Mahashivaratri: ಈ 6 ರಾಶಿ ಜನರಿಗೆ ಶಿವನಿಂದ ವಿಶೇಷ ಆಶೀರ್ವಾದ ಸಿಗಲಿದೆಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಾ ಶಿವರಾತ್ರಿಯನ್ನು ಅಕ್ಷರಶಃ 'ಶಿವನ ಮಹಾ ರಾತ್ರಿ' ಎಂದು ಅನುವಾದಿಸಲಾಗಿದೆ. ಹಿರಿಯರ ಪ್ರಕಾರ, ಈ ರಾತ್ರಿ ಶಿವ ತನ್ನ ನೃತ್ಯವಾದ ತಾಂಡವ್ ಅನ್ನು ಪ್ರದರ್ಶಿಸುತ್ತಾನೆ. ಈ ವರ್ಷ, ಧಾರ್ಮಿಕ ಹಬ್ಬವು ಫೆಬ್ರವರಿ 18 ರಂದು ಬಂದಿದೆ. ಈ ದಿನದಂದು ಜ್ಯೋತಿಷ್ಯ ಸಂರಚನೆಗಳಲ್ಲಿ ಶಿವನು ತನ್ನ ಭಕ್ತರಿಗೆ ನಿರಾಶೆ ಮೂಡಿಸುವುದಿಲ್ಲ. ಈ ಆರು ರಾಶಿಚಕ್ರ ಚಿಹ್ನೆಯ ಜನರಿಗೆ ಶಿವ ವಿಶೇಷವಾದ ಆಶೀರ್ವಾದ ಮಾಡುತ್ತಾನೆ ಎನ್ನಲಾಗಿದೆ. ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿಕೊಳ್ಳಿ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

ಇನ್ನೇನು ಮಹಾ ಶಿವರಾತ್ರಿ (Mahashivarathri) ಬಂದೇ ಬಿಡ್ತು ನೋಡಿ. ಶನಿವಾರ ಎಲ್ಲೆಡೆ ಮಹಾ ಶಿವರಾತ್ರಿ ಹಬ್ಬವನ್ನು (Festival) ಶಿವನ ಆರಾಧಕರು (Shiva Bhakta) ತುಂಬಾನೇ ಭಕ್ತಿ ಭಾವದಿಂದ ಆಚರಿಸುತ್ತಾರೆ. ಈ ವಾರ್ಷಿಕ ಹಬ್ಬವನ್ನು ಎಲ್ಲಾ ಧಾರ್ಮಿಕ ಸಂಪ್ರದಾಯಗಳೊಂದಿಗೆ (Religious Traditions) ರಾಷ್ಟ್ರದಾದ್ಯಂತ ಭವ್ಯವಾದ ರೀತಿಯಲ್ಲಿ ಆಚರಿಸಲಾಗುತ್ತದೆ ಶಿವಭಕ್ತರು ಶಿವನಾಮಗಳನ್ನು ಹೇಳುತ್ತಾ ದೇವರನ್ನು ನೆನೆಯುತ್ತಾರೆ. ಮಹಾ ಶಿವರಾತ್ರಿಯನ್ನು ಅಕ್ಷರಶಃ 'ಶಿವನ ಮಹಾ ರಾತ್ರಿ' ಎಂದು ಅನುವಾದಿಸಲಾಗಿದೆ.  ಹಿರಿಯರ ಪ್ರಕಾರ, ಈ ರಾತ್ರಿ ಶಿವ ತನ್ನ ನೃತ್ಯವಾದ ತಾಂಡವ್ ಅನ್ನು ಪ್ರದರ್ಶಿಸುತ್ತಾನೆ. ಈ ವರ್ಷ, ಧಾರ್ಮಿಕ ಹಬ್ಬವು ಫೆಬ್ರವರಿ 18 ರಂದು ಅಂದರೆ ಶನಿವಾರದ ದಿನ ಬಂದಿದೆ ಎಂದು ಹೇಳಬಹುದು.


ಏತನ್ಮಧ್ಯೆ, ಈ ದಿನದಂದು ಜ್ಯೋತಿಷ್ಯ ಸಂರಚನೆಗಳಲ್ಲಿ ಶಿವನು ತನ್ನ  ಭಕ್ತರಿಗೆ ನಿರಾಶೆ ಮೂಡಿಸುವುದಿಲ್ಲ.  ಈ ಆರು ರಾಶಿಯ ಜನರಿಗೆ  ವಿಶೇಷ ಸಮಯದಲ್ಲಿ ಶಿವ ವಿಶೇಷವಾದ ಆಶೀರ್ವಾದ  ಮಾಡುತ್ತಾನೆ ಎನ್ನಲಾಗಿದೆ. ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿಕೊಳ್ಳಿ.


ಮೇಷ ರಾಶಿ


ಮಹಾ ಶಿವರಾತ್ರಿಯ ಪವಿತ್ರ ಹಬ್ಬವು  ಮೇಷರಾಶಿಯವರಿಗೆ ಅದೃಷ್ಟ ತರಲಿದೆ.   ಈ ಮೇಷ ರಾಶಿಯ ಜನರು ಶಿವನ ಅನುಗ್ರಹ ಪಡೆದು ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಬರವಣಿಗೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ,  ನಿಮ್ಮ ಕನಸು ನನಸಾಗುವ ಸಮಯ ಬಂದಿದೆ.


ಇದನ್ನೂ ಓದಿ: Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ


ವೃಷಭ ರಾಶಿ


ವೃಷಭ ರಾಶಿಯವರು ಈ ಬಾರಿ ಶಿವನಿಂದ ಸ್ವಲ್ಪ ಹೆಚ್ಚಿನ ಅನುಗ್ರಹ ಪಡೆಯಲಿದ್ದಾರೆ. ಕೆಲಸದಲ್ಲಿ ಬಡ್ತಿಗಾಗಿ ದೀರ್ಘಕಾಲದಿಂದ ಕಾಯುತ್ತಿರುವವರು ಈ ಸಮಯದಲ್ಲಿ ಅದನ್ನು ಪಡೆಯುತ್ತಾರೆ.


ಇದಲ್ಲದೆ, ಬಹುದಿನಗಳಿಂದ ಸ್ಥಗಿತಗೊಂಡಿರುವ ನಿಮ್ಮ ಕೆಲಸವು ಈ ಪವಿತ್ರ ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ಈ ರಾಶಿಯ ದುಡಿಯುವ ಜನರು ಆಯಾ ಕೆಲಸದ ಸ್ಥಳಗಳಲ್ಲಿ ತಮ್ಮ ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಆಸ್ತಿ ಅಥವಾ ವಾಹನವನ್ನು ಖರೀದಿಸಲು ಈ ರಾಶಿಯವರಿಗೆ ಒಳ್ಳೆಯ ಸಮಯವಾಗಿದೆ.


ಮಿಥುನ ರಾಶಿ


ಮಿಥುನ ರಾಶಿಯವರಿಗೆ ಈ ಬಾರಿ ಶಿವನು ಉತ್ತಮ ಆರೋಗ್ಯವನ್ನು ಕರುಣಿಸುವುದರಿಂದ ಅವರು ತಮ್ಮ ಆರೋಗ್ಯದಲ್ಲಿ ತುಂಬಾನೇ ಸುಧಾರಣೆಯನ್ನು ಕಾಣುತ್ತಾರೆ.  ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸಹ ಅದರಿಂದ ಸ್ವಲ್ಪ ಪರಿಹಾರವನ್ನು ಪಡೆಯಲಿದ್ದಾರೆ. ವೃತ್ತಿಜೀವನದ ವಿಷಯದಲ್ಲಿ, ಈ ರಾಶಿಯವರು ಅದ್ಭುತವಾಗಿ ಪ್ರಗತಿ ಹೊಂದುತ್ತಾರೆ ಮತ್ತು ಅವರ ಕುಟುಂಬದ ವಾತಾವರಣವೂ ಸಹ ಸುಧಾರಿಸುತ್ತದೆ.
ತುಲಾ ರಾಶಿ


ಈ ಮಹಾ ಶಿವರಾತ್ರಿಯು ಈ ರಾಶಿಯ ಜನರಿಗೆ ಅದೃಷ್ಟವನ್ನು ತಂದು ಕೊಡುತ್ತದೆ. ಇವರು ಆದಾಯದಲ್ಲಿ ಹೆಚ್ಚಳವನ್ನು ನೋಡುತ್ತಾರೆ. ಅವರ ಆರೋಗ್ಯ ಸುಧಾರಿಸುತ್ತದೆ ಮತ್ತು ವ್ಯವಹಾರ ನಡೆಸುವ ಜನರಿಗೆ ಇದು ಒಳ್ಳೆಯ ಸಮಯ ಹಾಗೂ ಹೆಚ್ಚು ಅನುಕೂಲಕರವಾಗಿದೆ. ಆರ್ಥಿಕ ಲಾಭಗಳು ಇವರನ್ನು ಹುಡುಕಿಕೊಂಡು ಬರುತ್ತವೆ.


ಧನು ರಾಶಿ


ಧನು ರಾಶಿಯವರಿಗೆ, ಮಹಾ ಶಿವರಾತ್ರಿಯ ಈ ಉಪವಾಸವು ಒಂದು ವರದಂತೆ ಇರುತ್ತದೆ. ಇವರ ಎಲ್ಲಾ ಆಸೆಗಳು ಈಡೇರುತ್ತವೆ. ಅವರ ವೃತ್ತಿಜೀವನದ ದೃಷ್ಟಿಯಿಂದ, ಅವರು ಕೆಲವು ವಿಶೇಷ ಜನರನ್ನು ಭೇಟಿಯಾಗುತ್ತಾರೆ ಮತ್ತು ಅವರ ಮೂಲಕ, ಇವರ ವೃತ್ತಿಜೀವನವು ಹೊಸ ದಿಕ್ಕಿನಡೆಗೆ ಸಾಗಲು ಶುರುವಾಗುತ್ತದೆ. ಕಷ್ಟಪಟ್ಟು ದುಡಿಯುವ ಧನು ರಾಶಿಯವರು ತಮ್ಮ ಕೆಲಸಕ್ಕೆ ಮನ್ನಣೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಾರೆ!


ಕುಂಭ ರಾಶಿ


ಈ ಮಹಾ ಶಿವರಾತ್ರಿಯಂದು ಕುಂಭ ರಾಶಿಯವರಿಗೆ ಸುವರ್ಣ ಯುಗ ಬರಲಿದೆ. ಈ ರಾಶಿಯ ಜನರು ಪ್ರಾರಂಭಿಸಲು ಆಯ್ಕೆ ಮಾಡಿದ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ. ಕೆಲಸ ಮಾಡುವ ಕುಂಭ ರಾಶಿಯವರು ಹೊಸ ಅವಕಾಶಗಳನ್ನು ಪಡೆಯುತ್ತಾರೆ.

Published by:Rajesha M B
First published: