Bad Dreams: ಕನಸಿನಲ್ಲಿ ಬೆಕ್ಕು, ಸೂರ್ಯಾಸ್ತ ಕಂಡರೆ ಏನು ಅರ್ಥ; ಏನು ಹೇಳುತ್ತದೆ ಸ್ವಪ್ನಾ ಶಾಸ್ತ್ರ?

ಕನಸಿನಲ್ಲಿ ಕಾಣುವ ಸಂಗತಿ ಏನನ್ನು ಪ್ರತಿನಿಧಿಸುತ್ತವೆ ಎಂದು ತಿಳಿಯುವ ಕುತೂಹಲ ಬಹುತೇಕ ಮಂದಿಗೆ ಇರುತ್ತದೆ. ಅದರಂತೆ ಸ್ವಪ್ನ ಶಾಸ್ತ್ರದಲ್ಲಿ ಕನಸುಗಳ ಅರ್ಥಗಳನ್ನು ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕನಸುಗಳು (Dreams) ನಿದ್ದೆಯ ಗಾಢತೆಯನ್ನು ಹೆಚ್ಚು ಮಾಡುವುದರ ಜೊತೆಗೆ ಮನಸಿನ ಸೂಪ್ತ ಭಾವನೆಗಳನ್ನು ಹೊರ ಹಾಕುತ್ತವೆ. ಅನೇಕ ಕನಸುಗಳು ನಮ್ಮನ್ನು ನಿದ್ದೆಯಿಂದ ಎಚ್ಚರವಾಗಲು ಬಿಡದಿದ್ದರೆ, ಮತ್ತಷ್ಟು ಕನಸುಗಳು ನಿದ್ದಯೇ ಬಾರದಂತೆ ಮಾಡಿ ಭಯ (Fear) ಹುಟ್ಟಿಸುತ್ತವೆ. ಕನಸು ಮನಸ್ಸಿನ ಭಾವನೆ ಜೊತೆಗೆ ಭವಿಷ್ಯದ ಮುನ್ಸೂಚನೆಯನ್ನು ತಿಳಿಸುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಕನಸಿನಲ್ಲಿ ಕಂಡ ವಸ್ತುಗಳು ಮುಂದಿನ ಘಟನೆಗಳ ಸೂಚಕ ಎನ್ನುಲಾಗುತ್ತದೆ.

    ಸಪ್ನಾ ಶಾಸ್ತ್ರದ ಪ್ರಕಾರ, ಯಾವುದೇ ಕನಸು ನಮ್ಮ ಜೀವನದಲ್ಲಿ ನಡೆಯುವ ಘಟನೆಗಳೊಂದಿಗೆ ಸಂಬಂಧಿಸಿದೆ. ಕನಸುಗಳು ನಮಗೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಸೂಚಿಸುತ್ತವೆ. ಇಂತಹ ಕನಸಿನ ಅರ್ಥವನ್ನು ನಾವು ಹುಡುಕುತ್ತೇವೆ ಕೂಡ. ಕನಸಿನಲ್ಲಿ ಕಾಣುವ ಸಂಗತಿ ಏನನ್ನು ಪ್ರತಿನಿಧಿಸುತ್ತವೆ ಎಂದು ತಿಳಿಯುವ ಕುತೂಹಲ ಬಹುತೇಕ ಮಂದಿಗೆ ಇರುತ್ತದೆ. ಅದರಂತೆ ಸ್ವಪ್ನ ಶಾಸ್ತ್ರದಲ್ಲಿ ಕನಸುಗಳ ಅರ್ಥಗಳನ್ನು ನೀಡಲಾಗಿದೆ.

    ಸ್ವಪ್ನ ಶಾಸ್ತ್ರದ ಪ್ರಕಾರ ಕೆಲವು ಕನಸುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳು ಕಂಡುಬಂದರೆ, ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವುಗಳ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ನಂಬಲಾಗಿದೆ. ಹಾಗಾದರೆ ಅಶುಭಕರ ಕನಸುಗಳು ಯಾವುವು ಮತ್ತು ಅವುಗಳ ದುಷ್ಪರಿಣಾಮಗಳನ್ನು ತಪ್ಪಿಸುವ ಮಾರ್ಗ ಏನು ಎಂಬುದಕ್ಕೆ ಇಲ್ಲಿದೆ ವಿವರಣೆ

    ಸೂರ್ಯಾಸ್ತ ಕಂಡರೆ ಅಶುಭ

    ನೀವು ಪ್ರವಾಹ ಅಥವಾ ಕೊಳಕು ನೀರನ್ನು ನೋಡಿದರೆ, ಈ ಕನಸುಗಳು ಶುಭವಲ್ಲ. ಹಾಗೆಯೇ, ಕನಸಿನಲ್ಲಿ ಸೂರ್ಯಾಸ್ತವನ್ನು ಶುಭ ಸಂಕೇತ ಎಂದು ಪರಿಗಣಿಸುವುದಿಲ್ಲ. ಈ ಕನಸುಗಳು ನಿಮ್ಮ ಜೀವನದಲ್ಲಿ ಕೆಲವು ಅಹಿತಕರ ಘಟನೆಗಳ ಸಂಕೇತವಾಗಿದೆ ಎಂದು ನಂಬಲಾಗಿದೆ. ಕನಸಿನಲ್ಲಿ ಸಮುದ್ರವನ್ನು ನೋಡುವುದು ಸಹ ಕೆಟ್ಟದರ ಮುನ್ಸೂಚನೆ ಎನ್ನಲಾಗುತ್ತದೆ. ನಿಮ್ಮ ಕನಸಿನಲ್ಲಿ ಸಮುದ್ರವನ್ನು ನೀವು ನೋಡಿದರೆ, ನಿಮ್ಮ ಮಾತನ್ನು ನಿಯಂತ್ರಿಸಲು ನೀವು ಪ್ರಯತ್ನಿಸಬೇಕು. ಈ ಕನಸು ಯಾರೊಂದಿಗಾದರೂ ವಾದವನ್ನು ಸೂಚಿಸುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ.

    ಇದನ್ನು ಓದಿ: Rudraksha: ಈ ನಿಯಮದಂತೆ ರುದ್ರಾಕ್ಷಿ ಧರಿಸಿದರೆ ಸಿಗಲಿದೆ ಶಿವನ ಅನುಗ್ರಹ

    ಬೆಕ್ಕು ಕಂಡರೆ ಏನು ಅರ್ಥ

    ನಿಮ್ಮ ಕನಸಿನಲ್ಲಿ ಕುದುರೆಯಿಂದ ಬೀಳುವುದನ್ನು ನೋಡಿದರೆ, ಈ ಕನಸನ್ನು ನಿಮ್ಮ ವೃತ್ತಿಜೀವನದಲ್ಲಿ ತೊಂದರೆಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಕನಸಿನಲ್ಲಿ ಬೆಕ್ಕು, ಒಣ ಕಾಡು ಅಥವಾ ಒಣ ಮರಗಳನ್ನು ನೋಡುವುದು ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಒಳ್ಳೆಯದಲ್ಲ

    ಇದನ್ನು ಓದಿ: Bad Dreams: ಕೆಟ್ಟ ಕನಸುಗಳು ಇದೇ ಕಾರಣಕ್ಕೆ ನಿಮ್ಮನ್ನು ನಿದ್ರಿಸಲು ಬಿಡುತ್ತಿಲ್ಲ

    ಕನಸಿನಲ್ಲಿ ಕತ್ತರಿ ಕಂಡರೆ ಅದು ನಿಮ್ಮ ವೈವಾಹಿಕ ಜೀವನ ಮತ್ತು ಸಂಬಂಧಗಳಿಗೆ ಅಶುಭದ ಸೂಚನೆ. ಈ ಕನಸುಗಳನ್ನು ಪ್ರೇಮ ಜೀವನ ಮತ್ತು ವೈವಾಹಿಕ ಜೀವನಕ್ಕೆ ತೊಂದರೆ ಎದುರಾಗುತ್ತದೆ ಎಂದು ಸೂಚಿಸುತ್ತದೆ. ಅಂತಹ ಕನಸುಗಳು ಬಂದಾಗ ಸಂಯಮದಿಂದ ವರ್ತಿಸಬೇಕು.

    ಬೆಟ್ಟದಿಂದ ಬಿದ್ದ ಕನಸಿನ ಅರ್ಥ

    ಇನ್ನು ಕೆಲವರಿಗೆ ಬೆಟ್ಟ ಅಥವಾ ಕಟ್ಟಡಗಳಿಂದ ಬಿದ್ದ ರೀತಿ ಕನಸು ಬೀಳುತ್ತದೆ. ಇಂತಹ ಕನಸುಗಳು ಉದ್ಯೋಗ ಅಥವಾ ವ್ಯಾಪಾರದಲ್ಲಿ ನಷ್ಟವನ್ನು ಪ್ರತಿಬಿಂಬಿಸುತ್ತವೆ ಎನ್ನಲಾಗಿದೆ.

    ದುಸ್ವಪ್ನಗಳಿಗೆ ಪರಿಹಾರಗಳು

    ಯಾವುದೇ ಅಶುಭ ಕನಸು ಕಂಡರೆ, ಬೆಳಿಗ್ಗೆ ಎದ್ದು ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಇದಲ್ಲದೆ, ಕನಸುಗಳ ಅಶುಭ ಪರಿಣಾಮಗಳನ್ನು ತಪ್ಪಿಸಲು ದುರ್ಗಾ ಸಪ್ತಶತಿಯನ್ನು ಪಠಿಸಬೇಕು. ಇದು ನಿಮ್ಮ ಜೀವನದ ತೊಂದರೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: