ಮನೆಯೆಂಬಲ್ಲಿ ಧನಾತ್ಮಕ (Positive) ಶಕ್ತಿ ಇರುವುದು ಬಹಳ ಮುಖ್ಯ. ಹಾಗೆಯೇ ಧನಾತ್ಮಕ ಆಲೋಚನೆಗಳ ಜೊತೆಗೆ ಕೆಲವೊಂದು ವಸ್ತುಗಳನ್ನು ಇಡುವುದರಿಂದಲೂ ಪಾಸಿಟಿವ್ ಎನರ್ಜಿ ಮನೆಯಲ್ಲಿರುತ್ತೆ ಎಂದು ನಂಬಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ವಸ್ತುಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿಟ್ಟರೆ ಮನೆಗೆ ಒಳ್ಳೆಯದಾಗುತ್ತದೆ. ಸುಖ, ಶಾಂತಿ, ನೆಮ್ಮದಿ ಇರುತ್ತದೆ, ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಆನೆಯ ವಿಗ್ರಹವನ್ನು ಮನೆಯಲ್ಲಿಟ್ಟರೆ ಅದು ಕುಟುಂಬ ಸದಸ್ಯರಿಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದೂ ನಂಬಲಾಗುತ್ತದೆ. ಸಾಂಪ್ರದಾಯಿಕ (Traditional) ಚೈನೀಸ್ ಪದ್ಧತಿ ಫೆಂಗ್ ಶೂಯಿ ಪ್ರಕಾರ ಕೆಲವು ವಸ್ತುಗಳಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ನೀವು ಸರಿಯಾದ ಫೆಂಗ್ ಶೂಯಿ ತತ್ವಗಳನ್ನು ಅನುಸರಿಸಿದಾಗ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳು (Effects) ಗೋಚರಿಸುತ್ತವೆ ಎಂದು ಹೇಳಲಾಗುತ್ತದೆ.
ಫೆಂಗ್ ಶೂಯಿಯಲ್ಲಿ ಉಲ್ಲೇಖಿಸಲಾದ ಈ ವಿಶೇಷ ವಸ್ತುಗಳು ಮನೆಗೆ ಸಂತೋಷ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತವೆ. ಅಂತಹ ಒಂದು ವಸ್ತುವೆಂದರೆ ಫೆಂಗ್ ಶೂಯಿ ಆನೆ ವಿಗ್ರಹ.
ಫೆಂಗ್ ಶೂಯಿಯಲ್ಲಿ ಆನೆ ಪ್ರತಿಮೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದಾಗ್ಯೂ, ಆನೆಯ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಅದು ಯಾವ ಬಣ್ಣದಲ್ಲಿರಬೇಕು ಮುಂತಾದ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಮನೆಯಲ್ಲಿ ಆನೆ ಪ್ರತಿಮೆಗಳಿಡುವುದರಿಂದ ಆಗುವ ಪ್ರಯೋಜನಗಳು
ಫೆಂಗ್ ಶೂಯಿ ಆನೆ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಹಲವಾರು ಪ್ರಯೋಜನಗಳಿವೆ ಎನ್ನಲಾಗುತ್ತದೆ. ಹಾಗಿದ್ರೆ ಅಂಥ ಪ್ರಯೋಜನಗಳೇನು ಅನ್ನೋದನ್ನು ತಿಳಿದುಕೊಳ್ಳೋಣ.
*ಫೆಂಗ್ ಶೂಯಿ ನಂಬಿಕೆಯ ಪ್ರಕಾರ, ಆನೆಯ ವಿಗ್ರಹವನ್ನು ಮನೆಯಲ್ಲಿ ಇರಿಸಿದರೆ ಮನೆಯ ಸದಸ್ಯರು ಧನಾತ್ಮಕ ಶಕ್ತಿಯಿಂದ ಆಶೀರ್ವದಿಸಲ್ಪಡುತ್ತಾರೆ. ಮನೆಯ ಮುಖ್ಯ ಬಾಗಿಲಲ್ಲಿ ಆನೆಯ ವಿಗ್ರಹವನ್ನು ಇಡುವುದು ಫೆಂಗ್ ಶೂಯಿಯಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
*ಫೆಂಗ್ ಶೂಯಿ ಪ್ರಕಾರ, ದಂಪತಿಗಳು ತಮ್ಮ ಮಲಗುವ ಕೋಣೆಯಲ್ಲಿ ಎರಡು ಆನೆಯ ಪ್ರತಿಮೆಗಳನ್ನು ಇಡಬೇಕು. ಹೀಗೆ ಮಾಡುವುದರಿಂದ ದಂಪತಿಗಳಿಗೆ ಶೀಘ್ರದಲ್ಲೇ ಸಂತಾನ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ: ಶನಿ, ಬುಧ ಮತ್ತು ಸೂರ್ಯ ಒಂದೇ ರಾಶಿಯಲ್ಲಿ, ಚೇಂಜ್ ಆಗಲಿದೆ ಈ ರಾಶಿಯವರ ಲಕ್
ಮನೆಯಲ್ಲಿ ಆನೆಯ ವಿಗ್ರಹವನ್ನು ಇಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುತ್ತದೆ. ಆದರೆ ಆನೆ ಸೊಂಡಿಲನ್ನು ಎತ್ತಿರುವಂಥ ವಿಗ್ರಹವನ್ನು ಮನೆಗೆ ತರಬೇಕು.
ಆನೆಯನ್ನು ಇರಿಸುವಾಗ ಈ ನಿಯಮಗಳನ್ನು ಪಾಲಿಸಿ
ಆನೆಯ ವಿಗ್ರಹಗಳನ್ನು ಖರೀದಿಸಿ ಮನೆಯಲ್ಲಿ ಇಡುವುದು ಒಳ್ಳೆಯದು ಎಂದಾದರೂ ಅದನ್ನು ಹೇಗೆ ಬೇಕಾದರೂ ಇಡಬಹುದು ಎಂದು ಅರ್ಥವಲ್ಲ. ಅದನ್ನು ನಿಯಮದ ಪ್ರಕಾರ ಇಡಬೇಕಾಗುತ್ತದೆ.
ಫೆಂಗ್ ಶೂಯಿ ಪ್ರಕಾರ, ಆನೆಯ ಪ್ರತಿಮೆಯನ್ನು ಖರೀದಿಸಿ ಮನೆಯಲ್ಲಿ ಇಡುವ ಮೊದಲು ಕೆಲವು ನಿಯಮಗಳನ್ನು ಅನುಸರಿಸಬೇಕು. ಅಲ್ಲದೇ ಹೋದರೆ ಅವು ನಕಾರಾತ್ಮಕ ಪರಿಣಾಮ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
*ಫೆಂಗ್ ಶೂಯಿ ತಜ್ಞರ ಪ್ರಕಾರ ಕಪ್ಪು ಬಣ್ಣದ ಆನೆಯನ್ನು ಎಂದಿಗೂ ಖರೀದಿಸಬಾರದು, ಏಕೆಂದರೆ ಇದು ಧನಾತ್ಮಕ ಶಕ್ತಿಯನ್ನು ತರುವುದಿಲ್ಲ.
*ಬಿಳಿ ಬಣ್ಣದ ಆನೆಯ ವಿಗ್ರಹವನ್ನು ಯಾವಾಗಲೂ ಮನೆಯೊಳಗೆ ತರಬೇಕು. ಆನೆಯ ವಿಗ್ರಹವನ್ನು ಇರಿಸುವಾಗ, ಅದನ್ನು ಯಾವಾಗಲೂ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
*ನೀವು ಒಂದು ಜೋಡಿ ಫೆಂಗ್ ಶೂಯಿ ಆನೆಗಳನ್ನು ಇರಿಸಿಕೊಳ್ಳಲು ಬಯಸಿದರೆ, ನೀವು ಅವುಗಳ ಮುಖಗಳನ್ನು ಪರಸ್ಪರ ನೋಡುತ್ತಿರುವಂತೆ ಇಡಬೇಕು. ಈ ವಿಗ್ರಹಗಳನ್ನು ಒಂದಕ್ಕೊಂದು ಬೆನ್ನೆಲುಬಾಗಿ ಇಡುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮವನ್ನು ಹೆಚ್ಚಿಸಬಹುದು.
ಇನ್ನು, ಭಾರತೀಯ ಸಂಸ್ಕೃತಿಗಳಲ್ಲಿಯೂ ಆನೆಗಳನ್ನು ಪೂಜಿಸಲಾಗುತ್ತದೆ. ಏಕೆಂದರೆ ಅವುಗಳು ಸಕಾರಾತ್ಮಕತೆ, ಸಮೃದ್ಧಿ ಮತ್ತು ಸಂತೋಷವನ್ನು ಸಂಕೇತಿಸುತ್ತವೆ.
ಆನೆಗಳ ಶಕ್ತಿ ಮತ್ತು ಬುದ್ಧಿವಂತಿಕೆಗಾಗಿ ಸಹ ಅವುಗಳನ್ನು ಪೂಜಿಸುತ್ತಾರೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಮನೆ ಮತ್ತು ಕಛೇರಿಯಲ್ಲಿ ಆನೆಯ ಪ್ರತಿಮೆಯನ್ನು ಇಡುವುದು ತುಂಬಾ ಮಂಗಳಕರವೆಂದು ಭಾವಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ