Shloka For Kids: ಶ್ಲೋಕಗಳಿಂದ ಸಹ ಇದೆ ಸಾವಿರ ಪ್ರಯೋಜನ, ಮಕ್ಕಳಿಗೆ ನೀವೂ ಹೇಳಿಕೊಡಿ

ಶ್ಲೋಕ

ಶ್ಲೋಕ

Importance of Shloka: ಮಕ್ಕಳಿಗೆ ಪ್ರತಿದಿನ ಶ್ಲೋಕ ಹೇಳಿಕೊಡುವುದರಿಂದ ಸಹ ಹಲವಾರು ರೀತಿಯ ಲಾಭಗಳಿದೆ. ಸಣ್ಣ-ಸಣ್ಣ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅದರಿಂದ ಅವರಿಗೆ ವಿವಿಧ ರೀತಿಯ ಪ್ರಯೋಜನ ಸಿಗಲಿದೆ. ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳು ಹಾಗೂ ಅದರ ಅರ್ಥ ಇಲ್ಲಿದೆ.

ಮುಂದೆ ಓದಿ ...
  • Share this:

ಪ್ರತಿನಿತ್ಯ ನಾವು ದೇವರ ಪೂಜೆ (Pooje) ಮಾಡುವಾಗ ಮಂತ್ರಗಳನ್ನು ಹಾಗೂ ಶ್ಲೋಕಗಳನ್ನು ಪಠಿಸುತ್ತೇವೆ. ಈ ಶ್ಲೋಕಗಳನ್ನು (Shloka) ಪಠಿಸಿ ನಾವು ದೇವರಿಗೆ ನಮ್ಮ ಇಷ್ಟಾರ್ಥಗಳನ್ನು ಈಡೇರಿಸು ಎಂದು ಕೇಳಿಕೊಳ್ಳುತ್ತೇವೆ. ಅಲ್ಲದೇ, ಈ ಮಂತ್ರಗಳನ್ನು (Mantra) ಹಾಗೂ ಶ್ಲೋಕಗಳನ್ನು ಹೇಳುವುದರಿಂದ ದೇವರಿಗೆ ಸಂತೋಷವಾಗುತ್ತದೆ ಎನ್ನುವ ನಂಬಿಕೆ ಸಹ ಇದೆ. ಹಾಗೆಯೇ, ಮಕ್ಕಳಿಗೆ (Children) ಪ್ರತಿದಿನ ಶ್ಲೋಕ ಹೇಳಿಕೊಡುವುದರಿಂದ ಸಹ ಹಲವಾರು ರೀತಿಯ ಲಾಭಗಳಿದೆ. ಸಣ್ಣ-ಸಣ್ಣ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅದರಿಂದ ಅವರಿಗೆ ವಿವಿಧ ರೀತಿಯ ಪ್ರಯೋಜನ ಸಿಗಲಿದೆ. ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳು ಹಾಗೂ ಅದರ ಅರ್ಥ ಇಲ್ಲಿದೆ.


ಶ್ಲೋಕಗಳನ್ನು ಮಕ್ಕಳಿಗೆ ಹೇಳುವುದರಿಂದ ಯಾವೆಲ್ಲಾ ಪ್ರಯೋಜನಗಳಿದೆ ಎಂಬುದು ಇಲ್ಲಿದೆ.


ಶ್ಲೋಕಗಳ ಪಠಣವು ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಶ್ಲೋಕಗಳು ಮೆದುಳಿನ ಚಕ್ರಗಳನ್ನು ಸಕ್ರಿಯಗೊಳಿಸುವ ಮತ್ತು ಶಾಂತವಾಗಿರಲು ಸಹಾಯ ಮಾಡುವ ಕಂಪನಗಳನ್ನು ಹೊರಸೂಸುತ್ತವೆ.


ಅಲ್ಲದೇ ಈ ಶ್ಲೋಕಗಳ ಪಠಣೆಯಿಂದ ನೆನಪಿನ ಶಕ್ತಿ ಸುಧಾರಿಸುತ್ತದೆ.


ಶ್ಲೋಕಗಳ  ಪಠಣವು ಇತರ ಭಾಷೆಗಳನ್ನು ಚೆನ್ನಾಗಿ ಕಲಿಯಲು ಮಕ್ಕಳಿಗೆ ಸಹಾಯ ಮಾಡುತ್ತದೆ.


ಶ್ಲೋಕ ಪಠಣವು ಮಕ್ಕಳ ಬುದ್ಧಿಶಕ್ತಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಆರೋಗ್ಯಕ್ಕೆ ಸಹ ಬಹಳ ಉತ್ತಮ ಎನ್ನಲಾಗುತ್ತದೆ. ಇದು ವ್ಯವಸ್ಥಿತ ಉಸಿರಾಟಕ್ಕೆ ಸಹಾಯ ಮಾಡುತ್ತದೆ ಮತ್ತು ಮೆದುಳಿಗೆ ಹೆಚ್ಚುವರಿ ಆಮ್ಲಜನಕವನ್ನು ಪೂರೈಸುತ್ತದೆ.


ಶ್ಲೋಕಗಳ ಮೂಲಕ ಹೊಸ ಭಾಷೆಯನ್ನು ಕಲಿಯುವುದು ನ್ಯೂರೋಪ್ಲಾಸ್ಟಿಟಿಗೆ ಸಹಾಯ ಮಾಡುತ್ತದೆ.


ಶ್ಲೋಕ ಪಠಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗವಾಗಿದೆ ಎನ್ನಲಾಗುತ್ತದೆ. ಈ ಶ್ಲೋಕ ಹೇಳುವಾಗ ನಾಲಿಗೆಯ ಮೇಲೆ ಒತ್ತಡ ಹಾಕುವುದರಿಂದ ಇದು ಉಸಿರಾಟದ ಜೊತೆ ಮೆದುಳಿನ ಕಾರ್ಯಕ್ಕೆ ಸಹ ಸಹಾಯ ಮಾಡುತ್ತದೆ.


ಕೆಲ ಅಧ್ಯಯನಗಳ ಪ್ರಕಾರ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಫೆಬ್ರವರಿ 27ಕ್ಕೆ 3 ರಾಶಿಗೆ ಬಂಪರ್ ಆಫರ್, ಬದಲಾಗಲಿದೆ ಜೀವನ


ಕೇವಲ ಮಕ್ಕಳು ಮಾತ್ರವಲ್ಲ ದೊಡ್ಡವರು ಸಹ ಶ್ಲೋಕ ಪಠಣೆ ಮಾಡಿದರೆ ರಕ್ತದೊತ್ತಡ, ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಎಂದೂ ಸಹ ಹೇಳಲಾಗುತ್ತದೆ. ಆದ್ದರಿಂದ ಮಕ್ಕಳು ಒತ್ತಡ ಮುಕ್ತ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.


ಇನ್ನು ಒಂದೊಂದು ಸಮಯಕ್ಕೆ ಸಹ ಶ್ಲೋಕಗಳು ಇದೆ. ಹೇಗೆ ಮದುವೆಗೆ ಒಂದು ಮಂತ್ರ, ವಿವಿಧ ಪೂಜೆಗಳಿಗೆ ವಿಭಿನ್ನ ಮಂತ್ರ ಇರುತ್ತದೆಯೋ ಹಾಗೆಯೇ ಸ್ನಾನ ಮಾಡುವಾಗ, ಮಲಗುವ ಒಂದೊಂದು ಶ್ಲೋಕಗಳಿವೆ. ಅದನ್ನು ಹೇಳುವುದರಿಂದ ಬಹಳ ಪ್ರಯೋಜನವಿದೆ. ಸದ್ಯ ಗುರುವಿನ ಶಕ್ತಿ ಹಜಾಗೂ ಮಹಿಮೆಯನ್ನು ವಿವರಿಸುವ ಶ್ಲೋಕ ಹಾಗೂ ಅದರ ಅರ್ಥವೇನು ಎಂಬುದು ಇಲ್ಲಿದೆ.




ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ |


ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||


ಈ ಶ್ಲೋಕದ ಅರ್ಥ: ಗುರುವೇ ವಿಷ್ಣು ಮತ್ತು ಗುರುವೇ ಭಗವಾನ್ ಶಂಕರ. ಗುರುವೇ ನಿಜವಾದ ಪರಬ್ರಹ್ಮ. ಅಂತಹ ಶಿಕ್ಷಕರಿಗೆ ನಾನು ನಮಸ್ಕರಿಸುತ್ತೇನೆ.


ಈ ಶ್ಲೋಕದಲ್ಲಿರುವ ಪದಗಳ ಅರ್ಥ


  • ಗುರು: ಕತ್ತಲೆಯನ್ನು ಹೋಗಲಾಡಿಸುವವನು

  • ಬ್ರಹ್ಮ: ಸೃಷ್ಟಿಕರ್ತ

  • ವಿಷ್ಣು: ಸಂರಕ್ಷಕ

  • ದೇವ: ದೇವರು

  • ಮಹೇಶ್ವರ:ಕೆಟ್ಟದ್ದನ್ನು ನಾಶ ಮಾಡುವ ಶಿವ


ಇದನ್ನೂ ಓದಿ: ಬರೋಬ್ಬರಿ 12 ವರ್ಷದ ನಂತರ ಗುರು-ಶುಕ್ರ ಸಂಯೋಗ, 3 ರಾಶಿಯವರಿಗೆ ಸುಖದ ಸುಪ್ಪತ್ತಿಗೆ


ಒಟ್ಟಾರೆಯಾಗಿ ಒಂದೊಂದು ಶ್ಲೋಕಗಳು ಸಹ ಒಂದೊಂದು ಅರ್ಥವನ್ನು ಹೊಂದಿರುತ್ತದೆ. ಹಾಗೆಯೇ, ಅವುಗಳನ್ನು ಪಠಿಸುವುದರಿಂದ ಪ್ರಯೋಜನಗಳು ಮಾತ್ರವಲ್ಲದೇ ನಮ್ಮನ್ನ ಕಾಯುವ ದೇವರಿಗೆ ಧನ್ಯವಾದ ಹೇಳಿದಂತಾಗುತ್ತದೆ.

Published by:Sandhya M
First published: