Vastu Tips: ಬಾತ್‌ರೂಂ ಬಗ್ಗೆ ಅಸಡ್ಡೆ ಬೇಡ, ಹೀಗಿದ್ರೆ ನಿಮಗೇ ಆರ್ಥಿಕ ಸಂಕಷ್ಟ!

ದೈನಂದಿನ ಜೀವನದಲ್ಲಿ ಮತ್ತು ಮನೆಯಲ್ಲಿ ನಾವು ವಸ್ತುಗಳನ್ನು ಇರಿಸುವ ಸ್ಥಳಗಳು ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ ಮತ್ತು ಮನೆಯಲ್ಲಿ ನೆಮ್ಮದಿಯನ್ನು ನೆಲೆಸುವಂತೆ ಮಾಡುತ್ತದೆ ಎಂದು ನೀವು ಬಲವಾಗಿ ನಂಬುವವರಾಗಿದ್ದರೆ, ನಿಮ್ಮ ಮನೆಯಲ್ಲಿರುವ ಬಾತ್‌ರೂಮ್ ಹೇಗಿರಬೇಕು ಅಂತ ಒಮ್ಮೆ ನೋಡಿಕೊಳ್ಳಿರಿ. ಏಕೆಂದರೆ ನಾವು ಗಮನಿಸದ ಕೆಲವು ವಿಷಯಗಳು ನಮ್ಮ ಜೀವನದಲ್ಲಿ ಹಾನಿಯನ್ನು ಉಂಟು ಮಾಡಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ಬಾತ್‌ರೂಮ್

ಬಾತ್‌ರೂಮ್

  • Share this:
ಈ ವಾಸ್ತುಶಾಸ್ತ್ರ (Vaastu) ಎನ್ನುವುದು ಒಂದು ರೀತಿಯಲ್ಲಿ ಅವರವರ ನಂಬಿಕೆಗೆ ಬಿಟ್ಟದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವರು ಇದನ್ನು ಸಂಪೂರ್ಣವಾಗಿ ನಂಬಿ ಅದರಂತೆಯೇ ನಡೆದುಕೊಳ್ಳುತ್ತಾರೆ, ಇನ್ನೂ ಕೆಲವರು ಅದರಲ್ಲಿ ಅಷ್ಟಾಗಿ ನಂಬಿಕೆಯನ್ನು ಇಟ್ಟುಕೊಂಡಿರುವುದಿಲ್ಲ ಎಂದು ಹೇಳಬಹುದು. ದೈನಂದಿನ ಜೀವನದಲ್ಲಿ ಮತ್ತು ಮನೆಯಲ್ಲಿ (Home) ನಾವು ವಸ್ತುಗಳನ್ನು ಇರಿಸುವ ಸ್ಥಳಗಳು ನಮ್ಮ ಮನಸ್ಸಿಗೆ ಶಾಂತಿಯನ್ನು (Peace) ನೀಡುತ್ತವೆ ಮತ್ತು ಮನೆಯಲ್ಲಿ ನೆಮ್ಮದಿಯನ್ನು ನೆಲೆಸುವಂತೆ ಮಾಡುತ್ತದೆ ಎಂದು ನೀವು ಬಲವಾಗಿ ನಂಬುವವರಾಗಿದ್ದರೆ, ನಿಮ್ಮ ಮನೆಯಲ್ಲಿರುವ ಬಾತ್‌ರೂಮ್ (Bathroom) ಹೇಗಿರಬೇಕು ಅಂತ ಒಮ್ಮೆ ನೋಡಿಕೊಳ್ಳಿರಿ. ಏಕೆಂದರೆ ನಾವು ಗಮನಿಸದ ಕೆಲವು ವಿಷಯಗಳು ನಮ್ಮ ಜೀವನದಲ್ಲಿ ಹಾನಿಯನ್ನು ಉಂಟು ಮಾಡಬಹುದು ಎನ್ನುತ್ತದೆ ವಾಸ್ತುಶಾಸ್ತ್ರ.

ನಾವು ಮನೆಯ ವಾಸ್ತುವಿನ ಬಗ್ಗೆ ಯೋಚಿಸಿದಾಗ, ನಾವು ಮುಖ್ಯವಾಗಿ ಅಡುಗೆಮನೆ, ಲಿವಿಂಗ್ ರೂಮ್ ಮತ್ತು ಮಲಗುವ ಕೋಣೆಯ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ ಮನೆಯಲ್ಲಿರುವ ಸ್ನಾನಗೃಹವು ಸಹ ಇವುಗಳಷ್ಟೇ ಪ್ರಮುಖವಾಗಿದೆ ಎನ್ನುವುದನ್ನು ನಾವು ಮರೆತು ಬಿಡುತ್ತೇವೆ. ನಮ್ಮ ಮನೆ ಮತ್ತು ಕುಟುಂಬದ ಪ್ರಗತಿ ಮತ್ತು ಸಮೃದ್ಧಿಗೆ ಸ್ನಾನಗೃಹವು ಸಹ ವಾಸ್ತು ಪ್ರಕಾರ ಇರುವುದು ತುಂಬಾನೇ ಮುಖ್ಯವಾಗಿರುತ್ತದೆ.

ಮನೆಯಲ್ಲಿರುವ ಸ್ನಾನಗೃಹಕ್ಕೂ ವಾಸ್ತು ಹೇಗೆ ಮುಖ್ಯವಾಗಿರುತ್ತದೆ
ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಸ್ನಾನಗೃಹವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಾಶ್‌ರೂಮ್ ನಲ್ಲಿ ಇರಿಸಲಾದ ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ನಮ್ಮಲ್ಲಿ ಹೆಚ್ಚಿನವರ ಮನೆಯ ಸ್ನಾನಗೃಹದಲ್ಲಿ ಬಕೆಟ್ ಅಂತೂ ಇದ್ದೇ ಇರುತ್ತದೆ. ಅದು ಆಗಾಗ್ಗೆ ಖಾಲಿಯಾಗಿರುತ್ತದೆ. ತಜ್ಞರ ಪ್ರಕಾರ, ಖಾಲಿ ಬಕೆಟ್ ಇಡುವುದರಿಂದ ಏನು ತೊಂದರೆ ಆಗಬಹುದು ಅಂತ ನಿಮಗೆ ಅನ್ನಿಸಬಹುದು. ಆದರೆ ಈ ಖಾಲಿ ಬಕೆಟ್ ತುಂಬಾ ತೊಂದರೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Vastu Tips: ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಬೇಕು ಎಂದ್ರೆ ಈ ಸಿಂಪಲ್​ ವಾಸ್ತು ಅನುಸರಿಸಿ ಸಾಕು

ವಾಸ್ತುಶಾಸ್ತ್ರ ತಜ್ಞರ ಪ್ರಕಾರ, ಸ್ನಾನಗೃಹದಲ್ಲಿರುವ ಖಾಲಿ ಬಕೆಟ್ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಸಣ್ಣ ಬದಲಾವಣೆಗಳನ್ನು ಮಾಡಿ ಮತ್ತು ಅನಿರೀಕ್ಷಿತ ಆರ್ಥಿಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಿರಿ.

  • ಬಾತ್ರೂಮ್ ನಲ್ಲಿ ಖಾಲಿ ಬಕೆಟ್ ಇಡಲೇಬೇಡಿ
    ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಸ್ನಾನಗೃಹದಲ್ಲಿ ಖಾಲಿ ಬಕೆಟ್ ಅನ್ನು ಇಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಬಾತ್ ರೂಮ್ ನಲ್ಲಿ ಖಾಲಿ ಬಕೆಟ್ ಅನ್ನು ಎಂದಿಗೂ ಬಿಡಬೇಡಿ. ಹೀಗೆ ಬಕೆಟ್ ಅನ್ನು ಖಾಲಿ ಇಡುವುದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಆದ್ದರಿಂದ ಗಮನಿಸಿ ಮತ್ತು ಖಾಲಿ ಬಕೆಟ್ ಗಳನ್ನು ವಾಶ್‌ರೂಮ್ ಗಳಲ್ಲಿ ಇಡಬೇಡಿ.


ಇದನ್ನೂ ಓದಿ:  Foreign Trip: ಜಾತಕದಲ್ಲಿ ಈ ಯೋಗ ಇದ್ರೆ ಮಾತ್ರ ವಿದೇಶ ಪ್ರವಾಸ ಕನಸು ನನಸು

  • ನೀರು ತುಂಬಿದ ನೀಲಿ ಬಣ್ಣದ ಬಕೆಟ್ ನಿಮ್ಮ ಮನೆಯ ವಾಸ್ತುವಿಗೆ ಸೂಕ್ತವಾಗಿದೆ
    ವಾಸ್ತುಶಾಸ್ತ್ರ ತಜ್ಞರಾದ ರೋಸಿ ಜಸ್ರೋಟಿಯಾ ಅವರು "ವಾಸ್ತುವಿನ ಪ್ರಕಾರ, ಸ್ನಾನಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಅನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಬಾತ್‌ರೂಮಿನಲ್ಲಿ ಇರಿಸಲಾದ ಬಕೆಟ್ ಎಂದಿಗೂ ಖಾಲಿಯಾಗಬಾರದು, ಬಕೆಟ್ ಅನ್ನು ಯಾವಾಗಲೂ ಶುದ್ಧ ನೀರಿನಿಂದ ತುಂಬಿಸಿಟ್ಟಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡುವ ಮೂಲಕ, ಮನೆಯಲ್ಲಿ ಸುಖ ಸಮೃದ್ಧಿಯನ್ನು ನೀವು ಉಳಿಸಿಕೊಳ್ಳಬಹುದು" ಎಂದು ಜಸ್ರೋಟಿಯಾ ಅವರು ಹೇಳುತ್ತಾರೆ, "ಸ್ನಾನಗೃಹದಲ್ಲಿ ಇರಿಸಲಾದ ನೀರಿನ ಬಕೆಟ್ ಕುಟುಂಬದಲ್ಲಿ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ" ಎಂದು ಹೇಳಲಾಗುತ್ತದೆ.

  • ನೀಲಿ ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ
    ವಾಸ್ತುಶಾಸ್ತ್ರದಲ್ಲಿ ನೀಲಿ ಬಣ್ಣವು ಬಹಳ ಮುಖ್ಯವಾಗಿದೆ. ನೀಲಿ ಬಣ್ಣವನ್ನು ಸಂತೋಷ ಮತ್ತು ಮಂಗಳಕರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂದು ಜಸ್ರೋಟಿಯಾ ಅವರು ಹೇಳುತ್ತಾರೆ. ಶನಿ ಮತ್ತು ರಾಹು ದೋಷವನ್ನು ಹೊಂದಿರುವವರು ಯಾವಾಗಲೂ ಸ್ನಾನಗೃಹದಲ್ಲಿ ನೀಲಿ ಬಕೆಟ್ ಮತ್ತು ನೀಲಿ ಮಗ್ ಅನ್ನು ಇಡಬೇಕು ಎಂದು ಕೆಲವು ತಜ್ಞರು ಹೇಳುತ್ತಾರೆ. ಇದು ರಾಹು ಮತ್ತು ಶನಿಯ ದುಷ್ಪರಿಣಾಮಗಳಿಂದ ಸ್ವಲ್ಪ ಮಟ್ಟಿಗೆ ಪರಿಹಾರವನ್ನು ಒದಗಿಸುತ್ತದೆ. ಇದಲ್ಲದೆ, ನೀವು ಸಂಪತ್ತು ಮತ್ತು ಆರ್ಥಿಕ ಶಕ್ತಿಯನ್ನು ಪಡೆಯಲು ಬಯಸಿದರೆ, ಸ್ನಾನಗೃಹದಲ್ಲಿ ನೀಲಿ ಟೈಲ್ಸ್ ಅನ್ನು ಬಳಸಿ.

Published by:Ashwini Prabhu
First published: