ನಿದ್ದೆಯಲ್ಲಿ ಬೀಳುವ ಕನಸು (Dream) ಸಾಮಾನ್ಯವಾಗಿ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಗಾಢ ನಿದ್ದೆಯಲ್ಲಿದ್ದಾಗ ಯಾರಿಗಾದರೂ ಕನಸು ಬಿದ್ದೇ ಬೀಳುತ್ತದೆ. ಈ ಕನಸು ಕೆಟ್ಟದ್ದೂ ಆಗಿರಬಹುದು ಒಳ್ಳೆಯದೂ ಆಗಿರಬಹುದು. ಹಗಲಿನ ಜಾವ ಒಳ್ಳೆಯ ಕನಸು (Morning Dream) ಬಿದ್ದರೆ ಶುಭ ಹಾಗೂ ಕೆಟ್ಟ ಕನಸು ಬಿದ್ದರೆ ಅಶುಭ ಎಂಬ ಮಾತನ್ನು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಗಮನಿಸಿರಬಹುದು. ಆದರೆ ಇದೆಲ್ಲಾ ಅವರವರ ನಂಬಿಕೆಗಳಿಗೆ ಬಿಟ್ಟದ್ದು. ಕುತೂಹಲಕಾರಿ ಅಂಶವೆಂದರ ಹೆಚ್ಚಿನ ಜನರಿಗೆ ಕನಸಿನ ಅರ್ಥವನ್ನು(Dream Meaning) ತಿಳಿದುಕೊಳ್ಳಲು ವಿಫಲರಾಗುತ್ತಾರೆ. ಅವರಿಗೆ ಬೀಳುವ ಕನಸುಗಳು ದಿನವಿಡೀ ಮಾಡಿದ ಚಟುವಟಿಕೆಗೆ ಸಂಬಂಧಿಸಿರಬಹುದು ಅಥವಾ ಕಲವೊಮ್ಮೆ ಸಂಪೂರ್ಣವಾಗಿ ಒಂದಕ್ಕೊಂದು ಸಂಬಂಧ ಇಲ್ಲದೇ ಇರಬಹುದು. ಉದಾಹರಣೆಗೆ, ಅನೇಕ ವ್ಯಕ್ತಿಗಳ ಕನಸಲ್ಲಿ ನಿರ್ದಿಷ್ಟವಾಗಿ ಬಿಳಿ ಪ್ರಾಣಿಗಳ (White Animal) ಬಗ್ಗೆ ಕನಸು ಕಾಣುತ್ತಾರೆ. ಹಾಗಾದರೆ ಕನಸಿನಲ್ಲಿ ಬಿಳಿ ಪ್ರಾಣಿಬಂದರೆ ಏನರ್ಥ? ಅಂತಹ ಕನಸುಗಳನ್ನು ಹೇಗೆ ಅರ್ಥೈಸಲಾಗುತ್ತದೆ ಎಂದು ಇಲ್ಲಿ ತಿಳಿದುಕೊಳ್ಳೋಣ.
ಕನಸು ಶುಭವೇ ಅಶುಭವೇ?
ಕನಸಿನಲ್ಲಿ ಹಾವು ಕಂಡುಬಂದರೆ ಬೇರೆ ಬೇರೆ ಮೃಗಗಳು ಕಂಡುಬಂದರೆ ಶುಭ ಅಶುಭ ಎಂದು ಹೇಳುವವರೂ, ನಂಬುವವರು ಇದ್ದಾರೆ. ಕನಸಿನಲ್ಲಿ ಹೆಚ್ಚಾಗಿ ಸಾಯುವ ಕನಸು ಬಿದ್ದರೆ ಏನಾದರೂ ಅಪಘಾತದ ಸೂಚನೆ ಎಂಬ ಮಾತೂ ಇದೆ. ಈ ಸಮಯದಲ್ಲಿ ದೇವರ ಆರಾಧನೆ ಮಾಡಿದರೆ ಅಥವಾ ಪೂಜೆಗಳನ್ನು ದೇವರಿಗೆ ನೆರವೇರಿಸಿದರೆ ದೋಷ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.
ಬಿಳಿ ಬಣ್ಣದ ಹುಲಿ, ಬಿಳಿ ಬಣ್ಣದ ಎತ್ತು, ಹಸು, ಬಿಳಿ ಕುದುರೆ ಹೀಗೆ ಬಿಳಿ ಬಣ್ಣದ ಪ್ರಾಣಿಗಳು ಕನಸಿನಲ್ಲಿ ಕಂಡರೆ ಅದು ಶುಭವೇ ಅಶುಭವೇ? ಕೆಟ್ಟದ್ದೇ ಒಳ್ಳೆಯದೇ ಎಂಬುದನ್ನು ಇಂದಿನ ಲೇಖನದ ಮೂಲಕ ತಿಳಿದುಕೊಳ್ಳೋಣ
ಕನಸಿನಲ್ಲಿ ಬಿಳಿ ಪ್ರಾಣಿ ಕಂಡರೆ – ಶಾಂತಿ ಹಾಗೂ ಸೌಹಾರ್ದತೆಯ ಸಂಕೇತ
ಕನಸಿನಲ್ಲಿ ಬಿಳಿ ಬಣ್ಣದ ಪ್ರಾಣಿ ಕಾಣಿಸಿಕೊಂಡರೆ, ಅದು ಶುದ್ಧತೆ ಹಾಗೂ ಶಾಂತಿಯ ಸಂಕೇತವಾಗಿದೆ. ಹಾಗಾಗಿಯೇ ಈ ಬಣ್ಣ ದಯೆ, ಮಾನವೀಯತೆ, ಸಹಾನುಭೂತಿ, ಪ್ರೀತಿ ಮತ್ತು ಔದಾರ್ಯವನ್ನು ಸೂಚಿಸುತ್ತದೆ. ಕನಸಿನಲ್ಲಿ ಕಾಣುವ ಪ್ರಾಣಿಯು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ:Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ
ಗುರಿಯ ಪೂರ್ಣಗೊಂಡ ಸಂಕೇತ
ಬಿಳಿ ಪ್ರಾಣಿಯ ಕನಸು ಕಂಡಲ್ಲಿ ಆ ವ್ಯಕ್ತಿ ತಮ್ಮ ಯೋಜನೆ ಪೂರ್ಣಗೊಳ್ಳಲಿದೆ ಅಥವಾ ಶೀಘ್ರದಲ್ಲೇ ಗುರಿಗಳನ್ನು ಸಾಧಿಸಲಾಗುವುದು ಎಂದು ಅರ್ಥೈಸಬಹುದು. ನೀವು ಯಾವುದಾದರೂ ಯೋಜನೆಯನ್ನು ಕೈಗೊಂಡಿದ್ದರೆ ಅದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬುದನ್ನು ಈ ಕನಸು ಸಂಕೇತಿಸುತ್ತದೆ.
ಕನಸಿನಲ್ಲಿ ಬಿಳಿ ಪ್ರಾಣಿ ಕಂಡರೆ – ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ
ನಿಮ್ಮ ಕನಸಿನಲ್ಲಿ ಬಿಳಿ ಪ್ರಾಣಿಯನ್ನು ನೀವು ನೋಡಿದರೆ, ನೀವು ಜೀವನದಲ್ಲಿ ಅದೃಷ್ಟವಂತರಾಗಬಹುದು ಎಂಬ ಲಕ್ಷಣವಿದೆ. ಹಾಗೆಯೇ ಸುಖ ಶಾಂತಿ ನೆಮ್ಮದಿಯೊಂದಿಗೆ ಸಮೃದ್ಧಿಯೂ ನಿಮ್ಮನ್ನರಸಿಕೊಂಡು ಬರಲಿದೆ ಎಂಬುದನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ಶುಭ ಸುದ್ದಿ ಎಂಬುದು ನಂಬಿಕೆಯಾಗಿದೆ.
ಕನಸಿನಲ್ಲಿ ಬಿಳಿ ಬಣ್ಣದ ಯಾವ ಪ್ರಾಣಿಗಳನ್ನು ನೋಡಿದರೆ ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಅರಿತುಕೊಳ್ಳೋಣ. ಒಂದೊಂದು ಪ್ರಾಣಿಯೂ ಒಂದೊಂದು ಸಂಕೇತವನ್ನು ಹೊಂದಿದ್ದು, ನಿಮಗೆ ಬಿದ್ದಿರುವ ಕನಸನ್ನು ಆಧರಿಸಿ ಇದರ ಪ್ರಯೋಜನ ನಿಮಗೆ ದೊರೆಯುತ್ತದೆ.
ಬಿಳಿ ಆನೆ
ನಿಮ್ಮ ಕನಸಿನಲ್ಲಿ ಬಿಳಿ ಆನೆಯನ್ನು ನೋಡಿದ್ದೀರಾ? ಹೌದು ಎಂದಾದರೆ, ಅದು ಶಕ್ತಿ ಮತ್ತು ಖ್ಯಾತಿಯ ಸಂಕೇತವಾಗಿರಬಹುದು. ಹಿಂದೂ ಧರ್ಮಗ್ರಂಥಗಳಲ್ಲಿ, ಇಂದ್ರನು (ದೇವತೆಗಳ ಮುಖ್ಯಸ್ಥ) ಐರಾವತ ಎಂಬ ಹತ್ತು ಸೊಂಡಿಲುಗಳನ್ನು ಹೊಂದಿರುವ ಬಿಳಿ ಆನೆಯ ಮೇಲೆ ಏರಿ ಸವಾರಿ ಮಾಡುತ್ತಿರುತ್ತಾನೆ ಎನ್ನಲಾಗುತ್ತದೆ.
ಬಿಳಿ ಹುಲಿ
ಸಾಮಾನ್ಯವಾಗಿ ಹುಲಿಯು ಶಕ್ತಿ, ಗಮನ ಏಕಾಗ್ರತೆ ಹಾಗೂ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಯಾರಿಗಾದರೂ ಬಿಳಿ ಹುಲಿ ಕನಸಿನಲ್ಲಿ ಕಂಡುಬಂದರೆ ಅವರ ವೃತ್ತಿಜೀವನ ವಿಕಸನಗೊಳ್ಳುತ್ತದೆ ಹಾಗೂ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಎಂಬುದು ಸೂಚನೆಯಾಗಿದೆ.
ಬಿಳಿ ನವಿಲು
ತನ್ನ ರೋಮಾಂಚಕ ಬಣ್ಣ ಹಾಗೂ ನಯನಮನೋಹರ ನೃತ್ಯಕ್ಕೆ ನವಿಲು ಹೆಸರುವಾಸಿಯಾಗಿದೆ. ಸಂತೋಷ ಹಾಗೂ ಸೌಂದರ್ಯವನ್ನೂ ಈ ಪಕ್ಷಿ ಸಂಕೇತಿಸುತ್ತದೆ. ಕನಸಿನಲ್ಲಿ ಬಿಳಿ ನವಿಲನ್ನು ಕಂಡಾಗ ನಿಮ್ಮ ಇಚ್ಛೆ ಈಡೇರುತ್ತದೆ ಎಂಬುದರ ಸೂಚನೆಯಾಗಿದೆ. ಬಹುಕಾಲದಿಂದ ಯಾವುದನ್ನಾದರೂ ನೀವು ಬಯಸಿದ್ದರೆ ಅಥವಾ ಏನನ್ನಾದರೂ ನೀವು ಇಷ್ಟಪಟ್ಟಿದ್ದರೆ ಅದನ್ನು ಪಡೆದುಕೊಳ್ಳುತ್ತೀರಿ ಎಂಬುದು ಬಿಳಿ ನವಿಲು ಸೂಚಿಸುತ್ತದೆ.
ಒಂದು ವೇಳೆ ನಿಮ್ಮ ಕನಸಿನಲ್ಲಿ ಬಿಳಿ ಪ್ರಾಣಿ ಅಥವಾ ಪಕ್ಷಿ ಕಂಡರೆ ನಿಮಗೆ ಶುಭವಾಗಲಿದೆ, ಒಳ್ಳೆಯ ಸುದ್ದಿ ಕಾದಿದೆ ಎಂಬುದನ್ನು ನೀವು ಅರಿತುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ