Koppal: ಸೂರ್ಯೋದಯಕ್ಕೆ ಮುನ್ನ ಚಂದಿರನ ಬೆಳಕಿನಲ್ಲಿ ನಡೆದ ಗವಿಸಿದ್ದೇಶ್ವರ ಜಾತ್ರೆ

ದಕ್ಷಿಣ ಭಾರತ ಮಹಾಕುಂಭಮೇಳ ಎಂಬ ಖ್ಯಾತಿಯ ಗವಿಮಠದ ಜಾತ್ರೆ ಕೊರೊನಾ ಕಾರಣಕ್ಕಾಗಿ ಈ ಬಾರಿ ಬ್ರಾಹ್ಮೀ ಮುಹೂರ್ತದಲ್ಲಿ ನಡೆದಿದೆ.

ಗವಿಮಠದ ಜಾತ್ರೆ

ಗವಿಮಠದ ಜಾತ್ರೆ

  • Share this:
ಇದೇ ಪ್ರಥಮ ಬಾರಿ ಕೊಪ್ಪಳದ ಗವಿಮಠ ಜಾತ್ರೆಯು ಬ್ರಾಹ್ಮಿ ಮೂಹರ್ತದಲ್ಲಿ ನಡೆದಿದೆ, ಇಂದು ಬೆಳಗಿನ ಜಾವ 4.30 ಕ್ಕೆ ಗವಿಸಿದ್ದೇಶ್ವರ (Gavi Siddeshwara) ಮಹಾರಥೋತ್ಸವವು ಜರುಗಿತು, ಸಾಮಾನ್ಯವಾಗಿ ಸೂರ್ಯಾಸ್ತ ಸಮಯಕ್ಕೆ ನಡೆಯುತ್ತಿದ್ದ ರಥೋತ್ಸವವು ಈ ಬಾರಿ ಸೂರ್ಯೋದಯ (Before Sun Raise) ಮುನ್ನ ಅದು ಸುಂದರ ಚಂದಿರ ಬೆಳಕಿನಲ್ಲಿ ನಡೆದಿದೆ. ಕೊರೊನಾ ಹಿನ್ನೆಲೆ ಜಿಲ್ಲಾಡಳಿತ ನಿರ್ಬಂಧ ಹಾಗೂ ಜನರು ಬಹಳಷ್ಟು ಜನರು ಭಾಗವಹಿಸಬಾರದು ಎಂಬ ಕಾರಣಕ್ಕೆ ಬೆಳಗಿನ ಜಾವ ರಥೋತ್ಸವ ಸರಳವಾಗಿ ನಡೆಯಿತು. ದಕ್ಷಿಣ ಭಾರತ ಮಹಾಕುಂಭಮೇಳ ಎಂಬ ಖ್ಯಾತಿ ಹೊಂದಿರುವ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರೆಯು ಬನದ ಹುಣ್ಣಿಮೆಯಾದ 2 ದಿನಕ್ಕೆ ಸಂಜೆ 5.30 ಕ್ಕೆ ನಡೆಯುತ್ತಿತ್ತು, ಈ ಸಂದರ್ಭದಲ್ಲಿ ಸರಿಸುಮಾರು 6. ಲಕ್ಷ ಜನ ಸ್ತೋಮ ಸೇರುತ್ತಿತ್ತು, ಆದರೆ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಮುಂಜಾನೆ 8 ಗಂಟೆಗೆ ನಡೆದಿತ್ತು. ಆದರೆ ಈ ಬಾರಿ ರಥೋತ್ಸವದ ಸಮಯವನ್ನು ಮಠದಿಂದ‌ ಅಧಿಕೃತ ವಾಗಿ ತಿಳಿಸಿರಲಿಲ್ಲ.

ಬ್ರಾಹ್ಮೀ ಮಹೋತ್ಸವದಲ್ಲಿ ನಡೆದ ರಥೋತ್ಸವ

ಬೆಳಕು ಹರಿಯುವ ಮುನ್ನವೇ ರಥೋತ್ಸವ ಜರುಗಿತು, ಈ ಮಧ್ಯೆ ಈ ಸಮಯಕ್ಕೂ ಸಾವಿರಾರು ಜನ ಭಕ್ತರು ಸೇರಿದ್ದರು.ಕೆಲವೇ ಜನ ಸೇರಿ ರಥವನ್ನು ಎಳೆದರು, ಜನರು ಜೈಕಾರ ಮಧ್ಯೆ ರಥವು ಜರುಗಿತು.  ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಪೂಜೆಯೊಂದಿಗೆ ರಥ ಆರಂಭವಾಗಿ ಅರ್ಧಗಂಟೆಯಲ್ಲಿ ಮುಗಿಯಿತು. ಶ್ರೀಗವಿಸಿದ್ದೇಶ್ವರ ರಥೋತ್ಸವದ ನಂತರ ಜನರು ಶ್ರೀ ಗವಿಸಿದ್ದೇಶ್ವರ ಕರ್ತೃ ಗದ್ದುಗೆ ದರ್ಶನ ಪಡೆದರು, ಹಲವರು ಮುಂಜಾನೆಯಿಂದ ದೇವರಿಗೆ ದೀಡ ನಮಸ್ಕಾರ ಹಾಕಿದರು. ಜಾತ್ರೆ ನಡೆಯುತ್ತೊ ಇಲ್ಲವೊ ಎಂಬ ಭಕ್ತರಲ್ಲಿತ್ತು, ಬೆಳಗ್ಗೆಯಾದರೂ ರಥೋತ್ಸವ ನಡೆಯಿತ್ತಲೆ, ಶ್ರೀಸ್ವಾಮಿಗಳ ಅಪ್ಪಣೆಯಂತೆ ರಥೋತ್ಸವ ಮಾಡಲಾಗಿದೆ, ಜನರಿಗೆ ಒಳ್ಳೆಯದಾಗಲಿ ಎಂದು ಆಶಿಸಿದರು.



ಸಾಮಾಜಿಕ ಅಂತರ ಮರೆತ ಭಕ್ತರು

ಬೆಳಗಿನ ಜಾವ ರಥೋತ್ಸವಕ್ಕೆ ಹಾಗೀ ದೇವರ ದರ್ಶನಕ್ಕೆ  ಆಗಮಿಸಿದ ಭಕ್ತರು ಮಾಸ್ಕ್ ಹಾಗೂ  ಸಾಮಾಜಿಕ ಅಂತರವಿರಲ್ಲ, ಎಲ್ಲರಿಗೂ ಕೊವಿಡ್ ಮರೆತು ರಥೋತ್ಸವದಲ್ಲಿ ಭಾಗಿಯಾಗಿದ್ದರು.ಕೊರೊನಾ ಕಾರಣಕ್ಕಾಗಿ ಈ ಬಾರಿ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಸೂರ್ಯೋದಯದ ಮೊದಲೇ ಮಹಾರಥೋತ್ಸವ ಜರುಗಿದೆ. ಇನ್ನೂ ಶ್ರೀಗವಿಸಿದ್ದೇಶ್ವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಮಹಾದಾಸೋಹವನ್ನು ವ್ಯವಸ್ಥೆ ಇದೆ, ಇಲ್ಲಿ ಸಾಕಷ್ಟು ಜನರು ದಾಸೋಹದಲ್ಲಿ ಭೋಜನ ಸವಿದರು.



ಸರಳವಾಗಿ ನಡೆದ ಜಾತ್ರೆ

ಪ್ರತಿ ವರ್ಷದಷ್ಟು ಇರುವಷ್ಟು ಸಂಭ್ರಮ ಈ ವರ್ಷವಿಲ್ಲ ಎಂಬ ಭಾವನೆ ಜನರಲ್ಲಿದೆ, ತ್ರೀವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಮಠವು ಈ ಭಾಗದಲ್ಲಿ ಗವಿಮಠ ಎಂಬ ಖ್ಯಾತಿ ಹೊಂದಿದೆ, ಪ್ರತಿ ವರ್ಷ ಬನದ ಹುಣ್ಣಿಮೆಯಾದ 2 ದಿನಗಳ ನಂತರ ನಡೆಯುವ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಬರುತ್ತಿದ್ದಾರೆ, ಈ ಮಧ್ಯೆ ಕೊರೊನಾ ಕಾರಣಕ್ಕಾಗಿ ಈ ಭಾರಿ ಧಾರ್ಮಿಕ ಹೊರತುಪಡಿಸಿ ಉಳಿದ ಕಾರ್ಯಕ್ರಮಗಳಿಗೆ ನಿರ್ಬಂಧವಿದೆ.  ಈ ಕುರಿತು ಗವಿಮಠದಿಂದಲೂ ಪ್ರಕಟಣೆ ಹೊರಡಿಸಿದೆ, ಈ ಮಧ್ಯೆ ಕೊರೊನಾಕ್ಕಾಗಿ ಸಾಕಷ್ಟು ನಿರ್ಬಂಧ ಹಾಕಿದ್ದರೂ ಶ್ರೀಗವಿಸಿದ್ದೇಶ್ವರ ದರ್ಶನಕ್ಕೆ ಅವಕಾಶವಿದೆ, ಸಾಮಾನ್ಯವಾಗಿ ಪ್ರತಿ ವರ್ಷ 15 ದಿನ ಭರ್ಜರಿಯಾಗಿ ನಡೆಯುತ್ತಿದ್ದ ಜಾತ್ರೆಯಲ್ಲಿ ಸಾಕಷ್ಟು ಅಂಗಡಿಗಳು ಇರುತ್ತಿದ್ದವು, ಆದರೆ ಈ ಬಾರಿ ಅಂಗಡಿಗಳಿಗೆ ಅವಕಾಶವಿಲ್ಲ. ತೀರಾ ಸರಳವಾಗಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಇದನ್ನು ಓದಿ: ಮನೆ ಬದಲಾಯಿಸಲಿರುವ ಶನಿ; ಇನ್ನು 33 ದಿನ ಈ ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಈ ಮಧ್ಯೆ ಗವಿಮಠದ ಜಾತ್ರೆಯ ಸಂದರ್ಭದಲ್ಲಿ 15 ದಿನ ಮಹಾ ದಾಸೋಹ ನಡೆಯುತ್ತಿದೆ, ಈ ಸಂದರ್ಭದಲ್ಲಿ 20 ಲಕ್ಷಕ್ಕೂ ಅಧಿಕ ರೊಟ್ಟಿ, ಕ್ವಿಂಟಾಲ್ ಗಟ್ಟಲೆ ಮಾದಲಿ, ಬೂಂದಿ, ತುಪ್ಪ, ಸಾವಿರಾರು ಲೀಟರ್ ಹಾಲು ಹೀಗೆ ಹಲವಾರು ಸಿಹಿ, ಖಾರದ ಊಟ ತಿಂಡಿಯ ವಸ್ತುಗಳು ಬರುತ್ತಿದ್ದವು, ದಾಸೋಹದಲ್ಲಿ ಕನಿಷ್ಠವೆಂದರೂ 20 ಲಕ್ಷ ಜನರು ಪಾಲ್ಗೋಳ್ಳುತ್ತಿದ್ದರು, ಆದರೆ ಈ ಬಾರಿ ದಾಸೋಹಕ್ಕೆ ಯಾರು ರೊಟ್ಟಿ ಸೇರಿದಂತೆ ವಿವಿಧ ದವಸ ಧಾನ್ಯ ನೀಡಬಾರದು ಎಂದು ಸೂಚಿಸಿದ್ದರಿಂದ ಯಾರು ದವಸ ಧಾನ್ಯ ನೀಡಿಲ್ಲ, ಆದರೂ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ದಾಸೋಹ ವ್ಯವಸ್ಥೆಯಲ್ಲಿ ಮಾಡಲಾಗಿದೆ.
Published by:Seema R
First published: