Kundali: ಜಾತಕದಲ್ಲಿನ ಈ ಐದು ದೋಷ ಭಾರೀ ಕೆಟ್ಟದು; ಏನಿದಕ್ಕೆ ಪರಿಹಾರ?

ಜಾತಕದ ಈ ಐದು ದೋಷಗಳನ್ನು ಬಹಳ ಕೆಟ್ಟದು ಎಂದು ಪರಿಗಣಿಸಲಾಗುವುದು. ಇವು ಮನುಷ್ಯನ ಕೆಟ್ಟ ಸಮಯಕ್ಕೆ ಕಾರಣವಾತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಜಾತಕ (Kundali) ಬಳ ಮುಖ್ಯ. ವ್ಯಕ್ತಿ ಹುಟ್ಟುದ ಸಮಯ, ಸ್ಥಳ ಮತ್ತು ಹುಟ್ಟಿದ ಸಮಯದಲ್ಲಿನ ಗ್ರಹಗಳ ನಕ್ಷತ್ರಗಳನ್ನು ಲೆಕ್ಕಾ ಹಾಕಿ ಜಾತಕದ ದೋಷ (Jataka Dosha), ಭವಿಷ್ಯವನ್ನು ಹೇಳಲಾಗುವುದು. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಜಾತಕದಲ್ಲಿ ಇರುವ ದೋಷಗಳು ಜೀವನದಲ್ಲಿ ಅನೇಕ ವಿಷಯಗಳನ್ನು ನಿರ್ಧರಿಸುತ್ತವೆ. ಕಠಿಣ ಪರಿಶ್ರಮದ ನಂತರವೂ ಕೆಲಸ ಫಲ ನೀಡದಿದ್ದರೆ ಇದಕ್ಕೆ ಜಾತಕ ದೋಷ ಕೂಡ ಕಾರಣವಾಗಿರುತ್ತದೆ. ಅದರಲ್ಲೂ ಜಾತಕದ ಈ ಐದು ದೋಷಗಳನ್ನು ಬಹಳ ಕೆಟ್ಟದು ಎಂದು ಪರಿಗಣಿಸಲಾಗುವುದು. ಇವು ಮನುಷ್ಯನ ಕೆಟ್ಟ ಸಮಯಕ್ಕೆ ಕಾರಣವಾತ್ತದೆ.

    ಕಾಳ ಸರ್ಪ ದೋಷ: ನಿಮ್ಮ ಜಾತಕದಲ್ಲಿ ಕಾಲ ಸರಪ ದೋಷವಿದ್ದರೆ ಭಯ ಬೇಡ. ಈ ದೋಷದ ಕುರಿತು ಮೊದಲು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಜಾತಕದಲ್ಲಿ ಕಾಳ ಸರ್ಪ ದೋಷ ರಾಹು ಮತ್ತು ಕೇತುವಿನ ಪರಿಣಾಮ ಸಂಭವಿಸುತ್ತದೆ. ಇದರ ಹೊರತಾಗಿ, ಎಲ್ಲಾ ಏಳು ಪ್ರಮುಖ ಗ್ರಹಗಳಾದ ರಾಹು ಮತ್ತು ಕೇತುಗಳು ಗ್ರಹದ ಅಕ್ಷದೊಳಗೆ ಬಂದರೆ ಈ ದೋಷ ಉಂಟಾಗುತ್ತದೆ. ಈ ದೋಷದ ಪರಿಣಾಮವಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ.

    ಕಾಳ ಸರ್ಪದೋಷಕ್ಕೆ ಪರಿಹಾರ
    ಕಾಳ ಸರ್ಪ ದೋಷ ನಿವಾರಣೆ ಪೂಜೆ ಮಾಡಬೇಕು ಮತ್ತು ಗಣೇಶ ಹಾಗೂ ದುರ್ಗೆಯ ಆರಾಧನೆ ಮಾಡಬೇಕು. ರಾಹು ಮತ್ತು ಕೇತು ಶಾಂತಿ ಮಾಡಿಸಬೇಕು, ಹನುಮನ ಚಾಲಿಸ , ದುರ್ಗಾ ಚಾಲಿಸ ಪಠಿಸಬೇಕು.

    ಮಂಗಳ ದೋಷ: ಜಾತಕದಲ್ಲಿನ ಮಂಗಳ ದೋಷವು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದತ್ತದೆ. ಈ ದೋಷದ ಪರಿಣಾಮ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಯಾವಾಗ ಮಂಗಳ ಗ್ರಹ ಜಾತಕದಲ್ಲಿ ಒಂದು, ನಾಲ್ಕು, ಏಳು, ಎಂಟು ಅಥವಾ ಹನ್ನೆರಡನೇ ಮನೆಯಲ್ಲಿ ಇರುತ್ತದೋ ಆಗ ಈ ದೋಷ ಉಂಟಾಗುತ್ತದೆ. ಈ ದೋಷದಿಂದ ಮದುವೆ ವಿಳಂಬ, ವೈವಾಹಿಕ ಜೀವನದಲ್ಲಿ ತಂದರೆ ಉಂಟಾಗಬಹುದು.

    ಮಂಗಳ ದೋಷಕ್ಕೆ ಪರಿಹಾರ
    ಹನುಮಾನ ಚಾಲಿಸ ಪಠಣೆ ಜೊತೆಗೆ ಮಂಗಳ ಗ್ರಹ ದೋಷ ನಿವಾರಣೆ ಪೂಜೆ ನಡೆಸಬೇಕು. ಓಂ ಭೋಮೆ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು. ಮಂಗಳವಾರ ದುರ್ಗಾ ಮಂದಿರದಲ್ಲಿ ದೀಪ ಹಚ್ಚಬೇಕು.

    ಇದನ್ನು ಓದಿ: ಡಿ. 4ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಅಧಿಕ ಪರಿಣಾಮ

    ಕೇಂದ್ರಾಧಿಪತಿ ದೋಷ: ಶುಭ ಗ್ರಹಗಳು ಕೇಂದ್ರದಲ್ಲಿದ್ದಾಗ ಇದನ್ನು ಕೇಂದ್ರಾಧಿಪತಿ ದೋಷ ಎಂದು ಕರೆಯುತ್ತೇವೆ. ಗುರು ಮತ್ತು ಬುಧದಿಂದ ಉಂಟಾಗುವ ಈ ದೋಷವನ್ನು ಹೆಚ್ಚು ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಇದರ ನಂತರ ಶುಕ್ರ ಮತ್ತು ಚಂದ್ರನ ದೋಷಗಳು ಬರುತ್ತವೆ. ಮೇಲಿನ ದೋಷವು ಶುಭ ಗ್ರಹಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ಶನಿ, ಮಂಗಳ ಮತ್ತು ಸೂರ್ಯನಂತಹ ಗ್ರಹಗಳಿಗೆ ಅನ್ವಯಿಸುವುದಿಲ್ಲ. ಈ ದೋಕ್ಷದಿಂದಾಗಿ, ವೃತ್ತಿಗೆ ಸಂಬಂಧಿಸಿದ ಸಮಸ್ಯೆ, ವ್ಯಾಪಾರ, ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗಬಹುದು

    ಕೇಂದ್ರಾಧಿಪತಿ ದೋಷ ನಿವಾರಣೆ
    ಪ್ರತಿದಿನ ಶಿವನ ಪೂಜಿಸಬೇಕು. ದಿನಕ್ಕೆ 21 ಬಾರಿ ಓಂ ನಮೋ ನಾರಾಯಣ ಮಂತ್ರ ಹಾಗೂ 11 ಬಾರಿ ಓಂ ನಮಃ ಶಿವಾಯಃ ಮಂತ್ರ ಜಪಿಸಬೇಕು
    ಪಿತೃದೋಷ: ಪೂರ್ವಜರ ಅತೃಪ್ತಿಯಿಂದಾಗಿ ಜಾತಕದಲ್ಲಿ ಈ ದೋಷ ಉಂಟಾಗುತ್ತದೆ. ಪ್ರತಿ ವರ್ಷ ಬರುವ ಪಿತೃ ಪಕ್ಷದಂದು ಶ್ರದ್ಧಾ ಕಾರ್ಯವನ್ನು ಸರಿಯಾಗಿ ನಡೆಸದಿದ್ದರೆ ಈ ದೋಷ ಉಂಟಾಗುತ್ತದೆ. ಸೂರ್ಯ ಮತ್ತು ರಾಹು ಜೊತೆಯಿಂದಾಗಿಯೂ ಈ ದೋಷ ಉಂಟಾಗುತ್ತದೆ. ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆ.

    ಇದನ್ನು ಓದಿ: 2022ರ ಬಗ್ಗೆ ನಾಸ್ಟ್ರಾಡಾಮಸ್ ಹೇಳಿರುವ ಭಯಾನಕ ಭವಿಷ್ಯವೇನು?

    ಪಿತೃ ದೋಷ ನಿವಾರಣೆ
    ಪ್ರತಿನಿತ್ಯ ಹಸು ಮತ್ತು ಪಕ್ಷಿಗೆ ಆಹಾರ ನೀಡಬೇಕು. ಗಯಾ ಮತ್ತು ಕಾಶಿಗೆ ಹೋಗಿ ಅಗಲಿದೆ ಪಿತೃಗಳಿಗೆ ಪ್ರಾರ್ಥಿಸಬೇಕು. ಪಿತೃ ದೋಷ ನಿವಾರಣಾ ಪೂಜೆ ಮಾಡಬೇಕು

    ಗುರು ಚಂಡಲ್ ದೋಷ: ಜಾತಕದ ಅತ್ಯಂತ ಕೆಟ್ಟದೋಷದಲ್ಲಿ ಒಂದು ಈ ಗುರು ಚಂಡಲ್​ ದೋಷ. ರಾಹು ಶನಿ ಜೊತೆಗಿದ್ದರೆ ಈ ದೋಷ ಎದುರುಗುತ್ತದೆ. ಈ ದೋಷದ ಪರಿಣಾಮ ವ್ಯಕ್ತಿಯೊಬ್ಬ ಜೀರ್ಣಾಂಗ ವ್ಯವಸ್ಥೆ, ಯಕೃತ್ತಿನ ಸಮಸ್ಯೆಗಳು ಮತ್ತು ಗಂಭೀರ ಕಾಯಿಲೆಗಳಿಗೆ ಗುರಿಯಾಗುತ್ತಾನೆ.

    ಗುರು ಚಂಡಲ್ ದೋಷ ನಿವಾರಣೆ:
    ಪ್ರತಿನಿತ್ಯ ಬೆಳಗ್ಗೆ ಸಂಜೆ 108ಬಾರಿ ಗಾಯಿತ್ರಿ ಮಂತ್ರ ಜಪಿಸಬೇಕು. ಗುರುವಾರ ವಿಷ್ಣು ಮತ್ತು ಶನಿಗ್ರಹವನ್ನು ಪೂಜಿಸಬೇಕು. ಗುರುವಾರ ಹಸುವಿಗೆ ಬೇಳೆ ಮತ್ತು ಬೆಲ್ಲವನ್ನು ಅರ್ಪಿಸಬೇಕು. ನಿತ್ಯ ಓಂ ಗುರವೇ ನಮಃ ಹಾಗೂ ಓಂ ರಾಹುವೇ ನಮಃ ಮಂತ್ರ ಜಪಿಸಬೇಕು
    Published by:Seema R
    First published: