ಪದೇ ಪದೇ ಒಂದೇ ಕನಸು ಮರುಕಳಿಸಿದರೆ ಏನು ಅರ್ಥ? ಏನನ್ನತ್ತೆ ಸ್ವಪ್ನಾಶಾಸ್ತ್ರ

ಕೆಲವು ಒಳ್ಳೆಯ ಕನಸುಗಳು ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡಿದರೆ, ಕೆಟ್ಟ ಕನಸುಗಳು ನಿಮ್ಮ ಆತ್ಮವಿಶ್ವಾಸವನ್ನು ದುರ್ಬಲಗೊಳಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕನಸುಗಳು (Dream) ಒಂದು ರೀತಿಯ ಟೆಲಿಪತಿ (Telepathy) ಯಾವುದೋ ಮುನ್ಸೂಚನೆ ಹೇಳಲು ಈ ಕನಸುಗಳು ಬೀಳುತ್ತವೆ ಎಂದು ಸ್ವಪ್ನಾ ಶಾಸ್ತ್ರದಲ್ಲಿ (Swapna Shastra) ತಿಳಿಸಲಾಗಿದೆ. ಕನಸುಗಳ ಸಂಪೂರ್ಣ ಆಧಾರವೆಂದರೆ ರಾಹು ಗ್ರಹ. ರಾಹು (Rahu) ಉತ್ತಮವಾಗಿದ್ದರೆ ಒಳ್ಳೆಯ ಕನಸುಗಳು ಬರುತ್ತವೆ. ಈ ಮೂಲಕ ರಾಹು ನಮ್ಮ ಭವಿಷ್ಯದ ಬಗ್ಗೆ ಮತ್ತು ಮುಂಬರುವ ಘಟನೆಗಳ ಬಗ್ಗೆ ಎಚ್ಚರಿಸುತ್ತಾನೆ. ಈ ಮೂಲಕ ವ್ಯಕ್ತಿಯು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳ ಬಹುದು. ಇಂತಹ ಕನಸುಗಳ ನಮ್ಮ ಭವಿಷ್ಯಕ್ಕೆ ನೆರವಾಗುತ್ತದೆ. ಇದೇ ಹಿನ್ನಲೆ ಸ್ವಪ್ನಾ ಶಾಸ್ತ್ರದಲ್ಲಿ ಕನಸಿನ ಒಳ ಅರ್ಥ ಬಿಡಿಸುವ ಯತ್ನ ಮಾಡಲಾಗಿದೆ. ಅದರಂತೆ ಆ ಕನಸಿಗೆ ಅರ್ಥವನ್ನು ನೀಡಿದ್ದು, ಅದರ ಲೆಕ್ಕಾಚಾರದ ಮೇಲೆ ಕನಸು ಕೆಟ್ಟದ್ದೊ ಅಥವಾ ಒಳ್ಳೆಯದ್ದೋ ಎಂದು ನಿರ್ಧರಿಸಲಾಗುತ್ತದೆ. 

  ಸ್ವಪ್ನಾ ಶಾಸ್ತ್ರದ ಅನುಸಾರವಾಗಿ ಕೆಳಕಂಡ ಕನಸುಗಳ ಅರ್ಥ ಈ ರೀತಿಯಾಗಿದೆ.

  • ಕನಸುಗಳು ಕೆಲವೊಂದು ಮನಸಿಗೆ ನೆಮ್ಮದಿ ನೀಡಿ, ಹಿತ ಅನುಭವ ಮೂಡಿಸುತ್ತವೆ. ಅಂತಹ ಕೆಲವು ಒಳ್ಳೆಯ ಕನಸುಗಳು ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡಿದರೆ, ಕೆಟ್ಟ ಕನಸುಗಳು ನಿಮ್ಮ ಆತ್ಮವಿಶ್ವಾಸವನ್ನು ದುರ್ಬಲಗೊಳಿಸುತ್ತವೆ.

  • ನೀರಿನಲ್ಲಿ ನೀವು ಅಥವಾ ಯಾವುದಾದರೂ ವಸ್ತುಗಳನ್ನು ಏನಾದರೂ ತೇಲುತ್ತಿರು ವುದನ್ನು ನೋಡಿದರೆ ಅದು  ಸಂತೋಷ ಮತ್ತು ಅಪಾರ ಸಂಪತ್ತಿನ ಸಂಕೇತವಾಗಿದೆ

  • ಅವಶೇಷಗಳು, ಸ್ಮಶಾನ, ಕೆಂಪು ವಸ್ತುಗಳು ಕನಸಿನಲ್ಲಿ ಕಂಡುಬಂದರೆ, ಅದು ಭವಿಷ್ಯದಲ್ಲಿ ಬರಲಿರುವ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯ ಸುಳಿವನ್ನು ನೀಡುತ್ತದೆ.

  • ಕನಸಿನಲ್ಲಿ ನಿಮ್ಮ ಸುತ್ತ ಮುತ್ತ ಹಣ ಕಂಡರೆ ಅಥವಾ ಯಾರಾದರೂ ನಿಮಗೆ ಹಣವನ್ನು ನೀಡುತ್ತಾರೆ ಎಂದರೆ  ಅಂತಹ ಕನಸುಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ. ಆರ್ಥಿಕ ಸ್ಥಿರತೆಯ ಕುರಿತು ತಿಳಿಸುತ್ತವೆ.

  • ಕನಸಿನಲ್ಲಿ ಎಲ್ಲೋ ಎತ್ತರದಲ್ಲಿ ಧ್ವಜವನ್ನು ಇಡುವುದು ಅಥವಾ ನಿಮ್ಮ ಕೈಯಲ್ಲಿ ಧ್ವಜವನ್ನು ಹಿಡಿದ ರೀತಿ ಕಂಡರೆ ಅದರ ಅರ್ಥ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುತ್ತೀರ ಎಂಬುದರ ಸಂಕೇತವಾಗಿದೆ.


  ಇದನ್ನು ಓದಿ: ಮದುವೆ ವಿಚಾರದಲ್ಲಿ ಈ ತಪ್ಪು ಮಾಡಿದರೆ ಜೀವನ ಪರ್ಯಂತ ಸಂಕಷ್ಟ ಎನ್ನುತ್ತಾರೆ ಚಾಣಕ್ಯ

  • ಯಾವುದೇ ರೀತಿಯ ಜಗಳ ಮತ್ತು ಜಗಳದಂತಹ ಹಿಂಸಾತ್ಮಕ ಕನಸುಗಳು ಮತ್ತೆ ಮತ್ತೆ ಕನಸಿನಲ್ಲಿ ಬಂದರೆ ಎಚ್ಚರ ವಹಿಸಿ. ಇದು ನಿಮಗೆ ಹಾನಿ ಮಾಡುವ ಸಾಧ್ಯತೆ ಇದೆ. ಈ ರೀತಿ ಕನಸು ಪದೇ ಪದೇ ಕಾಡಿದರೆ,  ಮಂಗಳವಾರ ಮನೆಯಿಂದ ಸಿಹಿತಿಂಡಿಗಳನ್ನು ತೆಗೆದುಕೊಂಡು ಹನುಮಾನ್  ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಿ.

  • ಕನಸಿನಲ್ಲಿ ನವಿಲು ನರ್ತಿಸುವುದು ಕಂಡರೆ ಅದು ಅದೃಷ್ಟದ ಸಂಕೇತ ಎನ್ನಲಾಗಿದೆ

  • ಕನಸಿನಲ್ಲಿ ಬಾಗಿಲು ತೆರೆಯುವುದನ್ನು ನೋಡಿದಂತೆ ಭಾಸವಾದರೆ,  ಅಂತಹ ವ್ಯಕ್ತಿಯ ಅದೃಷ್ಟದ ಬಾಗಿಲು ಮುಂದಿನ ದಿನಗಳಲ್ಲಿ ತೆರೆಯುತ್ತದೆ.


  ಇದನ್ನು ಓದಿ: ಈ ರೀತಿಯ 8 ಕನಸುಗಳು ಬೀಳುತ್ತಿವೆಯಾ? ಹಾಗಾದ್ರೆ ನಿರ್ಲಕ್ಷ್ಯ ಮಾಡಬೇಡಿ

  • ಹಸುವಿನ ಸಗಣಿಯಿಂದ ನೆಲದ ಮನೆಯನ್ನು ನೋಡುವುದು ತುಂಬಾ ಶುಭ ಫಲಿತಾಂಶಗಳನ್ನು ನೀಡುವ ಕನಸು. ಇಂತಹ ಕನಸು ಕಾಣುವುದು ಅಪರೂಪವಾದರೂ ಇದರ ಅರ್ಥ ನಿಮ್ಮದೇ ಆದ ಸ್ವಂತ ಮನೆ ನಿರ್ಮಾಣ ಮಾಡುವ ಕನಸು ಪೂರ್ಣಗೊಳ್ಳಲಿದೆ ಎಂಬುದರ ಸೂಚಕ ವಾಗಿದೆ.

  • ಕನಸಿನಲ್ಲಿ ಹಸುವಿನ ಸೇವೆಯನ್ನು ನೋಡುವುದು ಎಂದರೆ ದೇವರ ಆಶೀರ್ವಾದ ನಿಮ್ಮೊಂದಿಗೆ ಸದಾ ಇರುತ್ತದೆ. ಹಸುವು ದೇವತೆಗಳ ಸಂಕೇತವಾಗಿದ್ದು, ಮುಂಬರುವ ದಿನಗಳಲ್ಲಿ ನೀವು ಸಂತೋಷದ ಜೀವನ ವನ್ನು ನಡೆಸುತ್ತೀರಿ ಎಂದರ್ಥ.

  • ಕನಸಿನಲ್ಲಿ ಸತ್ತ ಹಾವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಜೀವನದ ತೊಂದರೆಗಳ ನಿವಾರಣೆಯನ್ನು ಸೂಚಿಸುತ್ತದೆ ಜೊತೆಗೆ ಉದ್ಯೋಗದಲ್ಲಿ ಬಡ್ತಿಯನ್ನು ಹೊಂದಲಿದ್ದೀರಾ ಎಂಬುದರ ಸೂಚಕವಾಗಿದೆ

  Published by:Seema R
  First published: