• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Mogal Dham: ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸು ತಾಯಿ, ಮುಸಲ್ಮಾನರೂ ಇಲ್ಲಿ ತಲೆಬಾಗುತ್ತಾರೆ

Mogal Dham: ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸು ತಾಯಿ, ಮುಸಲ್ಮಾನರೂ ಇಲ್ಲಿ ತಲೆಬಾಗುತ್ತಾರೆ

ದೇವಾಲಯ

ದೇವಾಲಯ

ಕೆಲವೊಂದು ಸ್ಥಳಗಳಿಗೆ ಯಾವುದೇ ಧರ್ಮದ ಹಂಗಿರುವುದಿಲ್ಲ. ಅಂತಹ ನಂಬಿಕೆಯ ಕೇಂದ್ರವೆಂದರೆ ಕಚ್‌ನ ಮೊಘಲ್ ಧಾಮ್. ಗುಜರಾತ್ ಮಾತ್ರವಲ್ಲದೆ ದೇಶದಾದ್ಯಂತದ ಜನರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದ ವಿಶೇಷತೆ ಏನು ಎಂಬುದು ಇಲ್ಲಿದೆ.

 • Local18
 • 3-MIN READ
 • Last Updated :
 • New Delhi, India
 • Share this:

ನಮ್ಮ ಮನಸ್ಸಿನ ಕೆಲವು ಈಡೇರದ ಬಯಕೆಯನ್ನು ಪೂರೈಸುವ ಸಲುವಾಗಿ, ಜನರು ತಮ್ಮ ನಂಬಿಕೆಯ ಅನುಸಾರ ವಿವಿಧ ದೇವಾಲಯಗಳಿಗೆ (Temple) ಹೋಗುತ್ತಾರೆ. ಧರ್ಮದ ಅನುಸಾರ ಅವರ ಅವರ ನಿಯಮಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಂದು ಸ್ಥಳಗಳಿಗೆ ಯಾವುದೇ ಧರ್ಮದ (Religion) ಹಂಗಿರುವುದಿಲ್ಲ. ಅಂತಹ ನಂಬಿಕೆಯ ಕೇಂದ್ರವೆಂದರೆ ಕಚ್‌ನ ಮೊಘಲ್ ಧಾಮ್. ಗುಜರಾತ್ ಮಾತ್ರವಲ್ಲದೆ ದೇಶದಾದ್ಯಂತದ ಜನರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದ ವಿಶೇಷತೆ ಏನು ಎಂಬುದು ಇಲ್ಲಿದೆ.


ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ನೀಡುವ ದೇವಾಲಯ


ಕಛ್‌ನ ಭಚೌ ತಾಲೂಕಿನ ಕಬರಾವ್ ಗ್ರಾಮದ ಮಾ ಮೊಘಲ್ ದೇವಾಲಯವು ಲಕ್ಷಾಂತರ ಜನರ ನಂಬಿಕೆಯ ಸಂಕೇತವಾಗಿದೆ. ವಡ್ವಾಲಾ ಮೊಘಲ್ ಎಂದು ಕರೆಯಲ್ಪಡುವ ಈ ಮೊಗ್ದಲ್ಹಾಮ್‌ನಲ್ಲಿ ಪ್ರತಿದಿನ ಸಾವಿರಾರು ಜನರು ಸಂತಾನಕ್ಕಾಗಿ ಇಲ್ಲಿ ಪ್ರಾರ್ಥನೆ ಮಾಡುತ್ತಾರೆ, ಭಾನುವಾರದಂದು, ದೇವಾಲಯದ ಹೊರಗಿನ ವಿಶಾಲವಾದ ಮೈದಾನವು ವಿವಿಧ ಜಿಲ್ಲೆಗಳಿಂದ ಬಂದಿರುವ ಜನರ ಬಂಡಿಗಳಿಂದ ತುಂಬಿರುತ್ತದೆ.


ಜನರ ನಂಬಿಕೆಯ ಪ್ರಕಾರ ಈ ದೇವಾಲಯದಲ್ಲಿ ಬೇಡಿಕೊಳ್ಳುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗೆಯೇ, ಇಲ್ಲಿ ಬರುವ ಭಕ್ತರಿಂದ ಒಂದು ರೂಪಾಯಿ ಹಣವನ್ನು ಸ್ವೀಕರಿಸುವುದಿಲ್ಲ. ಕುತೂಹಲಕಾರಿ ಅಂಶವೆಂದರೆ ಈ ದೇವಾಲಯದ ಶಕ್ತಿಯನ್ನು ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ ದಂಪತಿಗಳು ನಂಬುತ್ತಾರೆ. ಇಲ್ಲಿ ಪೂಜೆಯ ನಂತರ ಮುಸ್ಲಿಂ ದಂಪತಿಗಳ ಬದುಕಿನಲ್ಲಿ ಸಹ ಮಕ್ಕಳ ಆಗಮನವಾಗಿದೆ ಎನ್ನಲಾಗುತ್ತದೆ.


ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಬರುವ ಭಕ್ತರಿಗೆ ದಿನಕ್ಕೆ ಎರಡು ಬಾರಿ ಊಟದ ಜೊತೆಗೆ ಇಡೀ ದಿನ ಚಹಾದ ಉಚಿತ ವ್ಯವಸ್ಥೆ ಇದೆ. ಜನರು ಮಾತಾಜಿಯ ಆಶೀರ್ವಾದ ಎಂದು ಭಕ್ತಿಯಿಂದ ಇಲ್ಲಿ ಪ್ರಸಾದವನ್ನು ತೆಗೆದುಕೊಳ್ಳುತ್ತಾರೆ. ಲಕ್ಷಗಟ್ಟಲೆ ಭಕ್ತರು ದರ್ಶನಕ್ಕೆ ಬಂದರೂ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಇಟ್ಟಿಲ್ಲ, ದೇವಸ್ಥಾನದಲ್ಲಿ ಹುಂಡಿ ಇಟ್ಟವರು ತಪ್ಪಿತಸ್ಥರು ಎಂಬ ಬೋರ್ಡ್ ಕೂಡ ಹಾಕಲಾಗಿದೆ.
ಮುಸ್ಲಿಂ ದಂಪತಿಗಳು ಸಹ ಈ ದೇವಾಲಯಕ್ಕೆ ಬರುತ್ತಾರೆ


ಮಾ ಮೊಘಲ್‌ ದೇವಾಲಯದಲ್ಲಿ ಪ್ರಾರ್ಥನೆ ಮಾಡುವುದರಿಂದ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಪ್ರತಿದಿನ ಅನೇಕ ದಂಪತಿಗಳು ಈ ದೇವಿಯ ಆಶೀರ್ವಾದದಿಂದ ಮಕ್ಕಳು ಪಡೆದವರಿದ್ದಾರೆ. ಮದುವೆಯಾಗಿ 18 ಮತ್ತು 20 ವರ್ಷಗಳ ಕಾಲ ಸಹ ಮಕ್ಕಳಿಲ್ಲದ ದಂಪತಿಗಳಿಗೆ ಸಹ ಈ ದೇವಾಲಯದ ಆಶೀರ್ವಾದದ ಕಾರಣದಿಂದ ಮಕ್ಕಳಾಗಿರುವ ಘಟನೆಗಳು ಇದೆ.


ಇದನ್ನೂ ಓದಿ: ಈಕೆ ಸಾಕ್ಷಾತ್ ದೇವಿಯ ಪ್ರತಿರೂಪ, ಪಾಡಾಂಗರ ಭಗವತಿಯ ಮಹಿಮೆ!


ದೇವರ ಆಶೀರ್ವಾದದಿಂದ ಮಗು ಜನಿಸಿದ ನಂತರ ದಂಪತಿಗಳು ನವಜಾತ ಶಿಶುವನ್ನು ದೇವಸ್ಥಾನಕ್ಕೆ ಕರೆತಂದು ಹರಕೆಯನ್ನು ತೀರಿಸುತ್ತಾರೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ದೇಣಿಗೆ ನೀಡಿದರೆ ಅದರ ಜೊತೆ ಒಂದು ರೂಪಾಯಿ ಸೇರಿಸಿ ದಂಪತಿಗಳಿಗೆ ವಾಪಾಸ್ ಕೊಡುತ್ತಾರೆ. ಅದನ್ನು ಹೆಣ್ಣು ಮಕ್ಕಳಿಗೆ ನೀಡುವಂತೆ ಹೇಳುತ್ತಾರೆ.

Published by:Sandhya M
First published: