ಕೆಲವೊಮ್ಮೆ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತ ಸಾಗುತ್ತದೆ. ಆದ್ರೆ ಇನ್ನೂ ಕೆಲವೊಮ್ಮೆ ಕೆಟ್ಟ ದಿನಗಳ ಕಾಡುತ್ತವೆ. ಈ ಒಳ್ಳೆಯದು ಕೆಟ್ಟದರಂತೆ ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯ ಬಗ್ಗೆ ನಿಮಗೆ ಗೊತ್ತಿರಬಹುದು. ನಕಾರಾತ್ಮಕ (Negative) ಶಕ್ತಿಯಿಂದಾಗಿ ನಾವು ಸುಖ, ನೆಮ್ಮದಿ, ಸಂತೋಷ, ಆರೋಗ್ಯ, ಸಂಪತ್ತುನ್ನು ಕಳೆದುಕೊಳ್ಳುತ್ತಾ ಬಂದರೆ ಸಕಾರಾತ್ಮಕ ಅಥವಾ ಧನಾತ್ಮಕ (Positive) ಶಕ್ತಿಯಿಂದಾಗಿ ನಾವು ಅದೆಲ್ಲವನ್ನೂ ಪಡೆದುಕೊಳ್ಳುತ್ತೇವೆ. ಎಲ್ಲವೂ ಒಳ್ಳೆಯದಾಗುತ್ತ ಸಾಗುತ್ತವೆ. ಆದ್ರೆ ಇವುಗಳನ್ನು ಅಳೆಯಲು ಯಾವುದೇ ತಾಂತ್ರಿಕ ಮಾರ್ಗವಿಲ್ಲ. ಆದರೆ ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಈ ಶಕ್ತಿಯು ಅರಿವಿಗೆ ಬಂದಿರುತ್ತದೆ. ಇದು ನಿಮ್ಮ ಆಂತರಿಕ ಅಂದರೆ ನಿಮ್ಮ ಮನಸ್ಸಿನಲ್ಲಿಯೇ ಆಗಿರಬಹುದು ಅಥವಾ ಬಾಹ್ಯವಾಗಿ (Outlook) ಅಂದರೆ ನಿಮ್ಮ ಸುತ್ತಮುತ್ತಲಿನ ಪರಿಸರ, ಜನರಿಂದ ಅನುಭವಕ್ಕೆ ಬಂದಿರಬಹುದು.
ಆದ್ರೆ ಶಕ್ತಿಯು ಋಣಾತ್ಮಕವಾಗಿದ್ದಾಗ, ಅದು ನಮ್ಮನ್ನು ಬರಿದು ಮಾಡುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮ ಶಕ್ತಿಯನ್ನು ಕುಂದಿಸುತ್ತದೆ. ಇದು ಸುಖ, ಸಂತೋಷ ಆರೋಗ್ಯ ಹೀಗೆ ಎಲ್ಲ ವಿಷಯಗಳ ಮೇಲೂ ಪ್ರಭಾವ ಬೀರುತ್ತದೆ. ಅದು ನಿಮ್ಮನ್ನು ಬರಿದುಮಾಡುತ್ತದೆ. ಹಾಗಾಗಿ ಋಣಾತ್ಮಕ ಶಕ್ತಿಯ ಜಾಡು ಹಿಡಿದು ಅದನ್ನು ಸಂಪೂರ್ಣವಾಗಿ ಕಿತ್ತೊಗೆಯುವುದು ಬಹಳ ಮುಖ್ಯವಾಗುತ್ತದೆ.
ನಕಾರಾತ್ಮ ಶಕ್ತಿಯನ್ನು ಹೊರಹಾಕುವ ಸುಲಭ ವಿಧಾನ
ಈ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕಲು ಕೆಲವು ಸುಲಭ ವಿಧಾನಗಳಿವೆ. ಕೆಲವಷ್ಟು ವಸ್ತುಗಳನ್ನು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳುವುದರಿಂದ ನೀವು ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಬಹುದು. ಸಿಂಫಿ ಎಂಬ ಹೆಸರಿನ ಟಿಕ್ ಟಾಕರ್ ಈ ಬಗ್ಗೆ ಸಲಹೆ ನೀಡುತ್ತಾರೆ. ಮಲಗುವ ಮುನ್ನ ನಿಮ್ಮ ಜೀವನದಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಕೆಲವು ವಿಧಾನಗಳನ್ನು ವಿವರಿಸುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
ನಿಮ್ಮ ಬೆಡ್ ಪಕ್ಕ ಒಂದು ಲೋಟ ನೀರು ಇಟ್ಟುಕೊಳ್ಳಿ
ನಿಮ್ಮ ಹಾಸಿಗೆಯ ಬಳಿ ಒಂದು ಲೋಟದಲ್ಲಿ ನೀರು ಇಟ್ಟುಕೊಂಡರೆ ರಾತ್ರಿ ವೇಳೆಯಲ್ಲಿ ದುಷ್ಟಶಕ್ತಿಗಳು ನಿಮ್ಮ ಮೇಲೆ ಆಕ್ರಮಣ ಮಾಡದಂತೆ ತಡೆಯುತ್ತದೆ ಎಂದು ಹೇಳಲಾಗುತ್ತದೆ. ನೀರು ದುಷ್ಟಶಕ್ತಿಗಳನ್ನು ಮತ್ತು ನಕಾರಾತ್ಮಕ ಶಕ್ತಿಯನ್ನು ಹೆದರಿಸುತ್ತದೆ ಎಂದು ನಂಬಲಾಗುತ್ತದೆ. ಕ್ಯೂಬನ್ ಸಂಸ್ಕೃತಿಯಲ್ಲಿ, ಒಂದು ಲೋಟ ನೀರು ನಿಮ್ಮನ್ನು ದುಷ್ಟಶಕ್ತಿಗಳಿಂದ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುವುದಲ್ಲದೆ, ಅದು ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ.
ಹಾಸಿಗೆಗೆ ಎದುರಾಗಿ ಕನ್ನಡಿ ಇಡುವುದನ್ನು ತಪ್ಪಿಸಿ!
ಸಿಂಫಿ ನೀಡುವ ಇನ್ನೊಂದು ಸಲಹೆಯೆಂದರೆ, ನಿಮ್ಮ ಹಾಸಿಗೆಗೆ ಎದುರಾಗಿ ಕನ್ನಡಿ ಇಡುವುದನ್ನು ತಪ್ಪಿಸಬೇಕು ಎನ್ನುವುದು. ಏಕೆಂದರೆ ಅವು ಋಣಾತ್ಮಕ ಶಕ್ತಿಯನ್ನು ತರುತ್ತವೆ ಎಂದು ನಂಬಲಾಗುತ್ತದೆ. ನೀವು ಮಲಗಿರುವಾಗ ನಿಮ್ಮ ಕಡೆಗೆ ಮುಖಮಾಡಿರುವ ಕನ್ನಡಿಗಳು ನಿಮ್ಮ ಜೀವನದಲ್ಲಿ ಪ್ರಕ್ಷುಬ್ಧತೆ ಮತ್ತು ಹತಾಶೆಯನ್ನು ತರುವ ದುಷ್ಟಶಕ್ತಿಗಳಿಗೆ ಆಹ್ವಾನ ನೀಡುತ್ತವೆ ಎಂದು ಹೇಳಲಾಗುತ್ತದೆ. ನಿಮ್ಮ ಮಲಗುವ ಕೋಣೆಯಲ್ಲಿನ ಕನ್ನಡಿಗಳು ಕೆಟ್ಟದ್ದು ಎಂದು ಪ್ರಾಚೀನ ಚೀನೀ ನಂಬಿಕೆ ಇದೆ. ನೀವು ನಿದ್ರಿಸುವಾಗ ಆತ್ಮವು ದೇಹವನ್ನು ಬಿಡುತ್ತದೆ. ಆದ್ದರಿಂದ ಕನ್ನಡಿ ಇದ್ದರೆ ಅದು ಸರಿಯಾದ ಸ್ಥಾನಕ್ಕೆ ಬದಲಾಗಿ ಅಲ್ಲಿಗೆ ಮರಳಬಹುದು ಎನ್ನಲಾಗುತ್ತದೆ.
ಅಲ್ಲದೇ ಹಾಸಿಗೆಗೆ ಎದುರಾಗಿರುವ ಕನ್ನಡಿ ದ್ರೋಹವನ್ನು ತರುತ್ತದೆ ಎಂಬ ನಂಬಿಕೆಯೂ ಇದೆ. ಕನ್ನಡಿಯು ಸಂಬಂಧದಲ್ಲಿ ಮೂರನೇ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ದಂಪತಿಗಳ ಮಧ್ಯೆ ಮೂರನೇಯವರು ಬರಲು ಆಹ್ವಾನವಾಗಿದೆ ಎಂಬ ಕಲ್ಪನೆಯೇ ಇದಕ್ಕೆ ಕಾರಣ. ಆದ್ದರಿಂದ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ನಿಮ್ಮ ಕೋಣೆಯಲ್ಲಿ ಯಾವುದೇ ಕನ್ನಡಿಗಳು ನಿಮಗೆ ಎದುರಾಗಿ ಇಲ್ಲ. ನಿಮ್ಮ ಹಾಸಿಗೆಯಿಂದ ದೂರದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.
ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಇತರ ಮಾರ್ಗಗಳು ಯಾವವು ಅನ್ನೋದನ್ನು ನೋಡೋದಾದ್ರೆ,
1)ನಿಮ್ಮ ಹಾಸಿಗೆಯ ಕೆಳಗೆ ನಿಂಬೆಹಣ್ಣನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯಿಂದ ದೂರವಿಡಬಹುದು: ನೀವು ಈಗಾಗಲೇ ನಕಾರಾತ್ಮಕತೆಯನ್ನು ಅನುಭವಿಸುತ್ತಿದ್ದರೆ ಮತ್ತು ಅದನ್ನು ನಿಮ್ಮ ಜೀವನದಿಂದ ತೆಗೆದುಹಾಕಲು ಬಯಸಿದರೆ, ನೀವು ಮಲಗಿರುವಾಗ ನಿಮ್ಮ ಹಾಸಿಗೆಯ ಕೆಳಗೆ ನಿಂಬೆಹಣ್ಣ ಇಟ್ಟುಕೊಳ್ಳಿ. ನಿಂಬೆಯನ್ನು ಸಂಪೂರ್ಣವಾಗಿ ಬೇರ್ಪಡಿಸದೆ ನಾಲ್ಕು ಭಾಗಗಳಾಗಿ ಕತ್ತರಿಸಿ ಒಳಗೆ ಉಪ್ಪು ಸಿಂಪಡಿಸಿ. ನಿಮ್ಮ ಹೃದಯ ಬರುವ ಜಾಗದಲ್ಲಿ ನಿಮ್ಮ ಬೆಡ್ ಕೆಳಗೆ ಅದನ್ನು ಇರಿಸಿಕೊಳ್ಳಿ.
2) ಈರುಳ್ಳಿ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ: ಈರುಳ್ಳಿಯು ಅಷ್ಟೊಂದು ವಾಸನೆಯನ್ನು ಹೊಂದಿಲ್ಲದಿರಬಹುದು. ಆದರೆ ನೀವು ನಿದ್ದೆ ಮಾಡುವಾಗ ನಿಮ್ಮ ಪಕ್ಕದಲ್ಲಿ ಈರುಳ್ಳಿಯನ್ನು ಇಟ್ಟರೆ ಅದರ ಪ್ರಯೋಜನಗಳು ಬಹಳಷ್ಟು ಎನ್ನಲಾಗುತ್ತದೆ. ಏಕೆಂದರೆ ಈರುಳ್ಳಿ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ನೀವು ನಕಾರಾತ್ಮಕತೆಯನ್ನು ಅನುಭವಿಸುತ್ತಿದ್ದರೆ ನೀವು ಮಲಗುವ ಸಮಯದಲ್ಲಿ ನಿಮ್ಮ ಪಕ್ಕದಲ್ಲಿ ಈರುಳ್ಳಿ ಇರಿಸಿ.
3. ಮೊಟ್ಟೆಯೊಂದಿಗೆ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಿ: ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಇನ್ನೊಂದು ವಿಧಾನವೆಂದರೆ ಗಾಜಿನ ಲೋಟದಲ್ಲಿ ನೀರಿಟ್ಟು ಅದರಲ್ಲಿ ಮೊಟ್ಟೆಯನ್ನು ಒಡೆದು ಅದನ್ನು ನಿಮ್ಮ ಹಾಸಿಗೆಯ ಕೆಳಗೆ ಇಡಿ. ಇದು ನೀವು ಮಲಗಿರುವಾಗ ನಿಮ್ಮ ಕೋಣೆಯಿಂದ ನಕಾರಾತ್ಮಕ ಶಕ್ತಿಯನ್ನು ಎಳೆದುಕೊಳ್ಳುತ್ತದೆ. ನೀವು ಬೆಳಿಗ್ಗೆ ಎದ್ದಾಗ, ಹಾಸಿಗೆಯ ಕೆಳಗಿನಿಂದ ಅದನ್ನು ತೆಗೆದುಕೊಂಡು ಎಸೆದುಬಿಡಿ.
4. ನಕಾರಾತ್ಮಕತೆಯಿಂದ ನಿಮ್ಮನ್ನು ರಕ್ಷಿಸಲು ನಿಮ್ಮ ದಿಂಬಿನ ಕೆಳಗೆ ಹರಳುಗಳನ್ನು ಇರಿಸಿ: ಹರಳುಗಳು ಮಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದ್ದು ಅದು ನಿಮ್ಮನ್ನು ಆವರಿಸಿದ ಋಣಾತ್ಮಕ ಶಕ್ತಿಯಿಂದ ಬೇರೆ ಮಾಡುತ್ತದೆ. ಉದಾಹರಣೆಗೆ, ಅಮೆಥಿಸ್ಟ್ ಹರಳು ಧೈರ್ಯವನ್ನು ವ್ಯಕ್ತಪಡಿಸುವಾಗ ಉಂಟಾಗುವ ನಕಾರಾತ್ಮಕತೆಯನ್ನು ಹೊರಹಾಕುತ್ತದೆ. ರೋಸ್ ಸ್ಫಟಿಕ ಶಿಲೆಯು ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾವನಾತ್ಮಕ ನಿಮ್ಮನ್ನು ಗಟ್ಟಿಗೊಳಿಸುತ್ತದೆ. ಲ್ಯಾಬ್ರಡೋರೈಟ್ ನಿಮ್ಮ ಶಕ್ತಿಯನ್ನು ಶುದ್ಧೀಕರಿಸುತ್ತದೆ. ಇದರ ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲು ನಿಮ್ಮ ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿ ಗುಲಾಬಿ ಸ್ಫಟಿಕ ಶಿಲೆಯನ್ನು ಇರಿಸಬಹುದು.
5. ಪೈನ್ ಕೋನ್ ಗಳು ನಕಾರಾತ್ಮಕ ಶಕ್ತಿ ಮತ್ತು ಅನಾರೋಗ್ಯವನ್ನು ಹೊಡೆದೋಡಿಸುತ್ತವೆ: ಕೆಲವೊಬ್ಬರ ಮನೆಗಳಲ್ಲಿ ಶೋ ಪೀಸ್ ಗಳಂತೆ ಕಾಣುವ ಪೈನ್ ಮರದ ಕೋನ್ಗಳು ಉತ್ತಮ ಪರಿಮಳವನ್ನು ಒದಗಿಸಲು ಮಾತ್ರವಲ್ಲ.ಅದು ನಕಾರಾತ್ಮಕತೆಯಿಂದಲೂ ಮುಕ್ತಿ ಕೊಡುತ್ತದೆ. ಹಾಸಿಗೆಯ ಮೇಲೆ ಅದನ್ನು ನೇತುಹಾಕುವುದರಿಂದ ಅನಾರೋಗ್ಯವನ್ನು ದೂರವಿಡಬಹುದು.ಚಳಿಗಾಲದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಆದ್ದರಿಂದ ನೀವು ತುಂಬಾ ಪರಿಚಿತ ಪರಿಮಳವನ್ನು ಪಡೆಯುತ್ತೀರಿ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯಕರವಾಗಿ ಹೆಚ್ಚಿನ ಪ್ರಯೋಜನವನ್ನೂ ಪಡೆಯುತ್ತೀರಿ.
6. ಲೋಹದ ಚೈಮ್ಸ್ ನೀವು ನಿದ್ದೆ ಮಾಡುವಾಗ ಕೆಟ್ಟ ಶಕ್ತಿಯನ್ನು ನಿಗ್ರಹಿಸುತ್ತದೆ: ಪುರಾತನ ಚೀನೀ ನಂಬಿಕೆಯೆಂದರೆ, ನೀವು ಮಲಗಿರುವಾಗ ಲೋಹದ ಚೈಮ್ಗಳನ್ನು ನಿಮ್ಮ ಬಳಿ ಇಡುವುವುದು ಒಳ್ಳೆಯದು. ಅದರಲ್ಲೂ ನಿರ್ದಿಷ್ಟವಾಗಿ ಐದು ರಾಡ್ಗಳನ್ನು ಹೊಂದಿರುವ ಚೈಮ್, ನಕಾರಾತ್ಮಕ ಶಕ್ತಿಯನ್ನು ಹಿಮ್ಮೆಟ್ಟಿಸುತ್ತದೆ ಎಂದು ಹೇಳಲಾಗುತ್ತದೆ. ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಅಥವಾ ಕಂಚನ್ನು ಹೊಂದಿರುವ ಚೈಮ್ ಬಳಸಿದರೆ ನೀವು ನಕಾರಾತ್ಮಕತೆಯನ್ನು ದೂರವಿಡುವುದು ಮಾತ್ರವಲ್ಲ, ನೀವು ದುರದೃಷ್ಟವನ್ನು ತೊಡೆದುಹಾಕುತ್ತೀರಿ.
7. ಕೆಟ್ಟ ಶಕ್ತಿಯನ್ನು ತೊಡೆದುಹಾಕಲು ನಿಮ್ಮ ಬೆಡ್ಶೀಟ್ಗಳನ್ನು ಲೈಟ್ ಬಣ್ಣಗಳಿಗೆ ಬದಲಾಯಿಸಿ: ನಿಮ್ಮ ಬೆಡ್ಶೀಟ್ಗಳನ್ನು ಗಾಢವಾದ ಹಾಗೂ ಹೆಚ್ಚು ಡಿಸೈನ್ ಗಳಿಗೆ ಬದಲಾಗಿ ಸರಳವಾದ ಲೈಟ್ ಬಣ್ಣಗಳಿಗೆ ಬದಲಾಯಿಸಿಕೊಳ್ಳಿ. ಅಲ್ಲದೇ ಸರಳವಾದ ಕಡಿಮೆ ಡಿಸೈನ್ ಗಳಿರುವ ಬೆಡ್ ಶೀಟ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಮಲಗುವ ಕೋಣೆಯನ್ನು ಪ್ರಶಾಂತವಾಗಿ ಪರಿವರ್ತಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ.ಹಾಗಾಗಿ ದಟ್ಟವಾಗಿ ಅಥವಾ ಗಾಢ ಬಣ್ಣದ ಬೆಟ್ ಶೀಟ್ ಗಳು, ಕರ್ಟನ್ ಗಳು, ಹೊದಿಕೆಗಳ ಬದಲಾಗಿ ನೀವು ಕಣ್ಣಿಗೆ ತಂಪು ನೀಡುವ ಲೈಟ್ ಕಲರ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎನ್ನಲಾಗುತ್ತದೆ.
ಒಟ್ಟಾರೆ, ನಂಬಿಕೆಗಳು ಏನೇ ಇರಲಿ, ಧನಾತ್ಮಕ ಶಕ್ತಿ ಹಾಗೂ ಋಣಾತ್ಮಕ ಶಕ್ತಿಗಳಿರುವು ಬಹಶಃ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಅನುಭವಕ್ಕೆ ಬಂದೇ ಇರುತ್ತದೆ. ಹಾಗಾಗಿ ನೀವು ಈ ಎಲ್ಲ ವಿಧಾನಗಳನ್ನು ನಂಬುತ್ತೀರೋ ಬಿಡುತ್ತಿರೋ ಅದು ನಿಮಗೆ ಬಿಟ್ಟ ವಿಚಾರವಾದರೂ ಈ ಎಲ್ಲ ವಿಧಾನಗಳನ್ನು ಅನುಸರಿಸುವುದರಿಂದ ಯಾವುದೇ ನಷ್ಟವಿಲ್ಲ ಅನ್ನೋದಂತೂ ಸತ್ಯ. ಬದಲಾಗಿ ಆದರೆ ಲಾಭವೂ ಆಗಬಹುದು.
ಇದನ್ನೂಓದಿ: ನಿಮ್ಮ ರಾಶಿಯ ಅನುಗುಣವಾಗಿ ಮನೆಯ ಅಲಂಕಾರ ಹೀಗೆ ಮಾಡಿ
ಆದ್ರೆ ಋಣಾತ್ಮಕ ಶಕ್ತಿ ಹೆಚ್ಚಿದಂತೆ ಮನುಷ್ಯ ಕುಗ್ಗಲು ಶುರುಮಾಡುತ್ತಾನೆ. ಆತ್ಮವಿಶ್ವಾಸ ವಂಚಿತನಾಗುತ್ತಾರೆ. ಜೀವನದಲ್ಲಿ ಸೋಲುಗಳು ಅಥವಾ ಸೋಲಿನ ಭ್ರಮೆಗಳು ಶುರುವಾಗುತ್ತವೆ. ಆಗ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದೊಂದೇ ದಾರಿಯಾಗಿದೆ. ಆದ್ದರಿಂದ ನೀವು ಇದನ್ನು ನಂಬುವುದಾದರೆ ಖಂಡಿತಾ ಈ ಪ್ರಯೋಗಗಳನ್ನು ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ