• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Love Astrology: ಡೇಟಿಂಗ್​ ಮಾಡುವುದಕ್ಕೂ ಮೊದಲು ಈ ಟಿಪ್ಸ್​ಗಳನ್ನು ನೀವು ಫಾಲೋ ಮಾಡಬೇಕು

Love Astrology: ಡೇಟಿಂಗ್​ ಮಾಡುವುದಕ್ಕೂ ಮೊದಲು ಈ ಟಿಪ್ಸ್​ಗಳನ್ನು ನೀವು ಫಾಲೋ ಮಾಡಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗೀಗ ರಾಶಿಚಕ್ರಕ್ಕೆ ಅನುಗುಣವಾಗಿ ಡೇಟಿಂಗ್ ನಡೆಸುವವರ ಸಂಖ್ಯೆ ಕೂಡ ಹೆಚ್ಚಿದ್ದು ರಾಶಿಗೆ ಅನುಗುಣವಾಗಿ ಡೇಟಿಂಗ್ ನಡೆಸುವುದು ಪ್ರೀತಿಯನ್ನು ಗೆಲ್ಲಿಸುತ್ತದೆ ಎಂಬ ನಂಬಿಕೆ ಅಚಲವಾಗಿದೆ.

  • Share this:

ಇಂದಿನ ದಿನಗಳಲ್ಲಿ ಡೇಟಿಂಗ್ (Dating) ಎನ್ನುವಾಗ ಯುವಜನಾಂಗ ಸ್ವಲ್ಪ ಹಿಂಜರಿಕೆ ಅನುಭವಿಸುತ್ತಾರೆ. ಡೇಟಿಂಗ್‌ಗಾಗಿ ಹಲವಾರು ಅಪ್ಲಿಕೇಶನ್‌ಗಳು ಲಭ್ಯವಿದ್ದರೂ ಇಂದು ಮೋಸಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಡೇಟಿಂಗ್ ನಡೆಸುತ್ತೇವೆಂದು ಹೇಳಿ ಮೋಸಗೊಳಿಸುತ್ತಿರುವವರೂ ಹೆಚ್ಚಿನ ಪ್ರಮಾಣದಲ್ಲಿ ದ್ವಿಗುಣಗೊಳ್ಳುತ್ತಿದ್ದಾರೆ. ಜೀವನದಲ್ಲಿ (Life) ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಬೇಕಾಗುತ್ತದೆ. ಅದೇ ರೀತಿ ಜೀವನ ಸಂಗಾತಿಯ ವಿಷಯಕ್ಕೆ ಬಂದಾಗ ಈ ನಿರ್ಧಾರವನ್ನು ತುಂಬಾ ಮುನ್ನೆಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಈಗೀಗ ರಾಶಿಚಕ್ರಕ್ಕೆ ಅನುಗುಣವಾಗಿ ಡೇಟಿಂಗ್ ನಡೆಸುವವರ ಸಂಖ್ಯೆ (Numbers) ಕೂಡ ಹೆಚ್ಚಿದ್ದು ರಾಶಿಗೆ ಅನುಗುಣವಾಗಿ ಡೇಟಿಂಗ್ ನಡೆಸುವುದು ಪ್ರೀತಿಯನ್ನು ಗೆಲ್ಲಿಸುತ್ತದೆ ಎಂಬ ನಂಬಿಕೆ ಅಚಲವಾಗಿದೆ.


ಇತ್ತೀಚೆಗೆ ಇದೇ ರೀತಿ ರಾಶಿಚಕ್ರಕ್ಕೆ ಅನುಗುಣವಾಗಿ ಡೇಟಿಂಗ್ ನಂಬಿದ ಹುಡುಗಿಯೊಬ್ಬಳಿಂದ ಪ್ರೇಮ ವೈಫಲ್ಯಕ್ಕೊಳಗಾದ ಹುಡುಗನೊಬ್ಬ ತನ್ನ ಅನುಭವ ಹಂಚಿಕೊಂಡಿದ್ದಾನೆ. ಅತಿಗಾಢವಾಗಿ ಪ್ರೀತಿಸುತ್ತಿದ್ದ ಈ ಜೋಡಿಗಳ ಪ್ರೀತಿ ಆಕಸ್ಮಿಕವಾಗಿ ಮುಗಿದುಹೋಗಿದೆ ಇದಕ್ಕೆ ಕಾರಣ ಹುಡುಗಿ ಹುಡುಗನ ರಾಶಿ ತನ್ನ ರಾಶಿಗೆ ಅನುಗುಣವಾಗಿಲ್ಲ ಎಂಬುದನ್ನು ಅರಿತುಕೊಂಡಿರುವುದಾಗಿದೆ.


ರಾಶಿ ಸರಿ ಇಲ್ಲ ಎಂದು ಡೇಟಿಂಗ್ ಕ್ಯಾನ್ಸಲ್ ಮಾಡಿದ ಹುಡುಗಿ


ಈ ಹುಡುಗನ ರಾಶಿಚಿಹ್ನೆಗಳು ಆಕೆಯ ರಾಶಿಗೆ ಅನುಗುಣವಾಗಿಲ್ಲ ಎಂಬುದನ್ನು ಅರಿತುಕೊಂಡ ಆಕೆ ಡೇಟಿಂಗ್ ಅನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ ಹಾಗಿದ್ದರೆ ಡೇಟಿಂಗ್‌ಗೂ ರಾಶಿಚಕ್ರಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ತಿಳಿಯೋಣ


ಮನಶ್ಶಾಸ್ತ್ರಜ್ಞ (M.Sc.), ಟ್ರಿಪಲ್-ಪಿ ತರಬೇತುದಾರ, ಟ್ಯಾರೋ ರೀಡರ್ ಮತ್ತು ಜ್ಯೋತಿಷಿಯಾದ ಮ್ಯಾಥಿಯಾಸ್ ಡೆಟ್‌ಮನ್ ಪ್ರಕಾರ ಡೇಟಿಂಗ್‌ನಲ್ಲಿ ರಾಶಿ ಅಷ್ಟೊಂದು ಪ್ರಸ್ತುತವಲ್ಲ ಎಂಬುದಾಗಿದೆ.


ಇದನ್ನೂ ಓದಿ: ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರ, ಈ 5 ರಾಶಿಯವರಿಗೆ ಸಕ್ಸಸ್​ ಗ್ಯಾರಂಟಿ


ಜ್ಯೋತಿಷ್ಯವನ್ನು ಅರಿವು ಹಾಗೂ ತಿಳುವಳಿಕೆಯ ಉಪಕರಣವಾಗಿ ಬಳಸಿಕೊಳ್ಳಬೇಕು ಅದನ್ನೇ ಪ್ರತಿಯೊಂದು ನಿರ್ಧಾರದ ಮೂಲವಾಗಿ ಪರಿಗಣಿಸಬಾರದು ಎಂಬುದಾಗಿ ಅವರು ಸಲಹೆ ನೀಡುತ್ತಾರೆ.


ಡೇಟಿಂಗ್‌ನ ಒಂದು ಭಾಗ ಜ್ಯೋತಿಷ್ಯ


ಜ್ಯೋತಿಷ್ಯವು ಯಾವಾಗಲೂ ಡೇಟಿಂಗ್ ಪ್ರಪಂಚದ ಒಂದು ಭಾಗವಾಗಿದೆ. ಏಕೆಂದರೆ ಪ್ರೀತಿಯ ಸಫಲತೆಯನ್ನು ತಿಳಿದುಕೊಳ್ಳಲು ಹಾಗೂ ಪ್ರೇಮ ಜೀವನದಲ್ಲಿ ಯಶಸ್ಸು ಸಾಧಿಸಲು ರಾಶಿಚಕ್ರಗಳು ಹೊಂದಿಕೆಯಾಗಬೇಕು ಎಂದು ಬಯಸುತ್ತಾರೆ.


ರಾಶಿಚಕ್ರ ಚಿಹ್ನೆಯ ಆಧಾರದ ಮೇಲೆ ಡೇಟಿಂಗ್ ಹೆಚ್ಚು ಸಾಮಾನ್ಯವಾಗಿದೆ


ಇಂದಿನ ಯುವಜನರು ಜ್ಯೋತಿಷ್ಯವನ್ನೇ ನಂಬದೇ ಇದ್ದರೂ ಅದರ ಫಲಾಫಲಗಳನ್ನು ನಂಬುತ್ತಾರೆ ಎಂಬುದು ಜ್ಯೋತಿಷ್ಯಶಾಸ್ತ್ರಜ್ಞರ ಮಾತಾಗಿದೆ. ಪ್ರೀತಿ ಎಂಬುದು ಸಮಾನ ಮನಸ್ಕರ ನಡುವಿನ ಅರಿವಾಗಿದ್ದರೂ ಇಲ್ಲಿ ಜ್ಯೋತಿಷ್ಯವೆಂಬುದು ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮಾಧ್ಯಮವಾಗಿದೆ ಎಂದು ತಿಳಿಸುತ್ತಾರೆ.


ಅತಿಯಾಗಿ ಜ್ಯೋತಿಷ್ಯ ನಂಬುವುದು ಒಳ್ಳೆಯದೇ?


ಯಾವುದೇ ಕೆಟ್ಟ ದೃಷ್ಟಿ, ಪ್ರೀತಿಗೆ ತಾಗಬಾರದು ಎಂಬ ನಿಟ್ಟಿನಲ್ಲಿ ಜ್ಯೋತಿಷ್ಯ ತತ್ವಗಳನ್ನು ನಂಬುವುದಾಗಿದೆ ಎಂಬುದು ಯುವಜನರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ನಿಮ್ಮ ರಾಶಿಗೆ ಸೂಟ್​ ಆಗುವ ಈ ರತ್ನಗಳನ್ನು ಹೀಗೆ ಸಲೆಕ್ಟ್ ಮಾಡಿ


ಡೇಟಿಂಗ್ ಮಾಡುವಾಗ ರಾಶಿಚಕ್ರದ ಚಿಹ್ನೆಗಳ ಜೊತೆಗೆ ಪರಿಗಣಿಸಬೇಕಾದ ವಿಷಯಗಳಾವುವು


ಜನರ ಬಗ್ಗೆ ತಿಳಿದುಕೊಳ್ಳಲು ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಲು ಜ್ಯೋತಿಷ್ಯಶಾಸ್ತ್ರ ಸೂಕ್ತ ವೇದಿಕೆಯಾಗಿದೆ. ಜೀವನದ ಇತರ ಅಂಶಗಳು ವ್ಯಕ್ತಿಯ ಪಾತ್ರ ಮತ್ತು ದೃಷ್ಟಿಕೋನವನ್ನು ರೂಪಿಸುತ್ತವೆ. ಜ್ಯೋತಿಷ್ಯ ಶಾಸ್ತ್ರವನ್ನು ಬರಿಯ ಮಾಹಿತಿಯ ಆಧಾರವಾಗಿ ಬಳಸಬೇಕೇ ಹೊರತು ಅದನ್ನೇ ನಂಬಬಾರದು ಎಂದು ತಿಳಿಸಿದ್ದಾರೆ.


ವೈಯಕ್ತಿಕ ಸ್ವಾತಂತ್ರ್ಯಕ್ಕೂ ಆದ್ಯತೆ ನೀಡಿ


ನಿಮ್ಮ ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ನೀವು ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಅಥವಾ ಡೇಟ್ ಮಾಡಬಾರದು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಿಮಗೂ ಇದೆ ಎಂಬುದು ಜ್ಯೋತಿಷ್ಯಶಾಸ್ತ್ರಜ್ಞರಾದ ಕ್ರಿಸ್ ಮಾತಾಗಿದೆ.




ನಿಮ್ಮ ಆಸಕ್ತಿ ಹಾಗೂ ಮನಸ್ಸಿಗೆ ಅನುಗುಣವಾಗಿ ಆದ್ಯತೆಗಳಿಗೆ ಹೊಂದಿಕೆಯಾಗುವ ಸಂಗಾತಿಯನ್ನು ಹುಡುಕುವುದು ಮುಖ್ಯವಾಗುತ್ತದೆ. ಶಾಸ್ತ್ರವು ಚಿಹ್ನೆಗಳನ್ನು ಒಳಗೊಂಡಿದ್ದು ಇದು ನೂರಾರು ಸಂಕೇತಗಳನ್ನು ಪ್ರತಿನಿಧಿಸುತ್ತದೆ ಅವುಗಳನ್ನು ವಿಭಿನ್ನ ಮತ್ತು ಅನನ್ಯ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ ಎಂದು ಎಂದು ಜ್ಯೋತಿಷಿ, ಬ್ಲಾಗರ್ ಲಿಜಾನ್ನೆ ಹ್ಯಾಂಕ್ಸ್ ತಿಳಿಸುತ್ತಾರೆ.

First published: