ಸರ್ಕಾರ ನಡೆಯೋದು ಕಾನೂನು ಪ್ರಕಾರ. ಆದ್ರೆ ಮನೆಯನ್ನ ಕಟ್ಟಬೇಕು ವಾಸ್ತು ಪ್ರಕಾರ (Vastu Shastra) ಅಂತಾರೆ. ತೀರ ಮೂಢನಂಬಿಕೆಗಳಿಗೆ ಜೋತು ಬೀಳದೇ ಇದ್ರೂ, ಗಾಳಿ ಬೆಳಕಿನ ವಿಷ್ಯದಲ್ಲಿ ವಾಸ್ತುವನ್ನ ನಂಬಲೇಬೇಕು. ಇದೀಗ ವಾಸ್ತು ತಜ್ಞ ಅಚಾರ್ಯ ಇಂದು ಪ್ರಕಾಶ್ ಅವರು ಮನೆಯಲ್ಲಿ ಶಾಂತಿ, ಖುಷಿ (Happy) ಮತ್ತು ಹಣಗಳಿಕೆಗೆ ಪಾಲಿಸಬೇಕಾದ ಸಣ್ಣ ಸಲಹೆಯೊಂದನ್ನು ನೀಡಿದ್ದಾರೆ. ಮನೆಯಲ್ಲಿ (Home) ಸದಾ ಜಗಳ, ನೆಮ್ಮದಿಯೇ ಇಲ್ಲ, ಸಣ್ಣ ಪುಟ್ಟ ವಿಷ್ಯಗಳು ಯಾವುದೋ ದಿಕ್ಕಿಗೆ ತಿರುಗುತ್ತಿವೆ. ನೆಗೆಟಿವ್ ವಿಷ್ಯಗಳೇ ಮನೆಯಲ್ಲಿ ತುಂಬಿವೆ ಅಂತ ತಲೆ ಕೆಡಿಸಿಕೊಂಡಿದ್ದೀರಾ. ಎಷ್ಟೇ ದುಡಿದರೂ ತಿಂಗಳ ಕೊನೆಯಲ್ಲಿ ಐನೂರು, ಸಾವಿರ ಅಂತ ಸಾಲ ಮಾಡ್ತಿದ್ದೀರಾ. ಹಾಗಿದ್ರೆ, ಮನೆಯಲ್ಲಿ ಇದೊಂದು ಸಣ್ಣ ವಿಷ್ಯವನ್ನ ಪಾಲಿಸಿದ್ರೆ, ನಿಮ್ಮಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಅಂತ ವಾಸ್ತು ತಜ್ಞ ಅಚಾರ್ಯ ಇಂದು ಪ್ರಕಾಶ್ ಹೇಳ್ತಿದ್ದಾರೆ.
ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಣಕಾಸು ವೃದ್ಧಿಸೋಕೆ, ಸುಖ, ಶಾಂತಿ ನೆಲಸೋದಕ್ಕೆ ಪುಟ್ಟದೊಂದು ಸಲಹೆ ಇದೆ. ಅದೇನಂದ್ರೆ, ಮನೆಯ ನೈಋತ್ಯ ದಿಕ್ಕಿನಲ್ಲಿ ಗ್ಲಾಸ್‌ನಲ್ಲಿ ನೀರನ್ನ ಇಡಬೇಕು. ಅದಕ್ಕೆ ಒಂದು ಸ್ಪೂನ್‌ನಷ್ಟು ಉಪ್ಪನ್ನು ಹಾಕಿ ಇಡಬೇಕು. ನೀರು ಯಾವಾಗ ಆವಿಯಾಗಿ ಖಾಲಿಯಾಗುತ್ತದೆಯೋ, ಆಗ ಗ್ಲಾಸ್‌ನ್ನ ಮತ್ತೆ ಕ್ಲೀನ್ ಮಾಡಿ, ಮತ್ತೆ ನೀರು ಮತ್ತು ಉಪ್ಪನ್ನು ಇಡಬೇಕು ಅಂತ ಅಚಾರ್ಯ ಇಂದು ಪ್ರಕಾಶ್ ಅವರು ಸಲಹೆ ನೀಡುತ್ತಾರೆ.
ನೀರು ಹಾಗೂ ಉಪ್ಪಿಗಿದೆ ಮೌಲ್ಯಯುತ ಸ್ಥಾನ
ಹೌದು, ನಮ್ಮ ಸಂಪ್ರದಾಯದಲ್ಲಿ ನೀರು ಮತ್ತು ಉಪ್ಪು ಎರಡಕ್ಕೂ ಕೂಡ ಅತ್ಯಂತ ಮೌಲ್ಯಯುತ ಸ್ಥಾನವಿದೆ. ಎರಡು ಕೂಡ ಧನಾತ್ಮಕ ಅಂಶಗಳು. ಯಾವುದೇ ಶುಭ ಕಾರ್ಯಗಳಿಗೆ ನೀರು ಮತ್ತು ಉಪ್ಪು ಇಲ್ಲದೆ ಪೂರ್ಣ ಆಗುವುದಿಲ್ಲ. ಗಮನಿಸಬೇಕಾದ ಅಂಶವೇನಂದ್ರೆ, ಉಪ್ಪು ಮತ್ತು ನೀರನ್ನ ಜೊತೆಯಲ್ಲಿ ಇಡೋದ್ರಿಂದ ಮನೆಯಲ್ಲಿನ ನೆಗಿಟಿವ್ ಎನರ್ಜಿಯನ್ನ ದೂರ ಮಾಡುತ್ತವೆ. ಇದರ ಜತೆಗೆ ಮನೆಯಲ್ಲಿ ಸದಾ ನೆಮ್ಮದಿ ನೆಲಸುವಂತೆ ಮಾಡುತ್ತದೆ.
ಇದನ್ನೂ ಓದಿ: ವಾಸ್ತು ಪ್ರಕಾರ ಮನೆಯಲ್ಲಿ ಪೂಜಾ ಕೋಣೆ ಈ ರೀತಿ ಇದ್ರೆ ಹಣದ ಸಮಸ್ಯೆಯೇ ಬರಲ್ಲ
ಸುಖ ಶಾಂತಿಯೂ ಆಗಮಿಸುತ್ತದೆ ಎಂದು ಅಚಾರ್ಯ ಇಂದು ಪ್ರಕಾಶ್ ಅವರು ತಿಳಿಸುತ್ತಾರೆ. ಇನ್ನು, ಮನೆಯಲ್ಲಿ ಉಪ್ಪು ಮತ್ತು ನೀರನ್ನು ಇಡುವುದರಿಂದ ಹಣದ ವೃದಿ ಕೂಡ ಆಗುತ್ತದೆ ಅಂತ ಅಚಾರ್ಯರೂ ಸಲಹೆ ನೀಡುತ್ತಾರೆ.
ಇದೇ ತಿಳಿದುಕೊಳ್ಳಿ ನೈಋತ್ಯ ದಿಕ್ಕು
ಅಂದಹಾಗೇ, ನೈಋತ್ಯ ದಿಕ್ಕು ಯಾವುದು ಅಂತಲೇ ಬಹುತೇಕರು ತಲೆ ಕೆಡಿಸಿಕೊಳ್ಳುತ್ತಾರೆ. ನೈಋತ್ಯ ಅಂದ್ರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವೆ ಬರುವಂತಹ ದಿಕ್ಕು. ಸಾಮಾನ್ಯವಾಗಿ ನೈಋತ್ಯ ದಿಕ್ಕಿನಲ್ಲಿ ದೇವರ ಮನೆಗಳನ್ನ ನಿರ್ಮಿಸುತ್ತಾರೆ. ಹಾಗೇ, ಬೆಡ್ ರೂಂಗಳನ್ನ ಕಟ್ಟಿಸುತ್ತಾರೆ. ಹೀಗಾಗಿ ಅಂತಹ ಜಾಗದಲ್ಲಿ ಉಪ್ಪು ಮತ್ತು ನೀರನ್ನ ಇಡೋದ್ರಿಂದ ಅಲ್ಲಿ ವಾತಾವರಣ ಬದಲಾಗುತ್ತದೆ ಅಂತ ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಕೆಲವೊಂದು ಮನೆಗಳಲ್ಲಿ ಲೋಟಗಳಿಗೆ ಅಕ್ಕಿ ತುಂಬಿ ಇಡುತ್ತಾರೆ. ಹಾಗೇ, ಮನೆ ಕೆಲವರು ಗಾಜಿನ ಲೋಟದಲ್ಲಿ ನಿಂಬೆಹಣ್ಣನ್ನು ಕೂಡ ಇಡುತ್ತಾರೆ.. ಗಾಜಿನ ಲೋಟದಲ್ಲಿ ನಿಂಬೆಹಣ್ಣನ್ನು ಇಡೋದ್ರಿಂದಲೂ ಕೂಡ ಮನೆಯಲ್ಲಿ ನೆಮ್ಮದಿ, ಸುಖ, ಶಾಂತಿ ಹಾಗೂ ಹಣ ವೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ.
ಇನ್ನು, ಕೆಲವೊಬ್ರು ಶುಕ್ರವಾರ ಮನೆಗಳಲ್ಲಿ ಉಪ್ಪಿನ ದೀಪವನ್ನೂ ಹಚ್ಚುತ್ತಾರೆ. ಇದ್ರಿಂದ ಲಕ್ಷ್ಮಿ ದೇವಿ ಒಲಿಯುತ್ತಾಳೆ ಅನ್ನೋ ನಂಬಿಕೆ ಇದೆ. ಈ ಮೂಲಕ ತಿಳಿದು ಬರುವ ಅಂಶವೇನೆಂದರೆ, ಉಪ್ಪು ಎಲ್ಲ ದೇವರಿಗೂ ಪ್ರಿಯವಾದ ಮತ್ತು ಸರ್ವಶ್ರೇಷ್ಟವಾದ ವಸ್ತು. ಹಾಗೆ, ಉಪ್ಪು ಎಲ್ಲರ ಬಳಿಯೂ ಇರುವ, ಎಲ್ಲರ ಕೈಗೂ ಎಟುಕುವ ವಸ್ತು. ಹೀಗಾಗಿ ಉಪ್ಪನ್ನು ವಾಸ್ತುವಿನ ದೃಷ್ಟಿಕೋನದಿಂದ ನೋಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ