Astrology: ಕುಜ ದೋಷ ನಿವಾರಣೆಗೆ ಅಂಗಾರಕ ಚತುರ್ಥಿಯಂದು ಈ ಕೆಲಸ ಮಾಡಿ

Mangal Dosha :ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮೊದಲು ಗಣೇಶನಿಗೆ ಪೂಜೆ ಸಲ್ಲಿಕೆ ಮಾಡಿದ್ದೆ ನಾವು ಅಂದುಕೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಹೀಗಾಗಿ ಗಣೇಶನನ್ನು ವಿಜ್ಞ ನಿವಾರಕ ಎಂದು ಕರೆಯುತ್ತಾರೆ..ಹೀಗಾಗಿ ಜಾತಕದಲ್ಲಿ ಮಂಗಳ ದೋಷ ಅಥವಾ ಕುಜ ದೋಷ ಇರುವವರು ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಬೇಕು..

ಗಣೇಶನಿಗೆ ಪೂಜೆ ಸಲ್ಲಿಕೆ

ಗಣೇಶನಿಗೆ ಪೂಜೆ ಸಲ್ಲಿಕೆ

 • Share this:
  ಸಾಮಾನ್ಯವಾಗಿ ಹೆಣ್ಣು (Girls) ಮಕ್ಕಳು ಮದುವೆ(marriage)) ವಯಸ್ಸಿಗೆ ಬರುತ್ತಿದ್ದಂತೆ ಅವರ ಜಾತಕವನ್ನ ಪರಿಶೀಲನೆ ಮಾಡಿದಾಗ ಕೇಳಿ ಬರುವ ದೋಷದ ಹೆಸರು ಮಂಗಳ ದೋಷ(Mangal Dosh) ಅಥವಾ ಕುಜದೋಷ. ಹೀಗಾಗಿ ಹೆಣ್ಣಿನ ಕಡೆಯವರು ಕುಜ ದೋಷವಿರುವ ಮಗಳ ಮದುವೆ ಮಾಡಲು ನಾನಾ ರೀತಿಯ ಪರದಾಟ ನಡೆಸುತ್ತಾರೆ. ಮಂಗಳ ಗ್ರಹವು ವೈವಾಹಿಕ ಸಂತೋಷ ಹಾಗೂ ಮದುವೆಯ ಕಾರಕನಾಗಿರುತ್ತಾನೆ. ವಿವಾಹದಲ್ಲಿ ಮಂಗಳನ ಪ್ರಭಾವವು ದಂಪತಿಗಳ(Couples) ನಡುವೆ ಉತ್ಸಾಹವನ್ನು ತರುತ್ತದೆ. ಅದೇ ಮಂಗಳನು ಅಶುಭ ಸ್ಥಾನದಲ್ಲಿದ್ದಾಗ ವಿನಾಶಕಾರಿಯಾಗಬಹುದು. ಹಾಗಾಗಿಯೇ ಮದುವೆಗೂ ಮುನ್ನ ಕುಂಡಲಿ ಅಥವಾ ಜಾತಕ ನೋಡುವಾಗ ಕುಜ ದೋಷವಿದೆಯೇ ಎನ್ನುವುದನ್ನು ನೋಡುತ್ತಾರೆ.

  ಹುಡುಗ ಅಥವಾ ಹುಡುಗಿಯ ಜಾತಕದ ಮೊದಲನೆ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಅದಕ್ಕೆ ಮಂಗಳ ದೋಷ ಅಥವಾ ಕುಜದೋಷವೆಂದು ಕರೆಯುತ್ತಾರೆ.  ಇಂತಹ ಸಂದರ್ಭದಲ್ಲಿ ಮಂಗಳ ದೋಷವಿರುವ ವ್ಯಕ್ತಿಯನ್ನು ಮಂಗಳ ದೋಷವಿರುವ ಜಾತಕದೊಂದಿಗೆ ವಿವಾಹ ಮಾಡಿದರೆ ಆಗ ದೋಷವಿರುವುದಿಲ್ಲ. ಹಾಗಾಗದೇ ಇದ್ದಲ್ಲಿ ಒಬ್ಬರಿಗೆ ದೋಷವಿದ್ದು, ಇನ್ನೊಬ್ಬರಿಗೆ ಇಲ್ಲದಿದ್ದಾಗ ವೈವಾಹಿಕ ಜೀವನದಲ್ಲಿ ತೊಂದರೆಗಳು ಬರುತ್ತವೆ.

  ನೆಮ್ಮದಿ ಇಲ್ಲದಿರುವುದು, ಸಂತಾನಕ್ಕೆ ಸಮಸ್ಯೆ ಉಂಟಾಗುವುದು, ಇಷ್ಟ-ಕಷ್ಟಗಳಲ್ಲಿ ಭಿನ್ನಾಭಿಪ್ರಾಯ, ವಿಚ್ಛೇದನ ಪಡೆದುಕೊಳ್ಳುವ ಸಂದರ್ಭವೂ ಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಕುಜದೋಷವಿದ್ದರೂ ಇದರ ಪರಿಹಾರಕ್ಕಾಗಿ ನಾನ ಪ್ರಯತ್ನಗಳನ್ನು ಮಾಡಲಾಗುತ್ತದೆ.. ಹೆಚ್ಚಿನ ಜನರಿಗೆ ಮಂಗಳ ದೋಷ ಪರಿಹಾರಕ್ಕೆ ಏನು ಮಾಡಬೇಕು ಎನ್ನುವುದು ತಿಳಿಯುವುದಿಲ್ಲ.. ಹೀಗಾಗಿ ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ..

  ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಪೂಜೆ ಸಲ್ಲಿಕೆ

  ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮೊದಲು ಗಣೇಶನಿಗೆ ಪೂಜೆ ಸಲ್ಲಿಕೆ ಮಾಡಿದ್ದೆ ನಾವು ಅಂದುಕೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಹೀಗಾಗಿ ಗಣೇಶನನ್ನು ವಿಜ್ಞ ನಿವಾರಕ ಎಂದು ಕರೆಯುತ್ತಾರೆ. ಹೀಗಾಗಿ ಜಾತಕದಲ್ಲಿ ಮಂಗಳ ದೋಷ ಅಥವಾ ಕುಜ ದೋಷ ಇರುವವರು ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಬೇಕು..

  ಸಂತೋಷ ಮತ್ತು ಶಾಂತಿ ಪಡೆಯಲು 

  ಅಂಗಾರಕಿ ಚತುರ್ಥಿಯಂದು ಗಣೇಶ ಅಥರ್ವಶೀರ್ಷವನ್ನು ಪಠಿಸುವುದು ತುಂಬಾ ಮಂಗಳಕರವಾಗಿದೆ. ಅದೇ ಸಮಯದಲ್ಲಿ, ಇದು ಮನೆಯಲ್ಲಿ ಶಾಂತಿ, ನೆಮ್ಮದಿಯನ್ನು ತರಲಿದೆ. ಇದನ್ನು ಪಠಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

  ಇದನ್ನೂ ಓದಿ :ನೀವು ಈ ದಿನಾಂಕದಂದು ಜನಿಸಿದ್ರೆ ನಿಮ್ದು ಪಕ್ಕಾ ಲವ್ ಮ್ಯಾರೇಜ್ ಎನ್ನುತ್ತದೆ ಸಂಖ್ಯಾಶಾಸ್ತ್ರ

  ಹನುಮಂತನಿಗೆ ಸಿಂಧೂರ ಅರ್ಪಣೆಯಿಂದ ಮಂಗಳ ದೋಷ ನಿವಾರಣೆ

  ಅಂಗಾರಕಿ ಚತುರ್ಥಿಯ ದಿನದಂದು ಹನುಮಾನ್ ಜೀ ಯನ್ನು ಪೂಜಿಸಿ ಮತ್ತು ಸಿಂಧೂರದಿಂದ ತಿಲಕವನ್ನು ಹಚ್ಚಿ. ಅಂಗಾರಕಿ ಚತುರ್ಥಿಯಂದು ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಮಂಗಳದೋಷ ನಿವಾರಣೆಯಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಕೆಲಸದಲ್ಲಿ ಎದುರಾಗುವ ನಾನಾ ರೀತಿಯ ವಿಘ್ನಗಳು ಸುಲಭವಾಗಿ ಬಗೆಹರಿಯಲಿವೆ.

  ಗಣೇಶ ಯಂತ್ರ ಸ್ಥಾಪನೆಯಿಂದ

  ಜ್ಯೋತಿಷ್ಯಶಾಸ್ತ್ರದಲ್ಲಿ ಗಣೇಶ ಯಂತ್ರವನ್ನು ಬಹಳ ಅದ್ಬುತ ಯಂತ್ರ ಎಂದು ಕರೆಯಲಾಗಿದೆ..ದಾಗಿ ಅಂಗಾರಕ ಸಂಕಷ್ಟ ಚತುರ್ಥಿಯಂದು ಮನೆಯ ಋಣಾತ್ಮಕತೆ ಕೊನೆಗಾಣಿಸಲು ಮತ್ತು ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುವಂತೆ ತಡೆಯಲು, ಗಣೇಶ ಯಂತ್ರ ಸ್ಥಾಪನೆ ಮಾಡಬೇಕು..

  ಇದನ್ನೂ ಓದಿ :ಜ್ಯೋತಿಷ್ಯ ಶಾಸ್ತ್ರದ ಈ ನಿಯಮ ಅನುಸರಿಸಿದರೆ ದಾಂಪತ್ಯದಲ್ಲಿ ಜಗಳ ಅಲ್ಲ, ಪ್ರೀತಿ ಹೆಚ್ಚಂತೆ

  ಇಷ್ಟಾರ್ಥ ಸಿದ್ಧಿಗಾಗಿ

  ಗಣೇಶನಿಗೆ ದರ್ಬೆ ಎಂದರೆ ಬಹಳ ಪ್ರಿಯ. ದರ್ಬೆ ಮತ್ತು ಮೋದಕವನ್ನು ಅರ್ಪಿಸುವುದರಿಂದ ಗಣೇಶನ ಆಶೀರ್ವಾದ ಪಡೆಯಬಹುದು. ಅಂಗಾರಕಿ ಚತುರ್ಥಿಯ ದಿನದಂದು ಗಣಪತಿಯನ್ನು ಪೂಜಿಸುವಾಗ, ಅವನಿಗೆ 21 ಗಂಟುಗಳ ದರ್ಬೆಯನ್ನು ಅರ್ಪಿಸಿ ಮತ್ತು ಅವನ ಅವನ 21 ನಾಮಗಳನ್ನು ಒಟ್ಟಿಗೆ ಜಪಿಸುತ್ತಾ ಇರಿ. ಈ ರೀತಿ ಇಂದು ಗಣೇಶನನ್ನು ಪೂಜಿಸುವುದರಿಂದ ಇಷ್ಟಾರ್ಥ ನೆರವೇರುತ್ತದೆ.
  Published by:ranjumbkgowda1 ranjumbkgowda1
  First published: