• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Astrology: ರಾಶಿ ಚಕ್ರದ ಅನುಸಾರ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ? ಇಲ್ಲಿದೆ ನೋಡಿ.

Astrology: ರಾಶಿ ಚಕ್ರದ ಅನುಸಾರ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ? ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Relationship: ಸಂಬಂಧದಲ್ಲಿ ಆತುರ ಮಾಡುವುದು, ನಿಮಗೆ ನೋವನ್ನು ಮಾಡುತ್ತದೆ. ಯಾವುದೇ ಸಂಬಂಧವಾಗಲಿ ಹೊಂದಾಣಿ ಬಹಳ ಮುಖ್ಯವಾಗುತ್ತದೆ.

  • Share this:

ಪ್ರತಿಯೊಂದು ರಾಶಿಯವರು ತಮ್ಮ ಸಂಬಂಧಗಳಲ್ಲಿ ಏರಿಳಿತಗಳನ್ನು ಎದುರಿಸಲು ತನ್ನದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕೆಲವೊಮ್ಮೆ, ಪ್ರತಿ ರಾಶಿಗೂ ಪ್ರಧಾನವಾದ ವ್ಯಕ್ತಿತ್ವ ಲಕ್ಷಣವಿರಬಹುದು, ಅದು ಆರಾಮದಾಯಕ ಪ್ರೇಮ ಜೀವನವನ್ನು ಆನಂದಿಸಲು ತೊಂದರೆಯಾಗುತ್ತದೆ. ಪ್ರತಿ ರಾಶಿಯ ವ್ಯಕ್ತಿಗಳು ತಮ್ಮ ಸಂಬಂಧವನ್ನು ಬಲಪಡಿಸುವ ಸಲುವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಇಲ್ಲಿದೆ.


ಮೇಷ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವಲ್ಪ ರಹಸ್ಯ ಗುಣವನ್ನು ಹೊಂದಿರುತ್ತಾರೆ. ನೀವು ನಿಮ್ಮ ಸಂಗಾತಿ ಜೊತೆಗೆ ಹೆಚ್ಚಿನ ವಿಚಾರಗಳನ್ನು ಹಂಚಿಕೊಳ್ಳದೆ ರಹಸ್ಯವಾಗಿ ಇಟ್ಟಲ್ಲಿ, ನಿಮ್ಮ ಸಂಬಂಧದಲ್ಲಿ ನಂಬಿಕೆ ಇರುವುದಿಲ್ಲ. ಹಾಗಾಗಿ ನಿಮ್ಮ ಸಂಗಾತಿಯೊಡನೆ ಹೆಚ್ಚು ವಿಚಾರಗಳನ್ನು ರಹಸ್ಯವಾಗಿ ಇಡಬೇಡಿ.


ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಹಳೆಯ ದಿನಗಳನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ. ಅವರ ಹಳೆಯ ದಿನಗಳು ಅವರ ಈಗಿನ ಜೀವನದ ಮೇಲೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಗಾತಿಯೊಂದಿಗೆ ಸಂತೋಷವಾಗಿರಲು ಆ ಹಳೆಯ ನೆನಪುಗಳು ಬಿಡುವುದಿಲ್ಲ. ಮೊದಲು ಹಳೆಯ ನೆನಪುಗಳಿಂದ ಹೊರ ಬರಬರುವುದು ಉತ್ತಮ ಆಯ್ಕೆ.


ಮಿಥುನ ರಾಶಿ
ಈ ರಾಶಿಯವರು ಎಲ್ಲ ವಿಚಾರದಲ್ಲಿ ಧಾವಂತವನ್ನು ಹೊಂದಿರುತ್ತಾರೆ. ಇದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ನಿಧಾನವಾಗಿ ವಿಷಯಗಳನ್ನು ತೆಗೆದುಕೊಳ್ಳಿ. ಸಂಬಂಧದಲ್ಲಿ ಆತುರ ಮಾಡುವುದು, ನಿಮಗೆ ನೋವನ್ನು ಮಾಡುತ್ತದೆ.


ಕಟಕ ರಾಶಿ
ಕರ್ಕಾಟಕ ರಾಶಿಯವರು ನಿಮಗೆ ಹೆಚ್ಚು ಶಕ್ತಿವಂತರು ಎಂದು ಅನಿಸುತ್ತದೆ. ಆದರೆ ಅವರೊಳಗೆ ಅತ್ಯಂತ ಮೃದುವಾದ, ಭಾವನಾತ್ಮಕ ವ್ಯಕ್ತಿ ಇರುತ್ತಾರೆ. ಕೆಲವೊಮ್ಮೆ ಅವರು ಬೇಗ ಬೇಜಾರಾಗುವ ಸಾಧ್ಯತೆ ಇರುತ್ತದೆ. ಇದು ಅವರ ಸಂಬಂಧವನ್ನು ಹಾಳು ಮಾಡುತ್ತದೆ. ಸಂಬಂಧದ ವಿಚಾರದಲ್ಲಿ ವಿನಾಕಾರಣ ಹೆಚ್ಚು ಭಾವನಾತ್ಮಕವಾಗುವ ಅಗತ್ಯವಿಲ್ಲ.


ಸಿಂಹ
ಸಿಂಹಗಳು ಹೇಗೆ ಸ್ವತಂತ್ರವಾಗಿ ಜೀವಿಸುತ್ತವೆಯೋ ಹಾಗೆಯೇ ಈ ರಾಶಿಯ ಜನರು ಹೆಚ್ಚು ಸ್ವತಂತ್ರವಾಗಿರಲು ಬಯಸುತ್ತಾರೆ. ಆದರೆ ಇದು ಸಂಗಾತಿಗೆ ಇಷ್ಟವಾಗದೆ ಇರಬಹುದು. ಅದು ಈ ರಾಶಿಯವರ ಸಂಬಂಧಕ್ಕೆ ಧಕ್ಕೆ ಮಾಡುತ್ತದೆ.


ಇದನ್ನೂ ಓದಿ: ಭಾರತದಾದ್ಯಂತ ರಕ್ಷಾ ಬಂಧನವನ್ನು ಹೇಗೆ ಆಚರಣೆ ಮಾಡಲಾಗುತ್ತದೆ ಗೊತ್ತಾ?


ಕನ್ಯಾರಾಶಿ
ಕನ್ಯಾರಾಶಿ ಪುರುಷರು ಮತ್ತು ಮಹಿಳೆಯರು ಪರಿಪೂರ್ಣತೆಗಾಗಿ ಹಂಬಲಿಸುತ್ತಾರೆ. ಒಳ್ಳೆಯದು, ಆದರೆ, ಈ ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ ಮತ್ತು ಪರಿಪೂರ್ಣತೆಯ ಭ್ರಮೆಯನ್ನು ಬೆನ್ನಟ್ಟುವುದು ನಿಮ್ಮ ಸಂಬಂಧಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.


ತುಲಾ ರಾಶಿ
ಈ ರಾಶಿಯವರ ಚಂಚಲ ಮನಸ್ಸು ಅವರಿಗೆ ದೊಡ್ಡ ಶಾಪ. ಅವರ ಮನಸ್ಸು ಬದಲಾಗುತ್ತಿರುವುದರಿಂದ ಇದು ಅವರ ಸಂಬಂಧಗಳ ಮೇಲೆ ಪರಿಣಾಮವಾಗುತ್ತದೆ. ನಿಮಗೆ ಪ್ರೀತಿಯ ಸಂಬಂಧದಲ್ಲಿ ಸ್ಥಿರತೆ ಬೇಕಿದ್ದರೆ, ಮೊದಲು ನೀವು ಗೊಂದಲಗಳಿಂದ ಹೊರ ಬರಬೇಕು.


ವೃಶ್ಚಿಕ
ವೃಶ್ಚಿಕ ರಾಶಿಯ ಜನರು ಹೆಚ್ಚು ಕುಶಲತೆಯಿಂದ ಕೂಡಿರುತ್ತಾರೆ. ಆದರೆ ಹೆಚ್ಚು ಕುಶಲತೆ ಕೂಡ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಸಂಬಂಧವಾಗಲಿ ಹೊಂದಾಣಿ ಬಹಳ ಮುಖ್ಯವಾಗುತ್ತದೆ.


ಧನು ರಾಶಿ


ಈ ರಾಶಿಯವರಲ್ಲಿ ನಿಷ್ಠೆ ಕಡಿಮೆ. ಧನು ರಾಶಿಯವರು ಸುಲಭವಾಗಿ ವಿಚಲಿತರಾಗುವ ಗುಣವನ್ನು ಹೊಂದಿರುತ್ತಾರೆ ಮತ್ತು ಬೇಗನೆ ಬೇಸರ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಇದಿಷ್ಟೇ ಅಲ್ಲದೇ, ಇವರು ಒಂದು ಸಂಬಂಧದಿಂದ ಇನ್ನೊಂದಕ್ಕೆ ಸಂಬಂಧಕ್ಕೆ ಬದಲಾಗುತ್ತಾರೆ.


ಮಕರ ರಾಶಿ
ಅವರು ಕಷ್ಟಪಟ್ಟು ಕೆಲಸ ಮಾಡುವ ಜನರು. ಕೆಲವೊಮ್ಮೆ ಅವರ ಕೆಲಸಗಳು ಸಂಬಂಧವನ್ನು ಹಾಳು ಮಾಡುತ್ತದೆ. ಅವರು ಪ್ರತಿ ಬಾರಿ ಕೆಲಸದಲ್ಲಿ ಮುಳುಗಿರುವುದು ಅವರನ್ನು ಸಂಗಾತಿಯಿಂದ ದೂರ ಮಾಡುತ್ತದೆ.


ಕುಂಭ ರಾಶಿ
ಈ ರಾಶಿಯಲ್ಲಿ ಜನಿಸಿದ ಜನರು ಸಂಬಂಧಗಳ ವಿಚಾರದಲ್ಲಿ ತಮ್ಮ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಸ್ಪಷ್ಟವಾದ ಮಾತುಕತೆ ಒಂದು ದೊಡ್ಡ ಪ್ರೇಮ ಸಂಬಂಧದ ಅಡಿಪಾಯವಾಗಿದೆ. ಹಾಗಾಗಿ ಮುಕ್ತವಾಗಿ ಮಾತನಾಡುವ ಗುಣವನ್ನು ಬೆಳೆಸಿಕೊಳ್ಳುವುದು ಅನಿವಾರ್ಯ.


ಮೀನ ರಾಶಿ
ಮೀನ ರಾಶಿಯವರು ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಅದು ಅವರ ಸಂಬಂಧದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.

top videos
    First published: