Kartik Purnima 2021: ತ್ರಿಪುರಾರಿಯಾಗಿ ಶಿವ ತಾರಕಾಸುರನ ಮಕ್ಕಳನ್ನು ವಧೆ ಮಾಡಿದ್ದು ಇದೇ ಕಾರ್ತಿಕ ಪೌರ್ಣಿಮೆಯಂದು

ಈ ದಿನವನ್ನು ತ್ರಿಪುರಿ ಪೂರ್ಣಿಮೆ ಎಂದು ಕೂಡ ಕರೆಯಲಾಗುತ್ತದೆ. ಶಿವನು ತಾರಕಸುರನ ಮೂವರು ಮಕ್ಕಳನ್ನು ಈ ಕಾರ್ತಿಕ ಪೂರ್ಣಿಮೆಯ ದಿನ ವಧೆ ಮಾಡಿದ ಕಾರಣ ಈ ರೀತಿ ಹೆಸರು ಬಂದಿದೆ.

ಶಿವ

ಶಿವ

 • Share this:
  ಕಾರ್ತಿಕ ಮಾಸದ ಪೌರ್ಣಿಮೆಗೆ (Kartik Purnima )ಹಿಂದೂ ಧರ್ಮದಲ್ಲಿ ವಿಶೇಷ ಮಾನ್ಯತೆ ಇದೆ. ಈ ಬಾರಿ ನವೆಂಬರ್​ 19 ರಂದು ಈ ಶುಭ ದಿನ ಬಂದಿದೆ.  ಈ ಕಾರ್ತಿಕ ಪೂರ್ಣಿಮೆಯನ್ನು ದೇವ್ ದೀಪಾವಳಿ (Dev Diwali) ಎಂದೂ ಕರೆಯುತ್ತಾರೆ. ಈ ದಿನ ಗಂಗಾ ಸ್ನಾನ ಅಥವಾ ಯಾವುದೇ ಪುಣ್ಯ ನದಿಯಲ್ಲಿ ಸ್ನಾನ ಮಾಡಬೇಕು ಎಂಬ ಪ್ರತೀತಿ ಇದೆ . ಈ ದಿನವನ್ನು ತ್ರಿಪುರಿ ಪೂರ್ಣಿಮೆ ಎಂದು ಕೂಡ ಕರೆಯಲಾಗುತ್ತದೆ. ಶಿವನು ತಾರಕಸುರನ ಮೂವರು ಮಕ್ಕಳನ್ನು ಈ ಕಾರ್ತಿಕ ಪೂರ್ಣಿಮೆಯ ದಿನ ವಧೆ ಮಾಡಿದ ಕಾರಣ ಈ ರೀತಿ ಹೆಸರು ಬಂದಿದೆ. ತಾರಕಸುರನ ಮಕ್ಕಳ ವಧೆಯ ಪೌರಣಿಕ ಕಥೆ ಇಲ್ಲಿದೆ

  ತಾರಕಾಸುರನ ವಧೆ

  ಪುರಾಣದ ಪ್ರಕಾರ ತಾರಕಾಸುರನೆಂಬ ರಾಕ್ಷಸನಿದ್ದ. ಅವರಿಗೆ ಮೂವರು ಗಂಡು ಮಕ್ಕಳಿದ್ದರು - ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ. ಶಿವನ ಹಿರಿಯ ಮಗ ಕಾರ್ತಿಕ(ಸುಬ್ರಹ್ಮಣ್ಯ) ತಾರಕಾಸುರನನ್ನು ಕೊಂದ. ತಂದೆಯ ಹತ್ಯೆಯ ಸುದ್ದಿ ಕೇಳಿ ಮೂವರು ಪುತ್ರರು ತುಂಬಾ ದುಃಖಿತರಾಗಿದ್ದರು. ಮೂವರೂ ಒಟ್ಟಾಗಿ ಬ್ರಹ್ಮನಿಂದ ವರ ಪಡೆಯಲು ಕಠಿಣ ತಪಸ್ಸು ಮಾಡಿದರು. ಬ್ರಹ್ಮ ಅವರ ತಪಸ್ಸಿಗೆ ಮೆಚ್ಚಿ ವರ ನೀಡಲು ಮುಂದಾದ. ಈ ವೇಳೆ ಮೂವರೂ ಅಮರರಾಗುವ ವರವನ್ನು ಕೇಳಿದರು, ಆದರೆ ಬ್ರಹ್ಮ ಇದನ್ನು ಹೊರತುಪಡಿಸಿ ಬೇರೆ ಯಾವುದಾದರೂ ವರವನ್ನು ಕೇಳುವಂತೆ ತಿಳಿಸಿದ.

  ತಾರಕಾಸುರನ ಮೂವರು ಮಕ್ಕಳಿಗೆ ವರ ನೀಡಿದ ಬ್ರಹ್ಮ
  ಬಳಿಕ ಈ ಮೂವರೂ ಆಲೋಚಿಸಿ ವರ ಕೇಳಿದರು. ಇದರ ಅನುಸಾರ ಮೂರು ನಗರಗಳ ವರವನ್ನು ಕೇಳಿದರು. ಈ ರೀತಿಯ ಮೂರು ನಗರಗಳನ್ನು ನಮಗಾಗಿ ನಿರ್ಮಿಸಿ, ಇದರಲ್ಲಿ ನಾವು ಮೂವರೂ ಪ್ರತ್ಯೇಕವಾಗಿ ಕುಳಿತು ಇಡೀ ಭೂಮಿಯನ್ನು ಆಕಾಶ ಮಾರ್ಗದ ಮೂಲಕ ಒಂದು ಸಾವಿರ ವರ್ಷಗಳವರೆಗೆ ಪ್ರಯಾಣಿಸುವಂತಿರಬೇಕು. ಇದರ ನಂತರ, ನಾವು ಮೂವರು ಸಾವಿರ ವರ್ಷಗಳ ನಂತರ ಭೇಟಿಯಾದಾಗ, ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ, ನಮ್ಮ ಮೂರು ನಗರಗಳು ಒಂದಾದಾಗ ಅದನ್ನು ತ್ರಿಪುರ ಎಂದು ಕರೆಯುವಂತಾಗಬೇಕು ಎಂದು ಹೇಳಿದರು.

  ಇದನ್ನು ಓದಿ: ಕೈಗೆ ಕಟ್ಟುವ ಕೆಂಪುದಾರದ ಹಿಂದಿನ ಧಾರ್ಮಿಕ- ವೈಜ್ಞಾನಿಕ ಕಾರಣ ಇದು

  ಇಂದ್ರನನ್ನು ಹೆದರಿಸಿದ ರಾಕ್ಷಸರು

  ಬ್ರಹ್ಮ ಇಚ್ಛೆಯ ಮೇರೆಗೆ ಅವರಿಗೆ ಮೂರು ನಗರ ನಿರ್ಮಿಸಿದರು. ತಾರಕ್ಷನಿಗೆ ಚಿನ್ನ, ಕಮಲಕ್ಕೆ ಬೆಳ್ಳಿ ಮತ್ತು ವಿದ್ಯುನ್ಮಾಲಿಗಾಗಿ ಕಬ್ಬಿಣದ ನಗರಗಳನ್ನು ನಿರ್ಮಿಸಲಾಯಿತು. ಮೂವರೂ ಒಟ್ಟಾಗಿ ಮೂರು ಲೋಕಗಳ ಮೇಲೆ ತಮ್ಮ ಅಧಿಕಾರವನ್ನು ಪಡೆದರು. ಭಗವಾನ್ ಇಂದ್ರನು ಈ ಮೂರು ರಾಕ್ಷಸರಿಂದ ಭಯಗೊಂಡನು. ಬಳಿಕ ಶಂಕರನ ಆಶ್ರಯಕ್ಕೆ ಹೋದನು. ಇಂದ್ರನ ಮಾತನ್ನು ಕೇಳಿದ ಶಿವನು ಈ ರಾಕ್ಷಸರನ್ನು ನಾಶಮಾಡಲು ದೈವಿಕ ರಥವನ್ನು ನಿರ್ಮಿಸಿದನು

  ಇದನ್ನು ಓದಿ: Kartik Purnima 2021: ಮತ್ಸ ಅವತಾರ ತಾಳಿದ ವಿಷ್ಣುವಿನ ಕಥೆ ಇದು

  ದೈವಿಕ ರಥ ನಿರ್ಮಾಣ
  ಈ ದೈವಿಕ ರಥದಲ್ಲಿ ಎಲ್ಲವೂ ದೇವರಿಂದ ಮಾಡಲ್ಪಟ್ಟಿತು. ಚಕ್ರಗಳಾಗಿ ಚಂದ್ರ ಮತ್ತು ಸೂರ್ಯ ಆದರೂ. ಇಂದ್ರ, ವರುಣ, ಯಮ ಮತ್ತು ಕುಬೇರರು ರಥದ ನಾಲ್ಕು ಕುದುರೆಗಳಾದರು. ಹಿಮಾಲಯವು ಬಿಲ್ಲು, ಶೇಷನಾಗ ಪ್ರತ್ಯಂಚವಾಗುತ್ತದೆ. ಶಿವನೇ ಬಾಣವಾದನು. ಅಗ್ನಿದೇವನು ಬಾಣದ ಬಿಂದುವಾದನು. ಈ ದೈವಿಕ ರಥದ ಮೇಲೆ ಶಿವನು ಸ್ವತಃ ಸವಾರಿ ಮಾಡಿದನು.

  ದೇವರುಗಳು ಮತ್ತು ಮೂವರು ಸಹೋದರರು ನಡುವೆ ಘೋರ ಯುದ್ಧವು ನಡೆಯಿತು. ಈ ಮೂರು ರಥಗಳು ಸರಳ ರೇಖೆಯಲ್ಲಿ ಬಂದ ತಕ್ಷಣ ಶಿವನು ಬಾಣ ಬಿಟ್ಟು ಮೂರನ್ನೂ ನಾಶಪಡಿಸಿದನು. ಈ ಸಂಹಾರದ ನಂತರ ಶಿವನು ತ್ರಿಪುರಾರಿ ಎಂದು ಕರೆಯಲ್ಪಟ್ಟನು. ಈ ಸಂಹಾರವು ಕಾರ್ತಿಕ ಮಾಸದ ಹುಣ್ಣಿಮೆಯಂದು ನಡೆಯಿತು, ಆದ್ದರಿಂದ ಈ ದಿನವನ್ನು ತ್ರಿಪುರಿ ಪೂರ್ಣಿಮಾ ಎಂದೂ ಕರೆಯುತ್ತಾರೆ.
  Published by:Seema R
  First published: