Kukke Subramanya: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮಕ್ಕೆ ಬಂದರು ವಿಶೇಷ ಅತಿಥಿಗಳು; ಯಾರಿವರು?

ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಇವುಗಳಲ್ಲಿ ಒಂದು. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು, ದೂರದ ಏನಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ  ಮೀನುಗಳು ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವ

  • Share this:
 ಹೆಸರಾಂತ ನಾಗಕ್ಷೇತ್ರ  ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ವಾರ್ಷಿಕ ಷಷ್ಠಿ ಉತ್ಸವ ಆರಂಭಗೊಂಡಿದೆ. ಷಷ್ಠಿ ಮಹೋತ್ಸವದ (Shasti Mahotsva) ಈ ಸಂದರ್ಭದಲ್ಲಿ ದೇಶದೆಲ್ಲೆಡೆಯಿಂದ ಲಕ್ಷಾಂತರ ಸಂಖ್ಯೆಯನ್ನು ಭಕ್ತಾಧಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಹಲವಾರು  ವೈಶಿಷ್ಠ್ಯಗಳನ್ನು ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ವಿಶೇಷ ಅತಿಥಿಗಳೂ ಸುಬ್ರಹ್ಮಣ್ಯದ ಜಾತ್ರೆ ನೋಡಲು ಆಗಮಿಸುತ್ತವೆ. ಹೌದು ಕುಮಾರಧಾರಾ ನದಿಯ (Kumaradhara River) ತುಂಬೆಲ್ಲಾ ಇರುವ  ಮೀನುಗಳು ಜಾತ್ರೆಯ ಈ ಸಮಯದಲ್ಲಿ ಜಾತ್ರೆ  ನೋಡಲು ಬರುವುದು ಇಲ್ಲಿನ ವಿಶಿಷ್ಠತೆಯಾಗಿದೆ. 

ಕುಮಾರಧಾರದಲ್ಲಿ ಮೀನುಗಳ ಕಲರವ 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ದವಾದ ಹಾಗೂ ಅತೀ ಪುರಾತನವಾದ ದೇವಸ್ಥಾನವಾಗಿದೆ. ಆದಿ ಸುಬ್ರಹ್ಮಣ್ಯನೇ ಇಲ್ಲಿನ ಪ್ರಮುಖ ಆರಾಧ್ಯ ದೈವ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಪ್ರತಿವರ್ಷ ಚಂಪಾ ಷಷ್ಠಿಯಂದು ನಡೆಯುವ ಇಲ್ಲಿನ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಇವುಗಳಲ್ಲಿ ಒಂದು.



ಜಾತ್ರೆ ಮುಗಿಯುವವರೆಗೂ ಇಲ್ಲಿ ಮೀನುಗಳದ್ದೇ ಕಾರುಬಾರು

ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು, ದೂರದ ಏನಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ  ಮೀನುಗಳು ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸುತ್ತದೆ. ಜಾತ್ರೆ ಮುಗಿಯುವವರೆಗೂ ಕ್ಷೇತ್ರದ ಕುಮಾರಧಾರ ಸ್ನಾನಘಟ್ಟದ ಬಳಿಯೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಷಷ್ಠಿ ಮಹೋತ್ಸವದ ನಡಾವಳಿಗಳು ಮುಕ್ತಾಯಗೊಂಡ ಬಳಿಕ ತಾವು ಬಂದ ಸ್ಥಳಕ್ಕೆ ಮತ್ತೆ ಹಿಂದಿರುತ್ತವೆ.

ಇದನ್ನು ಓದಿ: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವ, ದೇವರ ಜಳಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಬಳಿಕ ಕ್ಷೇತ್ರದಲ್ಲಿ ಆಚರಣೆಯಲ್ಲಿರುವ ಪುರುಷರಾಯ ದೈವದ ನೇಮೋತ್ಸವವು ನಡೆಯುತ್ತದೆ. ಈ ನೇಮೋತ್ಸವದ ಬಳಿಕ ಸ್ವತಹ ಕುಮಾರಧಾರಾ ಸ್ನಾನಘಟ್ಟದ ಬಳಿ ಬಂದು, ದೇವರ‌ ನೈವೇದ್ಯವನ್ನು   ಹಾಕಿದ ಬಳಿಕ ನೈವೇದ್ಯವನ್ನು ತಿಂದು ಅವುಗಳು ಮರಳಿ ಸ್ವಸ್ಥಾನಕ್ಕೆ ಮರಳುತ್ತದೆ.

ನೈಸರ್ಗಿಕ ಕಾರಣಗಳ ಹೊರತಾಗಿಯೂ ಅಚ್ಚರಿ ಮೂಡಿಸುವ ಮೀನುಗಳು

ಜಾತ್ರೆಯ ಸಂದರ್ಭದಲ್ಲಿ ಮೀನುಗಳಿಂದಲೇ ತುಂಬಿ ತುಳುಕುವ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡುವವರಿಗೆ ಇವುಗಳು ಕಚಗುಳಿ ಇಡುತ್ತವೆ. ಈ  ಮೀನುಗಳನ್ನು ಯಾರೂ ಹಿಡಿಯುವಂತಿಲ್ಲ. ಮೀನುಗಳು ಈ ನಡವಳಿಕೆಗಳಿಗೆ ನೈಸರ್ಗಿಕ ಕಾರಣಗಳಿದ್ದರೂ, ಸುಬ್ರಹ್ಮಣ್ಯದ ಜಾತ್ರೋತ್ಸವದ ಸಂದರ್ಭವೇ ಇವುಗಳು ಇಲ್ಲಿ ಸೇರುತ್ತಿರುವುದರಿಂದ ಇವುಗಳು ಭಕ್ತರಿಗೆ ಕುತೂಹಲದ ಕೇಂದ್ರ ಬಿಂದುವಾಗಿದೆ.

ಇದನ್ನು ಓದಿ: ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ, ಸಮೃದ್ದಿ ಹೆಚ್ಚತ್ತೆ

ಕುಮಾರಧಾರಾ ಸ್ನಾನ ಘಟ್ಟದಲ್ಲಿ ಹೇರಳ ಸಂಖ್ಯೆಯಲ್ಲಿ ಕಂಡುಬರುವ ಈ ಮೀನುಗಳಿಗೆ ನದಿಯಲ್ಲಿ ತೀರ್ಥಸ್ನಾನ ಮಾಡುವ ಭಕ್ತರು ಮಂಡಕ್ಕಿ ಹಾಕಿ ಖುಷಿ ಪಡುತ್ತಾರೆ. ಜಾತ್ರೆಯ ಸಮಯದಲ್ಲಿ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಹರಿದುಬರುವ ಹಿನ್ನಲೆಯಲ್ಲಿ ತಮಗೂ ತಿನ್ನಲು ಅಹಾರ ಸಿಗುತ್ತವೆ ಎನ್ನುವುದನ್ನು ಅರಿತಿರುವ ಈ ಮೀನುಗಳು ಜಾತ್ರೆಯ ದಿನಗಳಂದೇ ಹೇಗೆ ಸ್ನಾನಘಟ್ಟದ ಬಳಿ ಸೇರುತ್ತದೆ ಎನ್ನುವುದು ಹಲವರ ಆಶ್ಚರ್ಯಕ್ಕೂ ಕಾರಣವಾಗಿದೆ.
Published by:Seema R
First published: