ಮಹಾ ಶಿವರಾತ್ರಿ (Shivaratri) ಹಿಂದೂ (Hindu) ಧರ್ಮದಲ್ಲಿ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಶಿವ ಮತ್ತು ಶಕ್ತಿಯ ಸಂಗಮವನ್ನು ಸಂಕೇತ ಎನ್ನಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ದಕ್ಷಿಣ ಭಾರತದ (South India) ಕ್ಯಾಲೆಂಡರ್ ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಚತುರ್ದಶಿ ತಿಥಿಯಂದು ಮಹಾ ಶಿವರಾತ್ರಿಯನ್ನು ಆಚರಿಸಿದರೆ, ಉತ್ತರ ಭಾರತದ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದಲ್ಲಿ ಮಹಾ ಶಿವರಾತ್ರಿಯನ್ನು (Maha Shivaratri) ಆಚರಿಸುತ್ತದೆ. ಶಿವರಾತ್ರಿಯ ದಿನ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಶಿವ ಮತ್ತು ಪಾರ್ವತಿಯನ್ನು ಪೂಜಿಸುತ್ತಾರೆ, ಉಪವಾಸ ಆಚರಿಸಿ ಶಿವನ ಆಶೀರ್ವಾದವನ್ನು ಬೇಡುತ್ತಾರೆ. ಆದರೆ ಶಿವರಾತ್ರಿಯ ಹಿಂದಿನ ಕಥೆ ಏನು, ಈ ದಿನ ಏಕೆ ಇಷ್ಟು ಮಹತ್ವ ಎಂಬುದು ಇಲ್ಲಿದೆ.
ಒಂದು ದಂತಕಥೆಯ ಪ್ರಕಾರ ಬ್ರಹ್ಮಾಂಡದ ಸೃಷ್ಟಿಯ ಸಮಯದಲ್ಲಿ, ಶಿವನು ಮಹಾ ಶಿವರಾತ್ರಿಯ ಮಧ್ಯರಾತ್ರಿಯಲ್ಲಿ ಬ್ರಹ್ಮನ ಕೃಪೆಯಿಂದ ರುದ್ರನಾಗಿ ಅವತರಿಸುತ್ತಾನೆ. ಶಿವನು ತನ್ನ ಪತ್ನಿ ಸತಿಯ ದಹನದ ಸುದ್ದಿಯನ್ನು ಕೇಳಿದಾಗ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಸಂಕೇತವಾದ ಶಿವತಾಂಡವ ಮಾಡಿದ ಎನ್ನಲಾಗುತ್ತದೆ.
ಇನ್ನೊಂದು ಪಂಚಾಂಗದ ಪ್ರಕಾರ,ಸಾಗರದ ಮಂಥನದ ಸಮಯದಲ್ಲಿ ಸಮುದ್ರದಿಂದ ವಿಷವು ಹೊರಬಂದಿತು. ಅದು ಇಡೀ ಸೃಷ್ಟಿಯನ್ನು ನಾಶಮಾಡುವ ಶಕ್ತಿಯನ್ನು ಹೊಂದಿತ್ತು. ಆದರೆ, ಶಿವನು ವಿಷವನ್ನು ಕುಡಿದು ಇಡೀ ಪ್ರಪಂಚವನ್ನು ಸರ್ವನಾಶದಿಂದ ರಕ್ಷಿಸಿದ. ಆದ್ದರಿಂದ, ಬ್ರಹ್ಮಾಂಡವನ್ನು ಸಂರಕ್ಷಿಸಿದ್ದಕ್ಕಾಗಿ ಮಹಾ ಶಿವರಾತ್ರಿಯಂದು ಶಿವನ ಆರಾಧನೆ ಮಾಡುತ್ತಾರೆ.
ಶಿವ ಪಾರ್ವತಿಯನ್ನು ಮದುವೆ ಆದ ದಿನ
ಇಷ್ಟೇ ಅಲ್ಲದೇ ಈ ಶಿವರಾತ್ರಿಯ ಅನೇಕ ಕಥೆಗಳಿದೆ. ಈ ದಿನವನ್ನು ಶಿವ ಪಾರ್ವತಿ ದೇವಿಯನ್ನು ಮದುವೆಯಾದ ದಿನ ಎನ್ನಲಾಗುತ್ತದೆ. ಇದಲ್ಲದೇ, ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಇಳಿದು ಬಂದ ಗಂಗೆಯ ರಭಸವನ್ನು ತಡೆಯಲು ಶಿವ ತನ್ನ ಜಡೆಯಲ್ಲಿ ಗಂಗೆಯನ್ನು ಹಿಡಿದುಕೊಳ್ಳುತ್ತಾನೆ. ಇಲ್ಲದಿದ್ದರೆ ಗಂಗೆಯ ರಭಸಕ್ಕೆ ಇಡೀ ಭೂಲೋಕ ಕೊಚ್ಚಿ ಹೋಗುತ್ತಿತ್ತು.
ಇದನ್ನೂ ಓದಿ: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಬದುಕು ಹಾಳಾಗುತ್ತೆ
ಶಿವ ಗಂಗೆಯನ್ನು ಹಿಡಿದುಕೊಂಡಿದ್ದು ಕಂಡ ಭಗೀರಥ ಸ್ವಲ್ಪ ಚಿಂತೆಗೆ ಒಳಗಾಗುತ್ತಾನೆ. ಕೊನೆಗೆ ಗಂಗೆಯನ್ನು ಭೂಮಿಗೆ ಹರಿದು ಬಿಡುವಂತೆ ಶಿವನನ್ನು ಬೇಡಿಕೊಳ್ಳುತ್ತಾನೆ. ಭಗೀರಥನ ಭಕ್ತಿಗೆ ಮೆಚ್ಚಿದ ಶಿವ ತನ್ನ ಜಡೆಯಲ್ಲಿದ್ದ ಗಂಗೆಯನ್ನು ಹರಿದು ಬಿಡುತ್ತಾನೆ. ಈ ದಿನವನ್ನೇ ಪುರಾಣಗಳ ಪ್ರಕಾರ ಶಿವರಾತ್ರಿ ಹಬ್ಬ ಎಂದು ಆಚರಿಸಲಾಗುತ್ತದೆ ಎನ್ನುವ ನಂಬಿಕೆ ಸಹ ಇದೆ.
ಅನೇಕ ಕಥೆಗಳಿವೆ ಈ ದಿನದ ಹಿಂದೆ
ಇದರ ಜೊತೆಗೆ , ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂದು ಸಹ ಹೇಳಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ, ಮಹಾಶಿವರಾತ್ರಿಯಂದು ಮಾಡುವ ಪೂಜೆಯು ನಮಗೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಈ ದಿನ, ಭಗವಾನ್ ಶಿವನ ಅಭಿಷೇಕದಿಂದ ಎಲ್ಲಾ ದುಃಖ ಮತ್ತು ನೋವುಗಳನ್ನು ಮತ್ತು ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಶಿವರಾತ್ರಿ ಹಬ್ಬವನ್ನು ಈ ರೀತಿ ಆಚರಣೆ ಮಾಡಿದ್ರೆ ಒಳ್ಳೆಯದಂತೆ
ಈ ಮಂಗಳಕರ ದಿನದಂದು, ಶಿವ ತಾಂಡವ ಸ್ತೋತ್ರ ಮತ್ತು ಶಿವ ಚಾಲೀಸಾವನ್ನು ಪಠಿಸುವುದು ಸಹ ಮುಖ್ಯವಾಗುತ್ತದೆ ಹಾಗೂ ಈ ಮಂತ್ರಗಳ ಪಠಣದಿಂದ ಶಿವನ ರಕ್ಷೆ ಯಾವಾಗಲೂ ಭಕ್ತರ ಮೇಲೆ ಇರುತ್ತದೆ ಎಂಬುದು ನಂಬಿಕೆ. ಮಹಾದೇವನು ಈ ಅದ್ಭುತ ಸ್ತೋತ್ರಗಳನ್ನು ಪಠಿಸುವ ಮೂಲಕ ತನ್ನ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಹಿಂದಿನಿಂದಲೂ ವಾಡಿಕೆಯಲ್ಲಿರುವ ಶಾಸ್ತ್ರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ