ತಿರುಪತಿ ವೆಂಕಟೇಶ (Tirupati venkatesha) ಎಂದರೆ ಬೇಡಿದ್ದು ನೀಡುವ ದೇವರು (God) ಎಂದು ಹೆಸರು ಪಡೆದಿದೆ. 7 ಬೆಟ್ಟಗಳ ಮೇಲಿರುವ ಈ ದೇವರನ್ನು ನಂಬಿ ದಿನಕ್ಕೆ ಸಾವಿರಾರು (people) ಜನ ಹೋಗುತ್ತಾರೆ. ಇಷ್ಟಾರ್ಥ ಈಡೇರಿಸುವಂತೆ ಹಾಗೂ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಂಡು ಹರಕೆಯನ್ನು ತೀರಿಸಿ ಬರುತ್ತಾರೆ. ಹಾಗೆಯೇ ಈ ದೇವಾಲಯದಲ್ಲಿ (temple) ದಿನಕ್ಕೆ ಕಡಿಮೆ ಎಂದರೂ 2 ರಿಂದ 3 ಕೋಟಿ ದೇಣಿಗೆ ಬರುತ್ತದೆ. ಹಾಗಾಗಿ ಈ ದೇವಾಲಯವನ್ನು ಸಿರಿವಂತ (Rich) ದೇವಾಲಯ ಎಂದು ಹೇಳಲಾಗುತ್ತದೆ. ಆದರೆ ನಿಮಗೆ ಗೊತ್ತಾ ಇಷ್ಟೆಲ್ಲಾ ಸಂಪತ್ತಿನ ಒಡೆಯ ವೆಂಕಟೇಶ್ವರನ ಸಾಲ (Loan) ಇನ್ನೂ ಸಹ ತೀರಿಲ್ಲವಂತೆ.
ಹೌದು, ಪುರಾಣದ ಕತೆಯ ಪ್ರಕಾರ ವೆಂಕಟೇಶ್ವರ ಸಹ ಸಾಲಗಾರ. ಪದ್ಮ ಪುರಾಣ, ವರಹ ಪುರಾಣ, ಗರುಡ ಪುರಾಣ, ಬ್ರಹ್ಮಂಡ ಪುರಾಣ ಬ್ರಹ್ಮೋತ್ತರ ಪುರಾಣ, ಮಾರ್ಕಂಡೇಯ ಪುರಾಣ, ಸೇರಿದಂತೆ ಅನೇಕ ಪುರಾಣಗಳಲ್ಲಿ ಈ ತಿರುಮಲ ಹಾಗೂ ವೆಂಕಟೇಶ್ವರನ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೇ, ಈ ವೆಂಕಟೇಶ್ವರ ಕಲ್ಲಾದ ಬಗೆ ಸಹ ಇದೆ.
ಇದನ್ನೂ ಓದಿ: ಹೊಸವರ್ಷದಲ್ಲಿ ಈ 5 ರಾಶಿಯವರಿಗೆ ಕಂಕಣ ಭಾಗ್ಯವಂತೆ, ನಿಮ್ಮ ರಾಶಿ ಇದೆಯಾ ನೋಡಿ
ಏನಿದು ಕಥೆ?
ಭಗವಾನ್ ವಿಷ್ಣು ತನ್ನ ಪತ್ನಿಯಾದ ಲಕ್ಷ್ಮಿದೇವಿಯೊಡನೆ ವೈಕುಂಠದಲ್ಲಿದ್ದಾಗ ಅಂದಾಜು ಸುಮಾರು ಐದು ಸಾವಿರ ವರ್ಷಗಳ ಹಿಂದೆ,ಕೋಪಗೊಂಡ ಬೃಗು ಋಷಿಯು ವಿಷ್ಣು ಮಾತನಾಡಿಸಲಿಲ್ಲ ಎಂದು ಲಕ್ಷ್ಮಿ ವಾಸಿಸುವ ವಿಷ್ಣುವಿನ ಎದೆಯ ಮೇಲೆ ಒದೆಯುತ್ತಾರೆ. ಆದರೆ ವಿಷ್ಣು ಏನೂ ಮಾತನಾಡುವುದಿಲ್ಲ. ತಾನೂ ಎದೆಯಲ್ಲಿ ವಾಸಿಸುವುಸು, ಆ ಋಷಿ ಕಾಲಿನಿಂದ ಒದ್ದರೂ ಸಹ ಏನು ಹೇಳದ ವಿಷ್ಣುವಿನ ಮೇಲೆ ಕೋಪಗೊಂಡ ಲಕ್ಷ್ಮೀ ಅವಮಾನವಾಯಿತು ನನಗೆ ಎಂದು ಭೂಮಿಗೆ ಬಂದಿರುತ್ತಾಳೆ.
ಇನ್ನು ಲಕ್ಷ್ಮೀಯನ್ನು ಸಮಾಧಾನಗೊಳಿಸುವ ಸಲುವಾಗಿ ಭೂಮಿಗೆ ಬಂದ ವಿಷ್ಣು, ತಿರುಪತಿಯ ಅರಣ್ಯದಲ್ಲಿ ಬಡ ಮಹಿಳೆಯ ಮಗನಾಗಿ ಜನಿಸುತ್ತಾನೆ. ಹೀಗಿರುವಾಗ ಪರ್ವತಗಳ ರಾಜನ ಮಗಳಾದ ಪದ್ಮಾವತಿಯಾಗಿ ಮರುಜನ್ಮ ಪಡೆದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುತ್ತಾನೆ. ಈ ಜೋಡಿಯ ಮದುವೆಯನ್ನು ಮಾಡುವ ಸಮಯದಲ್ಲಿ ರಾಜಮನೆತನದ ಪದ್ಮಾವತಿಯನ್ನು ಮದುವೆಯಾಗಲು ತಾನು ಅರ್ಹ ಎಂದು ವಿಷ್ಣು ಸಾಬೀತು ಮಾಡಬೇಕಿತ್ತು.
ಕುಬೇರನಿಂದ ಸಾಲ ಪಡೆದ ವೆಂಕಟೇಶ್ವರ
ಇದಕ್ಕೆ ಹಣ ಬೇಕು. ಹಣ ಎಲ್ಲಿಂದ ತರುವುದು ಎಂದು ಯೋಚನೆ ಮಾಡುತ್ತಿರುವಾಗ ಸಂಪತ್ತಿನ ದೇವರಾದ ಕುಬೇರ ಸಾಲ ನೀಡಲು ಒಪ್ಪಿಕೊಂಡ. ಹಾಗಾಗಿ ವೆಂಕಟೇಶ್ವರನಿಗೆ ಕುಬೇರನಿಂದ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಅವನಿಗೆ ಬೇರೆ ದಾರಿ ಇರಲಿಲ್ಲ. ಇಲ್ಲಿಂದ ಶ್ರೀನಿವಾಸ ಹಾಗೂ ಕುಬೇರನ ವ್ಯವಹಾರ ಆರಂಭವಾಗುತ್ತದೆ.
ಕುಬೇರನಿಗೆ ಕಲಿಯುಗದ ಅಂತ್ಯದ ವೇಳೆಗೆ ಈ ಸಾಲವನ್ನು ಮರುಪಾವತಿ ಮಾಡಲಾಗುವುದು ಎಂದು ಶ್ರೀನಿವಾಸ ಭರವಸೆ ನೀಡುತ್ತಾನೆ. ಹಾಗಾಗಿ ಈಗಲೂ ಭಕ್ತರು ನೀಡಿದ ಹಣವನ್ನು ಕುಬೇರನಿಗೆ ಮರುಪಾವತಿ ಮಾಡುತ್ತಿದ್ದಾನೆ ಎನ್ನಲಾಗುತ್ತದೆ. ಇದು ಕಲಿಯುಗದ ಅಂತ್ಯದವರೆಗೂ ಹೀಗೆ ನಡೆಯುತ್ತದೆ.
ಇದನ್ನೂ ಓದಿ: ನಂಬರ್ 8 ನಿಮ್ಮದಾದ್ರೆ, ಈ ಹೊಸ ವರ್ಷ ಹೀಗೆಲ್ಲಾ ಇರಲಿದ್ಯಂತೆ!
ಶ್ರೀನಿವಾಸನ ಬಳಿ ದಿನಕ್ಕೆ ಲಕ್ಷಾಂತರ ಜನರು ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಾರೆ ಹಾಗೂ ದೇವರಿಗೆ ಹಣವನ್ನು ಕಾಣಿಕೆ ಹಾಕುತ್ತಾರೆ ಜೊತೆಗೆ ದಾನವನ್ನು ಸಹ ನೀಡುತ್ತಾರೆ. ಕುಬೇರನ ಸಾಲವನ್ನು ತೀರಿಸಲು ಭಕ್ತಾಧಿಗಳು ಪ್ರಪಂಚಾದ್ಯಂತದಿಂದ ಬಂದು ದಾನ ಮಾಡುತ್ತಾರೆ ಎನ್ನುವ ನಂಬಿಕೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ