Mahalakshmi Temple: ದೇವಾಲಯಕ್ಕೆ ಬಂದ ಚಿನ್ನದ ಕಾಣಿಕೆಯನ್ನೇ ದೀಪಾವಳಿಯಂದು ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ ಈ ಮಹಾಲಕ್ಷ್ಮಿ ದೇಗುಲದಲ್ಲಿ

ದೀಪಾವಳಿಯ ಶುಭ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಭಕ್ತರಿಗೆ ನೀಡುವ ಚಿನ್ನ ಮತ್ತು ಬೆಳ್ಳಿ ಪ್ರಸಾದವನ್ನು ಭಕ್ತರು ಮನೆಯಲ್ಲಿ ಇಟ್ಟು ಪೂಜಿಸಬೇಕು. ಈ ರೀತಿ ಪೂಜಿಸುವುದರಿಂದ ಮನೆಯ ಸಂಪತ್ತು ವೃದ್ಧಿಯಾಗುತ್ತದೆ.

 ಮಹಾಲಕ್ಷ್ಮಿ ದೇಗುಲ

ಮಹಾಲಕ್ಷ್ಮಿ ದೇಗುಲ

 • Share this:
  ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ದೇವರಿಗೆ ಹರಿಕೆ ಹೊರುವುದು ಸಾಮಾನ್ಯ. ಅದೇ ರೀತಿ ಇಲ್ಲಿನ ಲಕ್ಷ್ಮಿ ದೇಗುಲಕ್ಕೂ ಕೂಡ ಭಕ್ತರು ತಮ್ಮ ಕೋರಿಕೆ ನೆರವೇರಿಸುವಂತೆ ಹರಕೆ ಹೊರುತ್ತಾರೆ. ಹರಕೆ ರೂಪದಲ್ಲಿ ಚಿನ್ನ ಮತ್ತು ಬೆಳ್ಳಿ ವಸ್ತುವನ್ನು ನೀಡುವುದಾಗಿ ಪ್ರಾರ್ಥಿಸುತ್ತಾರೆ. ಅದೇ ರೀತಿ ಭಕ್ತರು ಒಪ್ಪಿಸಿದ ಹರಕೆಯ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಭಕ್ತರಿಗೆ ಕಾಣಿಕೆ (Prasada) ರೂಪದಲ್ಲಿ ನೀಡಲಾಗುವುದು. ಅಚ್ಚರಿ ಆದರೂ ಹೌದು. ಸಾಮಾನ್ಯವಾಗಿ ಎಲ್ಲಾ ದೇಗುಲಗಳಲ್ಲಿ ಅನ್ನ, ತೀರ್ಥ, ದೇವರಿಗೆ ನೀಡಿದ ಸೀರೆ ಮತ್ತಿತ್ತರ ವಸ್ತುಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಿದರೆ, ಈ ಮಹಾಲಕ್ಷ್ಮಿ ದೇಗುಲದಲ್ಲಿ (mahalakshmi Temple)  ದೇವರಿಗೆ ಪ್ರಸಾದವಾಗಿ ಹರಕೆ ಒಪ್ಪಿಸಿದ ಚಿನ್ನ ಬೆಳ್ಳಿಯನ್ನೇ ನೀಡುತ್ತಾರೆ. ಅಷ್ಟಕ್ಕೂ ಈ ದೇಗುಲ ಇರುವುದೆಲ್ಲಿ, ಇಲ್ಲಿ ಈ ರೀತಿಯ ಪ್ರಸಾದ ಯಾಕೆ ನೀಡುತ್ತಾರೆಂಬ ಮಾಹಿತಿ ಇಲ್ಲಿದೆ.

  ಎಲ್ಲಿದೆ ಈ ಮಹಾಲಕ್ಷ್ಮಿ ದೇಗುಲ
  ಮಧ್ಯ ಪ್ರದೇಶದ ರತ್ಲಾದಲ್ಲಿರುವ ಮಹಾಲಕ್ಷ್ಮಿ ದೇಗುಲ (Madhya Pradesh Ratlam Mahalaxmi Temple) ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಖ್ಯಾತಿ ಪಡೆದಿದೆ. ಈ ದೇಗುಲಕ್ಕೆ ಹರಕೆ ಕಟ್ಟಿದರೆ ಅದು ನೇರವೇರುತ್ತದೆ. ಇದೇ ಹಿನ್ನಲೆ ಹರಕೆ ತೀರಿಸುವ ಜನರು ಇದಕ್ಕೆ ಪ್ರತಿಯಾಗಿ ಚಿನ್ನದ ಕಾಣಿಕೆಗಳನ್ನು ಅಥವಾ ನಗದು, ಬೆಳ್ಳಿಯ ಉಡುಗೊರೆಗಳನ್ನು ದೇಗುಲಕ್ಕೆ ನೀಡುತ್ತಾರೆ. ಈ ದೇಗುಲಕ್ಕೆ ನೀಡುವ ಚಿನ್ನದ ಕಾಣಿಕೆಗಳು ಅಪರಿಮಿತವಾಗಿದೆ . ಇದೇ ಕಾರಣಕ್ಕೆ ದೀಪಾವಳಿ ಸಮಯದಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ದೇವರಿಗೆ ಕಾಣಿಕೆಯಾಗಿ ಬಂದ ಚಿನ್ನ ಮತ್ತು ಬೆಳ್ಳಿ ಉಡುಗೊರೆ ನೀಡಲಾಗುವುದು.

  ಈ ಚಿನ್ನ ಮತ್ತು ಬೆಳ್ಳಿಯನ್ನು ಮಾರುವಂತಿಲ್ಲ
  ದೀಪಾವಳಿಯ ಶುಭ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಭಕ್ತರಿಗೆ ನೀಡುವ ಚಿನ್ನ ಮತ್ತು ಬೆಳ್ಳಿ ಪ್ರಸಾದವನ್ನು ಭಕ್ತರು ಮನೆಯಲ್ಲಿ ಇಟ್ಟು ಪೂಜಿಸಬೇಕು. ಈ ರೀತಿ ಪೂಜಿಸುವುದರಿಂದ ಮನೆಯ ಸಂಪತ್ತು ವೃದ್ಧಿಯಾಗುತ್ತದೆ. ಈ ಕಾಣಿಕೆಗಳನ್ನು ಭಕ್ತರು ಯಾವುದೇ ಕಾರಣಕ್ಕೂ ಮಾರುವಂತಿಲ್ಲ. ಒಂದು ವೇಳೆ ಈ ರೀತಿ ಮಾಡಿದರೆ ಅವರಿಗೆ ಕೆಡಕು ಉಂಟಾಗುತ್ತದೆ ಎಂಬ ನಂಬಿಕೆ ಇದೆ.

  ದೀಪಾವಳಿಯಂದು ಐದುದಿನಗಳ ವೈಭವ
  ಮಧ್ಯಪ್ರದೇಶದ ವಾಯುವ್ಯ ಭಾಗದಲ್ಲಿರುವ ಈ ರತ್ಲಾದ ಮಹಾಲಕ್ಷ್ಮಿ ದೇಗುಲದಲ್ಲಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಧನ್​ತೇರಸ್​ನಿಂದ ಬಲಿಪಾಡ್ಯಮಿವರೆಗೆ ಐದು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ದೇಗುಲವನ್ನು ಕಾಣಿಕೆಗಳಿಂದ ಬಂದ ನಗದು, ಚಿನ್ನ ಮತ್ತು ಬೆಳ್ಳಿ ವಸ್ತುಗಳಿಂದ ಅಲಂಕರಿಸಲಾಗುವುದು. ಈ ದಿನ ಇಂತಿಷ್ಟು ಸಂಖ್ಯೆಯ ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು

  ಇದನ್ನು ಓದಿ: Dhanteras: ಧನ್​ತೇರಸ್​ನ ಈ ದಿನ ಅಪ್ಪಿ-ತಪ್ಪಿ ಕೂಡ ಈ ತಪ್ಪು ಮಾಡಬೇಡಿ; ಕಷ್ಟ ಹೆಚ್ಚುತ್ತೆ

  ಬಿಗಿ ಬಂದೋಬಸ್ತ್
  ರತ್ಲಾಮ್ ಮಾತ್ರವಲ್ಲದೆ, ರಾಜ್ಯದ ಉಜ್ಜಯಿನಿ, ಇಂದೋರ್, ಮೋವ್, ಪಿಪ್ಲಿಯಾ ಮಂಡಿ, ಪುಣೆ, ಹರಿಯಾಣ, ಮಹಾರಾಷ್ಟ್ರ, ಹೈದರಾಬಾದ್, ಗುಜರಾತ್‌ನ ಭರೂಚ್, ರಾಜಸ್ಥಾನದ ಭಕ್ತರು ದೇವರ ಅಲಂಕಾರಕ್ಕಾಗಿ ನಗದು ನೀಡಿದ್ದಾರೆ. ದೇವಸ್ಥಾನದ ಅಲಂಕಾರಕ್ಕಾಗಿ ಭಕ್ತರು 5 ರಿಂದ 10, 20, 50, 100 ಮತ್ತು 500 ರೂ.ವರೆಗಿನ ಹೊಸ ನೋಟುಗಳ ಕಟ್ಟುಗಳನ್ನು ನೀಡುತ್ತಾರೆ. ಹಣ ಚಿನ್ನ ಒಡವೆಗಳಿಂದ ಕೂಡಿದ ದೇವಸ್ಥಾನದ ಭದ್ರತೆಗಾಗಿ ಪೊಲೀಸ್‌ ಪಡೆಯನ್ನೂ ನಿಯೋಜಿಸಲಾಗುತ್ತದೆ.

  ಇದನ್ನು ಓದಿ: ಧನ್​ತೇರಸ್​​ನ ಈ ದಿನ ನಿಮ್ಮ ರಾಶಿಗೆ ಅನುಗುಣವಾಗಿ ಶಾಂಪಿಂಗ್​ ಮಾಡಿದ್ರೆ ಹೆಚ್ಚತ್ತೆ ಸಮೃದ್ಧಿ

  ಕೋಟಿ ಮೌಲ್ಯದ ಉಡುಗೊರೆಗಳಿಂದ ಅಲಂಕಾರ

  ದೀಪಾವಳಿಯ ದಿನದಂದು ದೇವಾಲಯಕ್ಕೆ ಭೇಟಿ ನೀಡುವ ವಿವಾಹಿತ ಮಹಿಳೆಯರಿಗೆ ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳನ್ನು ನೀಡಲಾಗುತ್ತದೆ. ಅಲ್ಲದೇ ದೀಪಾವಳಿಯ ದಿನ ದೇವಸ್ಥಾನಕ್ಕೆ ಸುಮಾರು ರೂ. 100 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ರೂಪಾಯಿ ನೋಟುಗಳಿಂದ ಅಲಂಕರಿಸುವುದು ವಾಡಿಕೆ.
  Published by:Seema R
  First published: