ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಹೇಗೆ ವಯಸ್ಕ ಮಹಿಳೆಯರಿಗೆ ಅವಕಾಶವಿಲ್ಲವೋ ಅದೇ ರೀತಿ ಮಹಿಳೆಯರು (Womens) ಮಾತ್ರ ಇರುಮುಡಿ ಹೊರುವ ಅವಕಾಶ ಇರುವ ದೇಗುಲವೊಂದು ತಮಿಳುನಾಡಿನ ಕನ್ಯಾಕುಮಾರಿಯ ಕುಲಾಚಲ್ ಬಳಿ ಇದೆ. ಮಂಡೈಕಾಡು ಭಗವತಿ ಅಮ್ಮನ್ ದೇವಸ್ಥಾನ ( Mandaikadu Bhagavathi Amman Temple ) ಈ ವಿಶೇಷತೆ ಹೊಂದಿದೆ. ಕಾಮಾಚಿ, ಮೀನಾಕ್ಷಿ ಮತ್ತು ಮಾರಿ ಮುಂತಾದ ದೇವತೆಗಳನ್ನು ಇಲ್ಲಿ ಪೂಜಿಸಲಾಗುವುದು.
ಏನಿ ದೇಗುಲದ ವಿಶೇಷತೆ
ಮಂಡೈಕಾಡು ಪ್ರದೇಶವು ಶತಮಾನಗಳ ಹಿಂದೆ ದಟ್ಟವಾದ ಕಾಡಿನಿಂದ ಕೂಡಿದ್ದ ಕಾರಣ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ದನಗಳನ್ನು ಮೇಯಿಸಲು ಇಲ್ಲಿಗೆ ಬರುತ್ತಿದ್ದರು. ಈ ಪ್ರದೇಶವು ಮಂಟೈಕ್ಕಾಡ್ ಎಂದು ಕರೆಯಲ್ಪಟ್ಟಿತು. ಕಾಲಾನಂತರದಲ್ಲಿ ಇಲ್ಲಿ ಕುರಿ ಮತ್ತು ಹಸುಗಳ ಹಿಂಡುಗಳು ಇದ್ದುದರಿಂದ ಇದನ್ನು ಮಂಡೈಕಾಡುಎಂದು ಕರೆಯಲಾಯಿತು. ಈ ಕ್ಷೇತ್ರದಲ್ಲಿ ಭಗವತಿ ಚೇಳಿನ ರೂಪದಲ್ಲಿ ಭಕ್ತರ ಮುಂದೆ ಕಾಣಿಸಿಕೊಂಡಿದ್ದಾಳೆ ಎಂಬ ನಂಬಿಕೆ ಇದೆ.
ಮಹಿಳೆಯರಿಗೆ ಮಾತ್ರ ಈ ದೇಗುಲ
ಶಬರಿಮಲೆಯಂತೆಯೇ ಮಂಡೈಕಾಡು ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಅನೇಕ ವಿಶೇಷತೆ ಇದೆ. ವಿಶೇಷವಾಗಿ ಮಲಯಾಳಿ ಮಹಿಳೆಯರು ತಮ್ಮ ತಲೆಯ ಮೇಲೆ 'ಇರುಮುಡಿ ಕೆಟ್ಟು' ಹೊತ್ತು 41 ದಿನಗಳ ಉಪವಾಸವನ್ನು ಮಾಡುತ್ತಾರೆ. ಹಾಗಾಗಿಯೇ ಈ ದೇವಸ್ಥಾನಕ್ಕೆ ‘ಮಹಿಳಾ ಶಬರಿಮಲೆ’ ಎಂಬ ಹೆಸರು ಬಂದಿದೆ. ಈ ದೇವಾಲಯವು ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದ ರಚನೆಯನ್ನು ಹೋಲುತ್ತದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಪುರುಷರು 41 ದಿನಗಳ ಕಾಲ ಉಪವಾಸ ಮಾಡಿದಂತೆ, ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ, ಹಬ್ಬದ ಸಮಯದಲ್ಲಿ, ಕೇರಳದ ಮಹಿಳೆಯರು 41 ದಿನಗಳ ಕಾಲ ಉಪವಾಸ ಮಾಡಿ, ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ.
ಇರುಮುಡುಕೆಟ್ಟು ಆಚರಣೆ
ಮಲಯಾಳಿ ಹೆಂಗಸರು ಮಂಡೈಕಾಡು ಭಗವತಿ ಅಮ್ಮನ್ ದೇವಸ್ಥಾನಕ್ಕೆ ಮುಡಿ ಕಟ್ಟಿಕೊಂಡು ಯಾತ್ರೆ ಕೈಗೊಂಡ ಬಗ್ಗೆ ಐತಿಹ್ಯವಿದೆ. ಹಸಿದವರಿಗೆ ಅನ್ನ ನೀಡಿದ ಭಗವತಿ ಅಮ್ಮನವರಿಗೆ ಪೊಂಗಲ್ ಬೇಯಿಸಲು ಮಹಿಳೆಯರು ಮುಡಿ ಕಟ್ಟಿಕೊಂಡು ಮಂಡಕ್ಕಾಡಿಗೆ ಬರಲಾರಂಭಿಸಿದರು. ಇರುಮುಡಿಯಲ್ಲಿ, ಒಂದು ಕಟ್ಟು ಪೊಂಗಲ್‌ಗೆ ಮತ್ತು ಇನ್ನೊಂದು ಕಟ್ಟು ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುತ್ತದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನ ಮತ್ತು ಮಂಡೈಕಾಡು ಭಗವತಿ ಅಮ್ಮನ್ ದೇವಸ್ಥಾನಗಳಿಗೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಭಕ್ತರು ಭೇಟಿ ನೀಡುತ್ತಾರೆ. ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ವಯಸ್ಸಿಗೆ ಮೀರಿದ ಮಹಿಳೆಯರಿಗೆ ಪ್ರವೇಶವಿಲ್ಲವಾದ್ದರಿಂದ ಹೆಚ್ಚಿನ ಮಹಿಳೆಯರು ಉಪವಾಸದ ನಂತರ ಮಂಡೈಕಾಡು ಭಗವತಿ ಅಮ್ಮನ್ ದೇವಸ್ಥಾನಕ್ಕೆ ‘ಇರುಮುಡಿಕೆಟ್ಟು’ ಯಾತ್ರೆ ಕೈಗೊಳ್ಳುತ್ತಾರೆ.
ಆದಿ ಶಂಕರರ ಶಿಷ್ಯರಿಂದ ನಿರ್ಮಿತವಾದ ದೇಗುಲ
ಹಿಂದೆ ಈ ಭಾಗದ ಹಳ್ಳಿಗಳಲ್ಲಿ ಕಾಲರಾ, ಸಿಡುಬು ರೋಗಗಳು ಹೆಚ್ಚಾಗಿತ್ತು. ಈ ರೋಗ ಗುಣ ಕಾಣದೇ ಇಲ್ಲಿನ ಗ್ರಾಮಸ್ಥರು ಮಂಡೈಕಾಡು ತೊರೆಯಲು ಮುಂದಾದರು. ದಂತಕಥೆಗಳ ಪ್ರಕಾರ, ಒಮ್ಮೆ ಆದಿ ಶಂಕರರ ಶಿಷ್ಯರೊಬ್ಬರು ತಮ್ಮ ಕೈಯಲ್ಲಿ 'ಶ್ರೀ ಚಕ್ರ'ವನ್ನು ಹಿಡಿದು ಈ ಸ್ಥಳಕ್ಕೆ ಬಂದರು. ಅವರು 63-ಬಿಂದುಗಳ ಚಕ್ರವನ್ನು ಪ್ರತಿದಿನ ಪ್ರಾರ್ಥಿಸಿದರು. ಬಳಿಕ ತಮ್ಮ 'ಆಧ್ಯಾತ್ಮಿಕ' ಶಕ್ತಿಯಿಂದ ರೋಗಿಗಳನ್ನು ಗುಣಪಡಿಸಿದರು. ಬಳಿಕ ಇಲ್ಲಿನ ಜನರು ಆದಿ ಶಂಕರ ಪೂಜಿಸಲು ಪ್ರಾರಂಭಿಸಿದರು
ಇದನ್ನು ಓದಿ: ಹಣದ ಸಮಸ್ಯೆ ಸಿಕ್ಕಾಪಟ್ಟೆ ಕಾಡ್ತಿದ್ಯಾ; ಈ ಗಿಡ ತಂದು ಮನೆಯಲ್ಲಿ ನೆಡಿ ಸಾಕು
ಕಾಲಕ್ರಮೇಣ ಈ ಶ್ರೀ ಚಕ್ರವನ್ನು ಇರಿಸಿದ್ದ ಜಾಗದಲ್ಲಿ ಬಿರುಕು ಉಂಟಾಯಿತು. ಕ್ರಮೇಣ, ಅದರ ಸುತ್ತಲೂ ಶಿಲಾಖಂಡರಾಶಿಗಳು ಬೆಳೆದವು. ಅದನ್ನು ಜನರು ಮೇಲೆತ್ತಲು ಮುಂದಾದ ಆ ಸ್ಥಳದಲ್ಲಿ 'ಜೀವಸಮಾಧಿ' (ದೇವರು ಅಥವಾ ಪರಬ್ರಹ್ಮದೊಂದಿಗೆ ವಿಲೀನಗೊಳ್ಳುವ ಪರಿಕಲ್ಪನೆ) ಮೂಡಿತು. ಇದನ್ನು ತಿಳಿದ ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಅಲ್ಲಿ ದೇವಾಲಯವನ್ನು ನಿರ್ಮಿಸಿದನು. ಬಳಿಕ ಮಂಡೈಕಾಡು ಭಗವತಿ ಅಮ್ಮನ್ ದೇವಸ್ಥಾನದ ಕೀರ್ತಿ ನಾಡಿನಾದ್ಯಂತ ಹರಡಿದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ : ಕೆಲಸದಲ್ಲಿ ಕಿರಿಕಿರಿ, ಬಡ್ತಿ ಸಮಸ್ಯೆಯೇ; ಪ್ರತಿ ಶನಿವಾರ ಈ ರೀತಿ ಮಾಡಿ ಸಾಕು
ಇಲ್ಲಿನ ಮಂಡಯಪ್ಪಂ ಪ್ರಸಾದ ಬಲು ಪ್ರಸಿದ್ದಿ
ಈ ದೇವಾಲಯವು ಇಂದಿಗೂ ಭಕ್ತರಿಂದ ಪೂಜಿತವಾಗಿದೆ. ಮಂಡೈಕಾಡುನ ಭಕ್ತರು ಪಾರ್ವತಿ ದೇವಿ ಮಂಡೈಕಾಡು ಅಧಿದೇವತೆ ಎಂದು ನಂಬುತ್ತಾರೆ. ಈ ದೇವಾಲಯದಲ್ಲಿ ನೀಡಲಾಗುವ 'ಮಂಡಯಪ್ಪಂ' ಪ್ರಸಾದವು ಬಹಳ ಪ್ರಸಿದ್ಧವಾಗಿದೆ. ದೇವಾಲಯದ ಪ್ರಮುಖ ಹಬ್ಬವೆಂದರೆ 'ಕೊಡ ಮಹೋತ್ಸವ' (ಕೊಡೈವಿಝ) ಇದನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದರ ಜೊತೆಗೆ ವಲಿಯ ಪಾದುಕ್ಕ, ಓಡುಕ್ಕು ಪೂಜೆ, ಎತ್ತಂ ಕೊಡೈ ಮತ್ತು ಭರಣಿ ಕೊಡೈ ಮುಂತಾದ ವಿಶೇಷ ಪೂಜೆಗಳನ್ನು ಸಹ ಇಲ್ಲಿ ನಡೆಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ