ಸೂರ್ಯನು ಪ್ರತಿ ತಿಂಗಳು ತನ್ನ ಸ್ಥಾನವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಯಿಸುತ್ತಾನೆ ಎಂದು ವೈದಿಕ ಜ್ಯೋತಿಷ್ಯ (Vaidika Jyotishya) ಹೇಳುತ್ತದೆ. ಹೀಗೆ ಸೂರ್ಯ ಪಲ್ಲಟವಾಗುವ ಬದಲಾವಣೆಯನ್ನು ಆ ರಾಶಿಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಅಂತೆಯೇ ಸೂರ್ಯನು ಪ್ರಸ್ತುತ ಮಕರ ರಾಶಿಯಿಂದ ಕುಂಭ ರಾಶಿಗೆ (Kumbh Rashi) ಸ್ಥಾನ ಬದಲಾವಣೆ ಮಾಡುತ್ತಿದ್ದಾನೆ. ಈ ಬದಲಾವಣೆಯನ್ನು ಕುಂಭ ಸಂಕ್ರಾತಿ (Kumbh Sankranti) ಎನ್ನಲಾಗುತ್ತದೆ.
ಸುಮಾರು ಒಂದು ತಿಂಗಳ ಕಾಲ ಕುಂಭ ರಾಶಿಯಲ್ಲಿ ಸಂಕ್ರಮಿಸಿದ ನಂತರ ಅದನ್ನು ಕುಂಭ ಸಂಕ್ರಾತಿ ಎಂದು ಕರೆಯುತ್ತಾರೆ. ಹೀಗೆ ಸಂಕ್ರಮಣ ಮಾಡುವ ದಿನದಂದು ಕುಂಭ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಸೂರ್ಯ ದೇವರ ಪೂಜೆ
ಈ ದಿನ ಹಿಂದೂ ಸೌರ ಕ್ಯಾಲೆಂಡರ್‌ನ ಹನ್ನೊಂದನೇ ತಿಂಗಳು ಪ್ರಾರಂಭವಾಗುತ್ತದೆ. ಕುಂಭ ಸಂಕ್ರಾಂತಿಯ ದಿನಾಂಕವು ಸೂರ್ಯನ ಸ್ಥಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಕುಂಭ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಪೂಜಿಸುವುದರಿಂದ ಭಕ್ತರಿಗೆ ದೀರ್ಘಾಯುಷ್ಯ ಮತ್ತು ಇಷ್ಟಾರ್ಥಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ. ಈ ವರ್ಷ ಕುಂಭ ಸಂಕ್ರಾತಿ ಫೆಬ್ರುವರಿ 13ರ ಭಾನುವಾರದಂದು ಬಂದಿದ್ದು, ಆಚರಣೆ ಉತ್ಸವ ಅಂದು ನಡೆಯಲಿದೆ.
ದಿನಾಂಕ ಮತ್ತು ಸಮಯ
ಇದೇ ಫೆಬ್ರವರಿ 13, 2023ರ ಭಾನುವಾರ ಕುಂಭ ಸಂಕ್ರಾಂತಿ ವ್ರತವನ್ನು ಆಚರಿಸಲಾಗುತ್ತದೆ. ಕುಂಭ ಸಂಕ್ರಾಂತಿ ಪೂಜಾ ವಿಧಿಯನ್ನು ಭಕ್ತರೇ ನಡೆಸಬಹುದು. ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಚರಣೆಗಳನ್ನು ಮಾಡಲು ಜ್ಯೋತಿಷಿ ಅಥವಾ ಪುರೋಹಿತರನ್ನು ಸಹ ಕರೆಯಬಹುದು.
ಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.04 ರಿಂದ 9.48 ರವರೆಗೆ
ಮಹಾ ಪುಣ್ಯ ಕಾಲ ಮುಹೂರ್ತ: ಬೆಳಿಗ್ಗೆ 9.24 ರಿಂದ 9.48 ರವರೆಗೆ
ಸಂಕ್ರಾಂತಿ ಮುಹೂರ್ತ: ಬೆಳಗ್ಗೆ 9.48
ಆಚರಣೆಗಳು ಹೀಗಿವೆ
ಹಿಂದೂ ಧರ್ಮದಲ್ಲಿ ಕುಂಭ ಸಂಕ್ರಾಂತಿಗೆ ವಿಶೇಷವಾದ ಆದ್ಯತೆ ಇದೆ. ಕುಂಭ ಸಂಕ್ರಾಂತಿಯ ಸಂದರ್ಭದಲ್ಲಿ, ಭಕ್ತರು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಸ್ನಾನದ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು.
ಅದರ ನಂತರ ದೇವಸ್ಥಾನಕ್ಕೆ ಹೋಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು. ಅದೃಷ್ಟ ಮತ್ತು ಸಮೃದ್ಧಿಗೆ ಸೂರ್ಯ ದೇವನನ್ನು ಭಕ್ತರು ಪ್ರಾರ್ಥಿಸುತ್ತಾರೆ. ಜೊತೆಗೆ ಪವಿತ್ರವಾದ ನದಿ ಸ್ನಾನ ಜನ್ಮ ಪಾಪಗಳನ್ನು ಶುದ್ಧೀಕರಿಸುತ್ತದೆ ಮತ್ತು ಭಕ್ತರಿಗೆ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಕುಂಭ ಸಂಕ್ರಾಂತಿಯ ದಿನದಂದು, ಹಸುಗಳಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ ಮತ್ತು ದಾನ-ಪುಣ್ಯ ಅಥವಾ ದತ್ತಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಭಕ್ತರು ಬ್ರಾಹ್ಮಣ ಪಂಡಿತರು ಮತ್ತು ಬಡವರಿಗೆ ಆಹಾರ, ಬಟ್ಟೆ ಮತ್ತು ಇತರ ಅಗತ್ಯಗಳನ್ನು ನೀಡುತ್ತಾರೆ. ನಿಮ್ಮ ಆಯ್ಕೆಯ ಬಡ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿ ಕೂಡ ದಾನ ಮಾಡಬಹುದು.
ಇದನ್ನೂ ಓದಿ: Remote Control Chariot: ಇದು ಕರ್ನಾಟಕದ ಮೊದಲ ರಿಮೋಟ್ ಕಂಟ್ರೋಲ್ ರಥ! ಭಕ್ತರು ಎಳೆಯಬೇಕಂತಿಲ್ಲ!
ಕುಂಭ ಮೇಳವನ್ನು ಎಲ್ಲಿ ಆಚರಿಸಲಾಗುತ್ತದೆ?
ಕುಂಭ ಮೇಳವನ್ನು ಹರಿದ್ವಾರ (ಉತ್ತರಾಖಂಡ), ನಾಸಿಕ್‌ನಲ್ಲಿ ಗೋದಾವರಿ, ಉಜ್ಜಯಿನಿಯಲ್ಲಿ ಕ್ಷಿಪ್ರ ಮತ್ತು ಸಂಗಮ್ದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ) ಆಚರಿಸಲಾಗುತ್ತದೆ.
ಇತಿಹಾಸ ಹೀಗಿದೆ ನೋಡಿ
ಹಿಂದೂಗಳು ಶತಮಾನಗಳಿಂದಲೂ ಕುಂಭ ಸಂಕ್ರಾಂತಿಯನ್ನು ಆಚರಿಸುತ್ತಾ ಬಂದಿದ್ದಾರೆ. ಇತಿಹಾಸಕಾರರ ಪ್ರಕಾರ, ಮೊದಲ ಕುಂಭಮೇಳ ಮತ್ತು ಕುಂಭ ಸಂಕ್ರಾಂತಿಯು 7 ನೇ ಶತಮಾನದಲ್ಲಿ ರಾಜ ಹರ್ಷವರ್ಧನನ ಆಳ್ವಿಕೆಯಲ್ಲಿ ಆಚರಣೆಗೆ ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Nava Guliga Kola: ಒಂದೇ ಸಲಕ್ಕೆ ಒಂಭತ್ತು ದೈವಗಳ ನರ್ತನ! ಅಬ್ಬರಕ್ಕೆ ಮೈ ರೋಮಾಂಚನ!
ಕುಂಭ ಸಂಕ್ರಾಂತಿಯ ಮಹತ್ವವೇನು?
ಕುಂಭ ಸಂಕ್ರಾಂತಿಯ ದಿನದಂದು, ಅನೇಕ ಭಕ್ತರು ಶಿಪ್ರಾ, ಗೋದಾವರಿ ಮತ್ತು ಯಮುನಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳನ್ನು ಶುದ್ಧೀಕರಿಸುತ್ತಾರೆ. ಈ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಭಕ್ತರು ಸುಖ, ಸೌಭಾಗ್ಯ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ