Innocent Zodiac Signs: ಈ ರಾಶಿಚಕ್ರ ಚಿಹ್ನೆಯ ಜನರು ತುಂಬಾ ಮುಗ್ದರಂತೆ! ನಿಮ್ಮ ರಾಶಿಯೂ ಇದ್ಯಾ ಅಂತ ನೋಡಿಕೊಳ್ಳಿ

ಹಿಂದಿನ ದಿನಗಳಲ್ಲಿದ್ದ ಆ ಮುಗ್ದತೆ ಮತ್ತು ಆ ಸಕಾರಾತ್ಮಕವಾದ ಮನೋಭಾವನೆ ಇಂದು ಅನೇಕರಲ್ಲಿ ನೋಡುವುದಕ್ಕೆ ಸಿಗುವುದೇ ಇಲ್ಲ ಎಂದು ಹೇಳಬಹುದು. ಆದರೂ ಇವತ್ತಿಗೂ ಕೆಲವು ಜನರು ತಮ್ಮ ಮುಗ್ದತೆಯನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. ಕೆಲವು ರಾಶಿಚಕ್ರ ಚಿಹ್ನೆಯ ಜನರು ಸಹ ಹುಟ್ಟಿನಿಂದಲೇ ತುಂಬಾನೇ ಮುಗ್ದರಂತೆ ಎಂದು ಇಲ್ಲಿ ಹೇಳಲಾಗುತ್ತಿದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಜನರು ತಮ್ಮ ಬುದ್ದಿಯನ್ನು (Mind) ತಮ್ಮ ಏಳಿಗೆಗಾಗಿ ಸಕಾರಾತ್ಮಕವಾಗಿ ಬಳಸುವುದಕ್ಕಿಂತಲೂ ಹೆಚ್ಚು ಬೇರೆಯವರ ಏಳಿಗೆಯ ಬಗ್ಗೆ ಅಸೊಯೆ ಪಡುತ್ತಾ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಿಂದಿನ ದಿನಗಳಲ್ಲಿದ್ದ ಆ ಮುಗ್ದತೆ ಮತ್ತು ಆ ಸಕಾರಾತ್ಮಕವಾದ (Positive) ಮನೋಭಾವನೆ ಇಂದು ಅನೇಕರಲ್ಲಿ ನೋಡುವುದಕ್ಕೆ ಸಿಗುವುದೇ ಇಲ್ಲ ಎಂದು ಹೇಳಬಹುದು. ಆದರೂ ಇವತ್ತಿಗೂ ಕೆಲವು ಜನರು ತಮ್ಮ ಮುಗ್ದತೆಯನ್ನು (Innocence) ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. ಕೆಲವು ರಾಶಿಚಕ್ರ ಚಿಹ್ನೆಯ (Zodiac sign) ಜನರು ಸಹ ಹುಟ್ಟಿನಿಂದಲೇ ತುಂಬಾನೇ ಮುಗ್ದರಂತೆ ಎಂದು ಇಲ್ಲಿ ಹೇಳಲಾಗುತ್ತಿದೆ ನೋಡಿ.

ಮುಗ್ಧ ಜನರು ತಮ್ಮದೇ ಆದ ಸ್ವತಂತ್ರವಾದ ನಿಲುವನ್ನು ಹೊಂದಿರುತ್ತಾರೆ. ಇಷ್ಟೇ ಅಲ್ಲದೆ ಅವರು ನಿಸ್ವಾರ್ಥಿಗಳು, ಪ್ರಾಮಾಣಿಕರು ಮತ್ತು ಸೋಲುವುದಕ್ಕೆ ಹೆದರುವುದಿಲ್ಲ. ಆದರೆ ಕರಾಳ, ಸ್ವಾರ್ಥಿ ಪ್ರಪಂಚಕ್ಕೆ ಹೋಲಿಸಿದರೆ ಮುಗ್ಧ ಜನರನ್ನು ಯಾವಾಗಲೂ ಜನರು ಅತ್ಯಂತ ಮೂರ್ಖರು ಎಂದು ಹೀಯಾಳಿಸಿ ಮಾತನಾಡುವುದನ್ನು ನಾವು ನೋಡಿರುತ್ತೇವೆ. ಕೆಲವೊಮ್ಮೆ ಮುಗ್ಧ ಜನರನ್ನು ಬೆದರಿಸಲಾಗುತ್ತದೆ ಮತ್ತು ಇಂತಹ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಅವರಿಗೆ ತುಂಬಾನೇ ಕಷ್ಟ ಸಹ ಆಗುತ್ತದೆ ಎಂದು ನಾವು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ.

ಇದನ್ನೂ ಓದಿ:  July Born Nature: ಜುಲೈನಲ್ಲಿ ಹುಟ್ಟಿದವರಿಗೆ ಪ್ರವಾಸ ಎಂದ್ರೆ ಬಲು ಇಷ್ಟ ಅಂತೆ; ಹೀಗಿರುತ್ತದಂತೆ ಅವರ ವ್ಯಕ್ತಿತ್ವ

ನೀವು ಈ ವರ್ಗಕ್ಕೆ ಸೇರಿದ್ದೀರಾ ಎಂದು ತಿಳಿಯಲು ನೀವು ಉತ್ಸುಕರಾಗಿದ್ದರೆ, ಹನ್ನೆರಡು ರಾಶಿಚಕ್ರ ಚಿಹ್ನೆಗಳೊಂದಿಗೆ ವಿಶ್ಲೇಷಿಸುವ ಮೂಲಕ ನಿಮ್ಮ ವ್ಯಕ್ತಿತ್ವದ ಸಂಕೀರ್ಣ ವಿವರಗಳನ್ನು ಅರ್ಥಮಾಡಿಕೊಳ್ಳಲು ಜ್ಯೋತಿಷ್ಯವು ನಿಮಗೆ ಸಹಾಯ ಮಾಡುತ್ತದೆ. ಅತ್ಯಂತ ಮುಗ್ಧ ಜನರ ರಾಶಿಚಕ್ರ ಚಿಹ್ನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ನೋಡಿ.

1. ಮೇಷ ರಾಶಿ
ಈ ಮೇಷ ರಾಶಿಯಲ್ಲಿ ಜನಿಸಿದ ಜನರು ತುಂಬಾನೇ ಹಠಮಾರಿ ಸ್ವಭಾವದವರು ಎಂದು ಹೇಳಲಾಗುತ್ತದೆ. ಆದರೆ ಇವರು ಒಂದು ರೀತಿಯಲ್ಲಿ ಹೇಳಬೇಕಾದರೆ ಮಗುವಿನಂತೆ ಇವರ ಸ್ವಭಾವ ಅಂತ ಹೇಳಬಹುದು. ಅವರು ಕೆಲವೊಮ್ಮೆ ತುಂಬಾನೇ ಮುಗ್ಧ ಮತ್ತು ಬಾಲಿಶರಾಗಬಹುದು. ಅವರು ಬಯಸಿದ್ದನ್ನು ಮಾತ್ರ ಮಾಡುತ್ತಾರೆ. ಈ ಪ್ರಪಂಚದ ಜನರೊಂದಿಗೆ ವ್ಯವಹರಿಸುವಾಗ ಈ ರಾಶಿಯವರು ನಿಜವಾಗಿಯೂ ತುಂಬಾನೇ ಮುಗ್ಧರು ಎಂದು ಹೇಳಬಹುದು.

2. ಕರ್ಕಾಟಕ ರಾಶಿ
ಈ ರಾಶಿಯವರು ಅತ್ಯಂತ ಸೂಕ್ಷ್ಮವಾಗಿರುತ್ತಾರೆ ಮತ್ತು ಮುಗ್ಧರು ಸಹ ಆಗಿರುತ್ತಾರೆ. ಅವರು ಪ್ರೀತಿ ಮತ್ತು ಭಾವನೆಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತಾರೆ. ಅವರು ಎಂದಿಗೂ ಜನರಿಗೆ ದ್ರೋಹ ಮಾಡುವುದಿಲ್ಲ, ಏಕೆಂದರೆ ಅವರು ಪರಿಶುದ್ಧ ಉದ್ದೇಶಗಳನ್ನು ಹೊಂದಿದ್ದಾರೆ. ಅವರು ಕೇವಲ ವ್ಯಕ್ತಿಯ ಒಳ್ಳೆಯ ಗುಣಗಳ ಮೇಲೆ ಮಾತ್ರ ಅವರ ಗಮನವಿರುತ್ತದೆ, ಪ್ರಪಂಚದ ಕಠಿಣ ವಾಸ್ತವಗಳನ್ನು ಇವರು ನಿರ್ಲಕ್ಷಿಸುತ್ತಾರೆ ಎಂದು ಹೇಳಲಾಗುತ್ತದೆ.

3. ಕನ್ಯಾ ರಾಶಿ
ಈ ರಾಶಿಯವರು ಒಂದು ಚಿಕ್ಕ ನೊಣವನ್ನು ಸಹ ನೋಯಿಸುವ ಬಗ್ಗೆ ಯೋಚಿಸುವುದಿಲ್ಲ. ಅವರು ತಮ್ಮದೇ ಆದ ನೈತಿಕತೆಯ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ ಮತ್ತು ಜನರು ಯಾವಾಗಲೂ ಉತ್ತಮ ಉದ್ದೇಶಗಳನ್ನು ಹೊಂದಿದ್ದಾರೆ ಎಂದು ನಂಬುತ್ತಾರೆ. ಕನ್ಯಾ ರಾಶಿಯವರು ತುಂಬಾ ದಯಾಳುಗಳು ಮತ್ತು ಮುಗ್ಧರು. ಅವರು ಯಾರೊಂದಿಗೂ ಜಗಳಕ್ಕೆ ಇಳಿಯುವುದಿಲ್ಲ, ಅವರು ಯಾವಾಗಲೂ ನಿಯಮಗಳನ್ನು ಅನುಸರಿಸುತ್ತಾರೆ.

4. ಧನು ರಾಶಿ
ಅವರು ಜೀವನದ ಬಗ್ಗೆ ತುಂಬಾ ಸಂತೋಷ ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಅವರು ಯಾವುದೇ ಕೆಟ್ಟ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ, ಬದಲಿಗೆ, ಅವರು ಯಾವಾಗಲೂ ಜನರಿಗೆ ಸಹಾಯ ಮಾಡಲು ಎದುರು ನೋಡುತ್ತಾರೆ. ಅವರು ತುಂಬಾ ಮುಗ್ಧ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಅವರ ರೋಮಾಂಚಕ ನಗುವು ಅವರ ಸುತ್ತಲಿನ ಪ್ರತಿಯೊಬ್ಬರಿಗೂ ಸಕಾರಾತ್ಮಕವಾಗಿ ಯೋಚಿಸಲು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Chanakya Niti: ನಾಯಿಯ ಈ ಗುಣಗಳಿಂದ ಪಾಠ ಕಲಿತರೆ ಯಶಸ್ಸು ಖಂಡಿತ

5. ಮಕರ ರಾಶಿ
ಈ ರಾಶಿಯವರು ತುಂಬಾ ಪ್ರಾಮಾಣಿಕರು ಮತ್ತು ಉನ್ನತ ಮಾನದಂಡಗಳಿಗೆ ಅನುಗುಣವಾಗಿ ಜೀವಿಸುತ್ತಾರೆ. ನಕಾರಾತ್ಮಕ ಶಕ್ತಿಗಳೊಂದಿಗೆ ವ್ಯವಹರಿಸುವಾಗ ಅವರು ತುಂಬಾ ಮುಗ್ಧರಾಗಿರುತ್ತಾರೆ, ಆದರೆ ಅವರು ಕೆಟ್ಟ ವಿಧಾನಗಳನ್ನು ಆಶ್ರಯಿಸದಿದ್ದರೂ, ಅವರು ತಮ್ಮ ಬಲವಾದ ಮನೋಭಾವದಿಂದ ಗೆಲುವನ್ನು ಸಾಧಿಸುತ್ತಾರೆ ಎಂದು ಹೇಳಬಹುದು.
Published by:Ashwini Prabhu
First published: