• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Makara Sankranthi: ಮಕರ ಸಂಕ್ರಾಂತಿಗೆ ನಿಮ್ಮ ರಾಶಿಗೆ ತಕ್ಕಂತೆ ದಾನ ಮಾಡಿ, ಯಾವ ರಾಶಿಗೆ ಯಾವ ದಾನ ಎನ್ನುವ ಪಟ್ಟಿ ಇಲ್ಲಿದೆ

Makara Sankranthi: ಮಕರ ಸಂಕ್ರಾಂತಿಗೆ ನಿಮ್ಮ ರಾಶಿಗೆ ತಕ್ಕಂತೆ ದಾನ ಮಾಡಿ, ಯಾವ ರಾಶಿಗೆ ಯಾವ ದಾನ ಎನ್ನುವ ಪಟ್ಟಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ವರ್ಷದ ಜನವರಿ 14ರಂದು ಆಚರಿಸಲಾಗುವ ಈ ಹಬ್ಬದ ಸಂದರ್ಭದಲ್ಲಿ ಸೂರ್ಯ ದೇವರ ಆಶೀರ್ವಾದ ಪಡೆಯಲು ಜನರು ತಮ್ಮ ರಾಶಿಗಳಿಗೆ ಅನುಗುಣವಾಗಿ ವಿವಿಧ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ದಾನ ಮಾಡುವುದುಂಟು

  • Share this:

ವರ್ಷದ ಮೊದಲನೆಯ ತಿಂಗಳು ಜನವರಿ(Begins in January)  ಪ್ರಾರಂಭವಾದರೆ ಸಾಕು ನಮಗೆ ನೆನಪಾಗುವುದು ಮಕರ ಸಂಕ್ರಾಂತಿ ಹಬ್ಬ ಎಂದು ಹೇಳಬಹುದು. ವರ್ಷದ ಮೊದಲ ಹಬ್ಬ ಎಂದು ಕರೆಯುವ ಮಕರ ಸಂಕ್ರಮಣ(Makara Sankranthi) ಹಬ್ಬವನ್ನು ಎಲ್ಲಾ ಹಿಂದೂ ಧರ್ಮದವರು(Hindu people) ತುಂಬಾನೇ ಸಡಗರದಿಂದ, ಭಕ್ತಿ ಭಾವದಿಂದ ಆಚರಿಸುತ್ತಾರೆ.ಸಾಮಾನ್ಯವಾಗಿ ಪ್ರತಿ ವರ್ಷದ ಜನವರಿ 14ರಂದು ಆಚರಿಸಲಾಗುವ ಈ ಹಬ್ಬದ ಸಂದರ್ಭದಲ್ಲಿ ಸೂರ್ಯ ದೇವರ (Sun God)ಆಶೀರ್ವಾದ ಪಡೆಯಲು ಜನರು ತಮ್ಮ ರಾಶಿಗಳಿಗೆ ಅನುಗುಣವಾಗಿ ವಿವಿಧ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ದಾನ ಮಾಡುವುದುಂಟು.


ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ಉತ್ತರಾಯಣಕ್ಕೆ ಚಲಿಸುತ್ತಾನೆ ಮತ್ತು ಶುಭ ಮಹೂರ್ತಗಳು ಈ ದಿನದಿಂದ ಪ್ರಾರಂಭವಾಗುತ್ತವೆ. ಜನರು ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡುತ್ತಾರೆ ಮತ್ತು ಅಕ್ಕಿ, ಬಿಂದಿ, ಸಿಂಧೂರ, ಲಡ್ಡು ಮತ್ತು ಇತರ ಪದಾರ್ಥಗಳನ್ನು ದಾನ ಮಾಡುತ್ತಾರೆ.


ಆದ್ದರಿಂದ, ನಿಮ್ಮ ರಾಶಿಚಕ್ರ ಚಿಹ್ನೆಗಳನ್ನು ಅವಲಂಬಿಸಿ ನೀವು ದಾನ ಮಾಡಬಹುದಾದ ವಿಷಯಗಳ ಪಟ್ಟಿಯನ್ನು ನಾವು ನಿಮಗಾಗಿ ತಂದಿದ್ದೇವೆ.


ಇದನ್ನೂ ಓದಿ: Astrology ರಾಹು-ಕೇತು ವಕ್ರದೃಷ್ಟಿ ಬಿದ್ದರೆ ಕಷ್ಟ ತಪ್ಪಿದ್ದಲ್ಲ; ಅದರ ಪರಿಹಾರಕ್ಕೆ ಹೀಗೆ ಮಾಡಿ

ಮೇಷ ರಾಶಿ


ಮೇಷ ರಾಶಿಯವರು ಎಳ್ಳು, ಸಿಹಿತಿಂಡಿಗಳು, ಕಿಚಡಿ, ರೇಷ್ಮೆ ಬಟ್ಟೆ, ಬೇಳೆಕಾಳುಗಳು, ಸಿಹಿ ಅಕ್ಕಿ ಮತ್ತು ಉಣ್ಣೆ ಬಟ್ಟೆಗಳನ್ನು ಹಬ್ಬದ ದಿನದಂದು ದಾನ ಮಾಡಬೇಕು. ಮುಂಜಾನೆ ಸ್ನಾನ ಮಾಡಿದ ನಂತರ ಈ ವಸ್ತುಗಳನ್ನು ದಾನ ಮಾಡಬೇಕಾಗುತ್ತದೆ.


ವೃಷಭ ರಾಶಿ


ಮಕರ ಸಂಕ್ರಾಂತಿಯ ಹಬ್ಬದ ದಿನದಂದು ಈ ರಾಶಿಯವರು ಉದ್ದಿನ ಬೇಳೆ ಕಿಚಡಿ, ಕಪ್ಪು ಉದ್ದು, ಸಾಸಿವೆ ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಎಳ್ಳು ಇತ್ಯಾದಿಗಳನ್ನು ದಾನ ಮಾಡಬೇಕು.


ಮಿಥುನ ರಾಶಿ


ಈ ರಾಶಿಯ ಜನರು ಕಿಚಡಿ, ಕಪ್ಪು ಎಳ್ಳು, ಛತ್ರಿ, ಉದ್ದಿನ ಬೇಳೆ, ಕಡಲೆ ಹಿಟ್ಟಿನ ಲಡ್ಡುಗಳು, ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು. ಮಿಥುನ ರಾಶಿಯವರು ಈ ವಸ್ತುಗಳನ್ನು ವಿಶೇಷವಾಗಿ ಬಡ ಜನರಿಗೆ ದಾನ ಮಾಡುವಂತೆ ಸೂಚಿಸಲಾಗಿದೆ.


ಕರ್ಕಾಟಕ ರಾಶಿ


ಕರ್ಕಾಟಕ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಕಿಚಡಿ, ಕಡಲೆ ಬೇಳೆ, ಹಳದಿ ಬಟ್ಟೆ, ಹಿತ್ತಾಳೆ ಪಾತ್ರೆಗಳು, ಹಣ್ಣುಗಳು ಇತ್ಯಾದಿಗಳನ್ನು ಬಡ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು.


ಸಿಂಹ ರಾಶಿ


ಮಕರ ಸಂಕ್ರಾಂತಿಯ ಹಬ್ಬದ ಸಂದರ್ಭದಲ್ಲಿ ಸಿಂಹ ರಾಶಿಯವರು ಬೆಳಗ್ಗೆ ಸ್ನಾನ ಮಾಡಿದ ನಂತರ ಬೇಳೆ, ಕಿಚಡಿ, ಕೆಂಪು ಬಟ್ಟೆ, ರೇವ್ಡಿ, ಗಜಕ್ ಇತ್ಯಾದಿಗಳನ್ನು ದಾನ ಮಾಡಬೇಕು.


ಕನ್ಯಾ ರಾಶಿ


ಈ ರಾಶಿಯವರು ಮಕರ ಸಂಕ್ರಾಂತಿಯಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಮೂಂಗ್ ದಾಲ್, ಹಸಿರು ಬಟ್ಟೆಗಳು, ಕಿಚಡಿ, ನೆಲಗಡಲೆ ಇತ್ಯಾದಿಗಳನ್ನು ಬಡವರಿಗೆ ದಾನ ಮಾಡಬೇಕು.


ತುಲಾ ರಾಶಿ


ಮಕರ ಸಂಕ್ರಾಂತಿಯ ಹಬ್ಬದ ದಿನ ತುಲಾ ರಾಶಿ ಜನರು ಕಿಚಡಿ, ಹಣ್ಣುಗಳು, ಮಿಠಾಯಿ, ಬಟ್ಟೆ ಇತ್ಯಾದಿಗಳನ್ನು ಬಡ ಜನರಿಗೆ ದಾನ ಮಾಡಬೇಕು.


ವೃಶ್ಚಿಕ ರಾಶಿ


ಈ ರಾಶಿ ಚಕ್ರದ ಜನರು ಮಕರ ಸಂಕ್ರಾಂತಿಯ ಶುಭ ದಿನದಂದು ಬಡವರಿಗೆ ಕಿಚಡಿ, ಕಂಬಳಿಗಳು, ಎಳ್ಳು-ಬೆಲ್ಲ ಇತ್ಯಾದಿಗಳನ್ನು ದಾನ ಮಾಡಬೇಕು.


ಧನು ರಾಶಿ


ಧನು ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ನೆಲಗಡಲೆ, ಎಳ್ಳು, ಕೆಂಪು ಶ್ರೀಗಂಧ, ಕೆಂಪು ಬಟ್ಟೆಯನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು.


ಮಕರ ರಾಶಿ


ಈ ದಿನ ಸೂರ್ಯನು ಮಕರ ರಾಶಿಗೆ ತೆರಳುವುದರಿಂದ ಈ ರಾಶಿಯ ಜನರಿಗೆ ಮಕರ ಸಂಕ್ರಾಂತಿಯ ದಿನವು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಅವರು ಕಿಚಡಿ, ಕಂಬಳಿಗಳು, ಬಟ್ಟೆಗಳು ಇತ್ಯಾದಿಗಳನ್ನು ದಾನ ಮಾಡಬೇಕು.


 ಇದನ್ನೂ ಓದಿ: Zodiac Sign: ಬುಧವಾರ ಜನಿಸಿದವರು ಚಂಚಲ ಸ್ವಭಾವದವರಂತೆ, ನೀವು ಹುಟ್ಟಿದ್ದು ಯಾವ ವಾರ?

ಕುಂಭ ರಾಶಿ


ಮಕರ ಸಂಕ್ರಾಂತಿಯ ಹಬ್ಬದ ದಿನದಂದು, ಈ ರಾಶಿಯ ಜನರು ಕಿಚಡಿ, ಎಣ್ಣೆ ಮತ್ತು ಬೆಚ್ಚಗಿನ ಬಟ್ಟೆಗಳನ್ನು ದಾನ ಮಾಡಿದರೆ ಒಳ್ಳೆಯದು.


ಮೀನ ರಾಶಿ


ಈ ರಾಶಿ ಚಕ್ರದ ಜನರು ಮಕರ ಸಂಕ್ರಾಂತಿಯ ದಿನದಂದು ನೆಲಗಡಲೆ, ಎಳ್ಳು, ಬೆಲ್ಲ, ಕಿಚಡಿ ಇತ್ಯಾದಿಗಳನ್ನು ದಾನ ಮಾಡಬೇಕು.


top videos
    First published: