• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Holi Vastu Tips: ಹೋಳಿ ಹಬ್ಬ ಬರುವ ಮೊದಲೇ ನಿಮ್ಮ ಮನೆಯಲ್ಲಿ ಈ ಬದಲಾವಣೆ ಮಾಡಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ

Holi Vastu Tips: ಹೋಳಿ ಹಬ್ಬ ಬರುವ ಮೊದಲೇ ನಿಮ್ಮ ಮನೆಯಲ್ಲಿ ಈ ಬದಲಾವಣೆ ಮಾಡಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜ್ಯೋತಿಷಿಗಳ ಪ್ರಕಾರ, ಹೋಲಾಷ್ಟಕ ಪ್ರಾರಂಭದಿಂದ ಹೋಳಿ ಸಮಯದವರೆಗೆ ಮಾಡಲಾಗುವ ಹಲವು ಜ್ಯೋತಿಷ್ಯ ಸಂಬಂಧಿ ಮದ್ದುಗಳು ಬಲು ಪರಿಣಾಮಕಾರಿಯಾಗಿರುತ್ತವೆ ಎನ್ನಲಾಗಿದೆ. ಇದನ್ನು ಮಾಡಿದಾಗ ನಿಮ್ಮ ಮನೆಗೆ ಸ್ವತಃ ಅದೃಷ್ಟ ದೇವಿ ಕಾಲಿಟ್ಟು ಒಳಬರುತ್ತಾಳೆ ಎಂಬ ನಂಬಿಕೆಯಿದೆ. ಹಾಗಾದರೆ ಈ ವಿಧಾನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

    ಭಾರತದಲ್ಲಿ(India) ಅತ್ಯಂತ ಬಣ್ಣದ ಹಾಗೂ ಸಾಕಷ್ಟು ಜೋಶ್ ನಿಂದ ಆಚರಿಸಲಾಗುವ ಹಬ್ಬವೆಂದರೆ ಅದುವೇ ಓಕುಳಿ ಹಬ್ಬ, ಅದನ್ನೇ ಹೋಳಿ ಹಬ್ಬ (Holi Festival) ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಹಲವು ಭಾಗಗಳಲ್ಲಿಯೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದವರಿಂದ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಈ ಹಬ್ಬದ ಇನ್ನೊಂದು ವಿಶೇಷತೆ ಎಂದರೆ ಇದು ಧರ್ಮ ಹಾಗೂ ಜಾತ್ಯಾತೀತವಾಗಿದೆ. ಅಂದರೆ ಇದನ್ನು ಎಲ್ಲರೂ ಯಾವುದೇ ಭೇದ-ಭಾವಗಳಿಲ್ಲದೆ ಒಗ್ಗಟ್ಟಾಗಿ ಸೇರಿ ಆಚರಿಸುತ್ತಾರೆ (Celebration). ಹಾಗಾಗಿ ಈ ಹಬ್ಬ ಈಗ ವಿದೇಶಗಳಲ್ಲೂ ಸಾಕಷ್ಟು ಜನಪ್ರೀಯತೆ ಪಡೆದಿದೆ ಎಂದರೆ ತಪ್ಪಾಗಲಾರದು.


    ಚಳಿಗಾಲದ ಅಂತ್ಯ ಹಾಗೂ ವಸಂತ ಋತುವಿನ ಆಗಮನವನ್ನು ಸೂಚಿಸುವ ಈ ಹಬ್ಬ ಕೆಟ್ಟ ಶಕ್ತಿಯ ಮೇಲೆ ಒಳ್ಳೆಯ ಶಕ್ತಿಯ ವಿಜಯದ ಸಂಕೇತವನ್ನೂ ಸಹ ಪ್ರತಿನಿಧಿಸುತ್ತದೆ. 2023ರ ಹೋಳಿ ಹಬ್ಬವನ್ನು ದೇಶಾದ್ಯಂತ ಮಾರ್ಚ್ 8 ರಂದು ಆಚರಿಸಲಾಗುತ್ತಿದೆ.


    ಅದರಂತೆ ಬಣ್ಣ ಎರಚಾಡುವ ಈ ಹಬ್ಬದ ಹಿಂದಿನ ದಿನ ಅಂದರೆ ಮಾರ್ಚ್ 7 ರಂದು ಇನ್ನೊಂದು ಇದಕ್ಕೆ ಸಂಬಂಧಿಸಿದ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ ಹಾಗೂ ಅದನ್ನೆ ಹೋಲಿಕಾ ದಹನ ಎಂದು ಕರೆಯಲಾಗುತ್ತದೆ. ಇದು ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಮಣ್ಣನ ದಹನ ಎಂತಲೂ ಪ್ರಸಿದ್ಧವಾಗಿದೆ.


    ಇದನ್ನೂ ಓದಿ: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?


    ಈ ಸಮಯದಲ್ಲಿ ಹೋಲಾಷ್ಟಕ ಎಂಬುದನ್ನು ಜ್ಯೋತಿಷಿಗಳು ಪ್ರಮುಖವಾಗಿ ಗಮನಿಸುತ್ತಾರೆ. ಜ್ಯೋತಿಷಿಗಳ ಪ್ರಕಾರ, ಹೋಲಾಷ್ಟಕ ಪ್ರಾರಂಭದಿಂದ ಹೋಳಿ ಸಮಯದವರೆಗೆ ಮಾಡಲಾಗುವ ಹಲವು ಜ್ಯೋತಿಷ್ಯ ಸಂಬಂಧಿ ಮದ್ದುಗಳು ಬಲು ಪರಿಣಾಮಕಾರಿಯಾಗಿರುತ್ತವೆ ಎನ್ನಲಾಗಿದೆ. ಇದನ್ನು ಮಾಡಿದಾಗ ನಿಮ್ಮ ಮನೆಗೆ ಸ್ವತಃ ಅದೃಷ್ಟ ದೇವಿ ಕಾಲಿಟ್ಟು ಒಳಬರುತ್ತಾಳೆ ಎಂಬ ನಂಬಿಕೆಯಿದೆ. ಹಾಗಾದರೆ ಈ ವಿಧಾನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.


    ವಾಸ್ತುದೋಷ


    ನೀವು ಉತ್ತಮ ಆದಾಯಗಳಿಸುತ್ತಿದ್ದರೂ ಅದನ್ನು ಸರಿಯಾಗಿ ಉಳಿಸಲಾಗುತ್ತಿಲ್ಲವೆ? ಹಾಗಾದರೆ ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿರುವ ವಾಸ್ತುದೋಷವಾಗಿರಬಹುದಾಗಿದೆ. ಇದನ್ನು ಹೋಗಲಾಡಿಸಬೇಕೆಂದಿದ್ದರೆ ನೀವು ಮಾಡಬೇಕಾಗಿರುವುದಿಷ್ಟೆ. ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ತೋರಣ ಕಟ್ಟಿ.


    ಬಿದಿರು ಸಸ್ಯ


    ಬಿದಿರು ಸಸ್ಯಕ್ಕೆ ವಾಸ್ತುಶಾಸ್ತ್ರದಲ್ಲಿ ಸಾಕಷ್ಟು ಮಹತ್ವವಿದೆ. ಮನೆಯಲ್ಲಿ ಬಾಂಬೂ ಅಥವಾ ಬಿದಿರು ಸಸ್ಯವನ್ನು ಇಡುವುದರಿಂದ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ಬಿದಿರು ಸಸ್ಯವು ಹೋಗಲಾಡಿಸುತ್ತದೆ ಎನ್ನಲಾಗಿದೆ. ಹೋಳಿ ಹಬ್ಬ ಬರುವ ಮುಂಚೆ ನೀವು ಮನೆಯಲ್ಲಿ ಬಿದಿರು ಸಸ್ಯವನ್ನಿರಿಸಿದರೆ ಅದು ಅದೃಷ್ಟವನ್ನೂ ಹಾಗೂ ಮನೆ ಸದಸ್ಯರ ಆರೋಗ್ಯವನ್ನು ಸುಧಾರಿಸುತ್ತದೆ ಎಂಬ ಮಾತಿದೆ.


    ಸಾಂದರ್ಭಿಕ ಚಿತ್ರ


    ಸ್ಫಟಿಕದ ಆಮೆ


    ಆಮೆಗಳನ್ನು ಪೂಜನೀಯವಾಗಿ ನೋಡಲಾಗುತ್ತದೆ. ಅಂತೆಯೇ ದೇವಾಲಯಗಳಲ್ಲೂ ಸಹ ಆಮೆ ಇರುವುದನ್ನು ನೋಡಬಹುದು. ಮನೆಯಲ್ಲಿ ಸ್ಫಟಿಕದಿಂದ ತಯಾರಿಸದ ಆಮೆಯನ್ನು ಇರಿಸುವುದರಿಂದ ಅದೃಷ್ಟದ ಜೊತೆಗೆ ಧನಾತ್ಮಕ ಶಕ್ತಿಯ ಆಗಮನವೂ ಆಗುತ್ತದೆ ಎಂಬ ನಂಬಿಕೆಯಿದೆ. ನಿಮಗೆ ಆದಾಯವೂ ತರುವ ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಶಕ್ತಿ ಈ ಆಮೆಗಿದೆ ಎನ್ನಲಾಗಿದೆ. ಹಾಗಾಗಿ ಈ ಹೋಳಿ ಹಬ್ಬ ಬರುವ ಮುಂಚೆಯೇ ಒಂದು ಸ್ಫಟಿಕದ ಆಮೆಯನ್ನು ಮನೆಯಲ್ಲಿ ತಂದಿರಿಸಲು ಮರೆಯಬೇಡಿ.


    ಡ್ರ್ಯಾಗನ್ ಪ್ರಾಣಿಯ ಚಿತ್ರ


    ಚೀನಿಯರಲ್ಲಿ ಡ್ರ್ಯಾಗನ್ ಪ್ರಾಣಿಯು ಬಲು ಮಹತ್ವ ಹೊಂದಿದೆ. ಮನೆಯಲ್ಲಿ ಈ ಪ್ರಾಣಿಯ ಮೂರ್ತಿ ಅಥವಾ ಚಿತ್ರವನ್ನು ಇರಿಸುವುದು ಅದೃಷ್ಟ ಹಾಗೂ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಚೀನಿ ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.




    ಒಟ್ಟಿನಲ್ಲಿ ಈ ಎಲ್ಲ ವಿಧಾನಗಳು ಅವರವರ ನಂಬಿಕೆ ಮೇಲೆ ನಿಂತಿದೆ. ಅಷ್ಟಕ್ಕೂ ನೀವು ಇದರಲ್ಲಿ ವಿಶ್ವಾಸ ಹೊಂದಿರುವವರೇ ಆಗಿದ್ದರೆ ತಡ ಮಾಡದೆ ಹೋಳಿ ಆಗಮನವಾಗುವ ಮುಂಚಿತವಾಗಿಯೇ ಈ ವಸ್ತುಗಳನ್ನು ಮನೆಯಲ್ಲಿ ತಂದಿರಿಸಿ ಹಾಗೂ ಅದೃಷ್ಟ ದೇವಿಯನ್ನು ಸ್ವಾಗತಿಸಲು ಸಿದ್ಧರಾಗಿ.

    Published by:Prajwal B
    First published: