• Home
  • »
  • News
  • »
  • astrology
  • »
  • Pattadkal: ರಾಜ್ಯದ ಪಾರಂಪರಿಕ ತಾಣ ಪಟ್ಟದಕಲ್ಲಿಗೆ ಭೇಟಿ ನೀಡಿದ್ದೀರಾ? ವಿಶಿಷ್ಟ ಕಲಾಕೃತಿಗಳ ದೇವಾಲಯಗಳ ದರ್ಶನ

Pattadkal: ರಾಜ್ಯದ ಪಾರಂಪರಿಕ ತಾಣ ಪಟ್ಟದಕಲ್ಲಿಗೆ ಭೇಟಿ ನೀಡಿದ್ದೀರಾ? ವಿಶಿಷ್ಟ ಕಲಾಕೃತಿಗಳ ದೇವಾಲಯಗಳ ದರ್ಶನ

ಪಟ್ಟದಕಲ್ಲು

ಪಟ್ಟದಕಲ್ಲು

1987 ರಲ್ಲಿ ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿರುವುದು ನಿಜಕ್ಕೂ ಆಶ್ಚರ್ಯವೇನಲ್ಲ ಬಿಡಿ. ಅಷ್ಟೊಂದು ಸುಂದರ ಕಲಾಕೃತಿಗಳನ್ನು ಪಟ್ಟದ್‌ಕಲ್ಲಿನಲ್ಲಿ ನಾವು ನೋಡಬಹುದು.

  • Trending Desk
  • Last Updated :
  • Karnataka, India
  • Share this:

ಕರ್ನಾಟಕದಲ್ಲಿ ನಾವು ಅನೇಕ ಪ್ರೇಕ್ಷಣಿಯ ಸ್ಥಳಗಳನ್ನು (Travel  Place) ನೋಡಬಹುದು. ಅವುಗಳಲ್ಲಿ ಪ್ರಮುಖವಾಗಿ ಹಂಪಿ (Hampi), ಬಾದಾಮಿ (Badami), ಪಟ್ಟದ್‌ಕಲ್ಲು (PattadKallu), ಮೈಸೂರು (Mysuru( ಮುಂತಾದವುಗಳು. ಅವುಗಳಲ್ಲಿ ಪಟ್ಟದಕಲ್ಲು ಪ್ರಮುಖ ಪ್ರೇಕ್ಷಣಿಯ ಸ್ಥಳವಾಗಿದೆ. ಅದರ ಬಗ್ಗೆ ನಾವಿಂದು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಹಂಪಿಯಿಂದ ಮೂರು ಗಂಟೆಗಳ ಕಾಲ ಪ್ರಯಾಣವಿರುವ, ಉತ್ತರ ಕರ್ನಾಟಕದ (North Karnataka) ಮರಳುಗಲ್ಲು ಬಂಡೆಗಳು ಮತ್ತು ಸೂರ್ಯಕಾಂತಿ ಬೆಳೆ ಇರುವ ಹೊಲಗಳ ಮಲಪ್ರಭಾ ನದಿಯು ಹರಿಯುವ, ಅದೇ ದಾರಿಯಲ್ಲಿ ನದಿ ದಂಡೆಯ ಮೇಲೆ ಏಳನೇ ಮತ್ತು ಎಂಟನೇ ಶತಮಾನದಲ್ಲಿ ನಿರ್ಮಿಸಲಾದ 10 ದೇವಾಲಯಗಳ ಸಮೂಹವೆಂದೆ ಕರೆಯಲಾಗುವ ಪಟ್ಟದಕಲ್ಲು ಇದೆ.


ಆ ದೇವಾಲಯಗಳ ಕೆಲವು ಕಲ್ಲುಗಳನ್ನು ಸುತ್ತಮುತ್ತಲಿನ ಭೂಮಿಯಿಂದ ಕಿತ್ತುಹಾಕಲಾಗಿದೆ. ಇದರ ಕೆಲವು ಕಿಲೋಮೀಟರ್ ದೂರದಲ್ಲಿ ಮತ್ತೊಂದು ಮೆಗಾಲಿಥಿಕ್ ದೇವಾಲಯವಿದೆ. ಅಲ್ಲಿ ಚಾಲುಕ್ಯರ ಕುಟುಂಬಗಳ ಸಮಾಧಿಗಳಿವೆ.


ಬಾದಾಮಿ, ಐಹೊಳೆ, ಮಹಾಕೂಟ ಮತ್ತು ಪಟ್ಟದಕಲ್ಲುಗಳನ್ನು ಒಳಗೊಂಡಿರುವ ಮಲಪ್ರಭಾ ಕಣಿವೆಯ ನಾಲ್ಕು ಪ್ರಮುಖ ಚಾಲುಕ್ಯರ ತಾಣಗಳಲ್ಲಿ ಪಟ್ಟದಕಲ್ಲಿನ ದೇವಾಲಯವು ಒಂದು ಎಂದು ಹೇಳಲಾಗುತ್ತದೆ. ಚಾಲುಕ್ಯರ ಆಳ್ವಿಕೆಯ ಕೊನೆಯ ದಿನಗಳಲ್ಲಿ ನಿರ್ಮಿಸಲಾದ ದೇವಾಲಯಗಳು ರಾಜವಂಶದ ಭವ್ಯ, ಅತ್ಯಂತ ಪ್ರಬುದ್ಧ ಕೆಲಸವನ್ನು ಪ್ರದರ್ಶಿಸುತ್ತವೆ.


ಇಲ್ಲಿನ ದೇವಾಲಯಗಳು ವಾಸ್ತುಶಿಲ್ಪದ ಶ್ರೇಷ್ಠದ ಸಂಕೇತಗಳು


ಭಾರತೀಯ ದೇವಾಲಯದ ವಾಸ್ತುಶಿಲ್ಪಿಯ ಶ್ರೇಷ್ಠತೆಯ ಸಂಕೇತಗಳಾಗಿ ಉತ್ತರ ಭಾರತದ ನಾಗರ ಮತ್ತು ದಕ್ಷಿಣ ಭಾರತದ ದ್ರಾವಿಡ ವಾಸ್ತುಶಿಲ್ಪದ ಶೈಲಿಗಳ ಮಿಶ್ರ ಅಂಶಗಳನ್ನು ಸೇರಿಸಿ ನಿರ್ಮಿಸಲಾದ ಉತ್ತಮ ದೇವಾಯಗಳು ಇಲ್ಲಿವೆ.


1987 ರಲ್ಲಿ ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿರುವುದು ನಿಜಕ್ಕೂ ಆಶ್ಚರ್ಯವೇನಲ್ಲ ಬಿಡಿ. ಅಷ್ಟೊಂದು ಸುಂದರ ಕಲಾಕೃತಿಗಳನ್ನು ಪಟ್ಟದ್‌ಕಲ್ಲಿನಲ್ಲಿ ನಾವು ನೋಡಬಹುದು.


karnataka tourism mystery behind beautiful place pattadkal stg mrq
ಪಟ್ಟದಕಲ್ಲು


ಪಟ್ಟದಕಲ್ಲು ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಉತ್ತುಂಗದ ಸ್ಥಾನದಲ್ಲಿತ್ತು. ಆದರೆ ಅದರ 220 ಎಕರೆ ಪ್ರದೇಶದಲ್ಲಿ ಯಾವುದೇ ಅರಮನೆಗಳಿಲ್ಲ. ಅಲ್ಲಿ ಇರುವುದು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯಗಳು ಮತ್ತು ಉಳಿದವುಗಳಿಂದ ಸ್ವಲ್ಪ ಪ್ರತ್ಯೇಕವಾದ ಜೈನ ದೇವಾಲಯ ಇಷ್ಟೆ ಆಗಿವೆ.


ಪಟ್ಟದಕಲ್ಲಿನ ಹಳೆಯ ಹೆಸರು "ಪಟ್ಟಾಭಿಷೇಕದ ಕಲ್ಲು"


ಹಳೆಯ ಕಾಲಮಾನದಲ್ಲಿ ಈ ತಾಣವು ಪವಿತ್ರ ಸ್ಥಳವಾಗಿತ್ತು. ಅಲ್ಲಿ ರಾಜರು ಪಟ್ಟಾಭಿಷೇಕವನ್ನು ಮಾಡುತ್ತಿದ್ದರು. ಆಗಿನ ಕಾಲದ ರಾಣಿಯರು ಅವರ ಪತಿಯು ಯುದ್ಧದಿಂದ ಹಿಂದಿರುಗಿದಾಗ ಅದರ ನೆ+-ನಪಿಗಾಗಿ ದೇವಾಲಯಗಳನ್ನು ಕಟ್ಟಿಸುತ್ತಿದ್ದರು. ಈ ತಾಣದ ಮೊದಲ ಹೆಸರು "ಪಟ್ಟಾಭಿಷೇಕದ ಕಲ್ಲು" ಎಂಬುದಾಗಿತ್ತು.


ಇಲ್ಲಿ ಹೆಚ್ಚು ಪ್ರಸಿದ್ಧವಾದ ದೇವಾಲಯ ಎಂದರೆ ಅದು ರಾಣಿ ಲೋಕ ಮಹಾದೇವಿ ನಿರ್ಮಿಸಿರುವ ವಿರುಪಾಕ್ಷ ದೇವಾಲಯವಾಗಿದೆ. ಮಹಾಭಾರತ ಮತ್ತು ರಾಮಾಯಣದ ನಿರೂಪಣೆಗಳನ್ನು ಚಿತ್ರಿಸುವ ಕಲಾಕೃತಿಗಳು ದೇವಾಲಯದ ಗೋಡೆಗಳನ್ನು ಅಲಂಕರಿಸುತ್ತವೆ. ಇಲ್ಲಿರುವ ಶಾಸನಗಳನ್ನು ಹತ್ತಿರದಿಂದ ಗಮನಿಸಿದಾಗ ತಿಳಿದುಬರುವ ವಿಷಯವೆಂದರೆ ಅವುಗಳನ್ನು ರಚಿಸಿದ ವಾಸ್ತುಶಿಲ್ಪಿಗಳ ಹೆಸರನ್ನು ನೀವು ಮಾಡಬಹುದು.


ಇದನ್ನೂ ಓದಿ: Hubballi: ಹುಲಿ ತನ್ನ ಬಾಲದಿಂದ ಇಲ್ಲಿ ಕಸ ಗುಡಿಸುತ್ತಿತ್ತಂತೆ! ಬಂಡೆಗಲ್ಲಿನ ಮೇಲೆ ಹೆಜ್ಜೆಗುರುತು!


ಮಲ್ಲಿಕಾರ್ಜುನ ದೇವಾಲಯ


ಮತ್ತೊಂದು ದೊಡ್ಡ ದೇವಾಲಯವೆಂದರೆ ಮಲ್ಲಿಕಾರ್ಜುನ ದೇವಾಲಯ ಆಗಿದೆ. ಇದನ್ನು ರಾಣಿ ತ್ರೈಲೋಕ್ಯ ಮಹಾದೇವಿಯ ಗೌರವಾರ್ಥವಾಗಿ ತ್ರಿಲೋಕೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಮಹಾದೇವಿಯು ಪಲ್ಲವರ ಮೇಲೆ ಚಾಲುಕ್ಯರ ವಿಜಯದ ಸಂಭ್ರಮದಲ್ಲಿ ಈ ದೇವಾಲಯವನ್ನು ನಿರ್ಮಿಸಿದಳು ಎಂದು ಹೇಳಲಾಗುತ್ತದೆ.


karnataka tourism mystery behind beautiful place pattadkal stg mrq
ಪಟ್ಟದಕಲ್ಲು


ಈ ಎರಡು ದೇವಾಲಯಗಳು ವಿನ್ಯಾಸದಲ್ಲಿ ಒಂದೆ ಆಗಿವೆ. ಇವುಗಳ ಅಂತರಾಳದ (ಫಾಯರ್) ಮೂಲಕ ಮಂಟಪಕ್ಕೆ ಸಂಪರ್ಕ ಹೊಂದಿದ ಚೌಕಾಕಾರದ ಗರ್ಭ ಗೃಹ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇವಾಲಯಗಳ ಮುಂಭಾಗದಲ್ಲಿರುವ ದ್ರಾವಿಡ ಶೈಲಿಯ ಶಿಖರಗಳ ಮೇಲಿನ ಸುಕನಾಸವು ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿದೆ. ಇದು ಚಾಲುಕ್ಯರ ಅದ್ಭುತವಾದ ವಾಸ್ತುಶಿಲ್ಪದ ಕೌಶಲ್ಯವನ್ನು ಪ್ರತಿನಿಧಿಸುತ್ತದೆ.


ಸುಕನಾಸವು ಮುಖ್ಯ ದೇವಾಲಯದ ಪ್ರವೇಶಕ್ಕೆ ಮುಂಚಿತವಾಗಿ ಶಿಖರ ದೇವಾಲಯಗಳ ಮುಖದ ಮೇಲೆ ಇರಿಸಲಾದ ಅಲಂಕಾರಿಕ ಲಕ್ಷಣವಾಗಿದೆ. ಶಿವನ ಕ್ರೋಧದ ದಂತಕಥೆಗಳನ್ನು ವಿವರಿಸುವ ಪರಿಪೂರ್ಣತೆಗೆ ಕೆತ್ತಲಾದ ಕಂಬಗಳು ಮತ್ತು ಮಂಟಪಗಳನ್ನು ದೇವಾಲಯದ ಪ್ರತಿಯೊಂದು ಮೂಲೆಯಲ್ಲಿಯೂ ಸಹ ಕಾಣಬಹುದು.


ಪೂರ್ವಕ್ಕೆ ಅಭಿಮುಖವಾಗಿ ದೇವಸ್ಥಾನಗಳ ನಿರ್ಮಾಣ


ಈ ತರದ ರಚನೆಯು ಈ ಪ್ರದೇಶದಲ್ಲಿನ ಎಲ್ಲಾ ದೇವಾಲಯಗಳ ಮೂಲಭೂತ ರಚನೆಯಾಗಿದ್ದು, ಪ್ರತಿ ನಿರ್ಮಾಣದಲ್ಲಿ ಕೆಲವೇ ಕೆಲವು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಇತರ ದೇವಾಲಯಗಳೆಂದರೆ ಸಂಗಮೇಶ್ವರ ದೇವಾಲಯ, ಜಂಬುಲಿಂಗೇಶ್ವರ ದೇವಾಲಯ, ಪಾಪನಾಥ ದೇವಾಲಯ, ಗಳಗನಾಥ ದೇವಾಲಯ ಮತ್ತು ಇತರವು ಸೇರಿವೆ. ಅವುಗಳಲ್ಲಿ ಪ್ರತಿಯೊಂದನ್ನು ಪೂರ್ವಕ್ಕೆ ಅಭಿಮುಖವಾಗಿ ನಿರ್ಮಿಸಲಾಗಿದೆ.


ಇದನ್ನೂ ಓದಿ:  Unakoti: 99,99,999 ಶಿಲಾ ವಿಗ್ರಹಗಳಿರುವ ಭಾರತದ ನಿಗೂಢ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?


ಕುತೂಹಲಕಾರಿ ಅಂಶವೆಂದರೆ ಪಟ್ಟದಕಲ್ಲಿನ ಸುತ್ತಲೂ ಹಲವಾರು ಸಾಮಾನ್ಯ ಕಲ್ಲಿನ ಕ್ವಾರಿಗಳು ಕಂಡು ಬಂದಿವೆ. ಇದರಿಂದ ಕಲ್ಲಿನ ಕಲಾಕೃತಿಗಳು ಇಲ್ಲಿ ಹೆಚ್ಚಿವೆ ಎಂದು ಪುರಾತತ್ತ್ವಜ್ಞರು ಕಲ್ಲಿನ ಕಲಾಕೃತಿಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದ್ದಾರೆ.


ಹುಲಿಗೆಮ್ಮನಕೊಳ್ಳ ಸಮಾಧಿ ಪತ್ತೆ


ಮೋಟೋರಾ ಮರಡಿ ಎನ್ನುವುದು ಒಂದು ಕಲ್ಲಿನ ಕ್ವಾರಿ ಆಗಿದೆ. ಚಾಲುಕ್ಯರ ಆಳ್ವಿಕೆಯಲ್ಲಿ ಈ ಸ್ಥಳವನ್ನು ಸಮಾಧಿ ಸ್ಥಳವನ್ನಾಗಿ ಮಾಡಲಾಗಿದೆ ಎಂದು ಅಲ್ಲಿನ ಕಲ್ಲುಗಳು ದೃಢಪಡಿಸುತ್ತವೆ. ಸಮೀಪದ ಹುಲಿಗೆಮ್ಮನಕೊಳ್ಳ ಗ್ರಾಮದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಸಮಾಧಿಗಳು ಪತ್ತೆಯಾಗಿವೆ.


ಈ ಸಮಾಧಿಗಳು ಭವ್ಯವಾದ ದೇವಾಲಯಗಳಲ್ಲಿ ಕೆಲಸ ಮಾಡಿದ ಕುಶಲಕರ್ಮಿಗಳ, ರಾಜ ಮನೆತನದವರ ಅಥವಾ ಸಾಮಾನ್ಯರ ಸಮಾಧಿಗಳಾಗಿವೆ ಎಂದು ಹೇಳಲಾಗುತ್ತದೆ. ಪಟ್ಟದ್‌ಕಲ್ಲಿನಲ್ಲಿ ಇನ್ನು ಅದೆಷ್ಟೊ ರಹಸ್ಯಗಳು ಇವೆ. ಈ ಸ್ಥಳವು ಇತಿಹಾಸಕಾರರು ಮತ್ತು ಪ್ರವಾಸಿಗರಿಗೆ ಪ್ರಮುಖ ಆಕರ್ಷಣಿಯ ಸ್ಥಳವಾಗಿದೆ.

Published by:Mahmadrafik K
First published: