Dream: ಕನಸಿನಲ್ಲಿ ನಮ್ಮ ಪೂರ್ವಜರು ಕಾಣಿಸಿಕೊಂಡ್ರೆ ಶುಭವೋ..? ಅಶುಭವೋ...?

Swapna Shastra: ನಮ್ಮ ಕನಸಿನಲ್ಲಿ ನಾವು ಪೂರ್ವಜರನ್ನು ನೋಡಿದರೆ, ಜನರು ಸಾಮಾನ್ಯವಾಗಿ ಅವರು ನಮ್ಮಿಂದ ಏನನ್ನಾದರೂ ಬಯಸುತ್ತಾರೆ ಅಥವಾ ಏನನ್ನಾದರೂ ಕೇಳಲು ಬರುತ್ತಾರೆ ಎಂದು ಅರ್ಥೈಸುತ್ತಾರೆ. ಇದರರ್ಥ ಶುಭ ಮತ್ತು ಅಸಹ್ಯ ಎರಡೂ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿ ನಿತ್ಯ ಒಂದಲ್ಲ ಒಂದು ಕನಸು(Dream) ಬೀಳುತ್ತಲೇ ಇರುತ್ತದೆ. ಹಾಗಂತ ಎಲ್ಲವಕ್ಕೂ ಅರ್ಥ(Meaning) ಹುಡುಕುತ್ತಾ ಕೂರುವುದು ಸಾಧ್ಯವಿಲ್ಲದ ಮಾತು. ಆದರೆ, ಕೆಲವು ಕನಸುಗಳು ಗೊಂದಲವನ್ನು ಉಂಟುಮಾಡುತ್ತವೆ.
  ಕನಸು ಸರ್ವೇ ಸಾಮಾನ್ಯವಾಗಿ ಬೀಳುತ್ತಿರುತ್ತದೆ. ಕೆಲವು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಕನಸು ಮಸುಕಾಗಿ ಕಾಡುತ್ತದೆ. ಕೆಲವು ರೀತಿಯ ಕನಸುಗಳು ಖುಷಿ(Happy) ಕೊಟ್ಟರೆ, ಮತ್ತೆ ಕೆಲವು ಗಾಬರಿಗೊಳಿಸುತ್ತವೆ. ಅರ್ಥವಾಗದೆ ಕಾಡುವ ಕನಸು ಹಲವಾರು, ಕೊಂಬು, ಬಾಲವಿಲ್ಲದ ಆ ಕನಸಿನ ಬಗ್ಗೆ ಎಷ್ಟೇ ಚಿಂತಿಸಿದರೂ ಅದರ ಸಂಕೇತವನ್ನು(Sign) ಮಾತ್ರ ಬಿಡಿಸಲಾಗದು. ಹೀಗಾಗಿಯೇ ಆ ಕನಸಿನ ಅರ್ಥವನ್ನು(Dream Meaning) ತಿಳಿದುಕೊಳ್ಳಲೇ ಬೇಕೆಂದು ಮನಸ್ಸಿಗೆ ಅನ್ನಿಸುತ್ತದೆ. ಅಂತಹ ಸಂದರ್ಭದಲ್ಲಿ  ಕನಸಿನ ಅರ್ಥವನ್ನು ತಿಳಿಯಬೇಕೆಂದರೆ ಸ್ವಪ್ನ ಶಾಸ್ತ್ರವನ್ನು(Swapna Shastra) ತಡಕಾಡಿ ನೋಡಬೇಕಾಗುತ್ತದೆ.

  ಇನ್ನು ಹಲವಾರು ತರದ ಕನಸು ಅರ್ಥವೇ ಆಗುವುದಿಲ್ಲ, ಎಲ್ಲ ಕನಸುಗಳಿಗೆ ಅರ್ಥವನ್ನು ಹುಡುಕುತ್ತಾ ಕೂರುವುದು ಮೂರ್ಖತನ ಅನ್ನಿಸಿದರೂ, ಬೀಳುವ ಕನಸಿಗೆ ಅರ್ಥವಿದೆ ಅದು ಭವಿಷ್ಯದಲ್ಲಿ ನಡೆಯುವ ವಿಚಾರವನ್ನು ತಿಳಿಸುವ ಸೂಚಕವಾಗಿರುತ್ತವೆ .ಅಲ್ಲದೆ
  ಸ್ವಪ್ನ ಶಾಸ್ತ್ರದ ಪ್ರಕಾರ ಕೆಲವು ಕನಸುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳು ಕಂಡುಬಂದರೆ, ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವುಗಳ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ನಂಬಲಾಗಿದೆ. ಹೀಗಾಗಿಯೇ ಮನುಷ್ಯನಿಗೆ ಬೀಳುವ ಪ್ರತಿಯೊಂದು ಕನಸು ಒಂದೊಂದು ಅರ್ಥವನ್ನ ನೀಡುತ್ತದೆ.. ಹಾಗಿದ್ರೆ ನಮ್ಮ ಕನಸಿನಲ್ಲಿ ಪೂರ್ವಜರು ಕಾಣಿಸಿಕೊಂಡ್ರೆ ಏನು ಅರ್ಥ ಎಂದು ನೋಡೋಣಾ..

  ಇದನ್ನೂ ಓದಿ: ಸತ್ತಂತೆ ಕನಸು ಬಿದ್ದರೆ ಏನು ಅರ್ಥ ಗೊತ್ತಾ..?

  ಸ್ವಪ್ನ ಶಾಸ್ತ್ರದ ಬಗ್ಗೆ ಗರುಡ ಪುರಾಣದಲ್ಲಿ ಏನಿದೆ..?

  ಸ್ವಪ್ನ ಶಾಸ್ತ್ರದ ಪ್ರಕಾರ ಪೂರ್ವಜರು ಕನಸಿನಲ್ಲಿ ಬರುವುದು ಶುಭ. ಇದು ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ವಿಯಾಗಲಿದೆ ಎಂದು ಸೂಚಿಸುತ್ತದೆ. ಆಗಾಗ ಅನೇಕರಿಗೆ ತಮ್ಮ ಪೂರ್ವಜರು ಅವರಿಂದ ಏನನ್ನಾದರೂ ಕೇಳುತ್ತಿದ್ದಾರೆಯೇ ಎಂಬುದನ್ನು ತಮ್ಮ ಕನಸಿನಲ್ಲಿ ಕಾಣುತ್ತಾರಂತೆ. ಪೂರ್ವಜರು ಕೇಳಿದ ವಸ್ತುವನ್ನು ಗೌರವದಿಂದ ದಾನ ಮಾಡಬೇಕು ಎಂಬುದನ್ನು ಇದು ಸೂಚಿಸುತ್ತದೆ. ಗರುಡ ಪುರಾಣದ ಪ್ರಕಾರ ಕನಸಿನಲ್ಲಿ ಪೂರ್ವಜರ ಉಪಸ್ಥಿತಿಯು ಅವರ ಆತ್ಮಗಳು ಅಲೆದಾಡುತ್ತಿವೆ ಎಂದರ್ಥ. ಇಂತಹ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮನೆಯಲ್ಲಿ ಪೂಜೆ ಸಲ್ಲಿಸಬೇಕು.

  ಇನ್ನು ನಮ್ಮ ಕನಸಿನಲ್ಲಿ ನಾವು ಪೂರ್ವಜರನ್ನು ನೋಡಿದರೆ, ಜನರು ಸಾಮಾನ್ಯವಾಗಿ ಅವರು ನಮ್ಮಿಂದ ಏನನ್ನಾದರೂ ಬಯಸುತ್ತಾರೆ ಅಥವಾ ಏನನ್ನಾದರೂ ಕೇಳಲು ಬರುತ್ತಾರೆ ಎಂದು ಅರ್ಥೈಸುತ್ತಾರೆ. ಇದರರ್ಥ ಶುಭ ಮತ್ತು ಅಸಹ್ಯ ಎರಡೂ. ಕನಸಿನಲ್ಲಿ ಪೂರ್ವಜರು ಕಾಣಿಸಿಕೊಂಡರು ಅದನ್ನು ಶುಭ ಸೂಚನೆಯೆಂದು ಪರಿಗಣಿಸಲಾಗುತ್ತದೆ. ಅವರಿಂದ ನಮಗೇನೋ ಒಳಿತಾಗಿದೆ ಎನ್ನುವುದು ಈ ಕನಸಿನ ಅರ್ಥವಾಗಿರುತ್ತದೆ.

  1)ಕನಸಲ್ಲಿ ಪೂರ್ವಜರು ನಗುವುದು: ಕನಸಿನಲ್ಲಿ ಪೂರ್ವಜರನ್ನು ನಗು ಮೊಗದಲ್ಲಿ ನೋಡಿದರೆ, ನಾವು ಮಾಡುವ ಸದ್ಗುಣಶೀಲ ಕೆಲಸದಿಂದ ಅವರು ಸಂತೋಷವಾಗಿದ್ದಾರೆ ಆದ್ದರಿಂದ ಅವರು ತಮ್ಮ ಸಂತೋಷವನ್ನು ಅಥವಾ ಖುಷಿಯನ್ನು ಕನಸಿನ ಮೂಲಕ ತೋರಿಸಿಕೊಳ್ಳುತ್ತಾರೆ. ವಿಶೇಷವಾಗಿ ಶ್ರಾದ್ಧಾ ದಿನಗಳಲ್ಲಿ ಅಂತಹ ಕನಸು ಕಾಣುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ನೀವು ಮಾಡಿದ ಶ್ರಾದ್ಧಾ ಕಾರ್ಯದಿಂದ ಅವರು ಸಂಪೂರ್ಣವಾಗಿ ತೃಪ್ತಿ ಹೊಂದಿದ್ದಾರೆ ಎನ್ನುವ ನಂಬಿಕೆಯಿದೆ.

  2)ಕನಸಿನಲ್ಲಿ ಕೋಪಗೊಂಡ ತಂದೆಯ ಕಂಡರೆ: ಕನಸಿನಲ್ಲಿ ಕೋಪಗೊಂಡ ಪೂರ್ವಜರನ್ನು ನೋಡುವುದು ಅಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸು ತಂದೆ ಸಂತೋಷವಾಗಿಲ್ಲ ಎಂಬುದನ್ನು ಸೂಚಿಸುತ್ತದಂತೆ. ಆದಾಗ್ಯೂ ಪಿತೃ ದೋಷದಿಂದ ಬಳಲುತ್ತಿರುವ ಜನರು ಇಂತಹ ಕನಸುಗಳನ್ನು ಕಾಣುತ್ತಾರೆ. ಈ ಕನಸು ತಂದೆಯ ಆಸೆ ಈಡೇರಿಲ್ಲವೆಂಬುದನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

  3)ಪೂರ್ವಜರು ಜೊತೆಗೆ ಮಾತನಾಡುವ ಕನಸು ಬಿದ್ದರೆ: ಪೌರಾಣಿಕ ನಂಬಿಕೆಯ ಪ್ರಕಾರ, ಮನುಷ್ಯನು ಸತ್ತಾಗ ಮತ್ತು ಅವನ ಬಯಕೆಯನ್ನು ಈಡೇರಿಸದಿದ್ದಾಗ, ಅವನ ಆತ್ಮವು ಪರಲೋಕದ ಕಡೆಗೆ ಸಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆ ವ್ಯಕ್ತಿಯ ಅತ್ಮವು ಭೂಮಿಯ ಮೇಲೆ ಅಲೆದಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಆಗಾಗ್ಗೆ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಅವರು ಅನೇಕ ಬಾರಿ ಕನಸುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವನ ಅತೃಪ್ತ ಆಶಯವನ್ನು ನಮಗೆ ಹೇಳಲು ಪ್ರಯತ್ನಿಸುತ್ತಾನೆ. ಅಂತಹ ಕನಸುಗಳ ಬಿದ್ದ ಸಂದರ್ಭದಲ್ಲಿ, ನಾವು ನಮ್ಮ ಪೂರ್ವಜರಿಗಾಗಿ ಸ್ವಲ್ಪ ದಾನ ಮಾಡಬೇಕು. ಆತ್ಮಗಳು ನಮ್ಮೊಂದಿಗೆ ಸಂಪರ್ಕದಲ್ಲಿರಲು ಇದು ಕೂಡ ಒಂದು ಕಾರಣವಾಗಿರುತ್ತದೆ.

  ಇದನ್ನೂ ಓದಿ: ಕನಸಿನಲ್ಲಿ ಈ ವಸ್ತು ಕಂಡರೆ ಅದೃಷ್ಟವಂತೆ!

  4)ಪೂರ್ವಜರು ನೋವಿನಲ್ಲಿ ಇದ್ದರೆ: ಪೂರ್ವಜರನ್ನು ಕೆಟ್ಟ ಸ್ಥಿತಿಯಲ್ಲಿ ನೋಡುವುದು ಅಥವಾ ಕನಸಿನಲ್ಲಿ ಅವರು ಅಳುವಮತೆ ಅಥವಾ ಅನಾರೋಗ್ಯದ ಸ್ಥಿತಿಯಲ್ಲಿ ಇರುವಂತೆ ನೋಡುವುದು ಒಳ್ಳೆಯ ಕನಸು ಎಂದು ಪರಿಗಣಿಸಲಾಗುವುದಿಲ್ಲ. ಇದರರ್ಥ ನಿಮ್ಮ ಕೆಲಸದಲ್ಲಿ ದೊಡ್ಡ ಅಡಚಣೆಯೊಂದು ನಿಮಗೆ ಎದುರಾಗಬಹುದು
  Published by:ranjumbkgowda1 ranjumbkgowda1
  First published: