• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology Tips: ನಿಮ್ಮ ವೃತ್ತಿಜೀವನದಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಆಲದ ಮರದಲ್ಲಿದೆ!

Astrology Tips: ನಿಮ್ಮ ವೃತ್ತಿಜೀವನದಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಆಲದ ಮರದಲ್ಲಿದೆ!

ಆಲದ ಮರ

ಆಲದ ಮರ

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಆಲದ ಮರದಲ್ಲಿದೆ ಪರಿಹಾರ. ವಾಸ್ತು ಪ್ರಕಾರ ಏನು ಮಾಡಬೇಕು, ನಮ್ಮ ಜೀವನದಲ್ಲಿ ಬದಲಾವಣೆ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಯಿರಿ.

  • Share this:

ಕೆಲವೊಮ್ಮೆ ಕೆಲವೊಬ್ಬರಿಗೆ ತಮ್ಮ ಉದ್ಯೋಗ ಸ್ಥಳದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಡುತ್ತಿರುತ್ತವೆ ಅಂತ ಹೇಳಬಹುದು. ಒಮ್ಮೆ ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಪದೇ ಪದೇ ಆಗುವ ಈ ವರ್ಗಾವಣೆಗಳಿಂದ ಕೆಲಸ ಮಾಡುವ ಉದ್ಯೋಗಿ ಅಷ್ಟೇ ಅಲ್ಲದೆ, ಅವರ ಇಡೀ ಕುಟುಂಬ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಕೆಲಸದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಅನೇಕರು ದೇವಸ್ಥಾನಗಳಿಗೆ ಹೋಗಿ ಪೂಜೆ, ಅರ್ಚನೆ ಮತ್ತು ಅಭಿಷೇಕಗಳನ್ನು ಮಾಡಿಸಿಕೊಂಡು ಬರುವುದನ್ನು ನೋಡಿರುತ್ತೇವೆ. ಆದರೆ ಇದಕ್ಕೆ ಪರಿಹಾರ ಆಲದ ಮರದಲ್ಲಿಯೇ ಇದೆಯಂತೆ ಅಂತ ಹೇಳಿದರೆ ನೀವು ನಂಬಲಿಕ್ಕಿಲ್ಲ. ಆದರೆ ಜ್ಯೋತಿಷ್ಯ ಇದನ್ನು ಸತ್ಯ ಅಂತ ಹೇಳುತ್ತೆ ನೋಡಿ.


ಹಿಂದೂ ಧರ್ಮದಲ್ಲಿ ಆಲದ ಮರಕ್ಕೆ ಪೂಜ್ಯನಿಯ ಸ್ಥಾನವಿದ್ದು, ಇದು ಬಹಳ ಪವಿತ್ರ ಮತ್ತು ದೈವಿಕ ಶಕ್ತಿಯಿಂದ ತುಂಬಿದೆ ಅಂತ ಹೇಳುತ್ತಾರೆ. ಆದ್ದರಿಂದ, ಅನೇಕ ಸಂದರ್ಭಗಳಲ್ಲಿ, ಆಲದ ಮರವನ್ನು ಪೂಜಿಸಲಾಗುತ್ತದೆ.


ವಟ ಸಾವಿತ್ರಿ ವೃತದ ದಿನದಂದು, ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಆಲದ ಮರವನ್ನು ಪೂಜಿಸುತ್ತಾರೆ. ಉದ್ಯೋಗ ಪಡೆಯಲು ಜ್ಯೋತಿಷ್ಯದಲ್ಲಿ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಈ ಕ್ರಮಗಳಲ್ಲಿ ಕೆಲವು ಆಲದ ಮರಕ್ಕೆ ಸಂಬಂಧಿಸಿವೆ ನೋಡಿ. ಈ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


ಕೆಲಸದ ಸ್ಥಳದಲ್ಲಿರುವ ಅನೇಕ ಸಮಸ್ಯೆಗಳಿಗೆ ಆಲದ ಮರ ಪರಿಹಾರ ನೀಡುತ್ತಂತೆ..


  • ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆ ಇದ್ದರೆ, ಆಲದ ಮರದ ಈ ಪರಿಹಾರವು ಭಾನುವಾರ ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ನಿಮಗಿರುವ ಆ ಸಮಸ್ಯೆಯ ಪರಿಹಾರವಾಗಲಿ ಅಂತ ಆಲದ ಮರದ ಎಲೆಯ ಮೇಲೆ ಬರೆದು ಅದನ್ನು ನದಿಗೆ ಬಿಡಿ. ಈ ಬಯಕೆ ಶೀಘ್ರದಲ್ಲಿಯೇ ಈಡೇರುತ್ತದೆ.

  • ಶನಿವಾರ, ಆಲದ ಮರದ ಕಾಂಡಕ್ಕೆ ಅರಿಶಿನ ಮತ್ತು ಕೇಸರಿಯನ್ನು ಅರ್ಪಿಸಿ. ಇದು ನಿಮ್ಮ ವ್ಯವಹಾರದಲ್ಲಿ ಇನ್ನಷ್ಟು ಪ್ರಗತಿ ಹೊಂದಲು ಸಹಾಯ ಮಾಡುತ್ತದೆ.

  • ಮನೆಯಲ್ಲಿನ ಜಗಳಗಳು ಮತ್ತು ಕಲಹಗಳಿಂದ ತೊಂದರೆಗೀಡಾದ ಜನರು ನಿಯಮಿತವಾಗಿ ಆಲದ ಮರದ ಕೆಳಗೆ ತುಪ್ಪದ ದೀಪವನ್ನು ಬೆಳಗಿಸುತ್ತಾರೆ ಮತ್ತು ವಿಷ್ಣುವನ್ನು ಧ್ಯಾನಿಸುತ್ತಾರೆ. ಇದು ವಿವಾದಾತ್ಮಕ ವಿಷಯಗಳನ್ನು ಅಂತ್ಯಗೊಳಿಸುತ್ತದೆ ಮತ್ತು ಮನೆಯಲ್ಲಿರುವ ಭಿನ್ನಾಭಿಪ್ರಾಯಗಳಿಗೆ ಬ್ರೇಕ್ ಹಾಕುತ್ತದೆ.


ಇದನ್ನೂ ಓದಿ: ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತೆ!

  • ಕುಟುಂಬದ ಯಾವುದೇ ಸದಸ್ಯರು ಅನಗತ್ಯವಾಗಿ ಭಯಭೀತರಾಗಿದ್ದರೆ ಅಥವಾ ಮಾನಸಿಕ ಉದ್ವಿಗ್ನತೆ ಇದ್ದರೆ, ಆಲದ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆ ಭಯ ಮತ್ತು ಉದ್ವಿಗ್ನತೆ ಮಾಯವಾಗುತ್ತದೆ. ಇದರೊಂದಿಗೆ, ಮಾನಸಿಕ ಒತ್ತಡವೂ ಸಹ ನಿವಾರಣೆಯಾಗುತ್ತದೆ.

  • ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ರೋಗವನ್ನು ಗುಣಪಡಿಸಲು, ರಾತ್ರಿ ಮಲಗುವಾಗ ಆಲದ ಮರದ ಬೇರನ್ನು ಆ ವ್ಯಕ್ತಿಯ ದಿಂಬಿನ ಕೆಳಗೆ ಇರಿಸಿ. ಹೀಗೆ ಮಾಡುವುದರಿಂದ ಆ ವ್ಯಕ್ತಿಯ ಆರೋಗ್ಯದಲ್ಲಿ ಕ್ರಮೇಣ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ.




  • ನೀವು ಮಾಡುವ ವ್ಯವಹಾರದಲ್ಲಿ ವ್ಯಾಪಾರ ಹೆಚ್ಚಾಗದಿದ್ದರೆ, ಶನಿವಾರ ಆಲದ ಮರದ ಕೆಳಗೆ ಅಡಿಕೆ ಮತ್ತು ನಾಣ್ಯವನ್ನು ಇರಿಸಿ ಮತ್ತು ಸಮಸ್ಯೆಯನ್ನು ಅಲ್ಲಿ ಹೇಳಿಕೊಳ್ಳಿ. ಹೀಗೆ ಮಾಡುವುದರಿಂದ ವ್ಯವಹಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗಲು ಪ್ರಾರಂಭಿಸುತ್ತವೆ.

  • ಆಲದ ಮರದ ಕೆಳಗೆ ತುಪ್ಪದ ದೀಪವನ್ನು ಬೆಳಗಿಸುವುದರಿಂದ, ವ್ಯವಹಾರದಲ್ಲಿ ಲಾಭವಾಗುತ್ತದೆ. ಅಲ್ಲದೆ, ವ್ಯವಹಾರದಲ್ಲಿ ಸಿಲುಕಿರುವ ಹಣವನ್ನು ಸಹ ನೀವು ಮರಳಿ ಪಡೆಯುವ ಸಾಧ್ಯತೆಗಳಿರುತ್ತವೆ.

  • ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ದೇವಾಲಯದ ಬಳಿ ಇರುವ ಆಲದ ಮರದ ಕೊಂಬೆಯನ್ನು ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡುತ್ತದೆ. ಇದನ್ನು ಅಂಗಡಿ ಅಥವಾ ಕಚೇರಿಯಲ್ಲಿಯೂ ಸಹ ಇಡಬಹುದು.

  • ಆಲದ ಮರಕ್ಕೆ ಬಿಳಿ ಹತ್ತಿ ದಾರವನ್ನು 11 ಬಾರಿ ಕಟ್ಟಿ ನೀರನ್ನು ಅರ್ಪಿಸಿ. ಇದು ಹಣ ಗಳಿಸುವ ಸಾಧ್ಯತೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.

First published: