• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Sadguru Writes: ಕಾಶ್ಮೀರದ ಭವಿಷ್ಯವನ್ನು ಪುನಃ ಬರೆಯುವ ಸಮಯ, ಕಣಿವೆ ನಾಡಿನ ಬಗ್ಗೆ ಸದ್ಗುರು ಮಾತು

Sadguru Writes: ಕಾಶ್ಮೀರದ ಭವಿಷ್ಯವನ್ನು ಪುನಃ ಬರೆಯುವ ಸಮಯ, ಕಣಿವೆ ನಾಡಿನ ಬಗ್ಗೆ ಸದ್ಗುರು ಮಾತು

ಸದ್ಗುರು

ಸದ್ಗುರು

ನಮ್ಮ ಭೌಗೋಳಿಕ ಮತ್ತು ಜನಾಂಗೀಯ ಗುರುತುಗಳು ಎಲ್ಲೆಗಳನ್ನು ದಾಟಬೇಕೇ ಹೊರತು ಕಳೆದು ಹೋಗಬಾರದು. ನಮ್ಮ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜ್ಞಾನದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು.

  • Share this:

ಕಾಶ್ಮೀರದಲ್ಲಿ (Kashmir) ಒಂದಿಲ್ಲೊಂದು ದೌರ್ಜನ್ಯ ನಡೆದಿದೆ ಎಂಬುದರಲ್ಲಿ ಅನುಮಾನವಿಲ್ಲ. ಆರು ಶತಮಾನಗಳಿಂದ (Century) ಅಲ್ಲಿ ನರಮೇಧಗಳು ಮತ್ತು ಹತ್ಯಾಕಾಂಡಗಳು ನಡೆಯುತ್ತಲೇ ಇದೆ. ನಾವು ಅನೇಕ ಐತಿಹಾಸಿಕ ತಪ್ಪುಗಳನ್ನು (Mistake) ಮಾಡಿದ್ದೇವೆ. ಆಗ ಏನು ಮಾಡಬೇಕಿತ್ತು, ಸಮಾಜವನ್ನು ದಡ ಸೇರಿಸಲು ಮತ್ತು ನಮಗೆ ಅಮೂಲ್ಯವಾದ ವಸ್ತುಗಳನ್ನು ರಕ್ಷಿಸಲು, ಯಾವುದೇ ಕಾರಣಕ್ಕೂ ಮಾಡಲಾಗಲಿಲ್ಲ.


ಪ್ರಪಂಚವು ಇನ್ನೂ ಎಂತಹ ಪರಿಸ್ಥಿತಿಯಲ್ಲಿದೆಯೆಂದರೆ, ಕೇವಲ ವಿದ್ವಾಂಸರು ಇಲ್ಲವೇ ಸೈನಿಕರಿಂದ ಮೌಲ್ಯ ಇರುವ ಯಾವುದನ್ನೂ ಕಾಪಾಡಲು ಸಾಧ್ಯವಾಗುತ್ತಿಲ್ಲ. ಭೌಗೋಳಿಕವಾಗಿ ನಮ್ಮ ದೇಶವನ್ನು ಸುತ್ತುವರಿದಿರುವ ಪರ್ವತಗಳನ್ನು ಕಂಡು ನಮ್ಮ ಈ ದೇಶವನ್ನು ಯಾರೂ, ಏನೂ ಮಾಡಲು ಸಾಧ್ಯವಿಲ್ಲ, ನಮ್ಮನ್ನು ಯಾರೂ ಮುಟ್ಟಲಾರರು ಎಂದು ಬದುಕುತ್ತಿದ್ದೆವು. ಬದುಕಿನ ಅತ್ಯಂತ ಸೂಕ್ಷ್ಮ ಅಂಶಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ, ಇದರ ಅರ್ಥ ತಿಳಿಯದಿದ್ದವರು, ತಮ್ಮದೇ ಅದ ಕ್ರೂರ ಆಲೋಚನೆಗಳಿಂದ ಇದರ ಸಂಪೂರ್ಣ ಲಾಭ ಪಡೆದುಕೊಂಡಿದ್ದಾರೆ. ಈ ತಪ್ಪು ಭಾರತದೆಲ್ಲೆಡೆ ಆಗಿದ್ದರೂ ಅದರ ಹೊಡೆತವನ್ನು ಅನುಭವಿಸಿದವರು ಕಾಶ್ಮೀರದ ಜನ.


ನಿರೂಪಣೆಯನ್ನು ಬದಲಾಯಿಸುವ ಅವಶ್ಯಕತೆ
ಆರ್ಥಿಕವಾಗಿ ಮತ್ತು ಭೌಗೋಳಿಕವಾಗಿ ಪುನರುತ್ಥಾನ ಮಾಡಿ ಜನರು ಸುರಕ್ಷಿತವಾಗಿಯೂ ಇರುವಂತಹ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು ಕಠಿಣ ಕೆಲಸವೇ ಸರಿ. ಆದರೂ ಹಲವಾರು ಪ್ರಯತ್ನಗಳು ನಡೆದಿವೆ. ಆದರೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. 370ನೇ ವಿಧಿಯನ್ನು ರದ್ದು ಪಡಿಸಿದ್ದು ಒಂದು ದೊಡ್ಡ ಹೆಜ್ಜೆಯಾದರೂ, ಅದನ್ನು ಸಂಪೂರ್ಣವಾಗಿ ಜಾರಿಗೆ ತಂದು, ಜನಸಾಮಾನ್ಯರಿಗೆ ಸಾಮಾಜಿಕ ಸುರಕ್ಷತೆ ಕಲ್ಪಿಸುವುದು ಇನ್ನೂ ಸಾಧ್ಯವಾಗಿಲ್ಲ. ಭದ್ರತಾ ಪಡೆಗಳಿಗೆ ನಿಯಂತ್ರಣ ಸಾಧಿಸುವುದು ಬಹಳ ಕಷ್ಟವಾಗಿದೆ. ಬಹಳಷ್ಟು ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿದ್ದರೂ ಇದು ಸಾಧ್ಯವಾಗಿಲ್ಲ.


ಕಾಶ್ಮೀರಿಗಳಿಗೆ ತಮ್ಮ ಭೂಮಿಗೆ ಹಿಂತಿರುಗುವುದು ಕನಸು ಎಂದು ನನಗೆ ತಿಳಿದಿದೆ. ಆದರೆ ಪ್ರತಿ ಕೆಲವು ವಾರಗಳಿಗೊಮ್ಮೆ, ನಾನು "ಇಬ್ಬರು ಸತ್ತರು", "ಐವರು ಸತ್ತರು" ಎಂದು ನೋಡುತ್ತಿದ್ದೇನೆ. ನಮಗೆ ಅದು ಬೇಡ. ಹಿಂದಕ್ಕೆ ಹೋಗಿ ಆ ಭೂಮಿಯನ್ನು ನೇರವಾಗಿ ತೆಗೆದುಕೊಳ್ಳುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ.


ನಾವು ಮಾಡುವುದು ಬಹಳ ಇದೆ, ಆದರೆ ಇದಕ್ಕೆ ಪರಿಹಾರ ಎಂದರೆ, ಮುಖ್ಯವಾಗಿ ಅದರ ಕುರಿತಾದ ನಿರೂಪಣೆಗಳನ್ನು ಬದಲಾಯಿಸುವುದು. ಕಾಶ್ಮೀರದ ಬಗ್ಗೆ ಹಲವಾರು ಅಂತರರಾಷ್ಟೀಯ ಅಭಿಯಾನಗಳು ಮತ್ತು ನಿರೂಪಣೆಗಳು ಪ್ರಚಲಿತವಾಗಿದೆ. ಕೆಲವರು ನೈಜ ನಿರೂಪಣೆಗಳನ್ನು ಕದ್ದಿದ್ದಾರೆ. ನಾವು ನಿರೂಪಣೆಯನ್ನು ಸತ್ಯಕ್ಕೆ ಹಿಂತಿರುಗಿಸಬೇಕು. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಜಾಗೃತಿ ಮೂಡಿಸುವ ಸಿನಿಮಾವೊಂದು ನಿರ್ಮಾಣವಾಗಿದೆ. ಆದರೆ ಪ್ರಪಂಚದಾದ್ಯಂತದ ಜನರ ಹೃದಯವನ್ನು ಕರಗಿಸಲು ನಿಮಗೆ ವೈಯಕ್ತಿಕ ಕುಟುಂಬಗಳ ನೋವುಗಳನ್ನು ಎತ್ತಿ ತೋರಿಸುವ ಹತ್ತರಿಂದ ಹದಿನೈದು ನಿಮಿಷಗಳ ಜಾಹೀರಾತು ಚಲನಚಿತ್ರಗಳು ಬೇಕಾಗುತ್ತವೆ. ಇಂದು, ಪ್ರತಿಯೊಬ್ಬರ ಫೋನ್ ಮತ್ತು ಕಂಪ್ಯೂಟರ್‌ಗಳನ್ನು ತಲುಪುವಂತೆ ಸಂದೇಶವನ್ನು ಹರಡುವ ತಂತ್ರಜ್ಞಾನವನ್ನು ನಾವು ಹೊಂದಿದ್ದೇವೆ.


ಕಾಶ್ಮೀರದಲ್ಲಿ ನಡೆದಿರುವ ಅನ್ಯಾಯ ಮತ್ತು ದುರಂತಗಳು ದೇಶಾದ್ಯಂತ ಎಲ್ಲರೂ ಅಂಗೀಕರಿಸಬೇಕೆಂದು ಸಮುದಾಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದು. ಪ್ರತಿಯೊಂದು ಪ್ರಮುಖ ನಗರದಲ್ಲಿ, ಒಂದು ಬೀದಿ ಅಥವಾ ಸರ್ಕಲ್ ಅಥವಾ ಚೌಕಿಗಳನ್ನು ಕಾಶ್ಮೀರದ ಹೆಸರುಗಳಿಂದ ಗುರುತಿಸಬೇಕು. ಅಥವಾ ಒಂದು ಕಶ್ಯಪ ಪರ್ವತ ಅಥವಾ ಶಿಖರವೂ ಆಗಬಹುದು.ಇವೆಲ್ಲಾ ಬಹಳ ಕೆಳಮಟ್ಟದ ಉಪಾಯಗಳು ಎಂಬುದು ನನಗೆ ಗೊತ್ತಿದೆ, ಆದರೆ, ಕಾಶ್ಮೀರದ ವೈಭವ ಮತ್ತು ಕಾಶ್ಮೀರದ ಕ್ರೂರ ಇತಿಹಾಸ ಎಲ್ಲವೂ ಭಾರತೀಯರ ಜನಮನದಲ್ಲಿ ಉಳಿಯಬೇಕು ಮತ್ತು ಆಚರಿಸಬೇಕೆಂದರೆ, ನಾವು ಇಂತಹ ಗುರುತುಗಳನ್ನು ರಚಿಸಬೇಕಾಗಿದೆ. ಇದು ಅತ್ಯಗತ್ಯ. ಏಕೆಂದರೆ, ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಈ ಕರ್ಮಖಾಂಡಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದವರು ನಮ್ಮ ನಡುವೆ ಇಲ್ಲದೇ ಹೋಗಬಹುದು. ಇವೆಲ್ಲಾ ಜನಮನದಲ್ಲಿ, ಅವರ ಹೃದಯಗಳಲ್ಲಿ ಅಚ್ಚಳಿಯದೆ ಉಳಿಯದೇ ಹೋದರೆ, ಎಲ್ಲವೂ ಮರೆತುಹೋಗುತ್ತದೆ.


ಸಾಂಸ್ಕೃತಿಕವಾಗಿ ಶ್ರೀಮಂತವಾದ ಭವಿಷ್ಯವನ್ನು ರೂಪಿಸುವುದು
ಕಾಶ್ಮೀರ - ಅದರ ಸಂದೇಶ ಮತ್ತು ಅದರ ಭವ್ಯ ಸ್ವರೂಪ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅದರ ಆಧ್ಯಾತ್ಮಿಕ ಜ್ಞಾನವು ಮುಂದಿನ ಪೀಳಿಗೆಗೆ ಕಂಡಿತವಾಗಿಯೂ ನಾನಾ ರೀತಿಯಲ್ಲಿ ಪ್ರಬಲ ಅಸ್ತ್ರವಾಗಿದೆ. ನಾನಿದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. ನಾನು ಕಾಶ್ಮೀರದ ಪರ್ವತ-ಕೆಣಿವೆಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ, ಆದರೆ, ಕಾಶ್ಮೀರದ ಹಿಂದೂ ಸಮುದಾಯವು ಭರಿಸಿದ್ದ ಜ್ಞಾನ ಭಂಡಾರ ಬಹಳ ಪ್ರಮುಖವಾಗುತ್ತದೆ.


ನಮ್ಮ ಭೌಗೋಳಿಕ ಮತ್ತು ಜನಾಂಗೀಯ ಗುರುತುಗಳು ಎಲ್ಲೆಗಳನ್ನು ದಾಟಬೇಕೇ ಹೊರತು ಕಳೆದು ಹೋಗಬಾರದು. ನಮ್ಮ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜ್ಞಾನದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು.


ಇದನ್ನೂ ಓದಿ: 12 ವರ್ಷಗಳ ನಂತರ ಅಪರೂಪದ ಗ್ರಹಗಳ ಸಂಯೋಗ, 3 ರಾಶಿಯವರ ನಸೀಬು ಫುಲ್ ಚೇಂಜ್!


ಕಾಶ್ಮೀರದ ಎಲ್ಲಾ ಯುವಜನತೆ ಈ ನಿಟ್ಟಿನಲ್ಲಿ ತೊಡಗಿಸಕೊಳ್ಳಬೇಕು. ನೀವು ಇನ್ನೂ ಒಂದು ಮಾಡಬಹುದು, ದೇಶಾದ್ಯಂತ ಮತ್ತು ವಿಶ್ವಾದ್ಯಂತ ಕಾಶ್ಮೀರ ದಿನಾಚರಣೆಯನ್ನು ಆಚರಿಸಬಹುದು. ಮತ್ತು ಈ ಆಚರಣೆಯಲ್ಲಿ ನಿಮ್ಮ ಸಾಹಿತ್ಯ, ಕಲೆ, ಸಂಗೀತ, ಮತ್ತು ಕಥೆಗಳನ್ನು ಪರಿಚಯಿಸಬಹುದು - ಕೇವಲ ಕರಾಳ ವಸ್ತುಗಳನ್ನಲ್ಲದೆ, ಕಾಶ್ಮೀರದ ಸಂಸ್ಕೃತಿಯ ಸೌಂದರ್ಯ ಮತ್ತು ಸಾಮರ್ಥ್ಯಗಳನ್ನು ಕೂಡ. ಜನರು ನೀವು ಏನು ಎಂಬುದನ್ನು ತಿಳಿದು ನಿಮ್ಮೊಡನೆ ಸ್ಪಂದಿಸಬೇಕೇ ಹೊರತು ನಿಮಗೇನಾಗಿದೆ ಎಂಬುದರ ಮೇಲಲ್ಲ. ಇದು ಆಗಲೇಬೇಕು. ಆಗ ಯುವಜನತೆ ಹತಾಶೆಯಲ್ಲಿ ಬದುಕದೆ, ನಿರೂಪಕಗಳನ್ನು ಬದಲಿಸಲು ಇದು ಬಹಳ ಮುಖ್ಯವಾಗುತ್ತದೆ.


ಕ್ಯಾಂಪ್ ಗಳ ವಾತಾವರಣ ಇನ್ನೊಂದು ಮುಖ್ಯವಾದ ಕಳಕಳಿಯ ವಿಷಯ. ನಮ್ಮ ಸರ್ಕಾರದ ಸ್ವರೂಪ ಹೇಗಿದೆಯೆಂದರೆ, ಬದಲಾವಣೆ ತರುವ ಉದ್ದೇಶವಿದ್ದರೂ ಅವರ ಕಾರ್ಯ ತಂತ್ರದ ಯಂತ್ರಗಳು ಬಹಳ ನಿಧಾನ ಚಲನೆ ಹೊಂದಿದೆ. ಆದರೆ ಕ್ಯಾಂಪ್ ಗಳ ಅಭಿವೃದ್ಧಿ ಬಹಳ ಸಮಯ ತೆಗೆದುಕೊಳ್ಳುವಂತಹುದಲ್ಲ. ಕ್ಯಾಂಪ್ ಗಳಿಗಾಗಿ ಹಲವು ಕೋಟಿ ಹೂಡುವ ಸಾಮರ್ಥವುಳ್ಳ ನಿಗಮಗಳನ್ನು ಗುರುತಿಸುವುದು ಮುಖ್ಯ. ಇದರಿಂದ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತದೆ. ಸತತವಾಗಿ ಸರ್ಕಾರಗಳ ಕಾರ್ಯಾಚರಣೆಗೆ ಕಾಯುವುದಕ್ಕಿಂತ ಇದು ಉತ್ತಮ ಮತ್ತು ಶೀಘ್ರ ಪರಿಹಾರವಾಗುತ್ತದೆ.


ನನ್ನ ಸಹಾನುಭಾವತಿಯನ್ನು ವ್ಯಕ್ತಪಡಿಸಲು ನನ್ನಲ್ಲಿ ಸಾಕಷ್ಟು ಪದಗಳಿಲ್ಲ, ಅಥವಾ ಸಿದ್ಧವಾದ ನಿಶ್ಚಿತ ಪರಿಹಾರವೂ ಇಲ್ಲ. ನಾನು ಯಾವುದೇ ರೀತಿಯ ಸಮಾಧಾನಕರ ಪರಿಹಾರವನ್ನು ಸೂಚಿಸಿಲ್ಲ ಎಂದು ನನಗೆ ತಿಳಿದಿದೆ. ಆದರೆ ನನ್ನ ಹೃದಯವು ಕಾಶ್ಮೀರದ ಹಿಂದೂ ಸಮುದಾಯಕ್ಕಾಗಿ ತುಡಿಯುತ್ತದೆ. ನಾವು ಭೂತಕಾಲವನ್ನು ತಿದ್ದಲಾಗುವುದಿಲ್ಲ, ಆದರೆ, ಭವಿಷ್ಯತ್ತಿನ ಬಗ್ಗೆ ಹೇಗೆ ಖಂಡಿತವಾದ ಅಭಿಪ್ರಾಯ ಹೊಂದುವುದು? ನಾವು ನಮ್ಮ ಹಿರಿಯರ ನೋವು ಮತ್ತು ಕಷ್ಟಗಳಲ್ಲಿ ಮುಳುಗಿರಬೇಕೆಂದೇನಿಲ್ಲ. ಆದರೆ, ನಾವು ನಮ್ಮ ಮಕ್ಕಳಿಗೆ ಒಂದು ಭದ್ರ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿದ ಭವಿಷ್ಯವನ್ನು ಸೃಷ್ಟಿಸಬಹುದು.


ಇದನ್ನೂ ಓದಿ: ನಿಮ್ಮ ಮಗ ಬುಧವಾರ ಹುಟ್ಟಿದ್ರೆ ಗಣೇಶನ ಈ ಹೆಸರನ್ನೂ ಇಡಬಹುದು ನೋಡಿ


ಭಾರತದಲ್ಲಿನ ಐವತ್ತು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿರುವ ಸದ್ಗುರು ಒಬ್ಬ ಯೋಗಿ, ಅತೀಂದ್ರಿಯ, ದಾರ್ಶನಿಕ ಮತ್ತು ನ್ಯೂಯಾರ್ಕ್ ಟೈಮ್ಸ್ ಹೆಚ್ಚು ಮಾರಾಟವಾಗುವ ಲೇಖಕ. ಸದ್ಗುರುಗಳಿಗೆ ಭಾರತ ಸರ್ಕಾರವು 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿದೆ, ಇದು ಅತ್ಯುನ್ನತ ವಾರ್ಷಿಕ ನಾಗರಿಕ ಪ್ರಶಸ್ತಿ, ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಅವರು ವಿಶ್ವದ ಅತಿದೊಡ್ಡ ಜನರ ಆಂದೋಲನದ ಸಂಸ್ಥಾಪಕರಾಗಿದ್ದಾರೆ, ಕಾನ್ಶಿಯಸ್ ಪ್ಲಾನೆಟ್ - ಸೇವ್ ಮಣ್ಣನ್ನು 3.9 ಶತಕೋಟಿ ಜನರನ್ನು ಮುಟ್ಟಿದೆ. ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳಾಗಿವೆ ಮತ್ತು ಈ ಪ್ರಕಟಣೆಯ ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ.

First published: