ಹಸುಳೆಗಳನ್ನು ದೈವಗಳಿಗೆ ಸಮರ್ಪಿಸುವ ವಿಶಿಷ್ಟ ಆಚರಣೆಯ ಕಜಂಬು ಉತ್ಸವ

ಹಸುಳೆಗಳನ್ನು ನಡು ರಾತ್ರಿ ನೀರಲ್ಲಿ  ಮುಳುಗಿಸಿ ದೇವರಿಗೆ ಅರ್ಪಿಸುವ ಪದ್ದತಿ ಇಲ್ಲಿ ನಡೆದುಕೊಂಡು ಬಂದಿದೆ.

ಹಸುಳೆಗಳನ್ನು ನಡು ರಾತ್ರಿ ನೀರಲ್ಲಿ  ಮುಳುಗಿಸಿ ದೇವರಿಗೆ ಅರ್ಪಿಸುವ ಪದ್ದತಿ ಇಲ್ಲಿ ನಡೆದುಕೊಂಡು ಬಂದಿದೆ.

ಹಸುಳೆಗಳನ್ನು ನಡು ರಾತ್ರಿ ನೀರಲ್ಲಿ  ಮುಳುಗಿಸಿ ದೇವರಿಗೆ ಅರ್ಪಿಸುವ ಪದ್ದತಿ ಇಲ್ಲಿ ನಡೆದುಕೊಂಡು ಬಂದಿದೆ.

  • Share this:
ದೈವಾರಾಧನೆ ಹಾಗೂ ಭೂತಾರಾಧನೆಗೆ ಹೆಚ್ಚಿನ ಪ್ರಶಸ್ತಿ ನೀಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಪ್ರದೇಶಗಳಿಗೆ ತಕ್ಕಂತೆ ಅವರ ಆಚರಣೆಗಳೂ ನಡೆಯುತ್ತದೆ. ಇಂಥಹುದೇ ಒಂದು ವಿಶಿಷ್ಠ ಆಚರಣೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ  ದೇವಸ್ಥಾನದಲ್ಲೂ ಪ್ರಚಲಿತದಲ್ಲಿದೆ. ಏಳೆ ಹಸುಳೆಗಳನ್ನು ನಡು ರಾತ್ರಿ ನೀರಲ್ಲಿ  ಮುಳುಗಿಸಿ ದೇವರಿಗೆ ಅರ್ಪಿಸುವ ಪದ್ದತಿ ಜಾರಿಯಲ್ಲಿದ್ದು, ಸಾವಿರಾರು ಮಕ್ಕಳು ಇದೇ ಸಂದರ್ಭದಲ್ಲಿ ದೇವರಿಗೆ ಅರ್ಪಣೆಯಾಗುತ್ತಾರೆ.

ಕಜಂಬು ಉತ್ಸವ

ಭೂತಾರಾಧನೆ ಹಾಗೂ ದೈವಾರಾಧನೆಗೆ ಸಂಬಂಧಪಟ್ಟಂತೆ ಹಲವು ಆಚರಣೆಗಳನ್ನು ಅನಾದಿಕಾಲದಿಂದಲೂ ಮೈಗೂಡಿಸಿಕೊಂಡು ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ಅದರ ಆಚರಣೆಯನ್ನು ಸಂಪ್ರದಾಯ ಪ್ರಕಾರವಾಗಿಯೇ ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇಂಥಹುದೇ ಒಂದು ವಿಶಿಷ್ಠ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕ್ಷೇಪು ಉಳ್ಳಾಲ್ತಿ ದೇವಸ್ಥಾನದಲ್ಲಿ ನಡೆದುಕೊಂಡು ಬರುತ್ತಿದೆ. ಎಳೆಯ ಮಕ್ಕಳನ್ನು ಇಲ್ಲಿನ ಆರಾಧ್ಯ ದೈವಗಳಿಗೆ ಅರ್ಪಿಸಿ ಹರಕೆ ತೀರಿಸುವ ಕಜಂಬು ಉತ್ಸವ.ಇಲ್ಲಿನ ಪೌರಣಿಕ ಕಥೆ ಇದು

ಸುಮಾರು 850 ವರ್ಷಗಳ ಹಿಂದೆ ವಿಟ್ಲ ಸೀಮೆಯ ಅರಸರ ಕಾಲದಲ್ಲಿ ಈ ಸ್ಥಳದಲ್ಲಿ ನಿಧಿ ಇದೆ ಎಂಬ ಮಾಹಿತಿ ಪಡೆದ ಆಗಿನ ಅರಸರು ಅದನ್ನು  ಅಗೆಯುವುದಕ್ಕೋಸ್ಕರ 40 ಜನ ಆಳುಗಳನ್ನು ಸ್ಥಳಕ್ಕೆ ಕಳುಹಿಸುತ್ತಾರೆ. ಸ್ಥಳಕ್ಕೆ ಹೋದ ಎಲ್ಲಾ ಆಳುಗಳು ಆಶ್ಚರ್ಯಕರ ರೀತಿಯಲ್ಲಿ ಅದೃಷ್ಯರಾಗುತ್ತಾರೆ. ಅಳಿಯ ಪ್ರಧಾನವಾದ ಈ ವಂಶಸ್ಥರ ಇಬ್ಬರು ಅಕ್ಕ- ತಂಗಿ ರಾಣಿಯರು ಇದೇ ಸ್ಥಳಕ್ಕೆ ಭೇಟಿ ನೀಡಿದಾಗ ಅವರು ಅದೃಷ್ಯರಾಗುತ್ತಾರೆ. ನಂತರದ ದಿನಗಳಲ್ಲಿ ರಾಜ್ಯದಲ್ಲಿ ಸಂಕಷ್ಟ ಕಾಡಿದಾಗ ಈ ಅಕ್ಕ ತಂಗಿಯರು ಪ್ರೇತಾತ್ಮರಾಗಿ ಅಲೆಯುತ್ತಿದ್ದಾರೆಂದು ಕಂಡು ಬಂದಾಗ ಅಂದಿನ ಅರಸರು ಈ ಸೋದರಿಯರನ್ನು ಪೂಜಿಸುವುದಕ್ಕೋಸ್ಕರ ಒಂದು ಗುಡಿಯನ್ನು ನಿರ್ಮಿಸುತ್ತಾರೆ.  ಇಲ್ಲಿ ನೆಲೆಯಾಗಿರುವ ವನ ದುರ್ಗೆಯನ್ನು ಇಲ್ಲೇ ಪ್ರತಿಷ್ಠಾಪಿಸಿ ನಿರಂತರ ಪೂಜೆ ಸಲ್ಲಿಸುತ್ತಾ ಬರುತ್ತಿದ್ದರು.ಮಕ್ಕಳನ್ನು ದೇವರಿಗೆ ಒಪ್ಪಿಸುವ ಹರಕೆ

ಉಳ್ಳಾಲ್ತಿಗಳೆಂದು ಕರೆಯುವ ಈ ಸಹೋದರಿಯರಿಗೆ ಮಕ್ಕಳಿರಲಿಲ್ಲ. ಇವರಿಗೆ ಮಕ್ಕಳ ಮೇಲಿನ ಅತೀವ ಪ್ರಿತಿಯಿಂದಾಗಿ ಮಕ್ಕಳ ಭಾಗ್ಯ ಹರಸಿ ಬರುವವರಿಗೆ ಇಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ. ಮಕ್ಕಳ ಧೀರ್ಘಾಯುಷ್ಯಕ್ಕಾಗಿ ಇಲ್ಲಿ ಮಕ್ಕಳನ್ನು ಹರಕೆ ಅರ್ಪಿಸುವುದರಿಂದ ಇಷ್ಟಾರ್ಥಿ ಸಿದ್ದಿಸುತ್ತದೆ ಎಂಬ ನಂಬಿಕೆಯಿಂದ ಅಂದಿನ ಅರಸರ ಕಟ್ಟಪ್ಪಣೆಯಂತೆ ಇಂದಿಗೂ ಈ ವಿಟ್ಲ ಸೀಮೆಯ ಎಲ್ಲಾ ಕುಟುಂಬಗಳು ಎಲ್ಲಿದ್ದರೂ ಈ ದಿನದಂದು ಇಲ್ಲಿಗೆ ತಮ್ಮ ಪುಟ್ಟ ಮಕ್ಕಳನ್ನು ತಂದು ದೇವರಿಗೆ ಅರ್ಪಿಸುವ ಪದ್ದತಿ ಜಾರಿಯಲ್ಲಿದೆ.

ಇದನ್ನು ಓದಿ: ಧನುರ್ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದ್ರೆ ಇಷ್ಟಾರ್ಥ ಪೂರ್ಣ

ಉತ್ಸವದ ಸಮಯದಲ್ಲಿ ಮಾತ್ರ ಮಹಿಳೆಯರಿಗೆ ಪ್ರವೇಶ

ಸುಮಾರು ಮಧ್ಯರಾತ್ರಿಯ ಸಮಯ ವಿಟ್ಲ ಸೀಮೆಯ ಅರಸ ವಂಶಸ್ಥರನ್ನು ಮೆರವಣಿಗೆಯ ಮೂಲಕ ಕರೆ ತಂದು  ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಮಕ್ಕಳನ್ನು ದೇವಸ್ಥಾನದ ಪಕ್ಕದಲ್ಲೆ ಇರುವ ನೀರಿನ ಹೊಳೆಗೆ ಮುಳುಗಿಸಿ ದೇವರ ಗರ್ಭಗುಡಿಯ ಮೆಟ್ಟಿಲಿಗೆ ಹಣೆಯನ್ನು ಮುಟ್ಟಿಸುವ ಮೂಲಕ ಹರಕೆಯನ್ನು ಸಲ್ಲಿಸುತ್ತಾರೆ. ಈ ಜಾತ್ರೆಯ ಸಂದರ್ಭದಲ್ಲಿ ಮಾತ್ರವೇ ಮಹಿಳೆಯರು ಈ ದೇವಸ್ಥಾನದ ಒಳಾಂಗಣ ಪ್ರವೇಶಿಸಬಹುದಿದ್ದು, ಉಳಿದ ದಿನಗಳಲ್ಲಿ ಈ ದೇವಸ್ಥಾನದ ಓಳಾಂಗಣಕ್ಕೆ ಮಹಿಳೆಯರ ಪ್ರವೇಶ ನಿಶಿದ್ಧವಾಗಿದೆ. ತಮ್ಮ ಬೇಡಿಕೆ ಈಡೇರಿದ್ದರಿಂದಾಗಿ ಜನ ವಿವಿಧೆಡೆ ಗಳಿಂದ ಬಂದು ತಮ್ಮ ಹರಕೆಯನ್ನು ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ನಂಬಿಕೆಯಲ್ಲೇ ಜೀವನ ಸಾಗಿಸುವ ಇಲ್ಲಿನ ಜನ ಕಜಂಬು ಆಚರಣೆಯನ್ನು  ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದು , ಇಂದಿಗೂ ಈ ಉತ್ಸವ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುತ್ತಿದೆ.
Published by:Seema R
First published: