• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astro Tips: ಹೆಣ್ಣು ಮಕ್ಕಳೇ ಗಮನಿಸಿ, ಈ ರಾಶಿಯ ಪುರುಷರು ತುಂಬಾನೇ ಒಳ್ಳೆಯ ಗಂಡಂದಿರಂತೆ

Astro Tips: ಹೆಣ್ಣು ಮಕ್ಕಳೇ ಗಮನಿಸಿ, ಈ ರಾಶಿಯ ಪುರುಷರು ತುಂಬಾನೇ ಒಳ್ಳೆಯ ಗಂಡಂದಿರಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಂಡ ಅಥವಾ ಹೆಂಡತಿಗೆ ಇರಬೇಕಾದ ಕೆಲವು ಒಳ್ಳೆಯ ಗುಣಗಳು ಎಂದರೆ ತಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುವುದು. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಹುಡುಗರು ಬೆಸ್ಟ್​ ಗಂಡಂದಿರಂತೆ.

  • Share this:

ಈ ಒಳ್ಳೆಯ ಗಂಡ ಮತ್ತು ಒಳ್ಳೆಯ ಹೆಂಡತಿ (Husband-Wife) ಅನ್ನೋ ಮಾತಿನ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ಬದಲಾಗುತ್ತವೆ. ಕೆಲವರಿಗೆ ತನ್ನ ಗಂಡ ಅಥವಾ ಹೆಂಡತಿ ತನ್ನ ಎಲ್ಲಾ ಮಾತುಗಳನ್ನು ಚಾಚು ತಪ್ಪದೆ ಕೇಳಿದರೆ ‘ನನ್ನ ಗಂಡ/ಹೆಂಡತಿ ತುಂಬಾ ಒಳ್ಳೆಯವರು’ ಅಂತ ಹೇಳುತ್ತಿರುತ್ತಾರೆ. ಇನ್ನೂ ಕೆಲವರು ತಮ್ಮ ಗಂಡ/ಹೆಂಡತಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ತುಂಬಾನೇ ಯೋಚಿಸಿ ಮತ್ತು ಕುಟುಂಬದವರೊಡನೆ (Family) ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದಕ್ಕೆ ತುಂಬಾ ಒಳ್ಳೆಯವರು ಅಂತ ಇನ್ನೂ ಕೆಲ ಗಂಡಂದಿರು/ ಹೆಂಡತಿಯರು ಹೇಳುತ್ತಾರೆ.


ಹೀಗೆ ಇವರು ತುಂಬಾ ಒಳ್ಳೆಯವರು ಅಂತ ಹೇಳುವುದಕ್ಕೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ರೀತಿಯಾಗಿರುತ್ತವೆ. ಒಟ್ಟಿನಲ್ಲಿ ಗಂಡ ಅಥವಾ ಹೆಂಡತಿ ತಮ್ಮ ಸಂಗಾತಿಗಳೊಂದಿಗೆ ಸಹಬಾಳ್ವೆಯ ಜೀವನ ನಡೆಸಿದರೆ ಅದಕ್ಕಿಂತ ಖುಷಿ ವಿಚಾರ ಯಾವುದಿದೆ ಹೇಳಿ? ಆದರೂ ಒಳ್ಳೆಯ ಗಂಡ ಅಥವಾ ಹೆಂಡತಿಗೆ ಇರಬೇಕಾದ ಕೆಲವು ಒಳ್ಳೆಯ ಗುಣಗಳು ಎಂದರೆ ತಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಂಡು, ಅವರೊಡನೆ ಹೊಂದಿಕೊಂಡು, ಪರಸ್ಪರರ ಕಷ್ಟಕ್ಕೆ ಜೊತೆ ಇದ್ದು, ಪ್ರೀತಿ ಕೂಡುವವರೆ ನಿಜವಾದ ಗಂಡ ಮತ್ತು ಹೆಂಡತಿ.


ಇಲ್ಲೊಂದಿಷ್ಟು ರಾಶಿ ಚಿಹ್ನೆಗಳಿವೆ, ಈ ರಾಶಿ ಚಿಹ್ನೆಗಳಿಗೆ ಸೇರಿದ ಪುರುಷರು ಸಾಮಾನ್ಯವಾಗಿ ಉತ್ತಮ ಗಂಡಂದಿರಂತೆ ಅಂತ ಹೇಳಲಾಗುತ್ತಿದೆ ನೋಡಿ. ಏಕೆಂದರೆ ಈ ರಾಶಿಯ ಪುರುಷರಲ್ಲಿ ದಯೆ ಮತ್ತು ತಿಳುವಳಿಕೆ ತುಂಬಾನೇ ಇರುತ್ತದೆಯಂತೆ. ಎಲ್ಲಾ ಮಹಿಳೆಯರು ತಮಗೆ ಒಳ್ಳೆಯ ಗಂಡ ಬಾಳ ಸಂಗಾತಿಯಾಗಿ ಕೈ ಹಿಡಿಯಬೇಕು ಅಂತಾನೆ ಸದಾ ಕನಸು ಕಾಣುತ್ತಿರುತ್ತಾರೆ. ಬನ್ನಿ ಹಾಗಾದರೆ ಟ್ಯಾರೋ ಕಾರ್ಡ್ ರೀಡರ್ ಜೀವಿಕಾ ಶರ್ಮಾ ಅವರು ಬರೆದಿರುವಂತೆ ಅತ್ಯುತ್ತಮ ಗಂಡಂದಿರಲ್ಲಿ ಅವರ ರಾಶಿಚಕ್ರ ಚಿಹ್ನೆಗಳ ಪ್ರಕಾರ ಯಾವೆಲ್ಲಾ ಗುಣಗಳು ಇರುತ್ತವೆ ಅಂತ ನೋಡೋಣ.


ಇದನ್ನೂ ಓದಿ: ಶುಕ್ರನ ರಾಶಿಯಲ್ಲಿ ಸೂರ್ಯ ಸಂಚಾರ, ಈ 3 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ


ಮೇಷ ರಾಶಿ


ಮೇಷ ರಾಶಿಯ ಪುರುಷರು ಉತ್ತಮ ಗಂಡಂದಿರು ಎಂದು ಸಾಬೀತು ಪಡಿಸುತ್ತಾರೆ, ಏಕೆಂದರೆ ಅವರು ಮನೆಯ ಉಸ್ತುವಾರಿಯನ್ನು ತುಂಬಾನೇ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಯನ್ನು ನೋಡಿಕೊಳ್ಳುತ್ತಾರೆ. ಅವರು ಕೆಲವೊಮ್ಮೆ ಒರಟು ಅಥವಾ ಆಕ್ರಮಣಕಾರಿ ಎಂದು ತೋರಬಹುದು ಆದರೆ, ಅವರ ಕಠಿಣ ವ್ಯಕ್ತಿತ್ವದ ಹಿಂದೆ ಅವರಿಗೆ ಮೃದುವಾದ ಒಂದು ಹೃದಯ ಮತ್ತು ಮನಸ್ಸು ಇರುತ್ತದೆ.


ಸಾಂದರ್ಭಿಕ ಚಿತ್ರ


ಸಿಂಹ ರಾಶಿ


ಸಿಂಹ ರಾಶಿಯ ಪುರುಷರು ಹೆಚ್ಚಾಗಿ ಯಾವುದರ ಬಗ್ಗೆಯೂ ತಲೆ ಕೆಡೆಸಿಕೊಳ್ಳಲು ಹೋಗುವುದಿಲ್ಲ ಮತ್ತು ತಮ್ಮ ಸಂಗಾತಿಯ ಜೀವನದಲ್ಲಿ ಎಲ್ಲಾ ಸಮಯದಲ್ಲೂ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ. ಅವರು ಎಂದಿಗೂ ತಮ್ಮ ಸಂಗಾತಿಯನ್ನು ಅನುಮಾನಿಸುವುದಿಲ್ಲ ಮತ್ತು ಅವರ ಮೇಲೆ ಗೂಢಚರ್ಯೆ ನಡೆಸುವುದಿಲ್ಲ. ಗಂಡಂದಿರಾಗಿ ಸಿಂಹ ರಾಶಿಯವರು ಯಾವಾಗಲೂ ತಮ್ಮ ಸಂಗಾತಿಗೆ ಅವರದ್ದೇ ಆದ ಖಾಸಗಿತನವನ್ನು ನೀಡುವುದನ್ನು ನಂಬುತ್ತಾರೆ.


ಕನ್ಯಾ ರಾಶಿ


ಕನ್ಯಾ ರಾಶಿಯ ಪುರುಷರು ಯಾವಾಗಲೂ ತಮ್ಮ ವೃತ್ತಿಜೀವನದಲ್ಲಿ ತಮ್ಮ ಸಂಗಾತಿಯನ್ನು ಬೆಂಬಲಿಸುತ್ತಾರೆ. ಕನ್ಯಾ ರಾಶಿಯವರ ಪತ್ನಿ ತನ್ನ ಗುರಿಗಳನ್ನು ಅನುಸರಿಸುವಾಗ ಅಥವಾ ತಮ್ಮ ಆಯ್ಕೆಯ ವೃತ್ತಿ ಜೀವನವನ್ನು ಮುಂದುವರಿಸುವಾಗ ಇವರಿಗೆ ಅಭದ್ರತೆ ಎಂಬುದು ಇವರ ವ್ಯಕ್ತಿತ್ವದಲ್ಲಿ ಎಲ್ಲಿಯೂ ಕಾಣುವುದಿಲ್ಲ.




ಮೀನ ರಾಶಿ


ಮೀನ ರಾಶಿಯ ಪುರುಷರು ಉತ್ತಮ ಗಂಡಂದಿರು ಎಂದು ಸಾಬೀತು ಪಡಿಸುತ್ತಾರೆ, ಏಕೆಂದರೆ ಅವರು ತಮ್ಮ ಸಂಗಾತಿಯ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತಾರೆ ಮತ್ತು ಅವರ ಎಲ್ಲಾ ಅಗತ್ಯತೆಗಳನ್ನು ನೋಡಿಕೊಳ್ಳಲು ಇಷ್ಟಪಡುತ್ತಾರೆ. ಅವರು ಮಕ್ಕಳು ಮತ್ತು ಮನೆಯ ಕರ್ತವ್ಯಗಳೊಂದಿಗೆ ಸಹ ಉತ್ತಮವಾಗಿರುತ್ತಾರೆ. ಅವರು ತಮ್ಮ ಹೆಂಡತಿಯ ಮಾತು ಮತ್ತು ನಿರ್ಧಾರಗಳನ್ನು ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಗೌರವಿಸುತ್ತಾರೆ, ಅದನ್ನು ತಮ್ಮದೇ ಆದ ಆಲೋಚನೆಯೊಂದಿಗೆ ಸಮತೋಲನಗೊಳಿಸುತ್ತಾರೆ.

First published: