• Home
  • »
  • News
  • »
  • astrology
  • »
  • Dream Hack: ನಿಮ್ಮ ಕನಸಿನಲ್ಲಿ ಹಾವು ಬರ್ತಾ ಇದ್ಯಾ? ಇಲ್ಲಿದೆ ಇದಕ್ಕೆ ಕಾರಣ ಮತ್ತು ಪರಿಹಾರ

Dream Hack: ನಿಮ್ಮ ಕನಸಿನಲ್ಲಿ ಹಾವು ಬರ್ತಾ ಇದ್ಯಾ? ಇಲ್ಲಿದೆ ಇದಕ್ಕೆ ಕಾರಣ ಮತ್ತು ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Snake Dream: ಹಾವು ಅಂತ ಪದವನ್ನು ಕೇಳ್ತಾನೇ ಕೆಲವೊಬ್ಬರಿಗೆ ಮೈ ನಡುಕ ಬರುತ್ತದೆ. ಇನ್ನು ಕೆಲ ಮಂದಿಗೆ ಹಾವನ್ನು ಕಂಡರೆ ಕುಸಿದು ಬೀಳ್ತಾರೆ. ಇದೆಲ್ಲವೂ ಒಂದು ಪಂಗಡವಾದರೆ ಕನಸಿನಲ್ಲಿ ಹಾವು ಕಾಣುವುದು, ಇದರಿಂದ ದಿನವಿಡೀ ಮನಸ್ಸು ಹಾಳು ಮಾಡಿಕೊಳ್ಳುವ ಜನರೂ ಇದ್ದಾರೆ.

  • Share this:

ಹಗಲು ಕನಸು (Dream) ಕಾಣುವ ವ್ಯಕ್ತಿಗಳನ್ನು ಸಮಾಜದಲ್ಲಿ ನಾವು ಸಾಕಷ್ಟು ಜನಗಳನ್ನು ಕಾಣಬಹುದು. ಅದರಲ್ಲಿ ಸಾಮಾನ್ಯವಾಗಿ ತಮ್ಮ ಭವಿಷ್ಯ ಅಥವಾ ಡ್ರೀಮ್ ಹುಡುಗಿ/ಹುಡುಗನನ್ನು ಯೋಚಿಸುತ್ತಿರುತ್ತಾರೆ. ದೇಹ ಮಾತ್ರ ಇದ್ದ ಜಾಗದಲ್ಲಿ ಇರುತ್ತದೆ ಆದರೆ ಯಾರು ಮಾತನಾಡಿದರೂ ಕೇಳಿಸುವುದಿಲ್ಲ. ಇದಕ್ಕಾಗಿಯೇ ಯಾರದರೂ ಕರೆದಾಗ ನಾವು ಪ್ರತಿಕ್ರಿಯಿಸಲಿಲ್ಲವೆಂದರೆ ಏನು ಹಗಲು ಕನಸು ಕಾಣ್ತಾ ಇದ್ಯಾ ಅಂತ ಬೈತಾರೆ ಅಲ್ವಾ? ಇದೇ ರೀತಿಯಾಗಿ ರಾತ್ರಿಯಲ್ಲಿ ಮಾತನಾಡುವವರು ಮತ್ತು ರಾತ್ರಿ ಕನಸುಗಳನ್ನು ಕಾಣುವವರು ಹೆಚ್ಚಿದ್ದಾರೆ. ಅದರಲ್ಲೂ ಭಯಾನಕವಾಗಿ ಕನಸುಗಳನ್ನು ಕಂಡು ಭಯಭೀತರಾಗುವವರ (Fear) ಸಂಖ್ಯೆಯು ಕೂಡ ಹೆಚ್ಚು.


ಹೌದು. ಹಾಗಾಗಿ ರಾತ್ರಿ ಮಲಗುವ ಮುನ್ನ ದೇವರನ್ನು ನೆನೆಸಿಕೊಂಡು ಮಲಗಬೇಕು ಎಂದು ಹಿರಿಯರು ಹೇಳುತ್ತಾರೆ. ರಾತ್ರಿ ಬಿದ್ದ ಕನಸುಗಳು ಕೂಡ ಸರಿಯಾಗಿ ನೆನಪಿರುವುದಿಲ್ಲ. ಅದಕ್ಕೆ ಅರ್ಥ ಕೂಡ ಇರುವುದಿಲ್ಲ. "ರಾಮಾಯ ರಾಮಭದ್ರಾಯ" ಈ ಶ್ಲೋಕವನ್ನು ಪಠಿಸಿ ಮಲಗಿದರೆ ಕೆಟ್ಟ ಕನಸುಗಳು ಬೀಳುವುದನ್ನು ತಪ್ಪಿಸಬಹುದು


ರಾತ್ರಿಯ ಕನಸಿನಲ್ಲಿ ಹಾವು ಕಂಡರೆ ಏನು ಮಾಡಬೇಕು?
ಹಾವು ಅಂತ ಪದವನ್ನು ಕೇಳ್ತಾನೇ ಕೆಲವೊಬ್ಬರಿಗೆ ಮೈ ನಡುಕ ಬರುತ್ತದೆ. ಇನ್ನು ಕೆಲ ಮಂದಿಗೆ ಹಾವನ್ನು ಕಂಡರೆ ಕುಸಿದು ಬೀಳ್ತಾರೆ. ಇದೆಲ್ಲವೂ ಒಂದು ಪಂಗಡವಾದರೆ ಕನಸಿನಲ್ಲಿ ಹಾವು ಕಾಣುವುದು, ಇದರಿಂದ ದಿನವಿಡೀ ಮನಸ್ಸು ಹಾಳು ಮಾಡಿಕೊಳ್ಳುವ ಜನರೂ ಇದ್ದಾರೆ.


ಇದನ್ನೂ ಓದಿ: ಯಾವ ರಾಶಿಯವರು ತುಂಬಾ ತಿನ್ನುತ್ತಾರೆ? ಇವರು ಆರೊಗ್ಯದ ಕಡೆ ಗಮನ ಕೊಡಲೇ ಬೇಕು


ಶಾಸ್ತ್ರಗಳ ಪ್ರಕಾರ ಸನಾತನ ಧರ್ಮದಲ್ಲಿ ಹಾವನ್ನು ಶಿವನ ಕೊರಳಿನ ಆಭರಣವೆಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ, ಕನಸಿನಲ್ಲಿ ಹಾವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಶುಭ ಸಮಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನೀವು ಎಲ್ಲಿಂದಲಾದರೂ ಆಸ್ತಿ ಅಥವಾ ಹಣವನ್ನು ಪಡೆಯಬಹುದು. ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಬಹುದು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಹಾವುಗಳ ದರ್ಶನವನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಕೆಲವು ವಿಪತ್ತಿನ ಆಗಮನವನ್ನು ಸೂಚಿಸುತ್ತದೆ.


ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಬಹಳಷ್ಟು ಹಾವುಗಳು ಒಟ್ಟಿಗೆ ಕಾಣಿಸಿಕೊಂಡರೆ, ಅದು ಮುಂದಿನ ದಿನಗಳಲ್ಲಿ ಏನಾದರೂ ಸಂಕಷ್ಟಗಳು ಸಂಭವಿಸುವ ಸಂಕೇತವಾಗಿದೆ. ನಿಮ್ಮ ಕನಸಿನಲ್ಲಿ ಸತ್ತ ಹಾವು ಕಂಡರೆ ನಿಮ್ಮ ಜಾತಕದಲ್ಲಿ ರಾಹು ದೋಷವಿದೆ ಎಂದರ್ಥ. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ ದೋಷವನ್ನು ಹೋಗಲಾಡಿಸುವುದು ಸೂಕ್ತ. ಮತ್ತೊಂದೆಡೆ, ನಿಮ್ಮ ಕನಸಿನಲ್ಲಿ ಹಾವು ಕಚ್ಚುವುದನ್ನು ನೀವು ನೋಡಿದರೆ, ನೀವು ತೀರ್ವವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು ಎಂದರ್ಥವಾಗಿದೆ.


ಇದು ಶುಭ?
ನಿಮ್ಮ ಕನಸಿನಲ್ಲಿ ಹಾವು ಹಾದು ಹೋಗುವುದನ್ನು ಕಂಡರೆ ನೀವು ಸಂತೋಷಪಡಬೇಕು ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತಹ ಕನಸು ಕಂಡರೆ ದೇವರ ಅನುಗ್ರಹ ನಿಮ್ಮ ಮೇಲೆ ಉಳಿಯುತ್ತದೆ ಎಂದರ್ಥ. ಮತ್ತೊಂದೆಡೆ, ನೀವು ಚಿನ್ನದ ಬಣ್ಣದ ಹಾವನ್ನು ನೋಡಿದರೆ, ನಿಮ್ಮ ಪೂರ್ವಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ಸಂತೋಷಪಡಿಸಲು ಪೂಜೆಯನ್ನು ಮಾಡಬೇಕು. ಮತ್ತೊಂದೆಡೆ, ಕನಸಿನಲ್ಲಿ ಬಿಳಿ ಬಣ್ಣದ ಹಾವನ್ನು ನೋಡುವುದು ಎಂದರೆ ವ್ಯಕ್ತಿಯು ಶೀಘ್ರದಲ್ಲೇ ಶ್ರೀಮಂತನಾಗಲಿದ್ದಾನೆ ಎಂದರ್ಥ.


ಇದನ್ನೂ ಓದಿ: ಆಫೀಸ್​ನಲ್ಲಿ ಯಾರ್​ ಏನೇ ಅಂದ್ರು ತಲೆ ಕೆಡಿಸಿಕೊಳ್ಳಬೇಡಿ, ಇಂದು ಈ ರಾಶಿಯವರದ್ದೇ ಜಯ!


ಹಾವನ್ನು ಕಂಡಾಗ ನಿಮಗೆ ಭಯವಾಗಬಹುದು. ಕೆಲವೊಬ್ಬರಿಗೆ ಅದು ಸರ್ಪ ದೋಷ ಎಂದು ಪರಿಗಣಿಸಲಾಗುತ್ತದೆ. ಪರಿಹಾರವನ್ನು ಕೂಡ ಮಾಡಬಹುದು. ಹಾಗಾಗಿಯೇ ಹಾವನ್ನು ಸಾಯಿಸುವುದು ಮತ್ತು ಅದಕ್ಕೆ ಕೇಡನ್ನು ಉಂಟು ಮಾಡುವುದನ್ನು ಮಾಡಿದರೆ ಇಂತಹ ದೋಷಗಳನ್ನು ಎದುರಿಸಬೇಕಾಗುತ್ತದೆ.


ಇನ್ನು ಮುಂದೆ ಹಾವು ಕನಸಿನಲ್ಲಿ ಕಂಡರೆ ಭಯ ಪಡುವುದನ್ನು ಬಿಡಿ. ಅದಕ್ಕೆ ಆಹಾರಗಳನ್ನು ನೀಡಿ. ಜೊತೆಗೆ ನಿಮ್ಮ ಮನೆಯ ದೇವರ ಮನೆಯಲ್ಲಿ ನಾಗ ದೇವರ ಮೂರ್ತಿಗೆ ಪೂಜೆ ಮಾಡಿ ಮತ್ತು ನಾಗಬನಕ್ಕೆ ತೆರಳಿ. ಹಾವಿಗೆ ಏನಾದರೂ ದಾನವನ್ನು ಮಾಡುವುದರಿಂದ ಈ ರೀತಿಯ ಕನಸುಗಳು ಬೀಳುವುದನ್ನು ತಪ್ಪಿಸಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು