ಮನಿ ಪ್ಲಾಂಟ್ (Money Plant) ಹೆಸರೇ ಹೇಳುವಂತೆ ಹಣದ ಗಿಡ. ಹಣದ ಗಿಡ ಅಂತಕ್ಷಣ ಗಿಡದಲ್ಲಿ ದುಡ್ಡು (Money) ಬೆಳೆಯಲ್ಲ. ಬದಲಿಗೆ ನಮ್ಮ ಮನೆಯಲ್ಲಿ (Home) ಲಕ್ಷ್ಮಿ ನೆಲೆಸಲು ಈ ಗಿಡಗಳು ಪರೋಕ್ಷವಾಗಿ ಕಾರಣವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ (Believe). ಮನಿ ಪ್ಲಾಂಟ್ ಒಬ್ಬರನ್ನು ಶ್ರೀಮಂತರನ್ನಾಗಿ (Rich) ಮಾಡಲು ಸಹಾಯ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿಪ್ಲಾಂಟ್ಗೆ ವಿಶೇಷವಾದ (Special) ಸ್ಥಾನಮಾನವಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮನೆಗೆ ಹಣದ ಹೊಳೆ ಹರಿದು ಬರಲು ಪೂರಕವಾಗಿದೆ ಎನ್ನುತ್ತದೆ ವಾಸ್ತು.
ಅದೃಷ್ಟ ತರುತ್ತದೆ ಮನಿ ಪ್ಲಾಂಟ್
ಮನಿ ಪ್ಲಾಂಟ್ ನೆಡುವುದರಿಂದ ಕುಟುಂಬದಲ್ಲಿ ಸಮೃದ್ಧಿಯ ಜೊತೆಗೆ ಉತ್ತಮ ಅದೃಷ್ಟ ಬರುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ವಾಸ್ತು ಪ್ರಕಾರ, ಇದು ಗಾಳಿಯಿಂದ ಹಾನಿಕಾರಕ ಕಲ್ಮಶಗಳನ್ನು ನಿವಾರಿಸುತ್ತದೆ ಮತ್ತು ಪರಿಸರವನ್ನು ಶುದ್ಧಗೊಳಿಸುತ್ತದೆ.
ಹೆಚ್ಚಿನ ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಮನೆಯ ಅಂಗಳದಲ್ಲಿ ಇದೇ ಕಾರಣಕ್ಕೆ ಮನಿ ಪ್ಲಾಂಟ್ ಅನ್ನು ನೆಡುತ್ತಾರೆ.ಮನಿ ಪ್ಲಾಂಟ್ ಮನೆಗೆ ತಂದು ಎಲ್ಲಿಬೇಕಾದರು ಇಡುವ ಹಾಗಿಲ್ಲ, ಜಾಗ ಕೊಳಕಾಗಿರಬಾರದು, ಎಲೆಗಳು ಒಣಗಲು ಬಿಡಬಾರದು.
ಹೀಗೆ ಸರಿ ಅಲ್ಲದ ಕ್ರಮದಲ್ಲಿ ಇದನ್ನು ಇರಿಸಿದರೆ ವಿರುದ್ಧ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮನೆಯ ಯಾವ ದಿಕ್ಕಿನಲ್ಲಿ ಇರಿಸಿದರೆ ಅದೃಷ್ಟ ಖುಲಾಯಿಸುತ್ತದೆ, ಮನಿ ಪ್ಲಾಂಟ್ ಅನ್ನು ಎಲ್ಲಿ ಇಡಬೇಕು ಎಂಬುದನ್ನು ನಾವಿಲ್ಲಿ ನೋಡೋಣ.
ಮನಿ ಪ್ಲಾಂಟ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ವಾಸ್ತವವಾಗಿ, ಈಶಾನ್ಯವು ಅತ್ಯಂತ ನಕಾರಾತ್ಮಕ ದಿಕ್ಕು ಎಂದು ಭಾವಿಸಲಾಗಿದೆ.
ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಬಹುತೇಕ ಹಿನ್ನಡೆಯಾಗುತ್ತದೆ. ಹಣದ ಜೊತೆಗೆ, ಮನಿ ಪ್ಲಾಂಟ್ ಸಂಬಂಧಗಳಲ್ಲಿ ಬಿರುಕು ತರುತ್ತದೆ ಎನ್ನಲಾಗಿದೆ.
ಹೀಗಾಗಿ ಸಂಪತ್ತಿನ ಹರಿವು ಹೆಚ್ಚಾಗಲು ಮನಿ ಪ್ಲಾಂಟ್ ಅನ್ನು ಆಗ್ನೇಯದಲ್ಲಿ ಇಡಲು ಶಿಫಾರಸ್ಸು ಮಾಡಲಾಗುತ್ತದೆ.
ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಹಾಗೆಯೇ ಸಂಬಂಧದ ಉತ್ತಮ ದೃಷ್ಟಿಯಿಂದಾಗಿ ಮನಿ ಪ್ಲಾಂಟ್ ಅನ್ನು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಉತ್ತಮವಾಗಿದೆ ಎನ್ನಲಾಗುತ್ತದೆ.
ಯಾವಾಗಲೂ ಒಣಗಿದ ಎಲೆಗಳನ್ನು ಕತ್ತರಿಸಿ
ದಿಕ್ಕುಗಳು ಮಾತ್ರವಲ್ಲದೇ ಆ ಸಸ್ಯದ ಸರಿಯಾದ ನಿರ್ವಹಣೆ ಕೂಡ ಮುಖ್ಯವಾಗುತ್ತದೆ. ಹೀಗಾಗಿ ಮನಿ ಪ್ಲಾಂಟ್ ಎಲೆಗಳನ್ನು ಒಣಗದಂತೆ ನೋಡಿಕೊಳ್ಳಿ.
ಒಂದು ವೇಳೆ ಒಣಗಿ ಹೋದಲ್ಲಿ ಯಾವಾಗಲೂ ಒಣಗಿದ ಎಲೆಗಳನ್ನು ಕತ್ತರಿ. ಆದಾಗ್ಯೂ ಯಾವಾಗಲೂ ಸಸಿಯನ್ನು ಹಸಿರಾಗಿಡುವುದು ಒಳ್ಳೆಯದು.
ಇದಕ್ಕಾಗಿ ಪ್ರತಿದಿನ ನೀರು ಹಾಕುತ್ತಿರಿ. ಎಲೆಗಳು ಒಣಗಿ ಹೋದರೆ, ತಕ್ಷಣ ಅವುಗಳನ್ನು ಕತ್ತರಿಸಿ. ಒಣಗುತ್ತಿರುವ ಎಲೆಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: Plants at Office: ಪಟ್ ಅಂತ ನಿಮ್ಮ ಸ್ಯಾಲರಿ ಹೈಕ್ ಆಗ್ಬೇಕಾ? ಹಾಗಾದ್ರೆ ಈ ಗಿಡಗಳನ್ನು ನಿಮ್ಮ ಆಫೀಸಿನಲ್ಲಿ ಇಡಿ
ಮನೆಯ ಹೊರಗೆ ಮನಿ ಪ್ಲಾಂಟ್ ಇಡಬಹುದೇ?
ಮನೆಯ ಹೊರಗೆ ಮನಿ ಪ್ಲಾಂಟ್ ನೆಡಬಾರದು ಎನ್ನುತ್ತದೆ ವಾಸ್ತು. ಮನಿ ಪ್ಲಾಂಟ್ ಅನ್ನು ಒಳಾಂಗಣದಲ್ಲಿ ನೆಡುವುದರಿಂದ ಹೆಚ್ಚಿನ ಪ್ರಯೋಜನಗಳಿವೆ.
ಆದಾಗ್ಯೂ, ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಮುಖ್ಯ ಹಾಗೆಯೇ ಮನಿ ಪ್ಲಾಂಟ್ ಸುತ್ತಲೂ ಕೊಳಕು ಇರಲು ಬಿಡದೇ, ಯಾವಾಗಲೂ ಸ್ವಚ್ಛವಾಗಿಡಿ.
ಕಡಿಮೆ ಸೂರ್ಯನ ಬೆಳಕಲ್ಲಿ ಇರಿಸಿ
ಆಗ್ನೇಯ ದಿಕ್ಕನ್ನು ಮನಿ ಪ್ಲಾಂಟ್ ನೆಡಲು ಅತ್ಯುತ್ತಮ ದಿಕ್ಕು ಎಂದು ಪರಿಗಣಿಸಲಾಗಿದೆ. ಇದನ್ನು ಈ ದಿಕ್ಕಿನಲ್ಲಿ ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನಿ ಪ್ಲಾಂಟ್ ಅನ್ನು ಕಡಿಮೆ ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇರುವವರು ಮನಿ ಪ್ಲಾಂಟ್ ಖರೀದಿ ಮಾಡಿ ಮನೆಗೆ ತರುವಾಗ ಈ ಮೇಲಿನ ಸಲಹೆಗಳನ್ನು ತಪ್ಪದೇ ಪಾಲಿಸಿ ಲಾಭ ಪಡೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ