Vastu Tips: ಮನೆಯಲ್ಲಿ ಹಣ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಗೆ ಈ ವಾಸ್ತು ಸಲಹೆ ಪಾಲಿಸಿ!

ನೀವು ನಿಮ್ಮ ಹಣವನ್ನು ಎಲ್ಲಿ ಇರಿಸುತ್ತೀರಿ ಎಂಬುದನ್ನು ಸರಿಯಾಗಿ ಗಮನಿಸಬೇಕು. ನೀವು ಹಣವನ್ನು ಇಡುವ ಆ ದಿಕ್ಕು ಉತ್ತರದಲ್ಲಿರಬೇಕು. ಮನೆಯ ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬೀರುವಿನ ಬಾಗಿಲು ಉತ್ತರದ ಕಡೆಗೆ ತೆರೆದುಕೊಳ್ಳುವ ರೀತಿಯಲ್ಲಿ ಸುರಕ್ಷಿತವಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನೆಯಲ್ಲಿ (Home) ವಾಸ್ತು ದೋಷ (Vastu Dosha) ಇದ್ದರೆ ಸಂಸಾರದ ಪ್ರಗತಿ ಹಾಗೂ ಆರ್ಥಿಕ ಸ್ಥಿತಿಯಲ್ಲಿ (Economic Condition) ಸಾಕಷ್ಟು ಅಡೆತಡೆಗಳು ಉಂಟಾಗುತ್ತವೆ. ಮತ್ತು ಕೈಯಲ್ಲಿ ಹಣ ಸಹ ಉಳಿಯಲ್ಲ ಎಂದು ವಾಸ್ತು ಶಾಸ್ತ್ರ ಹಾಗೂ ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾದ್ರೆ ವಾಸ್ತು ಶಾಸ್ತ್ರದ ಸುಲಭ ಮಾರ್ಗಗಳು ಯಾವವು? ಯಾವ ವಾಸ್ತು ನಿಯಮಗಳ ಪಾಲನೆಯಿಂದ ಮನೆಯಲ್ಲಿ ಸಿರಿ ಸಂಪತ್ತು, ದವಸ, ಧಾನ್ಯ ಹಾಗೂ ಸಮೃದ್ಧಿಯಿಂದ ಕೂಡಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಉತ್ತರ ದಿಕ್ಕನ್ನು ಸಂಪತ್ತಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಕುಬೇರನು ಆಳುತ್ತಾನೆ. ಹಾಗಾಗಿ ನೀವು ಹಣವನ್ನು ಎಲ್ಲಿಡುತ್ತೀರಿ ಎಂಬುದು ಮುಖ್ಯವಾಗುತ್ತದೆ.

    ಹಣವನ್ನು ಇರಿಸುವ ದಿಕ್ಕು ಉತ್ತರವಾಗಿರಲಿ

    ಹಾಗಾಗಿ ನೀವು ನಿಮ್ಮ ಹಣವನ್ನು ಎಲ್ಲಿ ಇರಿಸುತ್ತೀರಿ ಎಂಬುದನ್ನು ಸರಿಯಾಗಿ ಗಮನಿಸಬೇಕು. ನೀವು ಹಣವನ್ನು ಇಡುವ ಆ ದಿಕ್ಕು ಉತ್ತರದಲ್ಲಿರಬೇಕು. ಮನೆಯ ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬೀರುವಿನ ಬಾಗಿಲು ಉತ್ತರದ ಕಡೆಗೆ ತೆರೆದುಕೊಳ್ಳುವ ರೀತಿಯಲ್ಲಿ ಸುರಕ್ಷಿತವಾಗಿರಬೇಕು. ಅದು ಸಂಪತ್ತನ್ನು ಹೆಚ್ಚಿಸುತ್ತದೆ.

    ಭಾರವಾದ ವಸ್ತುಗಳನ್ನು ಎಲ್ಲಿ ಇಡಬಾರದು?

    ವಾಸ್ತು ಪ್ರಕಾರ, ಪ್ರತಿಯೊಂದು ದಿಕ್ಕಿನಲ್ಲಿಯೂ ಒಂದೊಂದು ದೇವತೆಗಳ ಪ್ರಾಬಲ್ಯವಿದೆ. ಈ ದಿಕ್ಕುಗಳಲ್ಲಿ ಯಾವುದೇ ತಪ್ಪಾದ ವಸ್ತುಗಳನ್ನು ತಪ್ಪಾಗಿಯೂ ಇಡಬಾರದು. ಆಹಗೇನಾದ್ರೂ ಇಟ್ಟರೆ ಅದರ ದುಷ್ಪರಿಣಾಮ ಇಡೀ ಮನೆಯ ಮೇಲೆ ಬೀಳುವ ಸಾಧ್ಯತೆ ಇದೆ. ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ: ಮನೆಯಲ್ಲಿ ಹಲ್ಲಿ ಸತ್ತರೇ ಹುಷಾರ್; ಇದು ಯಾವುದರ ಲಕ್ಷಣ ಗೊತ್ತಾ?

    ವಾಸ್ತು ಪ್ರಕಾರ, ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ದಿಕ್ಕು ಎಂದು ಹೇಳುತ್ತಾರೆ. ಹಾಗಾಗಿ ಬೆಳಕಿನ ವಸ್ತುಗಳನ್ನು ಯಾವಾಗಲೂ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಬೆಳಕಿನ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ಮತ್ತು ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.

    ಕುಬೇರ ದೇವರ ಭಾವಚಿತ್ರ ಅಥವಾ ಫೋಟೋ

    ದೇವಿ ಮಹಾಲಕ್ಷ್ಮಿಯನ್ನು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ದೇವತೆ ಎಂದು ಪೂಜಿಸುತ್ತಾರೆ. ಮತ್ತೊಂದೆಡೆ ಕುಬೇರನನ್ನು ಸಂಪತ್ತಿನ ದೇವರು ಎಂದು ಪೂಜೆ ಮಾಡುತ್ತಾರೆ. ಹಾಗಾಗಿ ಭಗವಾನ್ ಕುಬೇರನ ಚಿತ್ರವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.

    ಮನಿ ಪ್ಲಾಂಟ್

    ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿಯಲ್ಲಿ ಮನಿ ಪ್ಲಾಂಟ್ ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನಿ ಪ್ಲಾಂಟ್ ಎಲ್ಲಿ ಇರುತ್ತದೆಯೋ ಅದು ಯಾವಾಗಲೂ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.

    ವಾಸ್ತು ಪ್ರಕಾರ, ಮನಿ ಪ್ಲಾಂಟ್‌ ಸಸ್ಯವನ್ನು ಉತ್ತರ ದಿಕ್ಕಿನಲ್ಲಿ ನೆಟ್ಟರೆ, ಅದು ಯಾವಾಗಲೂ ಶುಭ ಫಲಿತಾಂಶ ನೀಡುತ್ತದೆ. ನೆಲದ ಮೇಲೆ ಮನಿ ಪ್ಲಾಂಟ್ ನೆಡುವುದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ.

    ಸ್ವಚ್ಛತೆ ಮತ್ತು ಅಲಂಕಾರ

    ಹಿಂದೂ ನಂಬಿಕೆಯ ಪ್ರಕಾರ ಎಲ್ಲಿ ಸ್ವಚ್ಛತೆ ಮತ್ತು ಅಲಂಕಾರ ಮಾಡಲಾಗುತ್ತದೆಯೋ, ಅಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ. ಆರ್ಥಿಕ ಸ್ಥಿತಿಯನ್ನು ಸದೃಢವಾಗಿಡಲು ಮನೆಯ ಉತ್ತರ ದಿಕ್ಕಿನಲ್ಲಿ ಸ್ವಚ್ಛತೆ ಕಾಪಾಡಿ. ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಭಾರವಾದ ವಸ್ತುಗಳು, ಕಸ ಅಥವಾ ಅನುಪಯುಕ್ತ ವಸ್ತುಗಳು ಬಿದ್ದಿದ್ದರೆ ತಕ್ಷಣ ಅವುಗಳನ್ನು ತೆಗೆದು ಹಾಕಿ.

    ಹಣ ಗಳಿಕೆ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲವು ವಾಸ್ತು ಪರಿಹಾರಗಳು

    ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಉತ್ತಮ. ಹೀಗೆ ಮಾಡಿದರೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ಪ್ರಯೋಜನ ಸಿಗುತ್ತದೆ ಎಂಬ ನಂಬಿಕೆ ಇದೆ.

    ನಿಮ್ಮ ಜೀವನದಲ್ಲಿ ಪ್ರಗತಿಯತ್ತ ಸಾಗಲು ನೀವು ಬಯಸಿದರೆ ಈಶಾನ್ಯ ದಿಕ್ಕಿನ ಜಾಗವನ್ನು ಸ್ವಚ್ಛವಾಗಿಡಿ. ವಾಸ್ತು ಶಾಸ್ತ್ರದ ಪ್ರಕಾರ, ಅನಗತ್ಯವಾಗಿ ನಲ್ಲಿಗಳು ಅಥವಾ ತೊಟ್ಟಿಗಳಿಂದ ನೀರು ಹರಿಯುವುದು ಅಶುಭದ ತಂದೊಡ್ಡುತ್ತವೆ.

    ಇದನ್ನೂ ಓದಿ: ನೀಲಮಣಿ ರತ್ನ ಧರಿಸುವುದರಿಂದ ಈ ರಾಶಿಯವರಿಗೆ ಹಾನಿಯೇ ಹೆಚ್ಚು

    ನಿಮ್ಮ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಯಾವಾಗಲೂ ಸ್ವಚ್ಛವಾಗಿಡಿ. ಮನೆಗೆ ಬರುವ ಹಣವು ಅದಕ್ಕೆ ನೇರವಾಗಿ ಸಂಬಂಧಿಸಿದೆ. ಮನೆಯಲ್ಲಿ ಪೂಜಾ ಸ್ಥಳದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಮನೆಯಲ್ಲಿ ದಕ್ಷಿಣ ಗೋಡೆಯ ಮೇಲೆ ದೇವಾಲಯವಿದ್ದರೆ ನೀವು ಹಣಕ್ಕೆ ಸಂಬಂಧಿಸಿದ ಭಯಾನಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪೂಜಾ ಸ್ಥಳ ಈಶಾನ್ಯದಲ್ಲಿರಲಿ.
    Published by:renukadariyannavar
    First published: