ಹಸ್ತ ಸಾಮುದ್ರಿಕಾ ಶಾಸ್ತ್ರ(hast samudrika shastra) ಅಥವಾ ಅಂಗೈ ರೇಖೆ ನೋಡಿ ಭವಿಷ್ಯ (Future) ಹೇಳುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಹೆಚ್ಚಿನ ಜ್ಯೋತಿಷಿಗಳು ಈ ವಿದ್ಯೆಯಲ್ಲಿ ಪರಿಣಿತಿಯನ್ನು ಹೊಂದಿದ್ದು ಹಸ್ತವನ್ನು ನೋಡಿ ಯಥಾವತ್ತಾಗಿ ವಿವರಗಳನ್ನು ಹೇಳಬಲ್ಲವರಾಗಿದ್ದಾರೆ. ಅಂಗೈಗಳ ಮೇಲಿನ ನಿರ್ದಿಷ್ಟ ರೇಖೆ ಮತ್ತು ರಚನೆಗಳನ್ನು ವಿಶ್ಲೇಷಿಸುವುದನ್ನು ಈ ಶಾಸ್ತ್ರ ಒಳಗೊಂಡಿರುತ್ತದೆ. ಅಂಗೈ ರೇಖೆಗಳಲ್ಲಿ ಗಮನ ಸೆಳೆಯುವ ರೇಖೆಯೆಂದರೆ ಹೃದಯದ ರೇಖೆಯಾಗಿದೆ. ಇದು ಹೃದಯ (Heart) ರೇಖೆಯಾಗಿರುವುದರಿಂದ ನಿಮ್ಮ ಆಂತರಿಕ ಭಾವನೆಗಳು, ಇತರರ ಮೇಲೆ ನಿಮಗಿರುವ ಪ್ರತಿಕ್ರಿಯೆ ಹೀಗೆ ಆಂತರ್ಯದ ಆರೋಗ್ಯಕ್ಕೆ (Health) ಸಂಬಂಧಿಸಿದ ಮಾಹಿತಿಗಳನ್ನು ತಿಳಿಸುತ್ತದೆ. ಈ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ
ಹೃದಯದ ರೇಖೆ ಏನನ್ನು ತಿಳಿಸುತ್ತದೆ?
ನಿಮ್ಮ ಅಂಗೈಯಲ್ಲಿ ಈ ರೇಖೆಯು ಅಡ್ಡಲಾಗಿರುತ್ತದೆ ಹಾಗೂ ಅತ್ಯಂತ ಮೇಲ್ಭಾಗದಲ್ಲಿರುತ್ತದೆ. ಕಿರುಬೆರಳಿನ ಭಾಗದಲ್ಲಿ ಅಂಗೈಯ ಅಂಚಿನಲ್ಲಿ ಪ್ರಾರಂಭವಾಗುತ್ತದೆ ಹಾಗೂ ತೋರುಬೆರಳು ಅಥವಾ ಮಧ್ಯದ ಬೆರಳಿನ ಕಡೆಗೆ ಚಲಿಸುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಲೇಖಕರಾದ ಕಸ್ಸಂಡ್ರಾ ಈಸನ್ ಪ್ರಕಾರ ಹಸ್ತರೇಖೆಯ ಬಗ್ಗೆ ತಿಳಿದುಕೊಳ್ಳುವಾಗ ಮೊದಲಿಗೆ ಈ ರೇಖೆಯ ಬಗ್ಗೆ ತಿಳಿದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ರೇಖೆ ನಮ್ಮ ಸಂಬಂಧಗಳ ಬಗೆಗೆ ಅಂದರೆ ನಮ್ಮನ್ನು ಕುರಿತು, ಪ್ರೇಮಿಗಳು ಹಾಗೂ ಸ್ನೇಹಿತರ ವಿವರಗಳನ್ನು ನೀಡುತ್ತದೆ. ನಮ್ಮ ಸಾಮರ್ಥ್ಯ, ವೈಯಕ್ತಿಕ ಬೆಳವಣಿಗೆಯ ಬಗ್ಗೆಯೂ ಮಾಹಿತಿ ನೀಡುತ್ತದೆ. ಆಧ್ಯಾತ್ಮಿಕ ಜೀವನ ಹಾಗೂ ಆಂತರಿಕ ಪ್ರಪಂಚವನ್ನು ಸಮೀಪಿಸುವ ಬಗೆಗೆ ವಿವರನ್ನು ನೀಡುತ್ತದೆ.
ಇದನ್ನೂ ಓದಿ: ನಿಮ್ಮ ದೇಹದ ಈ ಭಾಗದಲ್ಲಿ ಮಚ್ಚೆ ಇದೆಯಾ? ಹಾಗಿದ್ರೆ ನೀವೇ ಸಖತ್ ಲಕ್ಕಿ ಬಿಡಿ!
ನಮ್ಮ ಬಗ್ಗೆ, ಇತರರ ಬಗ್ಗೆ ಹಾಗೂ ನಮ್ಮ ಜೀವನದ ಕುರಿತು ನಾವು ಏನು ಭಾವಿಸುತ್ತೇವೆ ಎಂಬುದನ್ನು ಈ ರೇಖೆ ತಿಳಿಸುತ್ತದೆ ಎಂದು ಕಸ್ಸಂಡ್ರಾ ಈಸನ್ ತಿಳಿಸಿದ್ದಾರೆ. ಹೃದಯದ ರೇಖೆಯು ಆಳವಾಗಿದ್ದಷ್ಟೂ ನಮ್ಮ ಪ್ರೀತಿ ಹಾಗೂ ವಾತ್ಸಲ್ಯ ಅಷ್ಟೇ ಆಳವಾಗಿರುತ್ತದೆ.
ಹೃದಯ ರೇಖೆಯನ್ನು ನೋಡುವುದು ಹೇಗೆ ಮತ್ತು ತಿಳಿದುಕೊಳ್ಳುವುದು ಹೇಗೆ
ನಿಮ್ಮ ಎಡಗೈಯ ಹೃದಯ ರೇಖೆಯು ನೈಸರ್ಗಿಕ ಹಾಗೂ ಸ್ವಯಂ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಹಾಗೂ ಬಲಗೈಯಲ್ಲಿರುವ ಹೃದಯ ರೇಖೆಯು ಸ್ವಾಧೀನಪಡಿಸಿಕೊಂಡ ಜೀವನ ಅಂದರೆ ಇದು ನೀವು ಜೀವನದಲ್ಲಿ ಪಡೆದುಕೊಂಡ ಅನುಭವ ಹಾಗೂ ಭೇಟಿಯಾಗುವ ವ್ಯಕ್ತಿಗಳಿಂದ ರೂಪುಗೊಂಡಿದೆ ಎಂಬುದಾಗಿ ಈಸನ್ ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ