Worship: ಪೂಜೆ ವೇಳೆ ಅಕ್ಷತೆ ಅರ್ಪಿಸುವ ಕಾರಣ ಏನು; ಇದರಿಂದ ಏನು ಫಲ?
ಹಿಂದೂ ಧರ್ಮದಲ್ಲಿ ಪೂಜೆ ವೇಳೆ ಅಕ್ಷತೆ (Akshat) ಬಳಕೆ ಮಾಡುವುದು ಶತಮಾನಗಳಿಂದ ಬಂದಿದೆ. ಅನೇಕ ಹಿಂದೂ ಪುರಾಣಗಳಲ್ಲಿ ಪೂಜೆಯಲ್ಲಿ ಅನ್ನವನ್ನು ಅರ್ಪಿಸುವ ಉಲ್ಲೇಖವಿದೆ. ಹಿಂದೂ ಧರ್ಮದಲ್ಲಿ, ಪೂಜೆಯಲ್ಲಿ (Worship) ಅಕ್ಕಿಯ ಬಳಕೆಯನ್ನು ಮಂಗಳಕರ ಮತ್ತು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಪೂಜೆಯಲ್ಲಿ ಅನ್ನ ಅಥವಾ ಅಕ್ಷತೆಯನ್ನು ಅರ್ಪಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ಪ್ರಾಮುಖ್ಯತೆ ಏನು ಎಂಬ ಮಾಹಿತಿ ಇಲ್ಲಿದೆ.

ಪೂಜೆಯ ಸಮಯದಲ್ಲಿ ಅನ್ನವನ್ನು ಅರ್ಪಿಸುವುದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಪೂಜೆಯಲ್ಲಿ ದ್ರವ್ಯವಿಲ್ಲದಿದ್ದರೆ ಅಕ್ಷತೆ ಅದರ ಕೊರತೆಯನ್ನು ತುಂಬುತ್ತದೆ ಎಂಬುದು ನಂಬಿಕೆ.
ದೇವರಿಗೆ ನೈವೇದ್ಯ ಮಾಡಿದ ಅನ್ನ ಯಾವಾಗಲೂ ಪೂರ್ಣವಾಗಿರಬೇಕು. ಒಡೆದ ಅನ್ನದಿಂದ ದೇವರಿಗೆ ಪೂಜೆ ಸಲ್ಲಿಸುವುದಿಲ್ಲ. ಅದರಂತೆ ಅಕ್ಷತೆಯಲ್ಲಿನ ಅಕ್ಕಿ ಕೂಡ ಒಡೆಯಬಾರದು. ಎಲ್ಲಾ ಆಹಾರ ಧಾನ್ಯಗಳಲ್ಲಿ ಅಕ್ಕಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ
ಅಕ್ಕಿಯ ಬಿಳಿ ಬಣ್ಣದಿಂದಾಗಿ ಇನ್ನು ಅರಿಶಿನ-ಕುಂಕು ಮಂಗಳದ ಸಂಕೇತವಾಗಿದೆ. ಈ ಹಿನ್ನಲೆ ಅಕ್ಷತೆ ತಯಾರಿಸುವಾಗ ಬಿಳಿಯ ಅಕ್ಕಿಗೆ ಕುಂಕುಮ- ಅರಿಶಿನವನ್ನು ಬೆರಸಿ ಅಕ್ಷತೆ ತಯಾರಿಸಲಾಗುತ್ತದೆ.
ಆಹಾರ ಮತ್ತು ಹವನವನ್ನು ಹಿಂದೂ ಪುರಾಣಗಳಲ್ಲಿ ವಿಶೇಷ ಪ್ರಾಮುಖ್ಯತೆ ಎಂದು ಪರಿಗಣಿಸಲಾಗಿದೆ. ಆಹಾರದಿಂದ ಮಾಡಿದ ಹವನದಿಂದ ದೇವರು ತೃಪ್ತನಾಗುತ್ತಾನೆ ಎಂದು ನಂಬಲಾಗಿದೆ. ಭಗವಂತನಿಗೆ ಅನ್ನ ನೈವೇದ್ಯ ಮಾಡುವುದರಿಂದ ಪೂರ್ವಜರೂ ಸಂತೃಪ್ತರಾಗುತ್ತಾರೆ, ಹೀಗೆ ಮಾಡುವುದರಿಂದ ಭಗವಂತ ಪ್ರಸನ್ನನಾಗುವುದಲ್ಲದೆ, ಪೂರ್ವಜರ ಆಶೀರ್ವಾದವೂ ಸಿಗುತ್ತದೆ ಎಂಬ ನಂಬಿಕೆಯೂ ಇದೆ.
ಅಕ್ಷತೆನ್ನು ಕುಂಕುಮದೊಂದಿಗೆ ಬೆರೆಸಿ ದೇವರಿಗೆ ಅರ್ಪಿಸಿದ ವ್ಯಕ್ತಿಗೆ ಅವನ ಪೂಜೆ ಮತ್ತು ಸಂಕಲ್ಪ ಶೀಘ್ರದಲ್ಲೇ ಫಲ ಪಡೆಯುತ್ತಾನೆ. ಇತರ ನಂಬಿಕೆಗಳ ಪ್ರಕಾರ, ತಾಯಿ ಅನ್ನಪೂರ್ಣೆಯನ್ನು ಮನೆಯಲ್ಲಿ ಅಕ್ಕಿಯ ರಾಶಿಯಲ್ಲಿ ಸ್ಥಾಪಿಸಿದರೆ, ಮನೆಯಲ್ಲಿ ಎಂದಿಗೂ ಸಂಪತ್ತು ಮತ್ತು ವೈಭವಕ್ಕೆ ಯಾವುದೇ ಕೊರತೆಯಿಲ್ಲ ಎನ್ನಲಾಗಿದೆ
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ