಣೆ ಮಾಡಿದ ಕೆಲವೇ ಸಮಯದಲ್ಲಿ ಆ ಬಾಲಕನ ಆರೋಗ್ಯ ಸುಧಾರಿಸುತ್ತದೆ. ಈ ಸುದ್ದಿ ಗಾಳಿಯಂತೆ ಇಡೀ ಊರಿಗೆ ಹರಡುತ್ತದೆ. ಈ ಘಟನೆಯ ನಂತರ ಈ ದೇವರಿಗೆ ಮಂಚ್ ಮುರುಗನ್ ಎಂದು ಕರೆಯಲು ಆರಂಭಿಸುತ್ತಾರೆ.
ಭಕ್ತರಿಗೂ ಮಂಚ್ ಪ್ರಸಾದ
ಅನೂಪ್ ಎ ಚೆಮ್ಮೋತ್, ಅವರ ಕುಟುಂಬವು ದೇವಾಲಯವನ್ನು ನಿರ್ವಹಿಸುತ್ತಿದೆ, ಪ್ರಸ್ತುತ ಭಕ್ತರು ಚಾಕೊಲೇಟ್ಗಳನ್ನು ಅರ್ಪಿಸುವ ಅಭ್ಯಾಸ ಮುಂದುವರೆದಿದೆ ಎನ್ನುತ್ತಾರೆ ಕುಟುಂಬಸ್ಥರು. ದೇವಾಲಯ ಕಟ್ಟಡದ ಎಂಟನೇ ವಾರ್ಷಿಕೋತ್ಸವದಂದು, ಕೇರಳದ ವಿವಿಧ ಭಾಗಗಳಿಂದ ಭಕ್ತರು ಮಂಚ್ ಚಾಕೊಲೇಟ್ಗಳ ಬಾಕ್ಸ್ಗಳೊಂದಿಗೆ ಭೇಟಿ ನೀಡುತ್ತಾರೆ. ಅಲ್ಲದೇ, ಪರೀಕ್ಷೆ ಇರಲಿ, ಯಾವುದೇ ಸಮಸ್ಯೆ ಬಂದರೂ ಸಹ ಇಲ್ಲಿ ಮಂಚ್ ಹರಕೆ ಹೊತ್ತುಕೊಳ್ಳುತ್ತಾರೆ. ಇಷ್ಟೇ ಅಲ್ಲದೇ, ಇಲ್ಲಿ ಪೂಜೆಯ ನಂತರ ಪ್ರಸಾದದ ಭಾಗವಾಗಿ ಸಹ ಮಂಚ್ ನೀಡಲಾಗುತ್ತಿದೆ.
ಇದನ್ನೂ ಓದಿ: 3 ರಾಶಿಗಳಿಗೆ ಶುಕ್ರನೇ ವರದಾನ, ಮಾರ್ಚ್ 12ರವರೆಗೆ ನಿಮ್ಮನ್ನ ಹಿಡಿಯೋರೇ ಇರಲ್ಲ
ಒಟ್ಟಾರೆಯಾಗಿ 300 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವರ ಆಶೀರ್ವಾದವನ್ನು ಪಡೆಯಲು ಜಾತಿ, ಮತ ಮತ್ತು ಧರ್ಮದ ಭೇದವಿಲ್ಲದೆ ಜನರು ಚಾಕೊಲೇಟ್ಗಳ ಬಾಕ್ಸ್ ಹಿಡಿದು ದೇಗುಲಕ್ಕೆ ಬರುತ್ತಾರೆ ಎಂಬುದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ