Ugadi ಹಬ್ಬಕ್ಕೆ ಶ್ರೀಶೈಲಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಕರ್ನಾಟಕದ ಭಕ್ತರು; ಏನಿದು ಆಚರಣೆ?

ಈ ಯುಗಾದಿ ಉತ್ಸವದಿಂದಾಗಿ ಕನಿಷ್ಠ ಆರು ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿರುವುದರಿಂದ ಭಕ್ತರಿಗೆ ಅನುಕೂಲವಾಗಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ

ಕರ್ನಾಟಕದ ಭಕ್ತರು

ಕರ್ನಾಟಕದ ಭಕ್ತರು

  • Share this:
ಚೈತ್ರ ನಾಮ ಸವಂತ್ಸರವ ಯುಗಾದಿ ಹಿಂದೂಗಳ ಹೊಸ ವರ್ಷ ಎಂದೇ ಪರಿಗಣಿತವಾಗಿದೆ. ಈ ಹಬ್ಬವನ್ನು ದಕ್ಷಿಣ ರಾಜ್ಯಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುವುದು. ಈ ಹಬ್ಬದ ಸಮಯದಲ್ಲಿ ಕರ್ನಾಟಕದ ಭಕ್ತರು ಕಾಲ್ನಡಿಗೆ ಮೂಲಕ ಶ್ರೀ ಶೈಲಕ್ಕೆ ಹೊರಡುವುದು ವುಶೇಷವಾಗಿದೆ. ಮಾರ್ಚ್ 30 ರಿಂದ ಎಂದರೆ ಇಂದಿನಿಂದಲೇ ಪ್ರಾರಂಭವಾಗುವ ಐದು ದಿನಗಳ ಯುಗಾದಿ ಮಹೋತ್ಸವದ ಸಂದರ್ಭದಲ್ಲಿ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬ ದೇವಿಯ ದರ್ಶನ ಪಡೆಯಲು ಕರ್ನಾಟಕದ ಅನೇಕ ಜಿಲ್ಲೆಗಳಿಂದ ಸಾವಿರಾರು ಭಕ್ತರು ನಲ್ಲ ಮಲ್ಲ ಬೆಟ್ಟಗಳ ನಡುವೆ ಕಾಲ್ನಡಿಗೆಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.

ಹರಕೆ ಪೂರೈಕೆಗೆ ಕಾಲ್ನಡಿಗೆ

ಶ್ರೀ ಭ್ರಮರಾಂಬ ದೇವಿಯ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ತಲುಪಲು ಅವರು 300 ಕಿಲೋ ಮೀಟರ್ ಗಿಂತಲೂ ಹೆಚ್ಚು ದೂರ ನಡೆದು ದಟ್ಟವಾದ ಕಾಡುಗಳ ಮೂಲಕ ಹಾದು ಹೋಗಬೇಕು ಮತ್ತು ಪ್ರತಿ ವರ್ಷವೂ ಅನೇಕರು ತಮ್ಮ ಹರಕೆಯನ್ನು ಪೂರೈಸಲು ಹೀಗೆ ಕಾಲ್ನಡಿಗೆಯಲ್ಲಿ ಹೋಗಿ ದೇವರ ದರ್ಶನವನ್ನು ಪಡೆಯುತ್ತಾರೆ.

ವಿಜೃಂಭಣೆಯಿಂದ ಆಚರಣೆ

ಕೇವಲ ಕರ್ನಾಟಕದ ಭಕ್ತರು ಸಾಮಾನ್ಯವಾಗಿ ಭ್ರಮರಾಂಬ ದೇವಿಗೆ ಹುಣಸೆಹಣ್ಣು, ಕುಂಕುಮ, ಸೀರೆ, ಮಂಗಳಸೂತ್ರ, ಹೂವುಗಳು ಮತ್ತು ಇತರ ನೈವೇದ್ಯಗಳನ್ನು ಅರ್ಪಿಸುತ್ತಾರೆ. ಅವರು ನಂದಿ ಕವಲುವನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಶ್ರೀಶೈಲಕ್ಕೆ ಪ್ರಯಾಣಿಸುವಾಗ ಪ್ರತಿದಿನ ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಆಂಧ್ರಪ್ರದೇಶದ ಯಾತ್ರಾರ್ಥಿಗಳು ಶಿವರಾತ್ರಿಯನ್ನು ಒಂದು ಪ್ರಮುಖ ಹಬ್ಬವೆಂದು ಪರಿಗಣಿಸಿದರೆ, ಕರ್ನಾಟಕದ ಯಾತ್ರಾರ್ಥಿಗಳು ಶ್ರೀಶೈಲಂನಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಯುಗಾದಿ ಹಬ್ಬದ ಹಿಂದಿನ ರಾತ್ರಿ ಘನಾಚಾರಿಗಳು ಎಂದು ಕರೆಯಲ್ಪಡುವ ಕರ್ನಾಟಕದ ಭಕ್ತರ ಒಂದು ನಿರ್ದಿಷ್ಟ ಗುಂಪು ಅಗ್ನಿಕುಂಡ ಪ್ರವೇಶ ಮಾಡುವ ಮೂಲಕ ತನ್ನ ಭಕ್ತಿಯನ್ನು ವ್ಯಕ್ತ ಪಡಿಸುತ್ತಾರೆ ಎಂದು ಹೇಳಲಾಗುತ್ತದೆ. ಅವರು ತಮ್ಮ ಹಣೆ, ನಾಲಗೆ, ಕೆನ್ನೆ ಮತ್ತು ಗದ್ದವನ್ನು ಚೂಪಾದ ವಸ್ತುಗಳಿಂದ ಚುಚ್ಚಿಕೊಳ್ಳುತ್ತಾರೆ, ಇದನ್ನು ವೀರಾಚಾರ ವಿನಯಸಾಲು ಎಂದು ಕರೆಯಲಾಗುತ್ತದೆ. ಈ ಐದು ದಿನಗಳ ಸಂಜೆ ಹೊತ್ತಿನಲ್ಲಿ ದೇವರಿಗೆ ಅನೇಕ ರೀತಿಯ ಸೇವೆಗಳನ್ನು ಮತ್ತು ಅಲಂಕಾರಗಳು ನಡೆಯಲಿವೆ.

ಇದನ್ನು ಓದಿ: ಚೈತ್ರ ಅಮಾವಾಸ್ಯೆ ದಿನ ತಪ್ಪದೇ ಈ ಕಾರ್ಯ ಮಾಡುವುದರಿಂದ ಕಷ್ಟ ಪರಿಹಾರ

ಬರುವ ಭಕ್ತಾದಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿರುವ ದೇವಾಲಯದ ಸಮಿತಿ

ಶ್ರೀ ಭ್ರಮರಾಂಬ ದೇವಿಯ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್. ಲಾವಣ್ಣ ಅವರು ಮಾತನಾಡಿ, ಈ ಯುಗಾದಿ ಉತ್ಸವದಿಂದಾಗಿ ಕನಿಷ್ಠ ಆರು ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿರುವುದರಿಂದ ಭಕ್ತರಿಗೆ ಅನುಕೂಲವಾಗಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ಈಗಾಗಲೇ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ತಾತ್ಕಾಲಿಕ ಡೇರೆಗಳು ಮತ್ತು ಶೆಡ್ ಗಳನ್ನು ಅನೇಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನು ಓದಿ: ಕೊಲ್ಲೂರು ಆಯ್ತು, ಈಗ ಮೇಲುಕೋಟೆಯಲ್ಲೂ ಹೊತ್ತಿಕೊಂಡ 'Salam Mangalarathi' ವಿವಾದದ 'ಬೆಂಕಿ'! ಟಿಪ್ಪು ಹೆಸರಿನ ಪೂಜೆ ನಿಲ್ಲಿಸಲು ಮನವಿ

ದೇವರ ದರ್ಶನ ಪಡೆದ ಮುಖ್ಯ ನ್ಯಾಯಾಧೀಶರು

ಆಂಧ್ರ ಪ್ರದೇಶ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಮ್ಮ ಕುಟುಂಬಸ್ಥರೊಂದಿಗೆ ಭಾನುವಾರ ಶ್ರೀ ಭ್ರಮರಾಂಬ ದೇವಿಯ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಬಂದು ದರ್ಶನ ಪಡೆದುಕೊಂಡು ಹೋಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ಅವರು ಶನಿವಾರ ರಾತ್ರಿಯೇ ಶ್ರೀಶೈಲಂಗೆ ಬಂದು ಭ್ರಮರಾಂಬ ಅತಿಥಿ ಗೃಹದಲ್ಲಿ ತಂಗಿದ್ದರು ಎಂದು ಹೇಳಲಾಗುತ್ತಿದೆ.

ನಂತರ, ಅವರು ಶ್ರೀಶೈಲಂ ಜಲಾಶಯ ಅಣೆಕಟ್ಟು ಸ್ಥಳ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಜಲಾಶಯದಲ್ಲಿರುವ ನೀರಿನ ಮಟ್ಟ ಮತ್ತು ಅಣೆಕಟ್ಟಿನ ಪರಿಸ್ಥಿತಿಯನ್ನು ವೀಕ್ಷಿಸಿದರು.
Published by:Seema R
First published: