Dhanurmasam 2021: ಇಂದಿನಿಂದ ಧನುರ್ಮಾಸ ಆರಂಭ, ಈ ಮಾಸದಲ್ಲಿ ಮುಖ್ಯವಾಗಿ ಮಾಡಬೇಕಿರುವುದು ಏನು?

Shunya masa: ಪುಷ್ಯಾ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ, ಏಕೆಂದರೆ ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫಲಿತಾಂಶ ಶೂನ್ಯವಾಗಿರುತ್ತದೆ ಎನ್ನುವ ನಂಬಿಕೆ ಇದೆ

ಶೂನ್ಯ ಮಾಸ

ಶೂನ್ಯ ಮಾಸ

 • Share this:
  ಹಿಂದೂ ಧರ್ಮದಲ್ಲಿ(Hindu Religion) ಒಂದೊಂದು ಮಾಸಕ್ಕೂ ಒಂದೊಂದು ವಿಶಿಷ್ಟವಾದ(Special) ಮಹತ್ವವಿದೆ.. ಪ್ರತಿಯೊಂದು ಮಾಸದಲ್ಲಿ ಒಬ್ಬ ದೇವರನ್ನು(God) ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿ ನೆರವೇರುತ್ತದೆ ಎಂಬ ನಂಬಿಕೆ(Trust) ಇದೆ.. ಅದರಲ್ಲೂ ಮಹಾವಿಷ್ಣುವಿಗೆ(Lord Vishnu) ಸೀಮಿತವಾಗಿರುವ ಧನುರ್ಮಾಸಕ್ಕೆ ಅದರದೇ ಆದ ವೈಶಿಷ್ಟ್ಯವಿದೆ. . ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯೇ ಧನುರ್ಮಾಸ ಎನ್ನುತ್ತಾರೆ.

  ಧನುರ್ಮಾಸ ಎಂದರೇನು..?

  ಪುಷ್ಯಾ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ, ಏಕೆಂದರೆ ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫಲಿತಾಂಶ ಶೂನ್ಯವಾಗಿರುತ್ತದೆ ಎನ್ನುವ ನಂಬಿಕೆ ಇದೆ.ಪಂಚಾಂಗದ ಪ್ರಕಾರ , ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಬರುವ ಧನುರ್ಮಾಸ, ಧನುರ್ ಮಾಸವನ್ನು ಶೂನ್ಯ ಮಾಸಂ ಅಥವಾ ಕರ್ಮ ಎಂದು ಪರಿಗಣಿಸಲಾಗುತ್ತದೆ. ಧನುರ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ.

  ಇದನ್ನೂ ಓದಿ: ಗುರು ಗ್ರಹದ ಸ್ಥಾನ ಪಲ್ಲಟದಿಂದ 4 ರಾಶಿಯವರಿಗೆ ಬಾರಿ ಅದೃಷ್ಟ

  ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳನ್ನು ಸಹ ಮಾಡುವುದಿಲ್ಲ.ಜೊತೆಗೆ ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ನಮ್ಮ ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದೇವೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ. ಮಾರ್ಘಶಿರ ಮಾಸ/ ಧನು ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ ಆದ ಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.

  ಧನುರ್ಮಾಸದ ಆರಂಭ ಯಾವಾಗ..?

  ಧನುರ್ಮಾಸ ಈ ವರ್ಷ 2021 ಡಿಸೆಂಬರ್ 16ರಂದು ಪ್ರಾರಂಭವಾಗುತ್ತದೆ ಮತ್ತು 2022 ಜನವರಿ 13ರಂದು ಕೊನೆಗೊಳ್ಳುತ್ತದೆ. ಅಂದರೆ ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ.ಬೆಳಿಗ್ಗೆ 7.07 ರಿಂದ ಮಧ್ಯಾಹ್ನ 12.17 ರವರೆಗೆ ಧನುರ್‌ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಿಗ್ಗೆ 7.07 ರಿಂದ ಬೆಳಿಗ್ಗೆ 8.50ರವರೆಗೆ ಧನುರ್ಮಾಸದ ಕಾಲವಾಗಿದ್ದು, ಈ ಕಾಲದಲ್ಲಿ ದೇವರನ್ನು ಪೂಜೆ ಮಾಡುವುದು ಸೂಕ್ತ..

  ಶ್ರೀಕೃಷ್ಣನನ ಸ್ಮರಣೆಯಿಂದ ಸಿಗಲಿದೆ ಪುಣ್ಯ

  ನಂಬಿಕೆಗಳ ಪ್ರಕಾರ, ಮಾರ್ಗಶೀರ್ಷ ತಿಂಗಳಲ್ಲಿ ಶ್ರೀಕೃಷ್ಣನನ್ನು ಸ್ಮರಿಸುವುದು ಮತ್ತು ಗಾಯತ್ರಿ ಮಂತ್ರವನ್ನು ಪಠಿಸುವುದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಈ ತಿಂಗಳು ಭಗವಾನ್ ಕೃಷ್ಣನಿಗೆ ತುಂಬಾ ಪ್ರಿಯವಾದ ಮಾಸವಾಗಿದೆ. ಆದ್ದರಿಂದ ನೀವು ಈ ತಿಂಗಳಲ್ಲಿ ಪ್ರತಿದಿನ ಸ್ನಾನ ಮಾಡಿದ ನಂತರ ವಿಷ್ಣು ಸಹಸ್ರನಾಮವನ್ನು, ಗಜೇಂದ್ರ ಮೋಕ್ಷವನ್ನು ಮತ್ತು ಭಗವದ್ಗೀತೆಯನ್ನು ಪಠಿಸಬೇಕು. ಮಾರ್ಗಶೀರ್ಷ ಮಾಸದಲ್ಲಿ ನೀವು ಇದನ್ನು ಮಾಡುವುದರಿಂದ ನಿಮ್ಮೆಲ್ಲಾ ಪಾಪಗಳು ದೂರಾಗುತ್ತದೆ. ಇನ್ನು
  ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನದ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9 ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೈವಾರಾಧನೆಗೆ ಅದರಲ್ಲೂ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಸಹ ಮಾಸಾನಾಮ್ ಮಾರ್ಗಶೀರ್ಷಃ ಅಂದರೆ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ತನ್ನನ್ನು ವರ್ಣಿಸಿದ್ದಾನೆ.

  ಇದನ್ನೂ ಓದಿ: ಕುಂಭರಾಶಿಗೆ ಶನಿ ಪ್ರವೇಶದಿಂದ ಬದಲಾಗಲಿದೆ ಈ 3 ರಾಶಿಯವರ ಅದೃಷ್ಟ

  ಧನುರ್ಮಾಸದಲ್ಲಿ ಏನು ಮಾಡಬೇಕು..?

  ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ. ಜೊತೆಗೆ ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು. *ಪಾರಾಯಣವನ್ನು ನೈವೇದ್ಯ ಅರ್ಪಣೆಯ ನಂತರವೂ ಮಾಡಬಹುದು. ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ. ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು. ಇನ್ನು .ಈ ವಿಶೇಷ ತಿಂಗಳಲ್ಲಿ ಎಣ್ಣೆ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಆದ್ದರಿಂದ ಧನುರ್ಮಾಸದಲ್ಲಿ ಪ್ರತಿದಿನ ದೇಹಕ್ಕೆ ಎಣ್ಣೆಯನ್ನು ತಿಕ್ಕಿ ಸ್ನಾನ ಮಾಡಬೇಕು.
  Published by:ranjumbkgowda1 ranjumbkgowda1
  First published: