Zodiac Signs: ನಿಮ್ಮ ರಾಶಿಚಕ್ರದ ಚಿಹ್ನೆಯ ಆಕರ್ಷಕ ದೈಹಿಕ ಲಕ್ಷಣವೇನು ಅಂತ ಗೊತ್ತೇ?

Zodiac signs: ಕುಂಭ ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಹಾಗಾಗಿ ಅವರ ಪಾದಗಳು ಎದ್ದು ಕಾಣುತ್ತವೆ. ಅವರು ತಮ್ಮ ಪಾದಗಳನ್ನು ಸುಂದರ ಮತ್ತು ಸ್ವಚ್ಛವಾಗಿ ಇರಿಸಿಕೊಂಡಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ನಮ್ಮೆಲ್ಲರ ದೇಹದಲ್ಲೂ(Bodies) ಒಂದು ವಿಶೇಷ(Special character) ಲಕ್ಷಣವಿರುತ್ತದೆ. ಅದು ನಮ್ಮ ದೇಹದ ಅತ್ಯುತ್ತಮ ಆಕರ್ಷಣೀಯ ಭಾಗ (Attractive part)ಎಂದು ನಾವು ಭಾವಿಸುತ್ತೇವೆ. ಆದರೆ ನೀವು ರಾಶಿಚಕ್ರದ ಚಿಹ್ನೆಗಳ(signs) ಪ್ರಕಾರ ಹೋದರೆ, ಪ್ರತಿಯೊಂದು ಚಿಹ್ನೆಗೂ ಒಂದೊಂದು ವಿಶೇಷ ಲಕ್ಷಣಗಳಿದ್ದು ಅವು ನಿಮ್ಮನ್ನು ಅತ್ಯಂತ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಆ ಲಕ್ಷಣ ಏನೆಂದು ಇಲ್ಲಿ ಪರಿಶೀಲಿಸಿ. ಪ್ರತಿ ರಾಶಿಚಕ್ರ(zodiac sign) ಚಿಹ್ನೆಯ ಪ್ರಕಾರ ಅವರ ಅತ್ಯಂತ ಆಕರ್ಷಕ ದೈಹಿಕ ಲಕ್ಷಣಗಳ ಪಟ್ಟಿ ಇಲ್ಲಿದೆ.


ಮೇಷ ರಾಶಿ
ಈ ರಾಶಿಚಕ್ರದ ಚಿಹ್ನೆಯು ಸುಂದರವಾದ ಹುಬ್ಬುಗಳಿಂದ ಕೂಡಿರುತ್ತದೆ. ಇದು, ಅವುಗಳ ಆಕಾರದ ಪ್ರಕಾರ ನಿಮ್ಮನ್ನು ಮುಗ್ಧ ಅಥವಾ ಉಗ್ರರಂತೆ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ಯಾರ ಸಹವಾಸವೂ ಬೇಡ ಎಂದು ತಮ್ಮ ಪಾಡಿಗೆ ಇರುವ ಅಂತರ್ಮುಖಿಗಳು ಈ ರಾಶಿಯವರು

ವೃಷಭ ರಾಶಿ
ವೃಷಭ ರಾಶಿಯವರು ಅದ್ಭುತವಾದ ತುಟಿಗಳನ್ನು ಹೊಂದಿದ್ದಾರೆ ಮತ್ತು ಅವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.

ಮಿಥುನ ರಾಶಿ
ಸುಂದರವಾದ ಮೈಬಣ್ಣ ಹೊಂದಿರುವ ಮಿಥುನ ರಾಶಿಯವರು ಸೂರ್ಯನ ಬೆಳಕಿನಂಥ ವರ್ತನೆ ಹೊಂದಿರುತ್ತಾರೆ. ಅವರ ವ್ಯಕ್ತಿತ್ವ ಮತ್ತು ಇನ್ನಷ್ಟು ತಿಳಿದುಕೊಳ್ಳುವ ಹಸಿವು, ಕುತೂಹಲ, ಅವರ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಅವರ ಚರ್ಮವು ತಾರುಣ್ಯದಿಂದ ಕೂಡಿರುತ್ತದೆ ಮತ್ತು ಗುಂಪಿನಲ್ಲಿ ಎದ್ದು ಕಾಣುತ್ತಾರೆ.

ಕಟಕ ರಾಶಿ
ಈ ಅರ್ಥಗರ್ಭಿತ ಮತ್ತು ಸಹಾನುಭೂತಿಯ ರಾಶಿಚಕ್ರ ಚಿಹ್ನೆಯು ಸುಂದರವಾದ, ಮತ್ತು ಒಳ್ಳೆಯ ಶೇಪ್‌ನಲ್ಲಿರುವ ಹೊಟ್ಟೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಸಿಂಹ ರಾಶಿ
ಸಿಂಹವನ್ನು ಪ್ರತಿನಿಧಿಸುವ ಈ ರಾಶಿಯವರ ದೊಡ್ಡ ಆಕರ್ಷಣೆ ಎಂದರೆ ಅದು ಅವರ ಕೂದಲು. ಆದ್ದರಿಂದ ಎಲ್ಲರೂ ಅವರ ಸುಂದರವಾದ ಕೂದಲನ್ನು ಮೊದಲು ಗಮನಿಸುತ್ತಾರೆ. ಈ ರಾಶಿಯವರು ಎಲ್ಲರ ಜೊತೆಗಿದ್ದಾಗ ಉಳಿದವರು ಮೊದಲು ಗಮನಿಸುವ ಭೌತಿಕ ಲಕ್ಷಣ ಎಂದರೆ ಅವರ ಕೂದಲು.

ಕನ್ಯಾರಾಶಿ
ಹೊಳೆಯುವ, ಸ್ಪಷ್ಟವಾದ ಚರ್ಮವನ್ನು ಕನ್ಯಾರಾಶಿಯವರಲ್ಲಿ ನೀವು ಗಮನಿಸಬಹುದು. ಅವರು ತಮ್ಮ ತ್ವಚೆಯ ಬಗ್ಗೆ ವಿಶೇಷ ಆಸ್ಥೆ ಹೊಂದಿರುತ್ತಾರೆ. ಬೆಳಗ್ಗೆ ಅಥವಾ ರಾತ್ರಿಯಲ್ಲೂ ಅವರು ತಮ್ಮ ಚರ್ಮದ ಕಾಳಜಿ ವಹಿಸುತ್ತಾರೆ.

ತುಲಾ ರಾಶಿ
ಪೂರ್ಣ ಆತ್ಮವಿಶ್ವಾಸ ಹೊಂದಿರುವ ಈ ರಾಶಿಚಕ್ರದವರು ಉತ್ತಮವಾದ ಹಿಂಭಾಗವನ್ನು ಹೊಂದಿರುತ್ತಾರೆ. ಇದು ಅವರಿಗೆ ನಿಧಾನವಾಗಿ ಮತ್ತು ಆಕರ್ಷಕವಾಗಿ ನಡೆಯಲು ಮತ್ತು ಎಲ್ಲರೊಂದಿಗೆ ಸ್ನೇಹಪರವಾಗಿ ಕಾಣಲು ಸಹಾಯ ಮಾಡುತ್ತದೆ.

ವೃಶ್ಚಿಕ ರಾಶಿ
ಈ ರಾಶಿಚಕ್ರದವರಿಗೆ ಲೈಂಗಿಕ ಸಾಮರ್ಥ್ಯ ತುಂಬಾ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಅವರು ವಿಭಿನ್ನ ಎರೋಜೆನಸ್ ವಲಯಗಳನ್ನು ಹೊಂದಿದ್ದಾರೆ ಮತ್ತು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅವರು ತಿಳಿದಿರುತ್ತಾರೆ.

ಧನು ರಾಶಿ
ಧನು ರಾಶಿಯವರು ಬ್ಯಾಕ್‌ಲೆಸ್ ಡ್ರೆಸ್ ಧರಿಸಿದಾಗ ಅಥವಾ ಅವರ ಟೀ ಶರ್ಟ್‌ಗಳನ್ನು ತೆಗೆದಾಗ ಅವರ ಅತ್ಯುತ್ತಮ ದೇಹ ವೈಶಿಷ್ಟ್ಯವನ್ನು ನೀವು ಗಮನಿಸಬಹುದು. ಅವರ ಬೆನ್ನು ನಯವಾಗಿರುತ್ತದೆ ಮತ್ತು ಉತ್ತಮ ಶೇಪ್ ಹೊಂದಿರುತ್ತದೆ. ಹಾಗಾಗಿ ಅವರು ನಡೆಯುವಾಗ, ಜನ ತಿರುಗಿ ನೋಡುವುದನ್ನು ನೀವು ಗಮನಿಸಬಹುದು.

ಮಕರ ರಾಶಿ
ನೀವು ಕಾಲುಗಳ ಬಗ್ಗೆ ಆಕರ್ಷಣೆ ಇದ್ದರೆ, ಮಕರ ರಾಶಿಯವರನ್ನು ಡೇಟ್ ಮಾಡಿ. ಅವರು ಉಡುಪುಗಳನ್ನು ಧರಿಸಿದಾಗ, ಅವರ ಕಾಲುಗಳು ಹೊಳೆಯುತ್ತವೆ. ಅಲ್ಲದೆ ಅವರು ಈಜುಡುಗೆಯಲ್ಲಿದ್ದಾಗ ನೀವು ಅವರ ಕಾಲುಗಳನ್ನು ಗಮನಿಸದೇ ಇರಲಾಗುವುದಿಲ್ಲ.

ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಹಾಗಾಗಿ ಅವರ ಪಾದಗಳು ಎದ್ದು ಕಾಣುತ್ತವೆ. ಅವರು ತಮ್ಮ ಪಾದಗಳನ್ನು ಸುಂದರ ಮತ್ತು ಸ್ವಚ್ಛವಾಗಿ ಇರಿಸಿಕೊಂಡಿರುತ್ತಾರೆ.

ಇದನ್ನೂ ಓದಿ: Zodiac Sign: ಇತರರನ್ನು ನೋಡಿ ಹೊಟ್ಟೆ ಕಿಚ್ಚು ಪಡುವುದು ಈ ರಾಶಿಯವರ ಗುಣವಂತೆ

ಮೀನ ರಾಶಿ
ಈ ರಾಶಿಚಕ್ರದ ಚಿಹ್ನೆಯು ಸುಂದರವಾದ ಕಣ್ಣುಗಳನ್ನು ಹೊಂದಿದೆ ಮತ್ತು ನೀವು ಈ ರಾಶಿಯವರನ್ನು ಭೇಟಿಯಾದಾಗ ಅದನ್ನು ಗುರುತಿಸುವುದು ಕಷ್ಟವೇನಲ್ಲ. ಅವರು ಸಾಮಾನ್ಯವಾಗಿ ಒಳ್ಳೆಯ, ದಪ್ಪ ಕೂದಲು ಕೂಡ ಹೊಂದಿರುತ್ತಾರೆ. ಅವರ ಕಣ್ಣುಗಳ ಬಗ್ಗೆ ಹೇಳುವುದಾದರೆ, ಅವರದ್ದು ಆಳವಾದ ದೃಷ್ಠಿ ಮತ್ತು ಅವರ ಎದುರಿನ ವ್ಯಕ್ತಿಯ ಮೂಲಕ ಪ್ರಪಂಚವನ್ನು ನೋಡುವ ದೃಷ್ಟಿಕೋನ ಹೊಂದಿರುತ್ತಾರೆ.
Published by:vanithasanjevani vanithasanjevani
First published: