Kartik Month Fasting : ಕಾರ್ತಿಕ ಮಾಸದಲ್ಲಿ ಉಪವಾಸ ಮಾಡುವ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಕಾರ್ತಿಕ ಮಾಸದಲ್ಲಿ ಕೆಲವು ಆಹಾರ ಪದ್ಧತಿಯಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ಯಾವ್ಯಾವ ಆಹಾರದಲ್ಲಿ ಸೇರಿಸಬಾರದು ಎಂಬ ಕುರಿತು ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸನಾತನ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ( Kartik Month) ಹೆಚ್ಚಿನ ಮಹತ್ವವಿದೆ. ಈ ಮಾಸವನ್ನು ಧರ್ಮಮಾಸ ಮತ್ತು ಪರ್ವ ಮಾಸ ಎಂದೂ ಕರೆಯುತ್ತಾರೆ. ಈ ಮಾಸವನ್ನು ವಿಷ್ಣುವಿಗೆ (lord Vishnu) ಸಮರ್ಪಿಸಲಾಗಿದೆ ಮತ್ತು ಅನೇಕ ಹಬ್ಬಗಳು ಒಂದರ ನಂತರ ಒಂದರಂತೆ ಈ ತಿಂಗಳಲ್ಲಿ ನಡೆಯುತ್ತವೆ. ಕಾರ್ತಿಕ ಮಾಸವು ಧಾರ್ಮಿಕವಾಗಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ತಿಂಗಳ ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇವಿಸುವುದನ್ನು ನಿಷೇಧ. ಈ ಮಾಸದಲ್ಲಿ ಅಧಿಕ ಮಂದಿ ಮಾಂಸಾಹಾರ ತ್ಯಜಿಸುತ್ತಾರೆ. ಅನೇಕ ಉಪವಾಸ ವೃತ (Kartik Month Fasting) ಕೈಗೊಳ್ಳುತ್ತಾರೆ.

    ಕಾರ್ತಿಕ ಮಾಸವು ಅಕ್ಟೋಬರ್ 21, 2021 ರಂದು ಪ್ರಾರಂಭವಾಗುತ್ತದೆ, ಆದರೆ ಇದು ನವೆಂಬರ್ 19, 2021 ರವರೆಗೆ ಇರುತ್ತದೆ. ಈ ತಿಂಗಳಲ್ಲಿ ಸೂರ್ಯ ಮತ್ತು ಚಂದ್ರನ ಕಿರಣಗಳು ಮನಸ್ಸು ಮತ್ತು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ.

    ಈ ಅವಧಿಯಲ್ಲಿ ಭಕ್ತರು ಉಪವಾಸ ಆಚರಿಸಿ,, ತುಪ್ಪದ ದೀಪಗಳನ್ನು ಹಚ್ಚುತ್ತಾರೆ, ದಾನ ಮಾಡುತ್ತಾರೆ. ನದಿಯಲ್ಲಿ ಪವಿತ್ರ ಸ್ನಾನ ಮಾಡಿ ವಿಷ್ಣುವನ್ನು ಆರಾಧಿಸುತ್ತಾರೆ. ಕಾರ್ತಿಕ ಮಾಸವು ತಪಸ್ಸಿಗೆ ಉತ್ತಮ ಅವಧಿ ಎಂದು ನಂಬಲಾಗಿದೆ.

    ಕಾರ್ತಿಕ ಮಾಸದಿಂದ ಚಳಿಗಾಲ ಆರಂಭವಾಗುತ್ತದೆ. ಹವಾಮಾನದ ಬದಲಾವಣೆಯಿಂದಾಗಿ, ಯಾವುದೇ ರೀತಿಯ ಸೋಂಕು ಮತ್ತು ಕಾಯಿಲೆಗೆ ಆಹ್ವಾನ ನೀಡಬಾರದು, ಆದ್ದರಿಂದ ಕೆಲವು ಆಹಾರ ಪದ್ಧತಿಯಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ಯಾವ್ಯಾವ ವಸ್ತುಗಳನ್ನು ಆಹಾರದಲ್ಲಿ ಸೇರಿಸಬಾರದು ಎಂಬ ಕುರಿತು ಇಲ್ಲಿದೆ ಮಾಹಿತಿ

    ಮಾಂಸಾಹಾರ:
    ಕಾರ್ತಿಕ ಮಾಸದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ಬಿಡಬೇಕು. ಈ ಸಮಯದಲ್ಲಿ ಅನೇಕ ಮನೆಗಳು ಮಾಂಸಾಹಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ

    ಬೆಲ್ಲ:
    ಕಾರ್ತಿಕ ಮಾಸದಲ್ಲಿ ಉಪವಾಸ ಮಾಡುತ್ತಿದ್ದರೆ, ನೀವು ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸಬಹುದು ಏಕೆಂದರೆ ಅದು ನಿಮ್ಮನ್ನು ಬೆಚ್ಚಗಾಗಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಾಪಾಡುತ್ತದೆ.

    ಉಪ್ಪು:
    ಅನೇಕ ಭಕ್ತರು ಈ ಮಾಸದ ಉಪವಾಸದ ಸಮಯದಲ್ಲಿ ಸಾಮಾನ್ಯ ಉಪ್ಪನ್ನು ತಿನ್ನುವುದಿಲ್ಲಇದರ ಬದಲು ಹಿಮಾಲಯನ್ ಉಪ್ಪನ್ನು ಬಳಸಬಹುದು. ಇದು ದೇಹದಲ್ಲಿನ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸುತ್ತದೆ

    ಮೊಸರು:
    ಕಾರ್ತಿಕ ಮಾಸದಲ್ಲಿ ಮೊಸರು ಮತ್ತು ಮಜ್ಜಿಗೆಯನ್ನು ತಿನ್ನುವುದನ್ನು ತಪ್ಪಿಸಬೇಕು. ಈ ತಿಂಗಳಲ್ಲಿ ಮೊಸರು ತಿನ್ನುವುದನ್ನು ಧರ್ಮಗ್ರಂಥಗಳಲ್ಲಿ ನಿಷಿದ್ಧವೆಂದು ಪರಿಗಣಿಸಲಾಗಿದೆ. ಇದರ ಬದಲಾಗಿ ಹಾಲನ್ನು ಸೇವಿಸಬಹುದು.

    ಮೀನು
    ವಿಷ್ಣುವು ಮೀನಿನ ರೂಪದಲ್ಲಿ ನೀರಿನಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ವೈಜ್ಞಾನಿಕ ದೃಷ್ಟಿಕೋನದಿಂದ, ಈ ಸಮಯದಲ್ಲಿ ಪ್ರವಾಹ ಮತ್ತು ಮಳೆಯಿಂದಾಗಿ ನದಿಗಳ ನೀರು ಕಲುಷಿತಗೊಳ್ಳುತ್ತದೆ. ಈ ಸಂದರ್ಭದಲ್ಲಿ ಮೀನು ತಿನ್ನುವುದು ಸೂಕ್ತವಲ್ಲ.

    ಇದನ್ನು ಓದಿ: ಇಂದಿನಿಂದ ಕಾರ್ತಿಕ ಮಾಸ ಆರಂಭ; ಇಲ್ಲಿದೆ ಇದರ ಮಹತ್ವ

    ಮೂಲಂಗಿ
    ಕಾರ್ತಿಕ ಮಾಸದಲ್ಲಿ ಮೂಲಂಗಿಯನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಮೂಲಂಗಿಯನ್ನು ತಿನ್ನುವುದರಿಂದ, ನೀವು ಅನೇಕ ರೋಗಗಳನ್ನು ದೂರ ಇಡಬಹುದು. ಆದ್ದರಿಂದ, ಕಾರ್ತಿಕ ಮಾಸದಲ್ಲಿ ಮೂಲಂಗಿಯನ್ನು ಸೇವಿಸಬೇಕು. ಆದರೆ ಉಪವಾಸವನ್ನು ಆಚರಿಸುವಾಗ, ಅದನ್ನು ತಿನ್ನಬೇಡಿ.

    ಬದನೆಕಾಯಿ
    ಕಾರ್ತಿಕ ಮಾಸದಲ್ಲಿ ಬದನೆ ಕಾಯಿ ಸೇವನೆ ಉತ್ತಮವಲ್ಲ. ಬದನೆಕಾಯಿ ಪಿತ್ತದೋಷಕ್ಕೆ ಸಂಬಂಧಿಸಿದ ರೋಗಗಳ ಅಪಾಯವೂ ಇರುತ್ತದೆ. ಈ ಹಿನ್ನಲೆ ಈ ಮಾಸ ಬದನೆಕಾಯಿಯಿಂದ ದೂರವಿರಬೇಕು

    ಹಾಗಲಕಾಯಿ
    ಕಾರ್ತಿಕ ಮಾಸ ಭಗವಾನ್ ವಿಷ್ಣುವಿನ ಆರಾಧನೆಯ ತಿಂಗಳು ಎಂದು ಪರಿಗಣಿಸಲಾಗಿದೆ. ಈ ವೇಳೆ ಮಸಾಲೆ ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸಬೇಕು. ಹಾಗಲಕಾಯಿ ಮಸಾಲೆಯುಕ್ತ ಆಹಾರ ವಿಭಾಗದಲ್ಲಿ ಬರುವುದರಿಂದ ಅದನ್ನು ತಿನ್ನಬಾರದು
    Published by:Seema R
    First published: