Sun Transit in Gemini: ಮಿಥುನ ರಾಶಿಯಲ್ಲಿ ಸೂರ್ಯನ ಸಂಕ್ರಮಣ: ಯಾವ ರಾಶಿಗೆ ಶುಭ, ಅಶುಭ? ಇಲ್ಲಿದೆ ವಿವರ

ಜೂನ್ 15 ರಂದು, ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸಿ, ಜುಲೈ 16, 2022ರವರೆಗೆ ಅಲ್ಲಿ ಇರುತ್ತಾನೆ. ನಂತರ ಕರ್ಕ ರಾಶಿಗೆ ಧುಮುಕುತ್ತಾನೆ. ಹಾಗಾದರೆ ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ ಯಾವೆಲ್ಲಾ ರಾಶಿಗೆ ಶುಭ, ಏನೆಲ್ಲಾ ಪ್ರಭಾವ ಬೀರುತ್ತದೆ ನೋಡೋಣ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಜೂನ್ (June) 15, 2022ರಂದು ಸೂರ್ಯ ವೃಷಭ ರಾಶಿ (Taurus) ತೊರೆದು ಮಿಥುನ ರಾಶಿಗೆ (Gemini) ಸ್ಥಾನಪಲ್ಲಟ ಮಾಡುತ್ತಾನೆ. ಸೂರ್ಯನು (Sun) ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪರಿವರ್ತನೆಯಾಗುವುದನ್ನು ಸಂಕ್ರಮಣ ಎನ್ನುತ್ತಾರೆ. ಈ ವರ್ಷ, ಜೂನ್ 15 ರಂದು, ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸಿ, ಜುಲೈ (July) 16, 2022ರವರೆಗೆ ಅಲ್ಲಿ ಇರುತ್ತಾನೆ. ನಂತರ ಕರ್ಕ ರಾಶಿಗೆ (Cancer) ಧುಮುಕುತ್ತಾನೆ. ಹಾಗಾದರೆ ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ ಯಾವೆಲ್ಲಾ ರಾಶಿಗೆ ಶುಭ, ಏನೆಲ್ಲಾ ಪ್ರಭಾವ ಬೀರುತ್ತದೆ ನೋಡೋಣ.

1) ಮೇಷ
ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ. ಕೆಲಸದ ನಿಮಿತ್ತ ನೀವು ಪ್ರಯಾಣ ಮಾಡಬೇಕಾಗಬಹುದು. ಮೇಷ ರಾಶಿಯವರು ಬಹುದಿನದಿಂದ ಮಾಡಬೇಕಾದ ಹಣಕಾಸಿನ ನಿರ್ಧಾರಗಳು ಧನಾತ್ಮಕವಾಗುವ ಸಾಧ್ಯತೆಗಳಿವೆ. ನೀವು ಮತ್ತು ನಿಮ್ಮ ಒಡಹುಟ್ಟಿದವರು ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ಕೂಡಿ ಬರಬಹುದು.

2) ವೃಷಭ
ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ ವೃಷಭ ರಾಶಿಯವರಿಗೆ ನಿಮ್ಮ ಕುಟುಂಬದಲ್ಲಿ ಬಿರುಕು ಅಥವಾ ನಿಮ್ಮ ಸಂಗಾತಿಯೊಂದಿಗೆ ಜಗಳ ತರಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ. ಹಣದ ವಹಿವಾಟು ನಡೆಸಲು ಇದು ಉತ್ತಮ ಸಮಯ. ಕುಟುಂಬ, ಗೆಳೆಯರಿಗೆ, ಪರಿಚಿತರಿಗೆ ಸಾಲ ನೀಡುವಾಗ ಎಚ್ಚರವಹಿಸಿ. ಮಾತಿನ ಮೇಲೆ ನಿಗಾವಹಿಸುವ ಮೂಲಕ ಸಂಬಂಧಗಳನ್ನು ಉಳಿಸಿಕೊಳ್ಳಿ.

ಇದನ್ನೂ ಓದಿ: Mahamrityunjaya Mantra: ಮಹಾಮೃತ್ಯುಂಜಯ ಮಂತ್ರ ಪಠಿಸುವುದರಿಂದ ಏನೆಲ್ಲಾ ಲಾಭ ಗೊತ್ತಾ?

3) ಮಿಥುನ
ಮಿಥುನ ರಾಶಿಯವರು ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಷಯಗಳನ್ನು ಕೂಲಂಕುಷವಾಗಿ ಯೋಚಿಸಬೇಕು. ಕ್ಲಿಷ್ಟ ನಡವಳಿಕೆಯು ನಿಮ್ಮ ವೈವಾಹಿಕ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳಿ.

4) ಕರ್ಕ ರಾಶಿ
ನಿಮ್ಮ ವೈಯಕ್ತಿಕ ಜೀವನಕ್ಕೆ ಬಂದಾಗ, ನೀವು ವಿಚಲಿತರಾಗುವ ಸಾಧ್ಯತೆಯಿದೆ. ನಿಮ್ಮ ಕುಟುಂಬದ, ವಿಶೇಷವಾಗಿ ನಿಮ್ಮ ಸಂಗಾತಿಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಸಹೋದ್ಯೋಗಿಗಳು ನಿಮ್ಮ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸಬಹುದು, ಆದ್ದರಿಂದ ಜಾಗರೂಕರಾಗಿರಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿದೇಶ ಪ್ರಯಾಣ ಸಾಧ್ಯತೆಯಿದೆ. ಯಾವುದೇ ಅವಸರದ ಹೂಡಿಕೆಗಳನ್ನು ಮಾಡಲು ಇದು ಸಮಯವಲ್ಲ. ಹೀಗಾಗಿ ಯೋಚಿಸಿ, ಸಮಯ ತೆಗೆದುಕೊಂಡು ಹೂಡಿಕೆ ಮಾಡಿ.

5) ಸಿಂಹ
ಈ ರಾಶಿಯವರ ವೃತ್ತಿಜೀವನದ ಸಾಧ್ಯತೆಗಳು ಸುಧಾರಿಸುತ್ತವೆ ಮತ್ತು ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ನೀವು ಹಲವಾರು ಮೂಲಗಳಿಂದ ಹಣವನ್ನು ಗಳಿಸಲು ಸಾಧ್ಯವಾಗುವ ಉತ್ತಮ ಅವಕಾಶ ಸಿಗಲಿವೆ. ನಿಮ್ಮ ವೈಯಕ್ತಿಕ ಜೀವನದಲ್ಲಿ, ಹೊಸಬರ ಆಗಮನವಾಗಲಿದೆ. ಈ ಸಮಯದಲ್ಲಿ ನಿಮ್ಮನ್ನು ನೀವು ಹೆಚ್ಚು ಒತ್ತಡಕ್ಕೆ ಒಳಪಡಿಸಬೇಡಿ ಮತ್ತು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

6) ಕನ್ಯಾ
ನೀವು ಉತ್ತಮ ಸಾಮಾಜಿಕ ಸ್ಥಾನಮಾನಗಳನ್ನು ಗಳಿಸಲಿದ್ದೀರಿ. ವ್ಯಾಪಾರದಲ್ಲಿರುವವರು ತಮ್ಮ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕುಟುಂಬ ಮತ್ತು ಸಂಗಾತಿಯೊಂದಿಗಿನ ವೈಯಕ್ತಿಕ ಸಂಬಂಧಗಳಲ್ಲಿ ಗಮನ ಅಗತ್ಯ.

7) ತುಲಾ
ಈ ರಾಶಿಯವರಿಗೆ ತಂದೆಯ ಸಂಪೂರ್ಣ ಬೆಂಬಲ ಸಿಗಲಿದೆ ಮತ್ತು ನೀವು ಕೆಲಸಕ್ಕಾಗಿ ಬೇರೆಡೆಗೆ ಪ್ರಯಾಣಿಸುವ ಸಾಧ್ಯತೆಗಳಿವೆ. ತುಲಾ ರಾಶಿಯವರು ಆಧ್ಯಾತ್ಮಿಕ ಅಧ್ಯಯನ ಬಗ್ಗೆ ಆಕರ್ಷಿತರಾಗುತ್ತಾರೆ ಮತ್ತು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ. ಸರ್ಕಾರದಲ್ಲಿ ಕೆಲಸ ಮಾಡುವವರು ವರ್ಗಾವಣೆ ಅಥವಾ ಸ್ಥಳಾಂತರದಿಂದ ತೊಂದರೆಗೊಳಗಾಗಬಹುದು.

8) ವೃಶ್ಚಿಕ
ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ, ಕೆಲವು ಅನಿರೀಕ್ಷಿತತೆ ಎದುರಾಗಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು ಮತ್ತು ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: Venus Transit: ಜೂನ್ 18ರಂದು ವೃಷಭ ಪ್ರವೇಶಿಸಲಿದೆ ಶುಕ್ರ ಗ್ರಹ; ಈ ರಾಶಿಯವರು ದಿಢೀರ್ ಶ್ರೀಮಂತರಾಗ್ತಾರೆ

9) ಧನು ರಾಶಿ
ಧನು ರಾಶಿಯವರಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಸುಧಾರಿಸುತ್ತದೆ. ಅವಿವಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ವಿವಾಹಿತರು ಶಾಂತತೆಯಿಂದ ವರ್ತಿಸಿ. ಆಕ್ರಮಣಕಾರಿಯಾಗುವುದನ್ನು ತಪ್ಪಿಸಿ. ವೃತ್ತಿಪರ ಅಥವಾ ವ್ಯಾಪಾರ ಮೈತ್ರಿಗಳು ನಿಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ಯಾವುದೇ ಹೊಸ ಹೂಡಿಕೆಯು ಫಲಪ್ರದವಾಗುವ ಸಾಮರ್ಥ್ಯವನ್ನು ಹೊಂದಿದೆ.

10) ಮಕರ
ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳನ್ನು ಗೆಲ್ಲಲು ನೀವು ಜಾಗರೂಕರಾಗಿರಬೇಕು. ನಿಮ್ಮ ಕೆಲಸವನ್ನು ಸರಿಯಾಗಿ ಮುಗಿಸುವತ್ತ ಮತ್ತು ಅವರೊಂದಿಗೆ ವಾದ ಮಾಡುವುದನ್ನು ತಪ್ಪಿಸುವು ಉತ್ತಮ. ನೀವು ಸಾಲವನ್ನು ತೆಗೆದುಕೊಂಡಿದ್ದರೆ ಆ ಹಣವನ್ನು ಮರುಪಾವತಿಸುವ ಅನುಕೂಲತೆ ಬರಲಿದೆ. ನಿಮ್ಮ ವಯಸ್ಸಾದ ಪೋಷಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಿ.

11) ಕುಂಭ
ಸಿಂಗಲ್ ಆಗಿರುವವರು ಮತ್ತೆ ಡೇಟಿಂಗ್ ಆರಂಭಿಸುವ ಸಾಧ್ಯತೆ ಇದೆ. ಸಂವಹನದ ಕೊರತೆಯಿಂದಾಗಿ, ವಿವಾಹಿತ ದಂಪತಿಗಳು ತಮ್ಮ ಸಂಬಂಧದಲ್ಲಿ ತೊಂದರೆಗಳನ್ನು ಹೊಂದಬಹುದು. ನಿಮ್ಮ ಮಕ್ಕಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಕೆಲಸ ಮಾಡುವ ವೃತ್ತಿಪರರು ತಮ್ಮ ಪ್ರಸ್ತುತ ಸ್ಥಾನವನ್ನು ಬದಲಾಯಿಸುವತ್ತ ಗಮನಹರಿಸಲು ಸೂಕ್ತ ಸಮಯ ಇದು.

ಇದನ್ನೂ ಓದಿ: Zodiac Signs: ರಹಸ್ಯ ಎಂಬುದೇ ಈ ರಾಶಿಯವರ ಬಾಯಲ್ಲಿ ನಿಲ್ಲಲ್ಲ; ಹೇಳುವ ಮುನ್ನ ಹುಷಾರ್​​

12) ಮೀನ
ಈ ಸಮಯದಲ್ಲಿ ಕೆಲಸದ ಮೇಲೆ ಮೀನ ರಾಶಿಯವರು ಕೇಂದ್ರೀಕರಿಸಬೇಕು. ಕೌಟುಂಬಿಕ ಘರ್ಷಣೆಗಳ ಸಾಧ್ಯತೆಯೊಂದಿಗೆ ಸಂಬಂಧಗಳಿಗೆ ಇದು ಕಷ್ಟಕರ ಸಮಯವಾಗಿದೆ. ನಿಮ್ಮ ವೃತ್ತಿಪರ ಜೀವನವು ಸಹ ಅಷ್ಟೇನು ಉತ್ತಮವಾಗಿರುವುದಿಲ್ಲ. ಹೀಗಾಗಿ ಹಿನ್ನಡೆಗಳನ್ನು ತಡೆಯಲು ನಿಮ್ಮ ಎಲ್ಲಾ ನಿರ್ಧಾರಗಳನ್ನು ಸರಿಯಾಗಿ ಯೋಚಿಸಿ ಮಾಡಬೇಕಾಗುತ್ತದೆ.
Published by:Ashwini Prabhu
First published: