Gavi Gangadhareshwara: ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ; ದೇಗುಲದಲ್ಲಿ ಮೊಳಗಿದ ಗಂಟಾಘೋಷ

ಶಿವಲಿಂಗದ ಬಲಗಡೆಗೆ ಇರುವ ಪಾಣಿಪೀಠ ಶಕ್ತಿಗೆ ಪ್ರಾಧಾನ್ಯ ಪೀಠಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಈ ವೇಳೆ ದೇವಾಲಯದಲ್ಲಿ ಡೊಳ್ಳು, ನಗಾರಿ, ಗಂಟೆಗಳ ನಾದ ಮೂಲಕ ಶಿವನಿಗೆ ವಿಶೇಷ ಪೂಜೆ ನಡೆಸಲಾಯಿತು

ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ

ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ

  • Share this:
    ಇಂದು ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಯಿಸಿ ಉತ್ತರಾಯಣ ಚಲನೆಗೆ ಆರಂಭ ಮಾಡುತ್ತಾನೆ. ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯ ಚಲಿಸುವ ಈ ದಿನವಾದ ಇಂದು ಮಕರ ಸಂಕ್ರಾತಿ (Makar Sankrati). ಈ ಹಬ್ಬವನ್ನು ನಾಡಿನೆಲ್ಲಡೆ ಸಂಭ್ರಮದಿಂದ ಆಚರಿಸಲಾಗುವುದು. ಈ ಸೂರ್ಯ ಪಥ ಬದಲಾಯಿಸುವ ಈ ಘಳಿಗೆ ಯಲ್ಲಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲದಲ್ಲಿ (Gavi Gangadhareshwara Temple) ಐತಿಹಾಸಿಕ ಕೌತುಕ ನಡೆಯುತ್ತಿದೆ. ಇಲ್ಲಿ ಸಂಜೆ ಅಂದರೆ ಉತ್ತರಾಯಣ ಪುಣ್ಯಕಾಲ ಆರಂಭವಾಗಿತ್ತಿದ್ದಂತೆ ಸೂರ್ಯನ ರಶ್ಮಿಗಳು ನೇರವಾಗಿ ದೇಗುಲದ ಒಳಗಿನ ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಬೀಳುತ್ತದೆ. ಗವಿಯಂತಹ ಈ ದೇಗುಲದಲ್ಲಿ ಸೂರ್ಯ ರಶ್ಮಿ ದೇವರಿಗೆ ನಮಿಸುವ ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜನರು ಮುಂದಾಗುತ್ತಾರೆ.

    ಮಕರ ಸಂಕ್ರಾಂತಿಯ ಈ ದಿನ 5. 15 ರಿಂದ 5. 27 ರ ಸಮಯದಲ್ಲಿ ಸುಮಾರು ಎರಡ ರಿಂದ ಮೂರು ಸೆಕೆಂಡ್​ ಸೂರ್ಯನ ಕಿರಣಗಳು ಸೂರ್ಯನಿಗೆ ಸ್ಪರ್ಶಿಸಿದೆ, ಈ ಸಮಯದಲ್ಲಿ ದೇವರಿಗೆ ವಿಶೇಷ ಅಭಿಷೇಕಗಳನ್ನು ಮಾಡಲಾಗುತ್ತದೆ. ಶಿವಲಿಂಗದ ಪಾಣಿಪೀಠ ಸ್ಪರ್ಶಿಸಿದ ಸೂರ್ಯರಶ್ಮಿ.  ಶಿವಲಿಂಗದ ಬಲಗಡೆಗೆ ಇರುವ ಪಾಣಿಪೀಠ ಶಕ್ತಿಗೆ ಪ್ರಾಧಾನ್ಯ ಪೀಠಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಈ ವೇಳೆ ಅರ್ಚಕರಿಂದ ಮಂತ್ರ ಘೋಷಣೆಗಳನ್ನು ಮೊಳಗಿಸಲಾಗಿದೆ. ಜೊತೆಗೆ ದೇವಾಲಯದಲ್ಲಿ ಡೊಳ್ಳು, ನಗಾರಿ, ಗಂಟೆಗಳ ನಾದ ಮೂಲಕ ಶಿವನಿಗೆ ವಿಶೇಷ ಪೂಜೆ ನಡೆಸಲಾಯಿತು. ಸೂರ್ಯನ ಕಿರಣಗಳು 2 ನಿಮಿಷ 13 ಸೆಕೆಂಡ್ ಕಾಲ ಲಿಂಗವನ್ನು ಸ್ಪರ್ಶಗೊಂಡಿದೆ ಎಂದು ದೇಗುಲದ ಅರ್ಚಕರು ಮಾಹಿತಿ ನೀಡಿದರು.

    ಮಧ್ಯಾಹ್ನದ ಬಳಿಕ ಭಕ್ತರಿಗಿಲ್ಲ ದೇಗುಲ ಪ್ರವೇಶ

    ಆದರೆ, ಈ ಬಾರಿ ಕೋವಿಡ್​ ಹಿನ್ನಲೆ ಮತ್ತಿತ್ತರ ಕಾರಣದಿಂದ ಈ ಕೌತುಕ ವೀಕ್ಷಣೆಗೆ ಜನರಿಗೆ ಅವಕಾಶ ನೀಡಿಲ್ಲ. ಮಕರ ಸಂಕ್ರಾಂತಿ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜೆ ನಡೆದಿದ್ದು, ಇಂದು ಮುಂಜಾನೆ 5 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಭಕ್ತಾದಿಗಳಿಗೆ ದೇಗುಲಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಕರ ಸಂಕ್ರಾಂತಿ ಹಿನ್ನಲೆ ದೇವರಿಗೆ ಬೆಳಗ್ಗೆಯೇ ವಿಶೇಷ ಪೂಜೆ ಅಭಿಷೇಕ ನೇರವೇರಿಸಲಾಗಿದೆ.

    ಈ ಸೂರ್ಯ ತನ್ನ ಪಥ ಬದಲಾಯಿಸುವ ಈ ಶುಭ ದಿನ ಮಾತ್ರ ಇಲ್ಲಿ ಸೂರ್ಯನ ರಶ್ಮಿಗಳು ಶಿವಲಿಂಗದ ಮೇಲೆ ಬೀಳುತ್ತದೆ. ಇಂತಹ ಅಪರೂಪದ ಘಟನೆ ಈ ದೇಗುಲದಲ್ಲಿ ಮಾತ್ರ ಘಟಿಸುವುದರಿಂದ ಇದರ ದರ್ಶನಕ್ಕೆ ಈ ಹಿಂದೆ ಜನರಿಗೆ ಅವಕಾಶ ನೀಡಲಾಗುತ್ತಿತ್ತು. ಜೊತೆಗೆ ದೊಡ್ಡ ಎಲ್​ಇಡಿ ಪರದೆ ಹಾಕಿ ಜನರಿಗೆ ಈ ಕ್ಷಣ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಎಲ್​ಇಡಿ ಪರದೇ ಅವಕಾಶ ಇಲ್ಲ. ನಗರದಲ್ಲಿ ಹೆಚ್ಚುತ್ತಿರುವ ಸೋಂಕಿನ ಹಿನ್ನಲೆ ಈ ಬಾರಿ ಬಿಗಿ ಕ್ರಮ ನಡೆಸಲಾಗಿದೆ

    ಇದನ್ನು ಓದಿ: ದೇವರ ಪೂಜೆ ಸಂದರ್ಭದಲ್ಲಿ ಮಾಡುವ ಈ ತಪ್ಪಿನಿಂದಲೇ ಕಷ್ಟ!

    ಏನಿ ದೇಗುಲದ ಇತಿಹಾಸ
    ಪ್ರಾಚೀನ ವಾಸ್ತುಶಿಲ್ಪ ಹೊಂದಿರುವ ಗವಿಗಂಗಾಧರೇಶ್ವರ ದೇಗುಲದಲ್ಲಿ1300 ವರ್ಷಗಳ ಹಿ.ದೆ ಹೊಯ್ಸಳ ಕಾಲದಲ್ಲಿ ನಿರ್ಮಾಣಗೊಂದಿದೆ ಎಂದು ಇತಿಹಾಸಕಾರರು ಹೇಳಿತ್ತಾರೆ. ಗರ್ಭಗುಡಿಯ ಸುತ್ತಲು ಇರುವ ಗುಹಾ ಆವರಣದಲ್ಲಿ ಈ ಹಿಂದೆ ಖುಷಿಗಳು ತಪ್ಪಸ್ಸು ಕೈಗೊಳ್ಳುತ್ತಿದ್ದರು. ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಹಾಗೂ ಭಾರದ್ವಾಜರ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ

    ಇದನ್ನು ಓದಿ: ಶಬರಿಮಲೆಯ 18 ಮೆಟ್ಟಿಲುಗಳ ಧಾರ್ಮಿಕ ಮಹತ್ವ ಇದು!

    ಹೇಗೆ ನಡೆಯುತ್ತೆ ಈ ವಿಸ್ಮಯ
    ಮಕರ ಸಂಕ್ರಾಂತಿಯ ದಿನ ಸೂರ್ಯಾಸ್ತಮಾನದ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ಪಶ್ಚಿಮ ಭಾಗದ ಒಂದು ಕಮಾನಿನ ಮೂಲಕ ಬಳಬಂದು ಲಿಂಗದ ಮುಂದಿರುವ ನಂದಿಯ ಕೊಂಬುಗಳ ಮಧ್ಯಭಾಗದಿಂದ ನುಸುಳಿ, ಶಿವಲಿಂಗದ ಮೇಲೆ ಕೆಲವು ಕಾಲ ಬೀಳುವ ಮೂಲಕ ಶಿವನಿಗೆ ನೈಸರ್ಗಿಕವಾಗಿ ಸೂರ್ಯಾಭಿಷೇಕ ಮಾಡುವುದು ಇಲ್ಲಿನ ವಿಸ್ಮಯ
    Published by:Seema R
    First published: