• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Vastu Tips: ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬಾರದಂತೆ, ಮತ್ಯಾವ ದಿಕ್ಕಿನಲ್ಲಿ ಮಲಗುವುದು ಒಳ್ಳೆಯದು?

Vastu Tips: ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬಾರದಂತೆ, ಮತ್ಯಾವ ದಿಕ್ಕಿನಲ್ಲಿ ಮಲಗುವುದು ಒಳ್ಳೆಯದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಸ್ತು ಶಾಸ್ತ್ರದಲ್ಲಿ ಆರೋಗ್ಯಕ್ಕಾಗಿ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿಬೇಕಂತೆ, ವಾಸ್ತು ಪ್ರಕಾರ ಹೀಗೆ ಮಲಗಬೇಕೆಂತೆ, ರಾತ್ರಿ ಮಲಗಲು ಇದೇ ವಾಸ್ತು, ನಿದ್ರೆ ಮಾಡುಲು ಇದೆ ವಾಸ್ತು, ಆರೋಗ್ಯಕ್ಕಾಗಿ ಈ ರೀತಿ ಮಲಗಿ.

  • Share this:

ಹೇಗೆ ಉತ್ತಮ ಆಹಾರ ದೇಹಕ್ಕೆ ಮುಖ್ಯವೋ ಅದೇ ರೀತಿ ಅತ್ಯುತ್ತಮ ನಿದ್ದೆ ( sleeping)ಕೂಡ ಅಷ್ಟೇ ಮುಖ್ಯ. ಅಂಥ ನಿದ್ದೆಯನ್ನೇ ಕಳೆದುಕೊಂಡು ಬಿಟ್ಟರೆ ಒತ್ತಡ,(Losing sleep is stress) ಚಿಂತೆ ಹಾಗೂ ನಿರಾಸಕ್ತಿ ಮೂಡುತ್ತದೆ. ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು? ಆರೋಗ್ಯ ಭಾಗ್ಯ ಹೆಚ್ಚಿಸಿಕೊಳ್ಳಲು ವಾಸ್ತುವಿನಲ್ಲಿ(Vastu) ಕೆಲ ಸರಳ ಸಲಹೆಗಳಿವೆ. ಮನೆಯ ಸದಸ್ಯರ ಮಾನಸಿಕ (mental)ಹಾಗೂ ದೈಹಿಕ ಆರೋಗ್ಯ(physical health) ಸದಾ ಚೈತನ್ಯದಿಂದ ಕೂಡಿರಲು ವಾಸ್ತು ಕೂಡ ಅಷ್ಟೇ ಮುಖ್ಯ, ಅದಕ್ಕಾಗಿ ಕೆಲ ಮಾರ್ಗಗಳನ್ನು ಅನುಸರಿಸಬೇಕಿದೆ. ಅಂದಹಾಗೆ ವಾಸ್ತುಶಾಸ್ತ್ರ (Architecture is the science)ಎಂಬುದು ವಿಜ್ಞಾನ ಮತ್ತು ಜೀವನದ ಮಿಳಿತ. ಅದರಲ್ಲಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಲಾಗಿದೆ.

ವಾಸ್ತು ಪ್ರಕಾರ
ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ಖಂಡಿತಾ ಉತ್ತಮ ಅಲ್ಲ. ಆ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ. ಅದರ ಜತೆಗೆ ಬಹಳ ತೊಂದರೆಗಳೂ ಆಗುತ್ತವೆ. ಆದ್ದರಿಂದ ನಿದ್ರಿಸುವುದಕ್ಕೆ ಈ ದಿಕ್ಕನ್ನು ಸಲಹೆಯಾಗಿ ಮಾಡುವುದಿಲ್ಲ. ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ, ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ- ದಕ್ಷಿಣಕ್ಕೆ ಚಲಿಸುತ್ತಿರುತ್ತದೆ. ತಲೆಯನ್ನು ಉತ್ತರಕ್ಕೆ ಇಟ್ಟಾಗ ಆ ಅಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸ ಆಗುತ್ತದೆ. ಆದ್ದರಿಂದ ಉತ್ತರಕ್ಕೆ ತಲೆ ಹಾಕದಂತೆ ಮಲಗುವ ಹಾಸಿಗೆಯನ್ನು ಹೊಂದಿಸಬೇಕು. ಒಟ್ಟಿನಲ್ಲಿ ಆರೋಗ್ಯ ಭಾಗ್ಯ ಹೆಚ್ಚಿಸಿ ಕೊಳ್ಳಲು ಇತ್ತೀಚೆಗೆ ವಾಸ್ತು ಪ್ರಕಾರ ಮಲಗಲು ಜನರು ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವುದು ವಿಶೇಷ.


ಇದನ್ನು ಓದಿ:Vastu Tips: ಹಾಸಿಗೆ ಮೇಲೆ ಊಟ ಮಾಡುವ ಅಭ್ಯಾಸ ಇದೆಯಾ; ಮೊದಲು ತಪ್ಪಿಸಿ!

ಆರೋಗ್ಯ ವೃದ್ಧಿ
ಮನೆಯ ಹಿರಿಯರು, ಯಜಮಾನ- ಯಜಮಾನಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ. ಹಲವು ಪದ್ಧತಿ ಹಾಗೂ ಸಂಸ್ಕೃತಿ ಪ್ರಕಾರ ಈ ದಿಕ್ಕಿಗೆ ತಲೆ ಇರಿಸಿಕೊಳ್ಳುವುದು ಸರಿ. ವಾಸ್ತು ಪ್ರಕಾರ, ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಜತೆಗೆ ಸಂತೋಷವೂ ಸಿಕ್ಕಿ, ಕನಸುಗಳು ಈಡೇರುತ್ತವೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನ ಆಗುತ್ತಿವೆ, ಪೂರ್ತಿ ಮಾಡಲು ಆಗುತ್ತಿಲ್ಲ ಅನಿಸಿದರೆ ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿ, ಪ್ರಯತ್ನಿಸಿ ನೋಡಿ. ದಕ್ಷಿಣ ದಿಕ್ಕಿಗೆ ಮಲಗುವುದರಿಂದ ಮನಶ್ಶಾಂತಿ ದೊರೆತು, ಆರೋಗ್ಯ ವೃದ್ಧಿ ಆಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.


ಸ್ಮರಣ ಶಕ್ತಿ
ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆ ನಿದ್ದೆ ಆಗುತ್ತದೆ. ಹೊಸ ಚೈತನ್ಯ, ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಈ ದಿಕ್ಕು ಒಳ್ಳೆಯದು. ಅನಾರೋಗ್ಯದಿಂದ ಬಳಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀನಿ ಅನ್ನೋರಿಗೆ ಪೂರ್ವ ದಿಕ್ಕು ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಲಿತ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.


ಯಶಸ್ಸು ಪಡೆಯಲು
ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದು ತುಂಬ ಒಳ್ಳೆಯದೇನಲ್ಲ. ಆದರೂ ಯಶಸ್ಸು ಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆರಂಭಿಸಿದ ಮೇಲೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತದೆ. ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಮೇಲೆ ಆಗುತ್ತಿದ್ದರೆ ಅದರಿಂದ ಆಚೆ ಬರಬಹುದು. ಹೆಸರು, ಕೀರ್ತಿ, ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ


ಒತ್ತಡ ಹೆಚ್ಚಾಗಲಿದೆ
ನೈಋತ್ಯ ದಿಕ್ಕಿನಲ್ಲಿ ಮಾಸ್ಟರ್ ಬೆಡ್‌ರೂಂ ಇರುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ತಂದುಕೊಡುತ್ತದೆ. ಈಶಾನ್ಯ ದಿಕ್ಕಿನಲ್ಲಿ ಮಾಸ್ಟರ್ ಬೆಡ್ರೂಂ ಇರಕೂಡದು. ಅದರಿಂದ ಆರೋಗ್ಯ ಸಮಸ್ಯೆಗಳು - ಜಾಸ್ತಿಯಾಗುತ್ತವೆ. ಮಲಗುವಾಗ ಯಾವಾಗಲೂ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿಯೇ ಇರಿಸಬೇಕು. ಇದರಿಂದ ಶಾಂತಿ ಹಾಗೂ ಆರೋಗ್ಯಕರ ಜೀವನ ಸಿಗುತ್ತದೆ. ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ನೋವು, ಒತ್ತಡ ಹೆಚ್ಚಾಗಲಿದೆ.


ಇದನ್ನು ಓದಿ:Vastu Tips: ಸೂರ್ಯನ ಪ್ರತಿಮೆ ಮನೆಯಲ್ಲಿಡುವುದರಿಂದ ಸಿಗಲಿದೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ

ನಕಾರಾತ್ಮಕ ಶಕ್ತಿ
ಗರ್ಭಿಣಿ ಮಹಿಳೆಯರು ಈಶಾನ್ಯ ದಿಕ್ಕಿಗೆ ತಲೆ ಇಟ್ಟು ಮಲಗಲೇಬಾರದು. ಅದರಿಂದ ಅಬಾರ್ಶನ್ ಆಗುವ ಸಾಧ್ಯತೆ ಇದೆ. ಸ್ಟೋರೇಜ್ ಇರುವ ಮಂಚವು ಮೆದುಳು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ತರುತ್ತದೆ. ಕಬ್ಬಿಣದ ಮಂಚ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಳವಾದ ಮರದ ಮಂಚಗಳನ್ನೇ ಬಳಸುವುದು ಉತ್ತಮ. ಹಾಸಿಗೆ ಯಾವತ್ತೂ ಶೌಚಾಲಯ ಗೋಡೆಗೆ ತಾಗುವಂತೆ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಲಿದೆ ಎಂದು ಹೇಳಲಾಗುತ್ತದೆ.

First published: