Astrology: ನಿಮ್ಮ ರಾಶಿಯ ಅನುಗುಣವಾಗಿ ಮನೆಯ ಅಲಂಕಾರ ಮಾಡಲು ಇಲ್ಲಿದೆ ಟಿಪ್ಸ್

Home Decoration: ಈ ರಾಶಿಯವರು ಕುಟುಂಬವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ಸ್ನೇಹಿತರು ಮತ್ತು ಕುಟುಂದವರೇ ಎಲ್ಲ. ಈ ರಾಶಿಯವರು ಮನೆಯವರ ಫೋಟೋ ಮತ್ತು ಸ್ನೇಹಿತರ ಫೋಟೋಗಳನ್ನು ಗೋಡೆಯ ಮೇಲೆ ಹಾಕಿ ಅಲಂಕಾರ ಮಾಡಲು ಇಷ್ಟಪಡುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಹೆಚ್ಚಾಗಿ ಗಮನಿಸಿರುತ್ತೀರಾ, ಕೆಲವೊಂದು ಮನೆಯ ಒಳಗಿನ ಅಲಂಕಾರ ಅದ್ಭುತವಾಗಿರುತ್ತದೆ. ನೀವು ನಿಮ್ಮ ಮನೆ ಅಥವಾ ರೂಂನಲ್ಲಿ ಹೀಗೆ ಅಲಂಕಾರ ಮಾಡಲು ಇಷ್ಟಪಡುತ್ತಿರಾ. ಆದರೆ ನಿಮಗೆ ಇಷ್ಟವಾಗುವುದಿಲ್ಲ. ನಿಮಗೆ ಯಾವ ರೀತಿ ಅಲಂಕಾರ ಮಾಡಬೇಕು ಎಂಬ ವಿಚಾರವಾಗಿ ಗೊಂದಲವಾಗುತ್ತದೆ. ಕೆಲವೊಮ್ಮೆ ನಿಮ್ಮ ಮನೆಯ ಅಲಂಕಾರ  ನಿಮ್ಮ ರಾಶಿಯ ಮೇಲೆ ನಿರ್ಧಾರವಾಗುತ್ತದೆ. ನಿಮ್ಮ ರಾಶಿಗೆ ತಕ್ಕಂತೆ ಮನೆಯನ್ನು ಅಥವಾ ರೂಂ ಅಲಂಕಾರ ಮಾಡಿದರೆ ನಿಮಗೆ ಸಂತೋಷವಾಗುತ್ತದೆ ಜೊತೆಗೆ ಮನಸಿಗೆ ನೆಮ್ಮದಿ ಸಿಗುತ್ತದೆ.  

ಮಕರ

ನೀವು ಮಕರ ರಾಶಿಯಾಗಿದ್ದರೆ, ನೀವು ನಿಮ್ಮ ಹಳೆಯ ಪದ್ದತಿಯನ್ನು ಬಿಡುವುದಿಲ್ಲ ಮತ್ತು ಸಂಪ್ರದಾಯವಾದಿಗಳಾಗಿರುತ್ತೀರ. ನಿಮಗೆ ನಿಮ್ಮ ಮನೆಯ ಹಿರಿಯರಂತೆ ಪುರಾತನ ವಸ್ತುಗಳು, ಮರದ ಪೀಠೋಪಕರಣಗಳು ಮತ್ತು ವಿಭಿನ್ನ ಗಡಿಯಾರಗಳ ಬಗ್ಗೆ ನಿಮಗೆ ಹೆಮ್ಮೆ ಇರುತ್ತದೆ. ಹಾಗೆಯೇ ಅಂತಹ ವಸ್ತುಗಳನ್ನೇ ಅಲಂಕಾರಕ್ಕೆ ಬಳಕೆ ಮಾಡುವುದು ಉತ್ತಮ. ನಿಮ್ಮ ರೂಂನಲ್ಲಿ ಮೇಜಿನ ಮೇಲೆ ಹಳೆಯ ಕಾಲದ ವಸ್ತುಗಳನ್ನು ಅಥವಾ ಅದನ್ನು ಹೋಲುವ ವಸ್ತುಗಳನ್ನು ಇಟ್ಟುಕೊಳ್ಳುವುದು ಅಂದವನ್ನು ಹೆಚ್ಚಿಸುತ್ತದೆ ಹಾಗೂ ನಿಮಗೆ ಸಂತೋಷವನ್ನು ಉಂಟುಮಾಡುತ್ತದೆ.

ಕುಂಭ ರಾಶಿ

ಕುಂಭ ರಾಶಿಯವರಾದರೆ, ನೀವು ಆಧುನಿಕತೆಯನ್ನು ಇಷ್ಟಪಡುತ್ತೀರ ಎಂದು ಅರ್ಥ.  ನಿಮಗೆ ಗ್ರಾಫಿಕ್ ವಸ್ತುಗಳು ಎಂದರೆ ಬಹಳ ಇಷ್ಟ. ಯಾವಾಗಲೂ ಹೊಸತನವನ್ನು ಪ್ರಯತ್ನಿಸಲು ನೀವು ಯಾವಾಗಲೂ ಸಿದ್ಧ. ನಿಮ್ಮ ಮನೆ  ಆರಾಮದಾಯಕವಾಗಿರುವುದಕ್ಕಿಂತ ಸೊಗಸಾಗಿರುವುದರ ಮೇಲೆ ನೀವು ಹೆಚ್ಚು ಗಮನ ನೀಡುತ್ತಿರ.

ಮೀನಾ ರಾಶಿ

ಜಪಾನಿನ ಶೈಲಿಯ ಮನೆಯ ಅಲಂಕಾರವು ಈ ರಾಶಿಯವರಿಗೆ ಸೂಕ್ತವಾಗಿದೆ. ಈ ರಾಶಿಯವರು ಒಬ್ಬಂಟಿಯಾಗಿರಲು ಬಯಸುತ್ತಾರೆ. ಶಾಂತವಾಗಿರಬೇಕು ಎಂಬುದು ಅವರ ಬಯಕೆ. ಸಂಗೀತದಲ್ಲಿ ಆಸಕ್ತಿ ಹೆಚ್ಚಿರುವ ಈ ರಾಶಿಯವರು ಅದಕ್ಕೆ ಸಂಬಂಧಪಟ್ಟ ವಸ್ತುಗಳಿಂದ ಮನೆ ಅಲಂಕಾರ ಮಾಡಿದರೆ ಸುಂದರವಾಗಿರುತ್ತದೆ.

ಮೇಷ ರಾಶಿ

ಮೇಷ ರಾಶಿಯು ಹೆಸರೇ ಸೂಚಿಸುವಂತೆ ಉರಿಯುತ್ತಿರುವ ವ್ಯಕ್ತಿತ್ವವನ್ನು ಹೊಂದಿದೆ. ಈ ರಾಶಿಯವರು ಎಲ್ಲವನ್ನೂ ಪ್ರಕಾಶಮಾನವಾಗಿರುವಂತೆ ನೋಡಿಕೊಳ್ಳುತ್ತಾರೆ. ಹೆಚ್ಚು ದೀಪ, ಬಣ್ಣ ಬಣ್ಣದ ಚಿತ್ತಾರ ಇವರಿಗೆ ಬಹಳ ಇಷ್ಟ. ಅಲ್ಲದೇ ಎದ್ದು ಕಾಣುವಂತೆ ಇರಬೇಕು ಎಂದು ಬಯಸುತ್ತಾರೆ. ವಿಶಿಷ್ಟವಾಗಿ ಏನಾದರು ಮಾಡಲು ಪ್ರಯತ್ನ  ಮಾಡುತ್ತಾರೆ.

ಇದನ್ನೂ ಓದಿ: ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಈ ಕೌಶಲ್ಯಗಳನ್ನು ತಿಳಿದಿರಬೇಕು..

ವೃಷಭ ರಾಶಿ

ಈ ರಾಶಿಯವರು ಎಲ್ಲಿದ್ದರೂ  ಐಷಾರಾಮಿ ಮತ್ತು ಸೌಕರ್ಯವಿರಬೇಕು ಎಂದು ಬಯಸುತ್ತಾರೆ. ಈ ರಾಶಿಯವರು ಉತ್ತಮ ಅಲಂಕಾರ ಜ್ಞಾನವನ್ನು ಹೊಂದಿರುತ್ತಾರೆ.  ಇವರಿಗೆ ಬೆಲೆಬಾಳುವ ಸೋಫಾಗಳು, ಅಲಂಕೃತ ಕಲೆ ಅಥವಾ ವಿಸ್ತಾರವಾದ ಗೋಡೆಯ ಅಲಂಕಾರಗಳು ಎಂದರೆ ಹೆಚ್ಚು ಪ್ರೀತಿ. ಯಾವುದೇ ಒಂದು ವಸ್ತು ಅದ್ಭುತವಾಗಿ ಕಂಡರೆ ಸಾಕು ಅದನ್ನ ಪಡೆಯದೇ ಬಿಡುವುದಿಲ್ಲ. ಮನೆಯ ಯಾವಾಗಲೂ ಐಷಾರಾಮಿಯಾಗಿ ಕಾಣಬೇಕು ಎಂದು ಬಯಸುತ್ತಾರೆ.

ಮಿಥುನಾ ರಾಶಿ

ಈ ರಾಶಿಯವರು ಸ್ವಲ್ಪ ಚಂಚಲತೆಯ ಮನೋಭಾವವನ್ನು ಹೊಂದಿದ್ದಾರೆ. ಅವರ ಅಭಿರುಚಿಗಳು ಬದಲಾಗುತ್ತಲೇ ಇರುತ್ತದೆ. ಅವರು ಒಮ್ಮೆ ಸಾಧಾರಣವಾಗಿ ಮನೆಯ ಅಲಂಕಾರವನ್ನು ಮಾಡಿದರೆ, ಇನ್ನು ಕೆಲವೊಮ್ಮೆ ಅಸಾಧಾರಣವಾಗಿ ಮನೆಯ ಅಲಂಕಾರವನ್ನು ಮಾಡುತ್ತಾರೆ. ಈ ರಾಶಿಯವರ ಅಭಿರುಚಿ ಯಾವಾಗ ಬದಲಾಗುತ್ತದೆ ಎಂದು ತಿಳಿಯುವುದಿಲ್ಲ.

ಕಟಕ

ಈ ರಾಶಿಯವರು ಕುಟುಂಬವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ಸ್ನೇಹಿತರು ಮತ್ತು ಕುಟುಂದವರೇ ಎಲ್ಲ. ಈ ರಾಶಿಯವರು ಮನೆಯವರ ಫೋಟೋ ಮತ್ತು ಸ್ನೇಹಿತರ ಫೋಟೋಗಳನ್ನು ಗೋಡೆಯ ಮೇಲೆ ಹಾಕಿ ಅಲಂಕಾರ ಮಾಡಲು ಇಷ್ಟಪಡುತ್ತಾರೆ. ಈ ರಾಶಿಯವರ ಮನೆಯಲ್ಲಿ ಅಲಂಕಾರಿಕ ವಸ್ತುಗಳ ಬದಲಾಗಿ ಹೆಚ್ಚು ಫೋಟೋ ಹೊಂದಿರುತ್ತಾರೆ.

ಸಿಂಹ

ಸಿಂಹ ರಾಶಿಯವರು ರಾಜನಂತೆ ಬದುಕಲು ಇಷ್ಟಪಡುತ್ತಾರೆ. ಈ ರಾಶಿಯವರ ವಿಲಕ್ಷಣ ಅಭಿರುಚಿ ಮತ್ತು ವಿಭಿನ್ನ ರೀತಿಯ ಪರಿಕಾರಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅಲ್ಲದೇ ಅಲಂಕಾರಿಕ ವಸ್ತುಗಳನ್ನು ಇಡುವ ರೀತಿ ಕೂಡ ವಿಚಿತ್ರವಾಗಿರುತ್ತದೆ. ಈ ರಾಶಿಯವರು ತಮ್ಮ ವಸ್ತುಗಳನ್ನು ಪ್ರದರ್ಶನ ಮಾಡಲು ಇಷ್ಟ ಪಡುತ್ತಾರೆ.

ಕನ್ಯಾ  ರಾಶಿ

ಇದು ಸ್ರೀಲಿಂಗದ ರಾಶಿಯಾಗಿರುವುದರಿಂದ ಮನೆಯ ಅಲಂಕಾರದ ವಿಚಾರದಲ್ಲಿ ಪರಿಪೂರ್ಣವಾಗಿರುತ್ತಾರೆ. ಈ ರಾಶಿಯವರು ಮನೆ ವ್ಯವಸ್ಥಿತವಾಗಿ ಮತ್ತು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಈ ರಾಶಿಯವರು ಹೆಚ್ಚು ಹೂಕುಂಡಗಳನ್ನು ಮತ್ತು ಪೇಯಿಂಟ್​ಗಳನ್ನು ಹೊಂದಿರುವುದು ಉತ್ತಮ.

ಇದನ್ನೂ ಓದಿ: ಬಿಕ್ಕಳಿಕೆ ಸಮಸ್ಯೆಯಿಂದ ಸಾಕಾಗಿದೆಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ತುಲಾ ರಾಶಿ

ತುಲಾ ರಾಶಿಯವರು ಹೆಚ್ಚು ಸೌಂದರ್ಯವನ್ನು ಇಷ್ಟಪಡುತ್ತಾರೆ. ಮನೆ ಹೆಚ್ಚು ಸುಂದರವಾಗಿರಲಿ ಎಂದು ಬಯಸುತ್ತಾರೆ. ಅಪರೂಪದ ಮತ್ತು ಸುಂದರವಾದ ತುಣುಕುಗಳನ್ನು ಮನೆಯಲ್ಲಿಟ್ಟು ಅಲಂಕಾರ ಮಾಡಲು ಇಷ್ಟಪಡುತ್ತಾರೆ. ಅಲಂಕಾರ ಮಾಡಬೇಕು ಎಂದು ಹೆಚ್ಚು ವಸ್ತುಗಳನ್ನು ತುಂಬುವುದಿಲ್ಲ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಹೆಚ್ಚು ಶಾಂತಿಪ್ರಿಯರು. ಬಿಳಿ ಬಣ್ಣವನ್ನು ಬಹಳ ಇಷ್ಟಪಡುತ್ತಾರೆ. ಕೆಲವೊಮ್ಮೆ ಕೆಂಪು ಮತ್ತು ಕಪ್ಪು ಬಣ್ಣವನ್ನು ಮಿಶ್ರಣ ಮಾಡಿ ಹೊಸತನವನ್ನು ಪ್ರಯತ್ನಿಸುತ್ತಾರೆ. ಈ ರಾಶಿಯವರು ವಿಭಿನ್ನವಾದ ತಿಳಿ ಬಣ್ಣದ ವಸ್ತುಗಳನ್ನು ಬಳಕೆ ಮಾಡುವುದು ಮುಖ್ಯ.

ಧನು ರಾಶಿ

ಧನು ರಾಶಿಯವರು ನಿಸರ್ಗಕ್ಕೆ ಪ್ರಿಯರಾಗಿರುತ್ತಾರೆ. ಅವರ ಈ ಗುಣ ಮನೆಯ ಅಲಂಕಾರದಲ್ಲಿ ಕಾಣಿಸುತ್ತದೆ. ಈ ರಾಶಿಯ ಜನರು ಒಳಾಂಗಣ ಸಸ್ಯಗಳು, ಸುಂದರವಾದ ಹೂವಿನ ಗಿಡಗಳನ್ನು ಅಲಂಕಾರದ ವಸ್ತುವಾಗಿ ಬಳಕೆ ಮಾಡುವುದು ಉತ್ತಮ.
Published by:Sandhya M
First published: