ಭಾರತೀಯ ಸಂಪ್ರದಾಯದಲ್ಲಿ (Indian Culture) ಕೆಲವು ಮರಗಳನ್ನು ಪೂಜನೀಯವಾಗಿ, ದೈವಿಕವಾಗಿ ನೋಡಲಾಗುತ್ತದೆ. ಅದರಲ್ಲೂ ಕೆಲ ಪೂಜೆ-ಪುನಸ್ಕಾರಗಳಲ್ಲಿ ಮಾವಿನ ಎಲೆ, ಬಾಳೆ ಎಲೆಯನ್ನು ಶುಭಸೂಚಕವಾಗಿ ನೋಡಲಾಗುತ್ತದೆ. ಅಂತೆಯೇ ವಾಸ್ತುಶಾಸ್ತ್ರವೂ ಸಹ ಕೆಲ ಸಸ್ಯಗಳನ್ನು ಅದೃಷ್ಟದ ಸಸ್ಯಗಳು ಎಂದು ಹೇಳುತ್ತದೆ. ಈ ಸಸ್ಯಗಳನ್ನು ಮನೆಯಲ್ಲಿಡುವುದರಿಂದ ಮತ್ತು ಶುಭಸಮಾರಂಭಗಳಲ್ಲಿ ಇಡುವುದರಿಂದ ನಕಾರಾತ್ಮಕ (Negative) ಶಕ್ತಿಗಳು ಹೋಗಿ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ ಎಂಬ ನಂಬಿಕೆ ಇದೆ. ಫೆಂಗ್‌ಶೂಯಿ ವಾಸ್ತು ಸಹ ಕೆಲವು ಶುಭ ಸಮಾರಂಭಗಳಲ್ಲಿ ಅದೃಷ್ಟ, ಸಮೃದ್ಧಿಯನ್ನು ತರುವ ಕೆಲವೊಂದು ಗಿಡಗಳ ಬಗ್ಗೆ ವಿವರಿಸುತ್ತದೆ. ಹಸಿರನ್ನು ಸಾಮಾನ್ಯವಾಗಿ ಸಮೃದ್ಧಿಯ ಸಂಕೇತವಾಗಿ ನೋಡಲಾಗುತ್ತದೆ. ಅಂತೆಯೇ ಕೆಲವು ಸಸ್ಯಗಳನ್ನು (Plants) ಒಬ್ಬರ ಏಳಿಗೆಯಲ್ಲಿ ಸಮೃದ್ಧಿ, ಅದೃಷ್ಟ ತರುವ ಸಸ್ಯಗಳು ಎಂದು ವರ್ಗೀಕರಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಪೋಷಣೆ ಮಾಡಿದ್ದಲ್ಲಿ ಇದು ಒಬ್ಬರ ಜೀವನದಲ್ಲಿ ಸಮೃದ್ಧಿಯನ್ನು ಆಕರ್ಷಿಸುವ ನಿರ್ಣಾಯಕ ಅಂಶವಾಗಿ ಕೆಲಸ ಮಾಡುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಅಂತೆಯೇ ಶುಭಸಮಾರಂಭಗಳಲ್ಲಿ ಇಡಬೇಕಾದ ಕೆಲವು ಸಸ್ಯಗಳ ಬಗ್ಗೆ ಫೆಂಗ್ಶೂಯಿ ವಿವರಿಸುತ್ತದೆ.
ಹಾಗಾದರೆ ನಾವಿಲ್ಲಿ ಶುಭಸಮಾರಂಭಗಳಲ್ಲಿ ಅದೃಷ್ಟ ತರುವ ಸಸ್ಯಗಳು ಯಾವುವು ಎಂದು ನೋಡೋಣ
*ಮರುಭೂಮಿ ಗುಲಾಬಿ
ಅದೃಷ್ಟದ ಸಸ್ಯಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಮರುಭೂಮಿ ಗುಲಾಬಿ ಅಥವಾ ಅಡೆನಿಯಮ್ ಒಬೆಸಮ್. ಈ ರೀತಿಯ ಹೂಬಿಡುವ ಅಲಂಕಾರಿಕ ಸಸ್ಯವನ್ನು ಚೀನಾದಲ್ಲಿ ಹಲವಾರು ಸಹಸ್ರಮಾನಗಳ ಹಿಂದೆ ಬೆಳೆಸಲಾಗಿದೆ.
ಹೂವಿನ ಎದ್ದುಕಾಣುವ ಬಣ್ಣಗಳು, ಯಾವಾಗಲೂ ಹೂಬಿಡುವಿಕೆ, ದೊಡ್ಡ ಹೂವುಗಳು ಮತ್ತು ಸುಲಭ ಕೃಷಿ ಕಾರಣದಿಂದಾಗಿ ಈ ಸಸ್ಯ ಎಲ್ಲರಿಗೂ ಪ್ರಿಯವಾದದ್ದು. ಕೃಷಿಗೆ ಪ್ರಿಯವಾಗುವುದರ ಜೊತೆ ಇದು ಅದೃಷ್ಟ ತರುವ ಸಸ್ಯ ಎಂದು ನಂಬಲಾಗಿದೆ.
ಸಸ್ಯ ಕೊಬ್ಬಿದ, ಉಬ್ಬಿದ ಕಾಂಡವನ್ನು ಹೊಂದಿದ್ದು, ಇದನ್ನು ಸಮೃದ್ಧಿ, ಅದೃಷ್ಟ ಮತ್ತು ಫಲವತ್ತತೆಯ ಸಂಕೇತವಾಗಿ ಕಾಣಲಾಗುತ್ತದೆ. ಅದಕ್ಕಾಗಿ ಅನೇಕ ಮನೆಗಳು, ಉದ್ಯಾನವನಗಳಲ್ಲಿ ಈ ಸಸ್ಯವನ್ನು ಒಂದಾದರೂ ಬೆಳೆಸುತ್ತಾರೆ.
ಹಾಗೆಯೇ ಶುಭಸಮಾರಂಭಗಳಲ್ಲಿ ಎಲ್ಲವೂ ಮಂಗಳದಾಯಕವಾಗಿ ನಡೆಯಲು ಈ ಸಸ್ಯ ಅಥವಾ ಅದರ ಹೂವನ್ನು ಇರಿಸಲಾಗುತ್ತದೆ.
* ಜಟ್ರೋಫಾ ಪೊಡಾಗ್ರಿಕಾ
ಜಟ್ರೋಫಾ ಪೊಡಾಗ್ರಿಕಾ ಸಸ್ಯವನ್ನು ಸಾಮಾನ್ಯವಾಗಿ ಗೌಟ್ ಪ್ಲಾಂಟ್, ಆಸ್ಟ್ರೇಲಿಯನ್ ಬಾಟಲ್ ಪ್ಲಾಂಟ್, ಬುದ್ಧ ಬೆಲ್ಲಿ ಪ್ಲಾಂಟ್, ಪರ್ಜಿಂಗ್ ಪ್ಲಾಂಟ್ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಜಟ್ರೋಫಾ ಪೊಡಾಗ್ರಿಕಾ ಸಸ್ಯ ಕೇವಲ ಅದೃಷ್ಟಕ್ಕೆ ಮಾತ್ರವಲ್ಲದೇ ಚಿಕಿತ್ಸೆಯ ಔಷಧೀಯ ಸಸ್ಯವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ನಿಮ್ಮ ಹೆಸರು W ಅಕ್ಷರದಿಂದ ಶುರುವಾದ್ರೆ ಜೀವನ ಹೀಗಿರಲಿದೆಯಂತೆ ನೋಡಿ
ಈ ಸಸ್ಯ ಒಬ್ಬರ ಮನೆಯಲ್ಲಿ ಇದ್ದರೆ ಅವರ ಅದೃಷ್ಟ ಖುಲಾಯಿಸುತ್ತದೆ. ಈ ಸಸ್ಯ ಒಳಿತನ್ನು, ಸಮೃದ್ಧಿಯನ್ನು ಆಕರ್ಷಿಸುತ್ತದೆ ಎನ್ನಲಾಗಿದೆ. ಅದೃಷ್ಟ ತರುವ ಈ ಸಸ್ಯವನ್ನು ಹೆಚ್ಚಾಗಿ ಶುಭಸಮಾರಂಭಗಳಲ್ಲಿ ಇರಿಸಲಾಗುತ್ತದೆ.
* ಬ್ಯೂಕಾರ್ನಿಯಾ ರಿಕುರ್ವಾಟಾ
ಇದು ದಪ್ಪನೆಯ, ಊದಿಕೊಂಡ ಕಾಂಡವನ್ನು ಹೊಂದಿರುವ ಮತ್ತೊಂದು ಸಸ್ಯವಾಗಿದ್ದು, ಅಲಂಕಾರಿಕ ಸಸ್ಯವಾಗಿಯೂ ಮಾನ್ಯತೆ ಪಡೆದಿದೆ. ಕಾರ್ಟೆಕ್ಸ್ ಅಥವಾ ಕಾಂಡ ದಪ್ಪ ಇರುವುದರಿಂದ ಇದನ್ನು ಆನೆಯ ಕಾಲು ಅಥವಾ ಪಾಲಿಟೇಲ್ ಪಾಮ್ ಎಂದೂ ಕರೆಯುತ್ತಾರೆ,
ಈ ಸಸ್ಯ ಜೀವನದ ಯಶಸ್ಸಿನ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಹೀಗಾಗಿ ಮನೆಗೆ, ವ್ಯಕ್ತಿಗೆ ಒಳ್ಳೆಯದಾಗಲು ಈ ಸಸ್ಯವನ್ನು ಒಂದಾದರೂ ಬೆಳೆಸಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಹಾಗೆಯೇ ಕಾರ್ಯಕ್ರಮಗಳಲ್ಲೂ ಈ ಸಸ್ಯವನ್ನು ಇರಿಸಲಾಗುತ್ತದೆ.
* ಮನಿ ಟ್ರೀ
ಮನಿ ಪ್ಲಾಂಟ್ ನೆಡುವುದನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್ (ಪೊಥೋಸ್) ಮನೆಗೆ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಮನಿ ಪ್ಲಾಂಟ್ ನೈಸರ್ಗಿಕ ಗಾಳಿಯ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತವೆ, ಏಕೆಂದರೆ ಅವು ಗಾಳಿಯಲ್ಲಿನ ವಿಷವನ್ನು ಫಿಲ್ಟರ್ ಮಾಡುತ್ತವೆ.
ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಇಡುವುದು ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಭಾರತೀಯ ಮನೆಗಳಲ್ಲಿ ಈ ಸಸ್ಯವನ್ನು ಅದೃಷ್ಟದ ದೊಡ್ಡ ಸಂಕೇತವಾಗಿ ನೋಡಲಾಗುತ್ತದೆ.
ಹಾಗೆಯೇ ಈ ಸಸ್ಯವನ್ನು ತಂದು ಎಲ್ಲಿ ಬೇಕಾದೂ ಇಡುವಂತಿಲ್ಲ. ವಾಸ್ತು ತಜ್ಞರ ಸಲಹೆ ಮೇಲೆ ಸರಿಯಾದ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ಇರಿಸುವುದರಿಂದ ಅದೃಷ್ಟ ಒಲಿಯುತ್ತದೆ ಎನ್ನಲಾಗಿದೆ. ಭಾರತೀಯ ಸಂಪ್ರದಾಯದಲ್ಲಿ ಬಾಳೆ ಎಲೆ, ಮಾವಿನ ಎಲೆ, ವೀಳ್ಯೆದೆಲೆ ಜೊತೆ ಈ ಸಸ್ಯವನ್ನು ಸಹ ಇಡುವುದಿಂದ ಒಳ್ಳೆಯದಾಗುತ್ತದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ