Zodiac Signs: ಮೀನರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ: ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿದೆ ನೋಡಿ

ವರ್ಷದ ಅರ್ಧದಷ್ಟು ಸಮಯ ಈಗಾಗಲೇ ಕಳೆದಿದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಇಲ್ಲಿಯವರೆಗೂ ಅವರವರ ರಾಶಿಫಲಗಳಿಗನುಸಾರವಾದ ಪ್ರತಿಫಲಗಳು ದೊರೆತಿವೆ ಎಂದು ಹೇಳಬಹುದು. ಈಗ ಮೀನ ರಾಶಿಯಲ್ಲಿ ಗುರು ಮತ್ತೆ ಹಿಂತಿರುಗಿ ಬರುತ್ತಿದ್ದು ಈ ಮೂಲಕ ಮತ್ತೊಂದು ದೊಡ್ಡದಾದ ಆಸ್ಟ್ರೋ ಈವೆಂಟ್‌ ಗಾಗಿ ಸಿದ್ಧರಾಗಿ. ಆದರೆ, ಚಿಂತಿಸಬೇಡಿ; ಮೀನ ರಾಶಿಯಲ್ಲಿ ಗುರುವಿನ ಹಿಂಬರುವಿಕೆಯನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಿ.

ಮೀನರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ

ಮೀನರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ

  • Share this:
ವರ್ಷದ ಅರ್ಧದಷ್ಟು ಸಮಯ ಈಗಾಗಲೇ ಕಳೆದಿದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ (Zodiac Sign) ಇಲ್ಲಿಯವರೆಗೂ ಅವರವರ ರಾಶಿಫಲಗಳಿಗನುಸಾರವಾದ ಪ್ರತಿಫಲಗಳು ದೊರೆತಿವೆ ಎಂದು ಹೇಳಬಹುದು. ಈಗ ಮೀನ ರಾಶಿಯಲ್ಲಿ ಗುರು ಮತ್ತೆ ಹಿಂತಿರುಗಿ ಬರುತ್ತಿದ್ದು ಈ ಮೂಲಕ ಮತ್ತೊಂದು ದೊಡ್ಡದಾದ ಆಸ್ಟ್ರೋ ಈವೆಂಟ್‌ ಗಾಗಿ (Astro Event) ಸಿದ್ಧರಾಗಿ. ಆದರೆ, ಚಿಂತಿಸಬೇಡಿ; ಮೀನ ರಾಶಿಯಲ್ಲಿ ಗುರುವಿನ ಹಿಂಬರುವಿಕೆಯನ್ನು ಸಕಾರಾತ್ಮಕ ರೀತಿಯಲ್ಲಿ (Positive Way) ತೆಗೆದುಕೊಳ್ಳಿ. ಅದೃಷ್ಟ (Good Luck) ಮತ್ತು ಬೆಳವಣಿಗೆಯ ಗ್ರಹ ಎಂದು ಪರಿಗಣಿಸಲಾಗುವ ಗುರು, ಜುಲೈ 29, 2022 ರಿಂದ ನವೆಂಬರ್ 24, 2022 ರವರೆಗೆ ಮೀನ ರಾಶಿಯಲ್ಲಿ ಹಿಮ್ಮುಖನಾಗಿ ಚಲಿಸಲಿದ್ದಾನೆ.

ಈ"ಗ್ರೇಟ್ ಬೆನಿಫಿಕ್" ಗ್ರಹವು ಹಿಮ್ಮುಖವಾದಾಗ, ಅದು ನಮ್ಮ ಜೀವನದಲ್ಲಿ ಅಗತ್ಯವಾದ ಅವಕಾಶಗಳನ್ನು ತರುತ್ತದೆ. ಇದು ನಮ್ಮ ಆಲೋಚನೆಗಳನ್ನು ಪುನರ್ವಿಮರ್ಶಿಸಲು ನಮಗೆ ಅವಕಾಶವನ್ನು ನೀಡುತ್ತದೆ ಮತ್ತು ನಮ್ಮ ಜೀವನದಲ್ಲಿ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಇದು ರಾಶಿಚಕ್ರಕ್ಕೆ ಕಠಿಣ ಸಮಯವನ್ನು ಸಹ ತರಬಹುದು. ಆದರೆ ಈ ಆಸ್ಟ್ರೋ ಈವೆಂಟ್ ಅನ್ನು ನಿಮ್ಮ ಜೀವನದಲ್ಲಿ ನಿಮಗೆ ಬೆಳೆಯಲು ಸಿಕ್ಕ ಒಂದು ಅವಕಾಶವಂತೆ ಪರಿಗಣಿಸಿ. ಆದ್ದರಿಂದ ರಾಶಿಚಕ್ರಗಳು, ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ? ಮೀನದಲ್ಲಿ ಈ ಗುರುವಿನ ಹಿಂತಿರುಗುವಿಕೆ ಪ್ರತಿ ರಾಶಿಚಕ್ರದ ಚಿಹ್ನೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಇಲ್ಲಿ ನೋಡೋಣ:

ಮೇಷ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ಮೇಷ ರಾಶಿಯ ವ್ಯಕ್ತಿಗಳಿಗೆ, ಹಿಮ್ಮುಖ ಗುರು 12 ನೇ ಮನೆಯಿಂದ ತನ್ನ ಹಿಮ್ಮುಖ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಮೀನ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ ನಿಮಗೆ ಸರಾಸರಿಗಿಂತ ಉತ್ತಮವಾಗಿದೆ ಎಂದು ಹೇಳಬಹುದು. ಈ ಸಮಯದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಆರ್ಥಿಕವಾಗಿ, ಇದು ನಿಮಗೆ ಸರಾಸರಿ ಎನ್ನಬಹುದಾದ ಅವಧಿಯಾಗಿರಬಹುದು. ಆದಾಗ್ಯೂ, ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ ಕೆಲವು ಸವಾಲುಗಳು ಬರುವುದನ್ನು ನಿರೀಕ್ಷಿಸಬಹುದು. ವಿವಾಹಿತ ಅಥವಾ ಸಂಬಂಧದಲ್ಲಿರುವವರಿಗೆ, ಅವರ ಜೀವನವು ಸಾಮರಸ್ಯ ಮತ್ತು ಶಾಂತಿಯಿಂದ ತುಂಬಿರುತ್ತದೆ.

ವೃಷಭ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ಗುರು ನಿಮ್ಮ 11 ನೇ ಮನೆಯಿಂದ ಹಿಂಚಲಿಸುತ್ತಾನೆ. ಈ ಹಿನ್ನಡೆಯು ವೃಷಭ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುವ ಸಾಧ್ಯತೆಯಿದೆ. ಯಾವುದೇ ಪ್ರಮುಖವಾದ ಆರೋಗ್ಯ ಸಮಸ್ಯೆಗಳೇನು ಉಂಟಾಗುವುದಿಲ್ಲ. ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಈ ಸಮಯವು ಅನುಕೂಲಕರವಾಗಿಲ್ಲ. ಗುರುಗ್ರಹದ ಹಿಮ್ಮುಖ ಚಲನೆಯ ಸಮಯದಲ್ಲಿ, ನಿಮ್ಮ ವ್ಯವಹಾರದಲ್ಲಿ ನೀವು ನಿರೀಕ್ಷಿತ ಲಾಭವನ್ನು ಪಡೆಯದಿರಬಹುದು. ವೈವಾಹಿಕ ಜೀವನವು ಸಾಮಾನ್ಯವಾಗಿರುತ್ತದೆ.

ಇದನ್ನೂ ಓದಿ:  Astrology: ಆಗಸ್ಟ್‌ನಲ್ಲಿ 4 ಗ್ರಹಗಳು ಬದಲಾವಣೆ ; ಈ 5 ರಾಶಿಗಳ ಮೇಲೆ ನೇರ ಪರಿಣಾಮ

ಮಿಥುನ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ಮಿಥುನ ರಾಶಿಯವರಿಗೆ, ಹಿಮ್ಮುಖ ಗುರುವು 10 ನೇ ಮನೆಯಿಂದ ತನ್ನ ತಿರುಗುವಿಕೆಯನ್ನು ಪ್ರಾರಂಭಿಸುತ್ತಾನೆ. ಈ ಹಂತದಲ್ಲಿ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಪಾವಧಿಯ ಹೂಡಿಕೆಯಿಂದ ನೀವು ನಿರೀಕ್ಷಿತ ಲಾಭವನ್ನು ಪಡೆಯದಿರಬಹುದು. ಆದ್ದರಿಂದ ಸ್ವಲ್ಪ ಸಮಯದವರೆಗೆ ಇದನ್ನು ತಪ್ಪಿಸಲು ಸೂಚಿಸಲಾಗಿದೆ. ಈ ಗುರುವಿನ ಹಿನ್ನಡೆಯ ಸಮಯದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಬೇಕು. ನಿಮ್ಮ ಪ್ರೀತಿಯ ಜೀವನವು ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಯಿದೆ. ವಿವಾಹಿತರು ತಮ್ಮ ವೈವಾಹಿಕ ಜೀವನವನ್ನು ಸಹ ಆನಂದಿಸಬಹುದು.

ಕರ್ಕಾಟಕ ರಾಶಿಯ ಮೇಲೆ ಮೀನದಲ್ಲಿ ಗುರು ಹಿನ್ನಡೆಯ ಪರಿಣಾಮಗಳು
ಕರ್ಕ ರಾಶಿಯವರಿಗೆ ಗುರು 9ನೇ ಮನೆಯಿಂದ ಹಿಮ್ಮುಖವಾಗಿ ತಿರುಗುತ್ತಾನೆ. ಮುಂಬರುವ ಸಮಯವು ನಿಮಗೆ ಸ್ವಲ್ಪ ಕಠಿಣವಾಗಿರಬಹುದು. ಗುರುಗ್ರಹದ ಈ ಹಿಮ್ಮುಖ ಚಲನೆಯ ಸಮಯದಲ್ಲಿ ಸಣ್ಣದಾದ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಆರ್ಥಿಕವಾಗಿ, ನಿಮ್ಮ ವ್ಯವಹಾರದ ಬಗ್ಗೆ ಎಚ್ಚರಿಕೆಯಿಂದಿರುವಂತೆ ನಿಮಗೆ ಸೂಚಿಸಲಾಗಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬಹುದು. ವಿವಾಹಿತ ಸ್ಥಳೀಯರಿಗೆ ಸಮಯವು ಸಾಮಾನ್ಯವಾಗಿರುವ ಸಾಧ್ಯತೆಯಿದೆ.

ಸಿಂಹ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ಸಿಂಹ ರಾಶಿಯವರಿಗೆ, ಮೀನ ರಾಶಿಯಲ್ಲಿ ಗುರು ಹಿಂತಿರುಗುವಿಕೆ 8 ನೇ ಮನೆಯಲ್ಲಿ ನಡೆಯುತ್ತದೆ. ಈ ಅವಧಿಯು ನಿಮಗೆ ಸವಾಲಿನಿಂದ ಕೂಡಿರಬಹುದು. ಈ ಸಮಯದಲ್ಲಿ, ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೆಲವು ಅನಿರೀಕ್ಷಿತ ವೆಚ್ಚಗಳು ನಿಮ್ಮನ್ನು ಕಾಡಬಹುದು. ಆದಾಗ್ಯೂ, ಈ ಸಮಯದಲ್ಲಿ ವ್ಯಾಪಾರದಲ್ಲಿ ತೊಡಗಿರುವವರು ಅಥವಾ ಸಂಬಳ ಪಡೆಯುವ ಉದ್ಯೋಗಿಗಳು ಜಾಗರೂಕರಾಗಿರಿ. ಸಮಯವು ನಿಮಗೆ ಅನುಕೂಲಕರವಾಗಿಲ್ಲದಿರುವುದರಿಂದ ದಂಪತಿಗಳ ನಡುವೆ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು.

ಕನ್ಯಾರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ಕನ್ಯಾ ರಾಶಿಯವರಿಗೆ ಗುರುವಿನ ಹಿನ್ನಡೆಯ ನೃತ್ಯವು 7 ನೇ ಮನೆಯಲ್ಲಿ ನಡೆಯಲಿದೆ. ಈ ಹಂತವು ನಿಮಗೆ ಕಠಿಣವಾಗಿರಬಹುದು. ಈ ಹಿಮ್ಮೆಟ್ಟುವಿಕೆಯ ಸಮಯದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ. ನೀವು ದೀರ್ಘಾವಧಿಯ ಹೂಡಿಕೆಗೆ ಯೋಜಿಸುತ್ತಿದ್ದರೆ, ಈ ಸಮಯದಲ್ಲಿ ಅದನ್ನು ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಉದ್ಯಮಿಗಳು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯದಿರಬಹುದು. ವಿವಾಹಿತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಮತ್ತು ವಿವಾದಗಳನ್ನು ಎದುರಿಸಬಹುದು.

ಇದನ್ನೂ ಓದಿ:  Zodiac Sign: ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ರಾಶಿಯ ಜನರು ಇವರಂತೆ

ತುಲಾ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ತುಲಾ ರಾಶಿಯವರಿಗೆ ಗುರುಗ್ರಹದ ಹಿನ್ನಡೆಯು 6ನೇ ಮನೆಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಆನಂದಿಸುವ ಸಾಧ್ಯತೆಯಿದೆ. ಯಾವುದೇ ರೀತಿಯ ಹೂಡಿಕೆಯಲ್ಲಿ ಜಾಗರೂಕರಾಗಿರಿ. ಕೆಲಸ ಮಾಡುವ ವೃತ್ತಿಪರರು ಅಥವಾ ವ್ಯಾಪಾರ ವ್ಯಕ್ತಿಗಳು ತಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸಾಧ್ಯವಾದಷ್ಟು ಜಾಗರೂಕರಾಗಿರಬೇಕು. ಮತ್ತೊಂದೆಡೆ, ನಿಮ್ಮ ಜೀವನ ಸಂಗಾತಿಯೊಂದಿಗೆ ವಾದಗಳು ನಡೆಯುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ವೃಶ್ಚಿಕ ರಾಶಿಯವರಿಗೆ ಹಿಮ್ಮುಖ ಗುರು ನಡೆಯು 5 ನೇ ಮನೆಯಿಂದ ತಿರುಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು, ಏಕೆಂದರೆ ಸಣ್ಣ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಆದಾಗ್ಯೂ, ನಿಮ್ಮ ಹಣವನ್ನು ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಸಂಬಳ ಪಡೆಯುವ ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ತಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ವಿವಾಹಿತ ಸ್ಥಳೀಯರಿಗೆ ಈ ಸಮಯ ಅನುಕೂಲಕರವಾಗಿದೆ.

ಧನು ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುಗ್ರಹದ ಹಿನ್ನಡೆಯ ಪರಿಣಾಮಗಳು
ಧನು ರಾಶಿಯವರಿಗೆ ಗುರು 4ನೇ ಮನೆಯಿಂದ ಹಿಮ್ಮುಖವಾಗಿ ತಿರುಗುತ್ತಾನೆ. ಈ ಅವಧಿಯಲ್ಲಿ, ನಿಮ್ಮ ಆರೋಗ್ಯದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆಯಿದೆ. ನೀವು ಅಲ್ಪಾವಧಿಯ ಹೂಡಿಕೆಗೆ ಯೋಜಿಸುತ್ತಿದ್ದರೆ, ಈ ಸಮಯವನ್ನು ತಪ್ಪಿಸಿ. ಇದು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಣ್ಣಪುಟ್ಟ ವಾದಗಳು ಉಂಟಾಗುವ ಸಾಧ್ಯತೆಗಳಿವೆ.

ಮಕರ ರಾಶಿಯ ಮೇಲೆ ಮೀನದಲ್ಲಿ ಗುರು ಹಿನ್ನಡೆಯ ಪರಿಣಾಮಗಳು
ಮಕರ ರಾಶಿಯವರಿಗೆ, ಹಿಮ್ಮುಖ ಗುರುವು 3 ನೇ ಮನೆಯಿಂದ ತನ್ನ ಹಿಮ್ಮುಖ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಆರೋಗ್ಯದ ವಿಷಯದಲ್ಲಿ, ನೀವು ಯಾವುದೇ ಸಮಸ್ಯೆಗಳನ್ನು ಎದುರಿಸದಿರಬಹುದು. ಈ ಅವಧಿಯಲ್ಲಿ, ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಯಾವುದೇ ಅಪಾಯಕಾರಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳದಂತೆ ನಿಮಗೆ ಸೂಚಿಸಲಾಗಿದೆ. ಈ ಸಮಯವು ಸಂಬಳದಾರರಿಗೆ ಮತ್ತು ವ್ಯಾಪಾರಸ್ಥರಿಗೆ ಮಧ್ಯಮವಾಗಿ ಉಳಿಯುವ ಸಾಧ್ಯತೆಯಿದೆ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ಜಾಗರೂಕರಾಗಿರಬೇಕು. ವಿವಾಹಿತರು ತಮ್ಮ ಪಾಲುದಾರರೊಂದಿಗೆ ಕೆಲವು ವಿವಾದಗಳನ್ನು ಅನುಭವಿಸಬಹುದು.

ಕುಂಭ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರು ಹಿನ್ನಡೆಯ ಪರಿಣಾಮಗಳು
ಕುಂಭ ರಾಶಿಯವರಿಗೆ ಮೀನ ರಾಶಿಯಲ್ಲಿ ಗುರುವಿನ ಸಂಚಾರವು 2ನೇ ಮನೆಯಲ್ಲಿ ನಡೆಯಲಿದೆ. ಈ ಹಿಮ್ಮೆಟ್ಟುವಿಕೆಯು ನಿಮಗೆ ಮಿಶ್ರ ಫಲಿತಾಂಶಗಳನ್ನು ತರುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಆನಂದಿಸುವ ಸಾಧ್ಯತೆಯಿದೆ. ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ, ಆದ್ದರಿಂದ ಈ ಸಮಯದಲ್ಲಿ ಯಾವುದೇ ಅಪಾಯಕಾರಿ ಆರ್ಥಿಕ ಚಟುವಟಿಕೆ ಕೈಗೊಳ್ಳದಂತೆ ನಿಮಗೆ ಸೂಚಿಸಲಾಗಿದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಣ್ಣ ವಾದಗಳು ಏರ್ಪಡುವ ಸಾಧ್ಯತೆಯಿದೆ.

ಮೀನ ರಾಶಿಯ ಮೇಲೆ ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯ ಪರಿಣಾಮಗಳು
ಮೀನ ರಾಶಿಯವರಿಗೆ, ಹಿಮ್ಮುಖ ಗುರುವು ತನ್ನ ಸ್ವಂತ ಮನೆಯಲ್ಲಿ ತಿರುಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ, ನೀವು ಸಣ್ಣ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಹಣಕಾಸಿನ ವಿಷಯದಲ್ಲಿ, ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಅಲ್ಲದೆ, ಈ ಸಮಯವು ವ್ಯಾಪಾರ ಮತ್ತು ಸಂಬಳದ ಉದ್ಯೋಗಿಗಳಿಗೆ ಕಠಿಣವಾಗಿರುತ್ತದೆ. ಸಂಬಂಧದಲ್ಲಿರುವವರು ಅಥವಾ ವಿವಾಹಿತರು ತಮ್ಮ ಪಾಲುದಾರರಿಂದ ಅಂತರವನ್ನು ಅನುಭವಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Tulsi Worship: ಇಷ್ಟಾರ್ಥ ಸಿದ್ಧಿಗೆ ತುಳಸಿ ಪೂಜೆ ವೇಳೆ ಈ ಮಂತ್ರ ಜಪಿಸಿ

ಒಟ್ಟಿನಲ್ಲಿ ಹೇಳಬೇಕೆಂದರೆ, ಗುರುಗ್ರಹದ ಹಿಮ್ಮುಖ ಚಲನೆ ನಿಮಗೆ ಕಠಿಣ ಅಥವಾ ಸುಲಭವಾಗಿರುತ್ತದೆ. ಗುರು ಅವಕಾಶಗಳು ಮತ್ತು ಸಮೃದ್ಧಿಯ ಗ್ರಹ ಎಂಬುದನ್ನು ನೆನಪಿಡಿ, ಆದ್ದರಿಂದ ಅದು ನಿಮಗೆ ಯಾವುದೇ ಸವಾಲುಗಳನ್ನು ತಂದರೆ, ಚಿಂತಿಸಬೇಡಿ ಅದು ನಿಮ್ಮನ್ನು ಮತ್ತಷ್ಟು ಬಲಶಾಲಿಯಾಗಿಸುವ ಉದ್ದೇಶ ಹೊಂದಿರುತ್ತದೆ. ಆದರೆ, ನೀವು ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಚಾನೆಲೈಸ್ ಮಾಡಬೇಕಾಗಿರುವುದು ಮುಖ್ಯವಾಗಿರುತ್ತದೆ.
Published by:Ashwini Prabhu
First published: