Mahashivaratri 2022: ಶಿವರಾತ್ರಿಯ ಉಪವಾಸದ ಸಂದರ್ಭದಲ್ಲಿ ಇದನ್ನು ತಿನ್ನಬಹುದು ನೋಡಿ

ಮಹಾಶಿವರಾತ್ರಿಯ ಹಬ್ಬದಂದು ಭಕ್ತರು ಶಿವ (Lord Shiva) ದೇವರ ಆರಾಧನೆಯಲ್ಲಿ ರಾತ್ರಿಯಿಡೀ ಪೂಜೆ, ಪ್ರಾರ್ಥನೆಗಳನ್ನು ನಡೆಸುತ್ತಾರೆ. ಇದರೊಂದಿಗೆ ಹಬ್ಬವನ್ನು ಮತ್ತಷ್ಟು ವಿಶೇಷಗೊಳಿಸುವುದು ಎಂದರೆ ಅದು ಶಿವರಾತ್ರಿಯ ಉಪವಾಸ ಅಥವಾ ಮಹಾಶಿವರಾತ್ರಿ ವ್ರತ (Vrat) ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಶಿವರಾತ್ರಿ

ಶಿವರಾತ್ರಿ

  • Share this:
ಮಹಾಶಿವರಾತ್ರಿ ಹಬ್ಬ ಬಂತೆಂದರೆ ಎಲ್ಲಾ ಶಿವ ಭಕ್ತರು ತಮ್ಮ ನೆಚ್ಚಿನ ದೇವರಿಗೆ ಪೂಜೆ ಮಾಡಿ, ಇಡೀ ದಿನ ಉಪವಾಸ (Fasting) ಇರುವುದನ್ನು ನೋಡುತ್ತೇವೆ. ಮಹಾಶಿವರಾತ್ರಿಯು ವ್ಯಾಪಕವಾಗಿ ಆಚರಿಸಲಾಗುವ ಹಿಂದೂ ಹಬ್ಬಗಳಲ್ಲಿ (Hindu festival) ಒಂದಾಗಿದೆ ಎಂದು ಹೇಳಬಹುದು. ಮಹಾಶಿವರಾತ್ರಿಯ ಹಬ್ಬದಂದು ಭಕ್ತರು ಶಿವ (Lord Shiva) ದೇವರ ಆರಾಧನೆಯಲ್ಲಿ ರಾತ್ರಿಯಿಡೀ ಪೂಜೆ, ಪ್ರಾರ್ಥನೆಗಳು ಮತ್ತು ಜಾಗರಣೆಗಳು ನಡೆಸುತ್ತಾರೆ. ಇದರೊಂದಿಗೆ ಹಬ್ಬವನ್ನು ಮತ್ತಷ್ಟು ವಿಶೇಷಗೊಳಿಸುವುದು ಎಂದರೆ ಅದು ಶಿವರಾತ್ರಿಯ(Shivaratri) ಉಪವಾಸ ಅಥವಾ ಮಹಾಶಿವರಾತ್ರಿ ವ್ರತ  ಎಂದು ಹೇಳಿದರೆ ತಪ್ಪಾಗುವುದಿಲ್ಲ. ಶಿವ ಭಕ್ತರು ತಮ್ಮ ಭಕ್ತಿಯನ್ನು ಸಂಪೂರ್ಣವಾಗಿ ತೋರ್ಪಡಿಸಲು ಮಹಾಶಿವರಾತ್ರಿ ವ್ರತವನ್ನು ಆಚರಿಸುತ್ತಾರೆ.

ಮಹಾಶಿವರಾತ್ರಿ ವ್ರತ, ಉಪವಾಸವು ಐಚ್ಛಿಕ ವಿಷಯವಾಗಿದ್ದು, ಗರ್ಭಿಣಿಯರು, ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಮತ್ತು ವೃದ್ಧರು ಮಾಡದಿದ್ದಲ್ಲಿ ಯಾವ ತಪ್ಪಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕೆಲವರು  'ನಿರ್ಜಲ' ವ್ರತವನ್ನು ಸಹ ಮಾಡುತ್ತಾರೆ. ಅಂದರೆ ದಿನವಿಡೀ ನೀರು ಅಥವಾ ಆಹಾರವನ್ನು ಸೇವಿಸುವುದಿಲ್ಲ. ಆದರೂ, ಹೆಚ್ಚಿನವರು ಉಪವಾಸವನ್ನು ಮಾಡುವಾಗ ಕೇವಲ ಹಣ್ಣುಗಳು, ಹಾಲು ಮತ್ತು ಕೆಲವು ತರಕಾರಿಗಳು ಮತ್ತು ಧಾನ್ಯವಲ್ಲದ ವಸ್ತುಗಳನ್ನು ಸೇವಿಸುವುದರ ಮೂಲಕ ತಮ್ಮ ಉಪವಾಸ ವ್ರತವನ್ನು ಆಚರಿಸುತ್ತಾರೆ.

ನೀವು ಈ ವರ್ಷ ಮಹಾಶಿವರಾತ್ರಿ ಉಪವಾಸವನ್ನು ಆಚರಿಸಲು ಯೋಜಿಸುತ್ತಿದ್ದರೆ, ಉಪವಾಸದಲ್ಲಿರುವಾಗ ನೀವು ಏನನ್ನು ಸೇವಿಸಬೇಕು ಎಂಬುದರ ಬಗ್ಗೆ ಕೆಲವು ಆಹಾರಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ.

  1. ಆಲೂಗಡ್ಡೆಯಿಂದ ಮಾಡಿದ ಭಕ್ಷ್ಯಗಳಾದ ಆಲೂ ಕಡಿ, ಆಲೂ ಟಿಕ್ಕಿ, ಆಲೂ ಖಿಚಡಿ ಸೇವಿಸಿ


ಮಹಾಶಿವರಾತ್ರಿಯಂದು ಉಪವಾಸ ಇದ್ದರೆ, ಆಲೂಗಡ್ಡೆಯಿಂದ ತಯಾರಿಸಿದ ಭಕ್ಷ್ಯಗಳನ್ನು ನೀವು ಸೇವಿಸಬಹುದಾಗಿದೆ. ಆದರೆ ಇದರಲ್ಲಿ ಯಾವುದೇ ರೀತಿಯಲ್ಲಿಯೂ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಅಥವಾ ಅರಿಶಿನವನ್ನು ಹೊಂದಿರುವುದಿಲ್ಲ. ಶಿವರಾತ್ರಿಯ ವ್ರತದ ವೇಳೆಯಲ್ಲಿ ಆಲೂ ಕಡಿಯ    ಸೌಮ್ಯವಾದ ಆಹಾರವನ್ನು ಮಾಡಿಕೊಂಡು ಸೇವಿಸಬಹುದು. ಇದರ ಜೊತೆ ಆಲೂ ಟಿಕ್ಕಿ, ಆಲೂ ಪಕೋಡಾ, ಆಲೂ ಕಿಚಡಿ, ಸಿಹಿ ಗೆಣಸು ಚಾಟ್ ಮತ್ತು ಆಲೂ ಹಲ್ವಾ ಕೂಡ ನೀವು ಸೇವಿಸಬಹುದು.

ಇದನ್ನೂ ಓದಿ: Mahashivratri ಮುನ್ನ ಆಚರಿಸಿ ಪ್ರದೋಷ ವ್ರತ; ಈ ವೇಳೆ ಅಪ್ಪಿತಪ್ಪಿ ಶಿವನಿಗೆ ಈ ವಸ್ತು ಅರ್ಪಿಸಬೇಡಿ

  1. ಸಿರಿಧಾನ್ಯವಲ್ಲದ ಭಕ್ಷ್ಯಗಳನ್ನು ಸೇವನೆ


ಮಹಾಶಿವರಾತ್ರಿಯ ಉಪವಾಸ ವ್ರತದ ಸಮಯದಲ್ಲಿ ಸಬ್ಬಕ್ಕಿಯನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲದವರೆಗೆ ನೆನೆಸಿಟ್ಟು ನಂತರ ಅದರಿಂದ ಏನಾದರೂ ಮಾಡಿಕೊಂಡು ಸೇವಿಸಬಹುದು. ರಾಗಿಯಿಂದ ಮಾಡಿದ ಧಾನ್ಯವಲ್ಲದ ಭಕ್ಷ್ಯಗಳನ್ನು ಸಹ ಸೇವಿಸಬಹುದು. ಸಬ್ಬಕ್ಕಿ ಕಿಚಡಿ, ಸಬ್ಬಕ್ಕಿ ಪಕೋಡ ಮತ್ತು ಸಬ್ಬಕ್ಕಿ ವಡೆಗಳನ್ನು ಈ ವಿಶೇಷ ದಿನದಂದು ವಿಶ್ವದಾದ್ಯಂತ ಶಿವ ಭಕ್ತರು ಸೇವಿಸುವ ಕೆಲವು ಜನಪ್ರಿಯ ಆಹಾರಗಳಾಗಿವೆ.

  1. ಹಾಲು ಆಧಾರಿತ ಪಾಯಸಗಳು ಮತ್ತು ಸಿಹಿತಿಂಡಿಗಳು


ಶಿವನಿಗೆ ಹಾಲು ಎಂದರೆ ಬಲು ಇಷ್ಟ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ಶಿವ ಭಕ್ತರು ಶಿವಲಿಂಗಕ್ಕೆ ಹಾಲನ್ನು ಅರ್ಪಿಸುತ್ತಾರೆ. ವ್ರತದ ವೇಳೆ ಹಾಲನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಹಾಲು ಮತ್ತು ಹಾಲು ಆಧಾರಿತ ಪಾಯಸಗಳನ್ನು ಶಿವರಾತ್ರಿಯ ವ್ರತದ ಸಮಯದಲ್ಲಿ ಜನರು ಹೆಚ್ಚಾಗಿ ಸೇವಿಸುತ್ತಾರೆ. ಉಪವಾಸದ ವೇಳೆ ಬಾದಾಮಿ ಹಾಲು, ಮಖನೆ ಕಿ ಖೀರ್, ಸಬ್ಬಕ್ಕಿ ಖೀರ್ ಅನ್ನು ನೀವು ಮಾಡಿಕೊಂಡು ಸೇವಿಸಬಹುದು.

  1. ಪಕೋಡಾ ಮತ್ತು ವಡಾಗಳನ್ನು ಸೇವಿಸಿ


ಆಲೂ ಪಕೋಡಾ, ಹಸಿ ಬಾಳೆ ವಡೆಗಳು, ಸಿಂಗಾಡಾ ಹಿಟ್ಟಿನ ಪಕೋಡಾ ಕೂಡ ಉಪವಾಸದ ವೇಳೆ ನೀವು ಸೇವಿಸಬಹುದು. ಉಪವಾಸದ ಸಮಯದಲ್ಲಿ ಸೇವಿಸಲು ಮಾಡಿಕೊಳ್ಳುವ ಈ ಆಹಾರದಲ್ಲಿ ಆದಷ್ಟು ಮಸಾಲೆಯನ್ನು ಬಳಸಬೇಡಿ. ಆದರೆ ಮಸಾಲೆ ಬದಲು ತಜ್ಞರು ಹೇಳುವಂತೆ, ನೀವು ಜೀರಿಗೆ ಅಥವಾ ಜೀರಿಗೆ ಪುಡಿ, ಕರಿಮೆಣಸು ಪುಡಿ, ಹಸಿರು ಏಲಕ್ಕಿ, ದಾಲ್ಚಿನ್ನಿ, ಅಜ್ವೈನ್, ಕರಿಮೆಣಸು ಬಳಸಬಹುದು.

ಇದನ್ನು ಓದಿ: Mahashivratri ಜಾಗರಣೆ ಹಿಂದೆ ಆಧ್ಯಾತ್ಮ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ

  1. ಹಣ್ಣುಗಳು ಮತ್ತು ಡ್ರೈ ಫ್ರೂಟ್ಸ್ ಗಳ ಸೇವನೆ


ಈ ಶಿವರಾತ್ರಿಯ ಉಪವಾಸದ ವ್ರತವನ್ನು ಆಚರಿಸಲು ಆಗದಿದ್ದಲ್ಲಿ  ಭಕ್ತರು ಹಣ್ಣುಗಳು ಮತ್ತು ಹಾಲಿನಿಂದ ಮಾಡಿದ ಪಾಯಸವನ್ನು ಸೇವಿಸಬಹುದು. ಇನ್ನು, ಹಣ್ಣುಗಳು ಪ್ರತಿಯೊಂದು ದೇವರ ಪೂಜೆ ಅಥವಾ ಉಪವಾಸದ ಅವಿಭಾಜ್ಯ ಅಂಗವಾಗಿದೆ. ವ್ರತದ ಸಂದರ್ಭದಲ್ಲಿ ನೀವು ಹಣ್ಣಿನ ಚಾಟ್‌ಗಳು, ಹಣ್ಣಿನ ಸಲಾಡ್‌ಗಳು ಮತ್ತು ಹಣ್ಣಿನ ಮಿಲ್ಕ್ ಶೇಕ್‌ಗಳನ್ನು ಮಾಡಿಕೊಂಡು ಸೇವಿಸಬಹುದು. ಹಣ್ಣುಗಳ ಜೊತೆಗೆ ನೀವು ವಿವಿಧ ರೀತಿಯ ಡ್ರೈ ಫ್ರೂಟ್ಸ್ ಗಳಾದ ಬಾದಾಮಿ, ವಾಲ್‌ನಟ್‌ಗಳು, ಖರ್ಜೂರಗಳು, ಗೋಡಂಬಿಗಳು ಮತ್ತು ಒಣದ್ರಾಕ್ಷಿಗಳನ್ನು ಸಹ ನೀವು ಸೇವಿಸಬಹುದಾಗಿದೆ.
Published by:shrikrishna bhat
First published: