ನೂರಾರು ವರ್ಷಗಳಿಂದ ಈ ಊರಲ್ಲಿ Sankranti ಸಂಭ್ರಮವಿಲ್ಲ; ದುರ್ಘಟನೆಯಿಂದ ಇನ್ನೂ ಹೊರಬಾರದ ಗ್ರಾಮಸ್ಥರು

ಇಡೀ ಊರಿಗೆ ಊರೇ ಈ ರೀತಿ ಆಚರಣೆಯಿಂದ ದೂರ ಉಳಿದಿರುವುದಕ್ಕೆ ಕಾರಣ ಇಲ್ಲಿ ನಡೆದ ಪ್ರಮುಖ ಘಟನೆ.  ಗ್ರಾಮದಲ್ಲಿ ಈ ಹಿಂದೆ ನಡೆದಿರುವ ದುರ್ಘಟನೆಯಿಂದ ಜನರು ಇನ್ನೂ ಹೊರಬಂದಿಲ್ಲ

ಅರಾಬಿಕೊತ್ತನೂರು ಗ್ರಾಮ

ಅರಾಬಿಕೊತ್ತನೂರು ಗ್ರಾಮ

  • Share this:
 ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು(Makar Sankrati)  ದೇಶದೆಲ್ಲೆಡೆ ವಿವಿಧ ಹೆಸರುಗಳಿಂದ ಆಚರಣೆ ಮಾಡಲಾಗುತ್ತದೆ. ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಉತ್ತರಾಯಣ ಪುಣ್ಯಕಾಲದಂದು ಸೂರ್ಯನಿಗೆ ವಿಶೇಷ ಪೂಜೆ ಅರ್ಪಿಸಿ, ದಾನ ನೀಡುವ ಪ್ರತೀತಿ ಇದೆ. ಗ್ರಾಮೀಣ ಸೊಗಡಿನ ಈ ಹಬ್ಬ ರೈತಾಪಿ ವರ್ಗಕ್ಕೆ ಇನ್ನುಷ್ಟು ಮಹತ್ವದಿಂದ ಕೂಡಿದೆ. ಇಂದಿಗೂ ಕೂಡ ರೈತರು ತಾವು ಬೆಳೆದ ಬೆಳೆಗೆ ಭೂ ತಾಯಿ, ಹಸುಗಳಿಗೆ ಈ ದಿನ ವಿಶೇಷ ನಮನ ಸಲ್ಲಿಸುತ್ತಾರೆ. ಇಂದಿಗೂ ಅನೇಕ ಕಡೆ ಈ ಹಬ್ಬವನ್ನು ಶಾಸ್ತ್ರೋಕ್ತವಾಗಿ ಕಿಚ್ಚು ಹಾಯಿಸುವ ಮೂಲಕ ಆಚರಿಸುವುದನ್ನು ಕಾಣಬಹುದಾಗಿದೆ. 

ಆದರೆ ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ಮಾತ್ರ ರೈತರ ಪಾಲಿನ ಹರ್ಷವಾದ ಈ ಹಬ್ಬವಬ್ಬಯ ನೂರಾರು ವರ್ಷಗಳಿಂದ ಸಂಕ್ರಾಂತಿ  ಹಬ್ಬವನ್ನು ಆಚರಿಸುತ್ತಿಲ್ಲ, ಸಂಕ್ರಾಂತಿ ಹಬ್ಬ ಎಂದರೆ ಈ ಗ್ರಾಮದವರಿಗೆ ಸಂಭ್ರಮವಿಲ್ಲ. ರಾಸುಗಳಿಗೆ ಸಂತಸವಿಲ್ಲ. ಇಡೀ ಗ್ರಾಮಕ್ಕೆ ಗ್ರಾಮವೇ ಈ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸದಂತೆ ಎಂದಿನಂತೆ ದಿನ ಕಳೆಯುತ್ತಾರೆ.

ಹಬ್ಬದ ಸಂಭ್ರಮವೇ ಇಲ್ಲ ಈ ಊರಲ್ಲಿ

ಹಲವು ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ಸಂಕ್ರಾಂತಿ ಹಬ್ಬಕ್ಕೆ ಪೂರ್ಣ ವಿರಾಮ ಹಾಡಿದ್ದಾರೆ. ಒಂದು ಮನೆ ಆದರೆ ಸರಿ. ಇಡೀ ಊರಿಗೆ ಊರೇ ಈ ರೀತಿ ಆಚರಣೆಯಿಂದ ದೂರ ಉಳಿದಿರುವುದಕ್ಕೆ ಕಾರಣ ಇಲ್ಲಿ ನಡೆದ ಪ್ರಮುಖ ಘಟನೆ.  ಗ್ರಾಮದಲ್ಲಿ ಈ ಹಿಂದೆ ನಡೆದಿರುವ ದುರ್ಘಟನೆಯಿಂದ ಜನರು ಇನ್ನೂ ಹೊರಬಂದಿಲ್ಲ. ಇದೇ ಕಾರಣಕ್ಕೆ   ತಲೆ ತಲಾಂತರಗಳಿಂದ ಸಂಕ್ರಾಂತಿ ಹಬ್ಬ ಬಂದಿತೆಂದರೆ ಗ್ರಾಮದಲ್ಲಿ ಸೂತಕದ ಛಾಯೆ ಮೂಡುತ್ತದೆ

ದುರ್ಘಟನೆಯಿಂದ ಇನ್ನೂ ಹೊರಬಾರದ ಗ್ರಾಮಸ್ಥರು

ಗ್ರಾಮದ ಹಿರಿಯರು ಹೇಳುವ ಪ್ರಕಾರ ಹಲವು ವರ್ಷಗಳ ಹಿಂದೆ  ಈ ಗ್ರಾಮದಲ್ಲೂ ಸಂಕ್ರಾಂತಿಯನ್ನು ಬಲು ಹರ್ಷದಿಂದ ಊರವರೆಲ್ಲಾ ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದರಂತೆ. ಸಂಕ್ರಾಂತಿ ಹಬ್ಬದ ವೇಳೆ  ರಾಸುಗಳಿಗೆ ಕಿಚ್ಚಾಯಿಸುವ ವೇಳೆ ಹಸುಗಳು, ಎತ್ತುಗಳಿಗೆ ಗಾಯಗಳಾಗಿ ಅವು ಭಯಗೊಂಡ ಗ್ರಾಮ ತೊರೆದು ಓಡಿ ಹೋದವಂತೆ. ಗ್ರಾಮದಲ್ಲಿ ಉಳಿದುಕೊಂಡ  ಕೆಲ ಹಸುಗಳಿಗೆ ಸಾಂಕ್ರಾಮಿಕ ಖಾಯಿಲೆಗಳು ಬಂದು ಸಾವನ್ನಪ್ಪಿದವಂತೆ. ಈ ಘಟನೆ ಗ್ರಾಮಸ್ಥರಿಗೆ ಭಾರೀ ಆಘಾತ ಮೂಡಿಸಿದಂತೆ. ಹಬ್ಬದ ಸಮಯದಲ್ಲಿ ತಮ್ಮ ಹಸುಗಳು ಹೀಗಾದವಲ್ಲ ಎಂಬ ಆತಂಕದಿಂದ ಈ ಗ್ರಾಮಸ್ಥರು ಹಬ್ಬ ಆಚರಿಸುವುದನ್ನೇ ಕೈ ಬಿಟ್ಟರಂತೆ

ಇದನ್ನು ಓದಿ: ಗೋವಿಂದ ನಾಮಸ್ಮರಣೆಯ ಅರ್ಥ ಗೊತ್ತಾ? ಗೋವಿಂದಾ.. ಗೋವಿಂದ.. ಅನ್ನೋ ಮುನ್ನ ಈ ಕಥೆ ಕೇಳಿ

ಬಸವಜಯಂತಿಯಂದು ಗೋವುಗಳಿಗೆ ಪೂಜೆ

ಇದೇ ಕಾರಣಕ್ಕೆ ಈ ದಿನ ಈ ಗ್ರಾಮದಲ್ಲಿ ಹಬ್ಬದ ದಿನದಂದು ಹಬ್ಬದ ವಾತಾವರಣವೇ ಕಾಣಸಿಗುವುದಿಲ್ಲ, ರಾಸುಗಳಿಗೆ ಪೂಜೆ ಮಾಡದಿರುವುದು, ತೋರಣ ಕಟ್ಟದಿರುವುದು, ರಂಗೋಲಿ ಹಾಕದಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತದೆ, ಈ ಕುರಿತು ಮಾತನಾಡಿರುವ ಗ್ರಾಮದ ಹಿರಿಯರಾದ ನಂಜುಂಡಗೌಡ ಅವರು,  ಹಿರಿಯರ ಮಾತಿನಂತೆ ನಾವು ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡುತ್ತಿಲ್ಲ, ಗ್ರಾಮದ ಜನರು ಹಬ್ಬದ ಆಚರಣೆಯನ್ನು ಮಾಡುತ್ತಿಲ್ಲ ಆದರೆ ಬಸವ ಜಯಂತಿಯ ದಿನ ಗೋ ಪೂಜೆಯನ್ನ ಮಾಡುತ್ತೇವೆ ಎಂದರು

ಇದನ್ನು ಓದಿ: ನಿಮ್ಮ ದಾಂಪತ್ಯ ಜೀವನದ ಮಧುರತೆ ಹೆಚ್ಚಿಸಬೇಕಾ; ಈ 10 ವಾಸ್ತು ತಪ್ಪದೇ ಪಾಲಿಸಿ

ಸಂಕ್ರಾಂತಿ ‌ಹಬ್ಬದ ಅಂಗವಾಗಿ ರಾಸುಗಳಿಗೆ ಪೂಜೆ ಮಾಡಿ, ಹಬ್ಬ ಆಚರಿಸಿದರೆ, ಹಸು ದನ ಕರುಗಳಿಗೆ ಕೆಡಕಾಗಬಹುದು ಎಂಬ ಆತಂಕ ಇಲ್ಲಿನ ಜನರನ್ನ ಬಿಟ್ಟು ಬಿಡದಂತೆ ಇನ್ನೂ  ಕಾಡುತ್ತಿದೆ, ಆದರೆ ಸಂಕ್ರಾಂತಿ ಸಂಭ್ರಮದಿಂದ ದೂರ ಉಳಿಯುವ ಜನರು ಅಕ್ಷಯ ಚತುರ್ಥಿಗೆ ಬರುವ ಬಸವ ಜಯಂತಿಯನ್ನ  ಅದ್ದೂರಿಯಾಗಿ ಆಚರಿಸುತ್ತಾರೆ, ಅಂದು ದೇವರುಗಳ ಉತ್ಸವ, ರಾಸುಗಳನ್ನ ಸಿಂಗರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುವುದನ್ನ ರೂಡಿಸಿಕೊಂಡಿದ್ದಾರೆ. ಹಬ್ಬದ ಆಚರಣೆಯಿಂದ ದೂರವಿರುವ ಈ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸೋಮನಾಥೇಶ್ವರ ದೇಗುಲವಿದೆ ಬೇಡಿದ್ದನ್ನ ಕರುಣಿಸುವ ಪರಮಾತ್ಮನೆಂದು ಹೆಸರುವಾಸಿಯಾಗಿದೆ, ಇದೇ ಗ್ರಾಮದಲ್ಲಿ 15 ಕ್ಕೂ ಹೆಚ್ಚು ದೇಗುಲಗಳು ಇದ್ದು ಎಲ್ಲಾ ದೇಗುಲಗಳಲ್ಲು ಪೂಜಾ ಪುನಸ್ಕಾರಗಳು ಯಾವುದೇ ಅಡ್ಡಿಯಿಲ್ಲದೇ ನೆರವೇರುತ್ತಿದೆ.
Published by:Seema R
First published: